ಸುದ್ದಿ 

ರಸಗೊಬ್ಬರದ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ – ಪೋಲೀಸರು ಬಂಧಿಸಿ ಬಿಡುಗಡೆ..

Taluknewsmedia.com

Taluknewsmedia.comಬೆಂಗಳೂರು, ಜುಲೈ 22: ಕೇಂದ್ರ ಸರ್ಕಾರದ ರಸಗೊಬ್ಬರದ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನ ಪಶ್ಚಿಮ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ್ ಅವರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರತಿಭಟನೆ ನಡೆಯಿದ್ದು, ಜನಜಾಗೃತಿಯೊಂದಿಗೆ ಕೇಂದ್ರದ ಬೆಲೆ ನಿತಿಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲಾಯಿತು. ಪ್ರತಿಭಟನೆ ವೇಳೆ ಪೊಲೀಸ್ ಇಲಾಖೆ ಸ್ಥಳಕ್ಕೆ ಆಗಮಿಸಿ ಕೆಲವೆಕ್ಷಣಗಳ ಕಾಲ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿತು.ಈ ಸಂದರ್ಭ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯೂ ಆಗಿರುವ ಪಶ್ಚಿಮ ಜಿಲ್ಲಾ ಉಸ್ತುವಾರಿ ಚೈತ್ರ ವಿ, ರಾಜ್ಯ ಕಾರ್ಯದರ್ಶಿ ಚೇತನ್ ನಾಯಕ್, ಜಿಲ್ಲಾ ಉಪಾಧ್ಯಕ್ಷರು ಅಕ್ಬರ್ ಖಾನ್ ಹಾಗೂ ಅಖಿಲೇಶ್, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳಾದ ರವಿರಾಜ್, ಮಂಜುನಾಥ್, ಚೇತನ್, ಹಾಗೂ ಹಲವು ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಸಹ ಭಾಗವಹಿಸಿದ್ದರು. ಯುವ ಕಾಂಗ್ರೆಸ್‌ನ…

ಮುಂದೆ ಓದಿ..
ಸುದ್ದಿ 

ಹೊಸಕೋಟೆ ಪಾಠಶಾಲೆಯಲ್ಲಿ ಮಾದಕ ವ್ಯಸನ ತಡೆ ಜಾಗೃತಿ ಕಾರ್ಯಕ್ರಮ

Taluknewsmedia.com

Taluknewsmedia.comಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸಕೋಟೆಯಲ್ಲಿ ಜುಲೈ 19, 2025 ರಂದು ‘ಸಂಭ್ರಮ ಶನಿವಾರ’ದ ಅಂಗವಾಗಿ “ಮಾದಕ ವಸ್ತುಗಳ ದುರುಪಯೋಗ ತಡೆಗೆ ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಸನದ ವಿರುದ್ಧ ಚೇತನತ್ಮಕ ಮನೋಭಾವ ಬೆಳೆಸುವ ಉದ್ದೇಶ ಹೊಂದಲಾಗಿತ್ತು. ಕಾರ್ಯಕ್ರಮಕ್ಕೆ ಎಲೆರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀ ಗಂಗಾಧರ್ ಸಿಎಚ್ಒ ಮತ್ತು ಉಮಾಪತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಕ್ಕಳಿಗೆ ಮಾದಕ ವಸ್ತುಗಳ ಹಾನಿಕರ ಪರಿಣಾಮಗಳ ಕುರಿತು ಸಮರ್ಪಕವಾದ ಮಾಹಿತಿ ನೀಡಿದರು. ಅವರು ವ್ಯಸನದ ಗೀಳು ಹೇಗೆ ಪ್ರಾರಂಭವಾಗುತ್ತದೆ ಮತ್ತು ಅದು ವ್ಯಕ್ತಿ ಹಾಗೂ ಕುಟುಂಬದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬ ಕುರಿತು ಮನ ಮುಟ್ಟುವಂತೆ ವಿವರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತಾದ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಾಟಕದ ಮೂಲಕ ಮಕ್ಕಳಿಗೆ ನೈಜ ಜೀವನದ ಉದಾಹರಣೆಗಳ ಮೂಲಕ ವ್ಯಸನದ…

