ಸುದ್ದಿ 

ಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ?

Taluknewsmedia.com

Taluknewsmedia.comಸಿಲಿಂಡರ್ ಸ್ಫೋಟ – ಜೀವಕ್ಕೆ ಬೆಲೆ ಇಲ್ಲವೇ? ಸುರಕ್ಷತೆಯ ಅರಿವು ಎಲ್ಲಿ? ಬೆಂಗಳೂರು ನಗರದ ವಿದ್ಯಾಮಾನ್ಯನಗರದಲ್ಲಿ ನಡೆದ ಸಿಲಿಂಡರ್ ಸ್ಫೋಟದಿಂದ ಮಾಜಿ ಸೈನಿಕ ಜನಾರ್ದನ್ ಅವರಿಗೆ ಗಂಭೀರ ಗಾಯವಾದ ಘಟನೆ ಸಾಮಾಜಿಕವಾಗಿ ದೊಡ್ಡ ಪ್ರಶ್ನೆಯನ್ನು ಎತ್ತಿದೆ – ನಮ್ಮ ಮನೆಗಳಲ್ಲಿ ಅನಿಲ ಸುರಕ್ಷತೆ ಬಗ್ಗೆ ನಾವು ಎಷ್ಟು ಜಾಗೃತರಾಗಿದ್ದೇವೆ? ಮಾಜಿ ಸೈನಿಕರು ದೇಶಕ್ಕಾಗಿ ಜೀವ ಪಣಕ್ಕಿಟ್ಟವರು. ಇಂತಹ ವ್ಯಕ್ತಿ ನಾಗರಿಕ ಜೀವನದಲ್ಲಿ ಅಸಾವಧಾನತೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಜೀವಕ್ಕೆ ಹಾನಿಯಾಗುತ್ತಿರುವುದು ಅತ್ಯಂತ ದುಃಖಕರ. ಈ ಘಟನೆ ಕೇವಲ ಒಂದು ಮನೆಯ ದುರಂತವಲ್ಲ, ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆ. ಪ್ರತಿ ಮನೆಗೂ ಅನಿಲ ಸೋರಿಕೆ ಪತ್ತೆ ಸಾಧನಗಳು, ಸರಿಯಾದ ಸಿಲಿಂಡರ್ ನಿರ್ವಹಣೆ ಮತ್ತು ನಿಯಮಿತ ಸುರಕ್ಷತಾ ಪರಿಶೀಲನೆ ಅಗತ್ಯವಾಗಿದೆ. ನಾಗರಿಕರು ಅನಿಲದ ವಾಸನೆ ಕಂಡುಬಂದಾಗ ತಕ್ಷಣವೇ ಗ್ಯಾಸ್ ವಾಲ್ವ್ ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದೇ, ತುರ್ತು ಸಂಖ್ಯೆಗೆ ಕರೆಮಾಡುವ…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ!

Taluknewsmedia.com

Taluknewsmedia.comಬಾಗಲಕೋಟೆಯಿಂದ ಹೊರ ನಡೀರಿ – ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗೆ DC ಆದೇಶ! ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ವಿಭಜನೆ ಉಂಟುಮಾಡುವ ಭಾಷೆ ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿವಾದಕ್ಕೆ ಒಳಗಾದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯ ವಿರುದ್ಧ ಮತ್ತೊಮ್ಮೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ವಿಜಯಪುರ ಜಿಲ್ಲೆಗೆ 2 ತಿಂಗಳ ಕಾಲ ಪ್ರವೇಶ ನಿಷೇಧ ವಿಧಿಸಿದ್ದ ಆಡಳಿತ, ಇದೀಗ ಬಾಗಲಕೋಟೆ ಜಿಲ್ಲೆಯ ಸೀಮೆಯಿಂದ ಕೂಡ ಸ್ವಾಮೀಜಿಯನ್ನು ತೆರಳುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಕೇವಲ ಒಂದು ಗಂಟೆಯೊಳಗೆ ಮಠವನ್ನು ಖಾಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಡಿವೈಎಸ್‌ಪಿ ಗಜಾನನ ಸುತಾರ ಹಾಗೂ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಸ್ವಾಮೀಜಿಗೆ ಅಧಿಕೃತ ನೋಟಿಸ್ ಹಸ್ತಾಂತರಿಸಿದ್ದಾರೆ. ವಿಜಯಪುರ ಪ್ರವೇಶಕ್ಕೆ ನಿರ್ಬಂಧ…

ಮುಂದೆ ಓದಿ..
ಸಿನೆಮಾ ಸುದ್ದಿ 

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ

Taluknewsmedia.com

Taluknewsmedia.comದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್‌ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ. ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ…

ಮುಂದೆ ಓದಿ..
ಸುದ್ದಿ 

ದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ..

