ಹುಬ್ಬಳ್ಳಿಯಲ್ಲಿ ಯುವತಿ ಕಾಣೆಯಾಗಿರುವ ಪ್ರಕರಣ
Taluknewsmedia.comಹುಬ್ಬಳ್ಳಿ ನಗರದ ಅಕ್ಷಯ ಕ್ಲಾಸಿಕ್ ಅಪಾರ್ಟಮೆಂಟ್ ನಿವಾಸಿ ಯುವತಿ ಸ್ವಾತಿ (ವಯಸ್ಸು: 23), ವಿದ್ಯಾರ್ಥಿನಿ, ದಿನಾಂಕ 17-06-2025 ರಂದು ಸಂಜೆ 6-15 ಗಂಟೆಗೆ “ಹೊರಗೆ ಹೋಗಿ ಬರುತ್ತೇನೆ” ಎಂದು ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದು, ನಂತರದಿಂದ ಮನೆಗೆ ಮರಳದೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಸ್ವಾತಿಯ ತಂದೆ ಶಿವಕುಮಾರಸ್ವಾಮಿ ಹಿರೇಮಠ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಕಾಣೆಯಾದ ಸ್ಥಳ, ಹೊಗುವ ಉದ್ದೇಶ ಮತ್ತು ಎಲ್ಲ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ.ಕಾಣೆಯಾದ ಯುವತಿ ಬಗ್ಗೆ ಮಾಹಿತಿ ಗೊತ್ತಿರುವವರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಸಂಬಂಧಿತ ದೂರವಾಣಿ ಸಂಖ್ಯೆಗೆ ತಕ್ಷಣ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್ 9886063123
ಮುಂದೆ ಓದಿ..