ಮುಂದೆ ಓದಿ..
ಸುದ್ದಿ 

ವಿಜಯಪುರ ಉತ್ಸವ – 2025 ಕ್ಕೆ ಭವ್ಯ ಚಾಲನೆ ಶಾಮಿಯಾನ ಸಪ್ಲೈಯರ್ಸ್‌ ಮತ್ತು ಸಂಬಂಧಿತ ಉದ್ಯಮಗಳ ಸಾಂಸ್ಕೃತಿಕ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆ

Taluknewsmedia.com

Taluknewsmedia.comವಿಜಯಪುರ ಉತ್ಸವ – 2025’ಕ್ಕೆ ಭವ್ಯ ಚಾಲನೆಶಾಮಿಯಾನ ಸಪ್ಲೈಯರ್ಸ್‌ ಮತ್ತು ಸಂಬಂಧಿತ ಉದ್ಯಮಗಳ ಸಾಂಸ್ಕೃತಿಕ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಉದ್ಘಾಟನೆ ವಿಜಯಪುರ, ಜುಲೈ 19 – ವಿಜಯಪುರ ಜಿಲ್ಲಾ ಶಾಮಿಯಾನ ಸಪ್ಲೈಯರ್ಸ್ ಮಾಲೀಕರ ಸಂಘ ಹಾಗೂ ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಸೇಷನ್ ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ‘ವಿಜಯಪುರ ಉತ್ಸವ – 2025’ಗೆ ಇಂದು ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳಿಂದ ಭವ್ಯ ಚಾಲನೆ ದೊರೆಯಿತು. ಈ ಐದನೇ ವರ್ಷದ ಉತ್ಸವವು ಶಾಮಿಯಾನ, ಲೈಟಿಂಗ್, ಮೈಕ್, ಡೆಕೋರೇಶನ್ ಮತ್ತು ಕೇಟರಿಂಗ್ ಉದ್ಯಮದಲ್ಲಿನವರಿಗೆ ಸಮರ್ಪಿತವಾದ ವಿಶೇಷ ವೇದಿಕೆಯಾಗಿದ್ದು, ಉತ್ತರ ಕರ್ನಾಟಕದ 14 ಜಿಲ್ಲೆಗಳ ಸುಮಾರು 4,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಪೂಜ್ಯ ಅಭಿನವ ಪುಂಡಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಾಹಿಸಿದ್ದರು. ಜಿಲ್ಲಾ ಶಾಮಿಯಾನ ಸಂಘದ ಅಧ್ಯಕ್ಷ ಶಿವಾನಂದ ಮಾನಕಾರ ಸೇರಿದಂತೆ ಅನೇಕ ಗಣ್ಯರು…

ಮುಂದೆ ಓದಿ..
ಸುದ್ದಿ 

ಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಕರ್ನಾಟಕ ಭೀಮ ರಕ್ಷಕ ಸಂಘಟನೆ..

Taluknewsmedia.com

Taluknewsmedia.comಕರ್ನಾಟಕ ರಾಜ್ಯ ರೈತ ಸಂಘ(ರಿ) ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಸಂಘ ಮತ್ತು ಕರ್ನಾಟಕ ಭೀಮ ರಕ್ಷಕ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ರಾಜಾ ಲಖಮಗೌಡ ಜಲಾಶಯದಿಂದ ಹುಬ್ಬಳ್ಳಿ – ಧಾರವಾಡ ನಗರಗಳಿಗೆ ಕೈಗಾರಿಕಾ ಉದ್ಯಮಕ್ಕೆ ನೀರು ಒಯ್ಯುವ ಪ್ರಕ್ರಿಯೆಯನ್ನು ಬಂದ ಮಾಡಬೇಕು ಎಂದು ಹಿಡಕಲ ಡ್ಯಾಂ ನಲ್ಲಿ ನಿರಂತರ ಹೋರಾಟ ನಿಲ್ಲದು ಎಂದು ಹೋರಾಟ ಮುಂದುವರೇಸೀದರು ಮತ್ತು ಈ ಜಲಾಶಯ ನೀರು ಇಲ್ಲಿನ ಸಾರ್ವಜನಿಕರಿಗೆ ಕುಡಿಯಲು , ದನಕರುಗಳಿಗೆ ಮತ್ತು ಕೃಷಿ ಭೂಮಿಗಳಿಗೆ ನೀರು ಸಮರ್ಪವಾಗಿ ದೊರಕುತ್ತಿಲ್ಲ ಹಿಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇಲ್ಲಿನ ಜನತೆಯ ಬಗ್ಗೆ ವಿಚಾರ ಬಿಟ್ಟು ಬೇರೆ ಜಿಲ್ಲೆಗೆ ನೀರು ಪೂರೈಸುವದು ಎಷ್ಟರಮಟ್ಟಿಗೆ ಸೂಕ್ತ, ಮತ್ತು ನಮ್ಮ ಬೆಳಗಾವಿ ಜಿಲ್ಲೆ ರೈತರು , ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಮಗೆ ಆಪತ್ತು ತಪ್ಪಿದ್ದಲ್ಲ ಮತ್ತು ಈ ಯೋಜನೆ ಪೂರ್ಣಗೊಂಡಲ್ಲಿ ಜಲಾಶಯದಲ್ಲಿ ನೀರು ಹೆಚ್ಚು…