Taluknewsmedia.com

Taluknewsmedia.comದರ್ಶನ್ ಜೈಲು ದೂರುಗಳ ಹಿಂದೆ ಸತ್ಯ ಬಯಲಾಗ್ತು! ಕಾನೂನು ಪ್ರಾಧಿಕಾರದ ವರದಿ ಬಹಿರಂಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್, ಜೈಲು ಪರಿಸ್ಥಿತಿಯನ್ನು ಕುರಿತು ಹಲವು ದೂರನ್ನು ಮಾಡುತ್ತಿದ್ದರು. ಆದರೆ ಇದೀಗ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕೃತ ವರದಿ ಅವರ ಹೇಳಿಕೆಗಳ ನಿಜಾಸತ್ಯ ಬಯಲು ಮಾಡಿದೆ. ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ, ದರ್ಶನ್ ಅವರ ಆರೋಗ್ಯ, ಸೆಲ್‌ ವ್ಯವಸ್ಥೆ ಹಾಗೂ ದಿನನಿತ್ಯದ ಪರಿಸ್ಥಿತಿ ಪರಿಶೀಲಿಸಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ 10 ಪುಟಗಳ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ದರ್ಶನ್ ನೀಡಿದ ಅನೆಕ ಆರೋಪಗಳಿಗೆ ವಿರುದ್ಧವಾಗಿ ಹಲವಾರು ನಿಜಾಂಶಗಳು ಬಯಲಾಗಿದೆ. ವರದಿ ಪ್ರಕಾರ, ದರ್ಶನ್ ಇರುವ ಸೆಲ್‌ನಲ್ಲಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಎರಡು ಶೌಚಾಲಯಗಳ ವ್ಯವಸ್ಥೆ ಇದೆ. ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂಬ ಅವರ ಆರೋಪಕ್ಕೆ ಸಂಬಂಧಿಸಿ, ವಿಚಾರಣಾಧೀನ…

ಮುಂದೆ ಓದಿ..
ಸುದ್ದಿ 

ಹಾಸನಾಂಬ ದರ್ಶನದ ವೇಳೆ ಜಿಲ್ಲಾಡಳಿತದ ಶಿಷ್ಟಾಚಾರ ಉಲ್ಲಂಘನೆ ಆರೋಪ – ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Taluknewsmedia.com

Taluknewsmedia.comಹಾಸನಾಂಬ ದರ್ಶನದ ವೇಳೆ ಜಿಲ್ಲಾಡಳಿತದ ಶಿಷ್ಟಾಚಾರ ಉಲ್ಲಂಘನೆ ಆರೋಪ – ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಸನಾಂಬ ದೇವಾಲಯದ ಮುಖ್ಯ ಪ್ರವೇಶದ್ವಾರದ ಎದುರು ಶನಿವಾರ ಜಿಲ್ಲಾಡಳಿತದ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎ. ಮಂಜು, ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಭಾಗವಹಿಸಿದರು. ಶುಕ್ರವಾರ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತವು ಶಿಷ್ಟಾಚಾರ ಪಾಲಿಸದಿರುವುದು ಪ್ರತಿಭಟನೆಯ ಪ್ರಮುಖ ಕಾರಣವಾಗಿದೆ. ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದ ಕುಮಾರಸ್ವಾಮಿ ಅವರ ಸ್ವಾಗತಕ್ಕೆ ಜಿಲ್ಲಾಧಿಕಾರಿ ಹಾಜರಾಗದೇ ಇದ್ದುದು, ಹಾಗೂ ದರ್ಶನದ ನಂತರ ಗೌರವಾರ್ಪಣೆ ಸಲ್ಲಿಸದಿರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಜಿಲ್ಲಾಡಳಿತದ ಈ ವರ್ತನೆ “ಕೇಂದ್ರ ಸಚಿವರಿಗೂ, ಸ್ಥಳೀಯ ಜನಪ್ರತಿನಿಧಿಗಳಿಗೂ ಅವಮಾನ” ಎಂದು ಪ್ರತಿಭಟನಾಕಾರರು…

