ಸುದ್ದಿ 

ಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ

Taluknewsmedia.com

Taluknewsmedia.comಅಕ್ರಮ ಹಣದ ದುರ್ಬಳಕೆ ವಿಚಾರದಲ್ಲಿ ಉಮೇಶ ಮುದ್ನಾಳ ಆಕ್ರೋಶ ಪಿಡಿಒ ಅಮಾನತಿಗೆ ಆಗ್ರಹ – ಸರ್ಕಾರಕ್ಕೆ ಹಣ ವಾಪಸ್ ನೀಡುವಂತೆ ಒತ್ತಾಯ ಯಾದಗಿರಿ: ಮುದ್ನಾಳ ಗ್ರಾಮ ಪಂಚಾಯಿತಿಯ ಪಿಡಿಒ ನೀಲಕಂಠ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಅಕ್ರಮ ಚಟುವಟಿಕೆಗೆ ಬೆಂಬಲ ನೀಡಿದ ಇಒ ಹಾಗೂ ಜಿಲ್ಲಾ ಪಂಚಾಯಿತಿ ಪಿಡಿ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಬೇಡಿಕೆ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “2021-22ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಗೋದಾಮಿನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ, ₹18.64 ಲಕ್ಷ ಪಾವತಿಸಿ ಭಾರೀ ಅವ್ಯವಹಾರ ನಡೆದಿದೆ,” ಎಂದು ಆರೋಪಿಸಿದರು. ಅವರು ಮುಂದುವರಿದು, “ಜಿಲ್ಲಾ ಪಂಚಾಯಿತಿ ಸಿಇಒ ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಇಒ ನಿರ್ಲಕ್ಷ್ಯ ತೋರಿದ್ದಾರೆ. ಈ ಮೂಲಕ ಅಧಿಕಾರಿಗಳೂ ಅಕ್ರಮಕ್ಕೆ…

ಮುಂದೆ ಓದಿ..
ಸುದ್ದಿ 

ಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ?

Taluknewsmedia.com

Taluknewsmedia.comಲಂಚ ಸ್ವೀಕರಿಸುವುದು ಸಾಬೀತಾದರೆ ವಜಾ” ಆದರೆ ಲಂಚದ ಮೂಲವನ್ನು ಮುಚ್ಚಿಡುತ್ತೀರಾ ಸಚಿವರೇ? ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು — “ಪೊಲೀಸರು ಲಂಚ ಸ್ವೀಕರಿಸುವುದು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುತ್ತದೆ” ಎಂದು ಹೇಳಿಕೆ ನೀಡಿರುವುದು ಜನರ ಗಮನ ಸೆಳೆದಿದೆ. ಆದರೆ ಜನಸಾಮಾನ್ಯರ ಮನದಲ್ಲಿ ಎದ್ದಿರುವ ಪ್ರಶ್ನೆ — ಲಂಚ ಕೊಡುವ ವ್ಯವಸ್ಥೆ, ಲಂಚಕ್ಕೆ ಕಾರಣವಾಗುವ ಪೋಸ್ಟಿಂಗ್ ಮಾಫಿಯಾ ಬಗ್ಗೆ ಯಾರು ಮಾತನಾಡುತ್ತಾರೆ? ಸಾಮಾನ್ಯ ಪೋಲೀಸ್ ಅಧಿಕಾರಿ ಅಥವಾ ಪಿಡಿಓ ಮಟ್ಟದ ನೌಕರರು ಅಧಿಕಾರಕ್ಕೆ ಬಂದ ಕೂಡಲೇ ಲಕ್ಷಾಂತರ ರೂಪಾಯಿ ನೀಡಿ ಪೋಸ್ಟಿಂಗ್ ಪಡೆಯಬೇಕಾಗುತ್ತದೆ ಎಂಬುದು ಮುಚ್ಚಿದ ರಹಸ್ಯವಲ್ಲ. ಹೀಗಾಗಿ ಆ ಹಣವನ್ನು ವಾಪಸ್ ಪಡೆಯಲು ಕೆಲವರು ಜನರಿಂದ ಲಂಚ ತಗೊಳ್ಳುತ್ತಾರೆ. ನಂತರ ಸರ್ಕಾರದವರು “ಲಂಚ ತಗೊಳ್ಳಬೇಡಿ” ಎಂಬ ನೈತಿಕ ಪಾಠ ಹೇಳುವುದು ಜನರ ಕಿವಿಗೆ ವ್ಯಂಗ್ಯವಾಗಿ ಕೇಳುತ್ತದೆ. ಜನರ ಕೋಪದ ಧ್ವನಿಯೇ ಹೀಗಿದೆ..…