ಮುಂದೆ ಓದಿ..
ಸುದ್ದಿ 

ಬಳ್ಳಾರಿಯಲ್ಲಿ ಜಾನಪದ ಸಂಗೀತ ಸೊಬಗು – ಗಂಗಾ ಕಲಾ ಟ್ರಸ್ಟ್ ಹಾಗೂ ಸಂಸ್ಕೃತಿ ಇಲಾಖೆಯಿಂದ ಸಂಯುಕ್ತ ಕಾರ್ಯಕ್ರಮ

Taluknewsmedia.com

Taluknewsmedia.com ಬಳ್ಳಾರಿ, ಜುಲೈ 15:ಜಾನಪದ ಕಲೆಗಳು ನಾಡಿನ ನಂಟನ್ನು ಪ್ರತಿಬಿಂಬಿಸುವ ಅಪೂರ್ವ ಕಲಾ ರೂಪಗಳು. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಅಂದವಾದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬಳ್ಳಾರಿ) ಹಾಗೂ ಗಂಗಾ ಕಲಾ ಟ್ರಸ್ಟ್, ಇಬ್ರಾಹಿಂಪುರ (ಬಳ್ಳಾರಿ) ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 15, ಮಂಗಳವಾರ ಸಂಜೆ 5:30ಕ್ಕೆ, ಬಳ್ಳಾರಿ ನಗರದ ವಟ್ಟಪ್ಪ ಕೇರಿ 30ನೇ ವಾರ್ಡಿನ ಕೆಂಚಮ್ಮನ ಗುಡಿ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶ್ರೀಮತಿ ನಾರಾಯಣಮ್ಮ, ವಾರ್ಡಿನ ಹಿರಿಯ ಮುಖಂಡರು ಜಂಬೆ ನುಡಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ನಾಗಮ್ಮನವರು ವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಬಂಡಿಹಟ್ಟಿ ಹೈಸ್ಕೂಲ್‌ನ ಇಂಗ್ಲಿಷ್ ಉಪನ್ಯಾಸಕ ಶ್ರೀಯುತ ಹೆಚ್. ಏಸಯ್ಯ ಅವರಿಂದ ಮೂಲ ಜಾನಪದ ಕಲೆಗಳ ಮಹತ್ವದ ಕುರಿತ ಉಪನ್ಯಾಸ. ಅವರು…

ಮುಂದೆ ಓದಿ..
ಸುದ್ದಿ 

ದೇವಾಲಯದಲ್ಲಿ ಕಳ್ಳತನ: 40 ಗ್ರಾಂ ಚಿನ್ನದ ಆಭರಣ ಕಳವು, ಅರ್ಚಕರಿಂದ ದೂರು..