ಮುಂದೆ ಓದಿ..
ಸುದ್ದಿ 

ಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್

Taluknewsmedia.com

Taluknewsmedia.comಅಜಯ್ ರಾವ್ ಅಭಿನಯದ ‘ರಾಧೇಯ’ ಚಿತ್ರದ ಟೀಸರ್ ಲಾಂಚ್! ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಅಜಯ್ ರಾವ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾ ‘ರಾಧೇಯ’ ಟೀಸರ್ ಬಿಡುಗಡೆಯಾಗಿದೆ. ವೇದಗುರು ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಅವರ ನಿರ್ದೇಶನದ ಮೊದಲ ಪ್ರಯತ್ನ. ಕೀರ್ತಿ ಚಾಹ್ನಾ ಸಿನಿಮಾ ಕಾರ್ಖಾನೆ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಅಜಯ್ ರಾವ್ ಜೊತೆ ಸೋನಾಲ್ ಮಾಂಟೆರೋ ನಾಯಕಿಯಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ವೇದಗುರು ಮಾತನಾಡಿ, “ಮಹಾಭಾರತದ ಕರ್ಣನ ಮತ್ತೊಂದು ಹೆಸರು ‘ರಾಧೇಯ’. ಆದರೆ ನಮ್ಮ ಚಿತ್ರದ ಕಥೆಗೆ ಕರ್ಣನೊಂದಿಗೆ ನೇರ ಸಂಬಂಧವಿಲ್ಲ. ಆದರೆ ಆತನ ತ್ಯಾಗದ ಅಂಶದಿಂದ ಪ್ರೇರಣೆ ಪಡೆದಿದ್ದೇವೆ. ಇದು ಲವ್ ಸ್ಟೋರಿಯಾದರೂ, ಹೊಸ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಮೊದಲಿಗೆ ಅಜಯ್ ರಾವ್ ಅವರಿಗೆ ಈ ಕಥೆ ಹೇಳಿದಾಗ ನಾನು ನಿರ್ದೇಶಕನಷ್ಟೇ ಇದ್ದೆ, ನಂತರ ನಿರ್ಮಾಪಕನಾದೆ. ಚಿತ್ರ ವಿತರಣೆಗೆ ಕಾಂತರಾಜು…

ಮುಂದೆ ಓದಿ..
ಸುದ್ದಿ 

ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗಬಹುದಾದ ಗಾಯ, ಹಾನಿಗಳಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ಸೇವೆ ನೀಡಲು ಬೆಂಗಳೂರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ

Taluknewsmedia.com

Taluknewsmedia.comದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗಬಹುದಾದ ಗಾಯ, ಹಾನಿಗಳಿಗೆ ಚಿಕಿತ್ಸೆ ನೀಡಲು ದಿನದ 24 ಗಂಟೆಯೂ ಸೇವೆ ನೀಡಲು ಬೆಂಗಳೂರು ನಗರದ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ.ಶಶಿಧರ್, ದೀಪಾವಳಿ ಪಟಾಕಿ ಸಿಡಿತದಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಮೊದಲು ಗಾಯ ಆಗದಂತೆ ತಡೆಗಟ್ಟಲು ಮನೆಗಳಲ್ಲಿ ಎಚ್ಚರವಹಿಸಬೇಕು. ಇದರ ಹೊರತಾಗಿಯೂ ಗಾಯ ಅಥವಾ ಅನಾಹುತಗಳು ನಡೆದರೆ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಸೇವೆ ನೀಡಲು 25 ಬೆಡ್‌ ವ್ಯವಸ್ಥೆ ಮಾಡಲಾಗಿದೆ. 10 ಮಹಿಳೆಯರ, 10 ಪುರುಷರ ಬೆಡ್‌ ಹಾಗೂ 5 ಮಕ್ಕಳ ಬೆಡ್‌ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಿದ್ದು, ಆಸ್ಪತ್ರೆಗಳ ವೈದ್ಯರಿಗೆ ದೀಪಾವಳಿ ಹಬ್ಬಕ್ಕೆ ರಜೆ ರದ್ದು ಮಾಡಲಾಗಿದೆ. ಹೀಗಾಗಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯವಿರಲಿದ್ದಾರೆ ಎಂದು ತಿಳಿಸಿದರು. ಮಿಂಟೋ ಆಸ್ಪತ್ರೆಯಲ್ಲಿ ಪ್ರತಿ…

ಮುಂದೆ ಓದಿ..
ಸುದ್ದಿ 

ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ!

Taluknewsmedia.com

Taluknewsmedia.comಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ! ಹೆಚ್ಚು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿರ್ದೇಶಕ ಸಿಂಪಲ್ ಸುನಿ, ಇದೀಗ ತಮ್ಮ ಶಿಷ್ಯನಾದ ಶೀಲಮ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ಈಗ ಸುದ್ದಿಯಲ್ಲಿದೆ. ಶೀಲಮ್, ಸುನಿಯ ನಿರ್ದೇಶನದ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ನಾಯಕನಾಗಿ ನಟಿಸುತ್ತಿರುವ ಅವರು, ಈ ಹಿಂದೆ ಕೆಲವು ಚಿತ್ರಗಳಲ್ಲಿ ಸಣ್ಣಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಕನಸಿನ ನಾಯಕಪಾತ್ರದ ಮೂಲಕ ಅವರು ಹೊಸ ಹಾದಿ ಹಿಡಿದಿದ್ದಾರೆ. ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಚಿತ್ರದಲ್ಲಿನ ಮೊದಲ ಹಾಡು “ನನ್ನೆದೆಯ ಹಾಡೊಂದನು” ಬಿಡುಗಡೆಯಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಶೀಲಮ್, ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ನೃತ್ಯ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, “ಚಿತ್ರದ ಕಥೆ ರಿವರ್ಸ್ ಸ್ಕ್ರೀನ್…