ಮುಂದೆ ಓದಿ..
ಸುದ್ದಿ 

ಡಂಬಲ್ಸ್ ಹೊಡೆತದಿಂದ ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ

Taluknewsmedia.com

Taluknewsmedia.comಡಂಬಲ್ಸ್ ಹೊಡೆತದಿಂದ ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು: ನಗರದಲ್ಲಿ ಡಂಬಲ್ಸ್‌ನಿಂದ ಹೊಡೆದು ವ್ಯಕ್ತಿಯೊಬ್ಬನ ಹತ್ಯೆ ಮಾಡಿದ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದವರು ಭೀಮೇಶ್ ಬಾಬು (41) ಎಂದು ಗುರುತಿಸಲಾಗಿದೆ. ಆರೋಪಿಯು ಸೋಮಲ ವಂಶಿ, ಆಂಧ್ರದ ವಿಜಯವಾಡ ಮೂಲದವನಾಗಿದ್ದಾನೆ. ಮಾಹಿತಿ ಪ್ರಕಾರ, ಇಬ್ಬರೂ ಒಂದು ಡೇಟಾ ಸಂಗ್ರಹ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪನಿಯು ಸಿನಿಮಾ ಚಿತ್ರೀಕರಣದ ವಿಡಿಯೋ ಶೇಖರಣೆ ಮತ್ತು ಸಂಪಾದನೆ ಕಾರ್ಯಗಳಲ್ಲಿ ತೊಡಗಿಕೊಂಡಿತ್ತು. ದಿನನಿತ್ಯ ಆಧಾರದ ಮೇಲೆ ವಿಡಿಯೋ ಸಂಗ್ರಹ ಮಾಡುವ ಕೆಲಸದಲ್ಲಿ ನಿರತರಾಗಿದ್ದ ಇಬ್ಬರೂ ಕಂಪನಿಯಲ್ಲೇ ರಾತ್ರಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ದಿನ ರಾತ್ರಿ ಸುಮಾರು 1.30ರ ಸುಮಾರಿಗೆ, ಇಬ್ಬರ ನಡುವೆ ಅಲ್ಪ ವಿಷಯಕ್ಕೆ ವಾದ-ವಿವಾದ ಉಂಟಾಗಿದೆ. ಕೋಪದ ರಭಸದಲ್ಲಿ ವಂಶಿ ಡಂಬಲ್ಸ್‌ನಿಂದ ಭೀಮೇಶ್‌ನ ತಲೆಗೆ ಹೊಡೆದು, ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ. ಘಟನೆಯ…