Taluknewsmedia.com

Taluknewsmedia.comನಾಗಮಂಗಲ ತಾಲೂಕು ಹೊಣಕೆರೆ ಹೋಬಳಿಯ ಜೋಡಿ ನೇರಲಕೆರೆ ಗ್ರಾಮದ ಶ್ರೀ ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳತನದ ಘಟನೆ ಸಂಭವಿಸಿದೆ. ಈ ಕುರಿತು ದೇವಾಲಯದ ಅರ್ಚಕರೂ ಆಗಿರುವ ಮಹದೇವಪ್ಪ ಎನ್.ಡಿ. (47), ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮಹದೇವಪ್ಪ ಅವರು ನೀಡಿದ ಮಾಹಿತಿಯಂತೆ, ದೇವಾಲಯವು ಗ್ರಾಮದಿಂದ ಒಂದು ಕಿಲೋಮೀಟರ್ ದೂರದ ಪೂರ್ವ ದಿಕ್ಕಿನಲ್ಲಿ ಇದೆ. ಪ್ರತಿದಿನದಂತೆ ಅವರು ಪೂಜೆ ಮುಗಿಸಿ, ದೇವಸ್ಥಾನದ ಮುಂಭಾಗದ ಕಬ್ಬಿಣದ ಬಾಗಿಲಿಗೆ ಬೀಗ ಹಾಕಿ ಮನೆಗೆ ಹಿಂದಿರುಗಿದ್ದರು.ಆದರೆ, ಮುಂದಿನ ಅವರು ದೇವಸ್ಥಾನಕ್ಕೆ ಹೋದಾಗ, ಬಾಗಿಲು ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ದೇವಾಲಯದ ಒಳಾಂಗಣದಲ್ಲಿ ಇಟ್ಟಿದ್ದ ಕಬ್ಬಿಣದ ಬೀರುವಿನ ಲಾಕರ್ ಕೂಡ ಮುರಿಯಲ್ಪಟ್ಟಿದ್ದು, ಅದರಲ್ಲಿ ಇಟ್ಟಿದ್ದ ದೇವರ ಸೀರೆ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು, ಲಾಕರ್ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ. ದೇವಸ್ಥಾನದ ಒಳಾಂಗಣದಲ್ಲಿ ಇಟ್ಟಿದ್ದ ಕಬ್ಬಿಣದ ಗೋಲಕವನ್ನು ಪಕ್ಕದ ಪೊದೆಯೊಳಗೆ ಎಸೆದು ಹಾಕಲಾಗಿತ್ತು.ಪರಿಶೀಲನೆ ನಡೆಸಿದಾಗ, ದೇವಾಲಯದ ಉತ್ಸವ ಹಾಗೂ ವಿಶೇಷ ದಿನಗಳಲ್ಲಿ…

ಮುಂದೆ ಓದಿ..
ಸುದ್ದಿ 

ಮಹಿಳೆಯ ಕತ್ತಿನಿಂದ ಚಿನ್ನದ ಮಾಂಗಲ್ಯ ಸರ ಕಿತ್ತೆ ಎಳೆದ ಅಪರಿಚಿತರು.. ಇಬ್ಬರು ಸ್ಕೂಟಿಯಲ್ಲಿ ಪರಾರಿ

Taluknewsmedia.com

Taluknewsmedia.comನಾಗಮಂಗಲ : ಅರೆಹಳ್ಳಿ–ಅಂಚಿಬೂವನಹಳ್ಳಿ ಮಾರ್ಗದ ಬಳಿ ನಡೆದ ದಿಟ್ಟ ಅಪಹರಣ ಪ್ರಕರಣದಲ್ಲಿ, ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ಅಪರಿಚಿತರು ಕಿತ್ತೆ ಎಳೆದಿದ್ದು, ಸ್ಕೂಟಿಯಲ್ಲಿ ಪರಾರಿಯಾದ ಘಟನೆ ನಡೆದಿದೆ.ನಿಂಗಮ್ಮ ಅವರ ಮಾಹಿತಿ ಪ್ರಕಾರ, ಅವರು ಪ್ರತಿದಿನದಂತೆ ತಮ್ಮ ಮನೆಯ ಹತ್ತಿರ ಇರುವ ಕೊಟ್ಟಿಗೆಗೆ ಮೇವು ತುಂಬಿಕೊಂಡು ಹೋಗುತ್ತಿದ್ದಾಗ, ಈ ಘಟನೆ ನಡೆದಿದೆ. ಅವರು ತಲೆಯ ಮೇಲೆ ಮೇವು ತುಂಬಿದ ಮಂಕರಿಯನ್ನು ಹೊತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಅರೆಹಳ್ಳಿ ಕಡೆಯಿಂದ ಬಂದು ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆ ಬದಿ ನಿಲ್ಲಿಸಿ, ಅವರ ಪಕ್ಕದಲ್ಲಿ ನಿಂತು, ಒಬ್ಬನು ಸ್ಕೂಟಿಯಿಂದ ಇಳಿದು ನಿಂಗಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತೆಳೆದಿದ್ದಾರೆ. ಅವರ ಕತ್ತಿನಲ್ಲಿ ಇದ್ದ ಚಿನ್ನದ ಸರದಲ್ಲಿ 40 ಗ್ರಾಂ ತೂಕದ ಮಾಂಗಲ್ಯ, 1 ಗ್ರಾಂ ತೂಕದ ಎರಡು ಚಿನ್ನದ ಗುಂಡುಗಳು,…

ಮುಂದೆ ಓದಿ..