ಮುಂದೆ ಓದಿ..
ಸುದ್ದಿ 

ಹಾವೇರಿ: ಲಂಚದ ಬಲೆಗೆ ಶಿರಸ್ತೇದಾರ ಸೇರಿದಂತೆ 3 ಅಧಿಕಾರಿಗಳು ಬಿದ್ದಿದ್ದಾರೆ

Taluknewsmedia.com

Taluknewsmedia.comಹಾವೇರಿ: ಲಂಚದ ಬಲೆಗೆ ಶಿರಸ್ತೇದಾರ ಸೇರಿದಂತೆ 3 ಅಧಿಕಾರಿಗಳು ಬಿದ್ದಿದ್ದಾರೆ ಹಾವೇರಿ: ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಲಂಚಕಾಮಕ್ಕೆ ಮುಂಜಾನೆಯಿಂದ ತೊಡಗಿದ್ದ ಶಿರಸ್ತೇದಾರ, ಸಹಾಯಕರು ಹಾಗೂ ಇತರ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರೋಪಿಗಳ ಹೆಸರುಗಳು: ಶಿರಸ್ತೇದಾರ ತಮ್ಮಣ್ಣ ಕಾಂಬಳೆ ದ್ವಿತೀಯ ದರ್ಜೆ ಸಹಾಯಕರು ಗೂಳಪ್ಪ ಮನಗೂಳಿ ಮತ್ತು ಶಿವಾನಂದ ಬಡಿಗೇರ ಘಟನೆಯ ಹಿನ್ನೆಲೆ: ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಅವರು ತಮ್ಮ ಆರ್‌ಟಿಸಿ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ₹12,000 ಲಂಚ ಕೊಡುತ್ತಿದ್ದ ವೇಳೆ ಅಧಿಕಾರಿಗಳು ಲೋಕುಾಯಕ್ತರು ರೆಡ್‌ಹ್ಯಾಂಡ್ ಆಗಿ ಬಂಧನೆಗೆ ಒಳಪಟ್ಟರು. ಈ ಕುರಿತು ನವೀನ್ ಪಾಟೀಲ ಅವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣವನ್ನು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ: ಹೆತ್ತ ತಾಯಿಯನ್ನೇ ಕತ್ತು ಸಿಳ್ಳಿದ ಪಾಪಿ ಮಗ!ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ

Taluknewsmedia.com

Taluknewsmedia.comಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ: ಹೆತ್ತ ತಾಯಿಯನ್ನೇ ಕತ್ತು ಸಿಳ್ಳಿದ ಪಾಪಿ ಮಗ! ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದ ಈ ಘಟನೆ ಮಾನವೀಯತೆಯ ಮಿತಿಯನ್ನು ಮೀರಿ ಸಮಾಜವನ್ನು ಬೆಚ್ಚಿಬೀಳಿಸಿದೆ. ಕುಡಿತದ ವ್ಯಸನದಲ್ಲಿದ್ದ ವೆಂಕಟೇಶ ಎಂಬ ಕಿರಾತಕ ಮಗ, ಕ್ಷುಲ್ಲಕ ಕಾರಣಕ್ಕಾಗಿ ತನ್ನ ತಾಯಿಯ ಜೀವವನ್ನೇ ಕಸಿದುಕೊಂಡಿದ್ದಾನೆ. ಮಾಹಿತಿಯ ಪ್ರಕಾರ, ಕುಡಿದ ಮತ್ತಲ್ಲೇ ತಾಯಿ ಶ್ಯಾವಕ್ಕ (58) ಅವರನ್ನು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುಳಿದು, ನಂತರ ಕತ್ತು ಸಿಳ್ಳಿ ಕೊಲೆಗೈದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಶ್ಯಾವಕ್ಕ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ತಾಯಿ ಹಣ ಕೊಡಲಿಲ್ಲ ಎನ್ನುವುದೇ ಈ ಹೀನ ಕೃತ್ಯದ ಹಿನ್ನೆಲೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಾಗ ಕುಡಿತದ ವಿಷಯಕ್ಕೆ ತಾಯಿ–ಮಗನ ನಡುವೆ ಜಗಳಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯ ಬಳಿಕ ಪಾಪಿ ಮಗ ವೆಂಕಟೇಶ ಪರಾರಿಯಾಗಿದ್ದಾನೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಅಮಾನವೀಯ…

ಮುಂದೆ ಓದಿ..