ಮೈಲಸಂದ್ರದಲ್ಲಿ ಗಾಂಜಾ ಮಾರಾಟದ ಯತ್ನ – ಯುವಕನ ಬಂಧನ
Taluknewsmedia.comಬೆಂಗಳೂರು, ಜೂನ್ 19 – ಬೆಂಗಳೂರು ನಗರದ ಮೈಲಸಂದ್ರ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೀನ್ ಹೌಸ್ ಲೇಔಟ್‌ನ ಮುಂಭಾಗದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದ್ದು, ಸದರಿ ಘಟನೆ ಕುರಿತಂತೆ ದರ್ಶನ್ ಅಲಗೂರು ಪಿ.ಎಸ್.ಐ. ಅವರು ಹೇಳಿಕೆ ಕೊಟ್ಟಿದ್ದಾರೆ.ದರ್ಶನ್ ಅಲಗೂರು ಪಿ.ಸಿ.ಐ ಗೆ ಖಚಿತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮಧ್ಯಾಹ್ನ 12:00 ಗಂಟೆಗೆ ಮೈಲಸಂದ್ರ ಪ್ರದೇಶದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿ ಲಭಿಸಿತು. ತ್ವರಿತ ಕ್ರಮವಾಗಿ, ಮಾನ್ಯ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಂದ ಮೌಖಿಕ ಅನುಮತಿ ಪಡೆದು, ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮಧ್ಯಾಹ್ನ 1:45ರ ಸುಮಾರಿಗೆ ಶಂಕಿತ ವ್ಯಕ್ತಿಯ ಚಲನವಲನ ಗಮನಿಸಿದರು. ಆಟೋದಲ್ಲಿ ಬಂದು ಇಳಿದ ಯುವಕನು, ಪೊಲೀಸರು ಸಮೀಪಿಸುತ್ತಿದ್ದಂತೆ ತನ್ನ…
ಮುಂದೆ ಓದಿ..
