ಅತಿವೇಗದ ಲಾರಿ ಡಿಕ್ಕಿ: ಮೂರು ವಾಹನಗಳಿಗೆ ಹಾನಿ, ವ್ಯಕ್ತಿಗೆ ಗಾಯ
Taluknewsmedia.comಧಾರವಾಡ: ದಿನಾಂಕ 22.06.2025 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಧಾರವಾಡ ಪಿಬಿ ರಸ್ತೆಯ ಎನ್‌ಟಿಟಿಎಫ್ ಬಿಆರ್‌ಟಿಎಸ್ ಬಸ್‌ಸ್ಟಾಪ್ ಹತ್ತಿರ ಭೀಕರ ಅಪಘಾತ ನಡೆದಿದೆ. ಉತ್ತರಪ್ರದೇಶ ಮೂಲದ ಪ್ರಮೋದಕುಮಾರ್ (ತಂದೆ: ರಾಜೇಂದ್ರಸಿಂಗ್) ಎಂಬಾತನು ತಾನೇ ಚಲಾಯಿಸುತ್ತಿದ್ದ ಟಾಟಾ ಕಂಪನಿಯ ಲಾರಿ (ನಂ. ಆರ್ ಜೆ-14/ಜಿಆರ್-3521)ಯನ್ನು ಜುಬ್ಲಿ ಸರ್ಕಲ್ ದಿಂದ ಹುಬ್ಬಳ್ಳಿ ಕಡೆಗೆ ಅತ್ಯಧಿಕ ವೇಗದಲ್ಲಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಲಾರಿ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಟಾಟಾ ಕಂಪನಿಯ ಕಾರು (ನಂ. ಕೆಎ-65/ಎಮ್-0972)ಗೆ ಡಿಕ್ಕಿ ಹೊಡೆದು ವಾಹನಕ್ಕೆ ಹಾನಿ ಮಾಡಿದ್ದಾನೆ. ಆ ನಂತರವೇ ಸಹ ನಿಯಂತ್ರಣ ತಪ್ಪಿ ಮುಂದೆ ಹೋಗಿ ಮತ್ತೊಂದು ಮಾರುತಿ ಕಂಪನಿಯ ಕಾರು (ನಂ. ಕೆಎ-25/ಪಿ-6675)ಗೆ ಡಿಕ್ಕಿ ಹೊಡೆದಿದ್ದು, ಆ ಕಾರಿನ ಸವಾರ ರವಿ (ತಂದೆ: ಶೇಖರಯ್ಯ ಸಿದಾಟಗಿಮಠ, ವಯಸ್ಸು: 48, ನಿವಾಸಿ ಮಾಳಮಡಿ, ಧಾರವಾಡ) ಅವರಿಗೆ ಸಾದಾ ಗಾಯಗಳು…
ಮುಂದೆ ಓದಿ..