ಮುಂದೆ ಓದಿ..
ಸಿನೆಮಾ ಸುದ್ದಿ 

“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ

Taluknewsmedia.com

Taluknewsmedia.com“I Am God” : ಗುರು-ಶಿಷ್ಯ ಬಂಧವನ್ನು ನೆನಪಿಸಿದ ರವಿ ಗೌಡ ನಿರ್ದೇಶನದ ಹೊಸ ಸಿನಿಮಾ ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿ ಮೂವರು ಪಾತ್ರಗಳಲ್ಲಿ ಮಿಂಚಿರುವ ರವಿ ಗೌಡ ಅವರ “I Am God” ಸಿನಿಮಾ ಈಗ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾದ ಎರಡು ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ ಈ ಸಿನಿಮಾ, ಟ್ರೇಲರ್ ಬಿಡುಗಡೆಗೊಂಡ ನಂತರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಶೀರ್ಷಿಕೆ ಕೇಳುತ್ತಿದ್ದಂತೆಯೇ ಯಾರಿಗಾದರೂ ನೆನಪಾಗುವುದು ರಿಯಲ್‌ ಸ್ಟಾರ್ ಉಪೇಂದ್ರ. ಇದೇ ಉಪ್ಪಿ ಅವರ ಶಿಷ್ಯನಾದ ರವಿ ಗೌಡ, ಅವರ ಪಾಠದಿಂದ ಪ್ರೇರಿತನಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಪೇಂದ್ರ ಅವರ “ಉಪ್ಪಿ 2” ಸಿನಿಮಾದಲ್ಲಿ ಸಹಾಯಕನಾಗಿ ಕೆಲಸಮಾಡಿದ ನಂತರ, “ಸ್ವಂತ ಚಿತ್ರ ನಿರ್ದೇಶನ” ಎಂಬ ಕನಸನ್ನು ಸಾಕಾರಗೊಳಿಸಿರುವುದು ಈ ಸಿನಿಮಾ ಮೂಲಕ. ಮೈಸೂರಿನಲ್ಲಿ ನಡೆದ ಟ್ರೇಲರ್ ಲಾಂಚ್‌ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಕೈಯಿಂದಲೇ…

ಮುಂದೆ ಓದಿ..
ಸುದ್ದಿ 

ಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ

Taluknewsmedia.com

Taluknewsmedia.comಪತಿಯ ಹತ್ಯೆಗೆ ಪತ್ನಿಯ ಕುತಂತ್ರ: ನಂಜನಗೂಡಿನಲ್ಲಿ ನಾಟಕ ಸೃಷ್ಟಿಸಿ ಬಲೆಗೆ ಸಿಲುಕಿದ ಕಿಲಾಡಿ ಪತ್ನಿ ನಂಜನಗೂಡು: ಪತಿಯನ್ನ ಕೊಲ್ಲಲು ಪತ್ನಿಯೇ ಸ್ಕೆಚ್ ಹಾಕಿ, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಪೊಲೀಸರ ಸೂಕ್ಷ್ಮ ತನಿಖೆಯಿಂದ ಸಿಕ್ಕಿಬಿದ್ದ ಈ ಕಿಲಾಡಿ ಪತ್ನಿಯ ಆಟ ಇದೀಗ ಎಲ್ಲರ ಚರ್ಚೆಗೆ ಕಾರಣವಾಗಿದೆ. ಪತಿಯನ್ನ ಮುಗಿಸಲು ಪತ್ನಿ ತನ್ನ ಸಹೋದರನ ಸಹಾಯದಿಂದ ಸಂಚು ರೂಪಿಸಿದ್ದಾಳೆ. ಆದರೆ ನಂಜನಗೂಡು ಠಾಣೆ ಪೊಲೀಸರು ಬಲವಾದ ಸುಳಿವುಗಳ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ನಿ ಸಂಗೀತಾ, ಆಕೆಯ ಸಹೋದರ ಸಂಜಯ್, ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕ — ಈ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಪತಿಯನ್ನ ಕೊಲ್ಲಲು ಸಂಚು ರೂಪಿಸಿದರೂ, ಯೋಜನೆ ಪೂರ್ಣವಾಗಿ ಸಫಲವಾಗಲಿಲ್ಲ. ಗಾಯಗೊಂಡ ಪತಿ ರಾಜೇಂದ್ರ ಪ್ರಸ್ತುತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.…

