ಮದುವೆ ರದ್ದಾದ ನಿರಾಶೆಯಲ್ಲಿ ಯುವತಿ ಕಾಣೆಯಾದ ಪ್ರಕರಣ
Taluknewsmedia.comಆನೇಕಲ್, ಜುಲೈ 30:ಮದುವೆ ರದ್ದಾದ ಘಟನೆಗೆ ಮನನೊಂದು ಯುವತಿ ಮನೆ ಬಿಟ್ಟು ಕಾಣೆಯಾಗಿರುವ ಘಟನೆ ಆನೇಕಲ್ ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆನೇಕಲ್ ಟೌನ್ ಪೊಲೀಸ್ ಠಾಣೆಯಲ್ಲಿ ಪತ್ತೆಹಚ್ಚುವಿಕೆಗೆ ದೂರು ದಾಖಲಾಗಿದೆ. ಕೆ.ಎಸ್.ಆರ್.ಟಿ.ಸಿ ಕಾಲೋನಿಯ ಸ್ವಪ್ನ ಮಾರ್ಕೆಟ್ ಬಳಿಯ ನಿವಾಸಿಯಾದ ಮಹದೇವ ಬಿನ್ ನಾಗರಾಜು ಅವರು ನೀಡಿದ ದೂರಿನ ಪ್ರಕಾರ, ತನ್ನ ಅಕ್ಕ ಮಹಾದೇವಿ (ವಯಸ್ಸು: 29) ಕಳೆದ ನಾಲ್ಕು ತಿಂಗಳ ಹಿಂದೆ ತಮ್ಮ ಪೋಷಕರ ಸಮ್ಮುಖದಲ್ಲಿ ಆನೇಕಲ್ ನಿವಾಸಿಯೊಬ್ಬರೊಂದಿಗೆ ನಿಶ್ಚಿತಾರ್ಥಗೊಂಡಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ದಿನಾಂಕ 25-07-2025 ರಂದು ಮದುವೆ ರದ್ದಾಗಿತ್ತು. ಈ ವಿಚಾರದಿಂದ ಮಾನಸಿಕವಾಗಿ ಬೇಸತ್ತಿದ್ದ ಅವರು 27-07-2025 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯವರಿಲ್ಲದ ಸಮಯದಲ್ಲಿ ತನ್ನ ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು, ಮನೆ ಬಿಟ್ಟು ಹೊರಟಿದ್ದಾರೆ. ಆಕೆ ಕೆಎ-51 ಹೆಚ್ ಕೆ-8915 ಸಂಖ್ಯೆಯ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದು, ಒಂದು…
ಮುಂದೆ ಓದಿ..
