ಹೆಲ್ಮೆಟ್ ಧರಿಸದೇ ಸ್ಕೂಟರ್ ಓಡಿಸಿದ ಯುವಕನ ದುರ್ಮರಣ
Taluknewsmedia.comಬೆಂಗಳೂರು, ಆಗಸ್ಟ್ 5 – ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯದಿಂದ ಸ್ಕೂಟರ್ ಚಲಾಯಿಸಿದ್ದ 18 ವರ್ಷದ ಯುವಕನೊಬ್ಬ, ಅಪಘಾತಕ್ಕೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಈಗಷ್ಟೇ ಬೆಳಕಿಗೆ ಬಂದಿದೆ. ಘಟನೆ ಜುಲೈ 24, 2025 ರಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ. ಮಾಲಾ ಅವರ ಮಗ ದಿಲೀಪ್ ಕೆ ಬಿನ್ ಕುಮಾರ (18), ನಂಬರ್ KA-04-KS-0636 ಇರುವ ಸ್ಕೂಟರ್‌ನಲ್ಲಿ, ಹೆಲ್ಮೆಟ್ ಧರಿಸದೇ, ವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡುತ್ತ ಸುಮಂಗಲಿ ಸೇವಾ ಆಶ್ರಮ ರಸ್ತೆಯ ಮುನಿಯಪ್ಪ ಲೇಔಟ್ ಹತ್ತಿರ ಹಂಸ್ ಬಳಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಪರಿಣಾಮವಾಗಿ, ತಲೆಗೆ ಹಾಗೂ ಕಿವಿಗೆ ತೀವ್ರ ಪೆಟ್ಟು ಬಿದ್ದಿದ್ದು, ಗಾಯಗಳ ಪರಿಣಾಮವಾಗಿ ಅವರು ಮಾತನಾಡಲು ಸಾಧ್ಯವಾಗದೆ ಮನಸ್ಸು ತಿಳಿಯದ ಸ್ಥಿತಿಗೆ ತಲುಪಿದ್ದಾರೆ. ಸ್ಥಳೀಯ ಸಾರ್ವಜನಿಕರು ಮತ್ತು ಕುಟುಂಬದ ಸದಸ್ಯರು ತಕ್ಷಣವೇ ದಿಲೀಪ್‌ರನ್ನು ವಿಜಯ…
ಮುಂದೆ ಓದಿ..