ಮುಂದೆ ಓದಿ..
ಸುದ್ದಿ 

ಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ

Taluknewsmedia.com

Taluknewsmedia.comಎರಡು ದಿನಗಳ ಬಳಿಕವೂ ಪತ್ತೆಯಾಗದ ಗೃಹಿಣಿಯ ಸಾವು ಪ್ರಕರಣದ ಆರೋಪಿಗಳು — ಕುಟುಂಬದ ಕಣ್ಣೀರಿನಲ್ಲಿ ತೇಲುತ್ತಿರುವ ತೀರ್ಥಹಳ್ಳಿ ಗ್ರಾಮ ಶಿವಮೊಗ್ಗ: ಎನ್.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗೃಹಿಣಿಯ ಸಾವಿನ ಪ್ರಕರಣಕ್ಕೆ ಈಗ ಹೊಸ ತಿರುವು ಬಂದಿದೆ. ಕಳೆನಾಶಕ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಕಳೆದುಕೊಂಡ ಪೂಜಾ (30) ಎಂಬ ಮಹಿಳೆಯ ಸಾವು ಪ್ರಕರಣದ ಆರೋಪಿಗಳು — ಪತಿ ಶರತ್, ಅತ್ತೆ, ಮಾವ ಮತ್ತು ನಾದಿನಿ — ಇಬ್ಬರು ದಿನ ಕಳೆದರೂ ಇನ್ನೂ ಪೊಲೀಸರ ಬಲೆಗೆ ಸಿಕ್ಕಿಲ್ಲ. ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹತ್ತಿರದ ಶಂಕರಳ್ಳಿ ಈಶ್ವರಪ್ಪ ಅವರ ಪುತ್ರಿ ಪೂಜಾಳಿಗೆ, ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬುವನೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಗಂಡು ಮಗು ಇದೆ. ಆದರೆ ಮದುವೆಯ ಬಳಿಕ ಪೂಜಾಳಿಗೆ ಗಂಡ ಹಾಗೂ ಅತ್ತೆಮಾವಂದಿರಿಂದ ನಿರಂತರ ಕಿರುಕುಳ ಎದುರಾಗುತ್ತಿತ್ತು…

ಮುಂದೆ ಓದಿ..
ಸುದ್ದಿ 

ರಾಯಚೂರು ಪಿಡಿಒ ಅಮಾನತು ಪ್ರಕರಣದಲ್ಲಿ ಕೆಎಸ್‌ಎಟಿ ತಡೆ — ಸರ್ಕಾರಕ್ಕೆ ಮುಖಭಂಗ

Taluknewsmedia.com

Taluknewsmedia.comರಾಯಚೂರು ಪಿಡಿಒ ಅಮಾನತು ಪ್ರಕರಣದಲ್ಲಿ ಕೆಎಸ್‌ಎಟಿ ತಡೆ — ಸರ್ಕಾರಕ್ಕೆ ಮುಖಭಂಗ ಬೆಂಗಳೂರು: ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಮಾನತುಗೊಂಡಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಅವರ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) ತಾತ್ಕಾಲಿಕ ತಡೆ ನೀಡಿದೆ. ಪ್ರವೀಣ್ ಕುಮಾರ್ ಅವರನ್ನು ರಾಜಕೀಯ ಒತ್ತಡದ ಹಿನ್ನೆಲೆ ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ ಎಂಬ ಆಕ್ಷೇಪದ ಮೇರೆಗೆ, ಕಚೇರಿಯ ಕಾನೂನು ತಂಡವು ನ್ಯಾಯಮಂಡಳಿಯ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೆಎಸ್‌ಎಟಿ, ರಾಜ್ಯ ಸರ್ಕಾರದ ಆದೇಶಕ್ಕೆ ಅಕ್ಟೋಬರ್ 30 ರಂದು ತಡೆ ನೀಡಿರುವ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್’ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. “ಯಾವುದೇ ರೀತಿಯ ರಾಜಕೀಯ ಬೆದರಿಕೆ ಅಥವಾ ಒತ್ತಡದಿಂದ ಆರ್‌ಎಸ್‌ಎಸ್‌ನ ದೇಶ ನಿರ್ಮಾಣದ ಆದರ್ಶಗಳನ್ನು…

ಮುಂದೆ ಓದಿ..
ಸುದ್ದಿ 

ಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ತನಿಖೆ

Taluknewsmedia.com

Taluknewsmedia.comಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ತನಿಖೆ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ನಾಪತ್ತೆ ಪ್ರಕರಣ ಇದೀಗ ಬಳ್ಳಾರಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಬಳ್ಳಾರಿಯಲ್ಲಿ ಸಕ್ರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯ ರೊದ್ದಂ ಜುವೆಲರಿ ಮಾಲೀಕ ಗೋವರ್ಧನ ಅವರನ್ನು ಎಸ್‌ಐಟಿ ತಂಡ ವಿಚಾರಣೆಗೊಳಪಡಿಸಿದ್ದು, ಅವರ ಅಂಗಡಿ ಹಾಗೂ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಮೂಲತಃ 2019ರಲ್ಲಿ ಶಬರಿಮಲೆ ದೇವಾಲಯದ ದ್ವಾರಪಾಲಕರ ವಿಗ್ರಹಗಳ ಚಿನ್ನದ ಕವಚವನ್ನು ಮರುಲೇಪನ ಮಾಡಲು ತೆಗೆದುಕೊಂಡ ವೇಳೆ ಸುಮಾರು ನಾಲ್ಕೂವರೆ ಕೆಜಿ ಚಿನ್ನ ಕಾಣೆಯಾಗಿರುವುದಾಗಿ ಆ ಸಮಯದಲ್ಲಿ ವರದಿಯಾಗಿತ್ತು. ಬಳ್ಳಾರಿ ಮೂಲದ ಗೋವರ್ಧನ ಅವರು ಅಯ್ಯಪ್ಪ ದೇವಾಲಯಕ್ಕೆ ಹೊಸ ಚಿನ್ನದ ಲೇಪಿತ ದ್ವಾರ ತಯಾರಿಸಿದ್ದರು. ಈ ಕೆಲಸವನ್ನು ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಅವರ…

ಮುಂದೆ ಓದಿ..
ಸುದ್ದಿ 

ಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ!

Taluknewsmedia.com

Taluknewsmedia.comಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ! ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಮನೆ ಮುಂದೆ ಅಲಂಕಾರ ಗಿಡದಂತೆ ಬೆಳೆಸಲಾಗಿದ್ದ ಗಾಂಜಾ ಗಿಡವನ್ನು ಪೊಲೀಸರು ಪತ್ತೆಹಚ್ಚಿ, ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಘಟನೆ ಅಕ್ಟೋಬರ್ 29ರಂದು ನಡೆದಿದೆ. ಗ್ರಾಮದ ನಿವಾಸಿ ಸುರೇಶ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯ ಮುಂಭಾಗದಲ್ಲಿ ಸೀರೆಗಳಿಂದ ಸುತ್ತು ಕಟ್ಟಿ ಮಧ್ಯದಲ್ಲಿ ಐದು ಗಾಂಜಾ ಗಿಡಗಳನ್ನು ಅಲಂಕಾರ ಗಿಡದಂತೆಯೇ ಬೆಳೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರಿಂದ ಬಂದ ನಿಖರ ಮಾಹಿತಿಯ ಮೇರೆಗೆ, ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುಮಾರು 9 ಕೆ.ಜಿ ತೂಕದ ಮತ್ತು ₹3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹಿನ್ನೆಲೆ ತಹಶೀಲ್ದಾರ್ ಚೇತನ, ಸಿಡಿಪಿಒ ಪ್ರದೀಪ್ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿ…

ಮುಂದೆ ಓದಿ..
ಸುದ್ದಿ 

ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ

Taluknewsmedia.com

Taluknewsmedia.comಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ ಸಾಗರ: ನಕಲಿ ಯೂಟ್ಯೂಬರ್‌ಗಳ ಬ್ಲ್ಯಾಕ್‌ಮೇಲ್‌ ಅಟ್ಟಹಾಸದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಗುರುವಾರ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ “ಯೂಟ್ಯೂಬ್ ಪತ್ರಕರ್ತ” ಎಂದು ಹೇಳಿಕೊಂಡು ಅಕ್ರಮ ಚಟುವಟಿಕೆ ನಡೆಸುವವರ ಸಂಖ್ಯೆ ತೀವ್ರವಾಗಿ ಏರಿದೆ. ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಕೆಲವರು ಬ್ಲ್ಯಾಕ್‌ಮೇಲ್, ಹಣದ ವಸೂಲಿ ಮತ್ತು ಬೆದರಿಕೆ ಕೃತ್ಯಗಳಲ್ಲಿ ತೊಡಗಿರುವುದು ಸಂಘದ ಗಮನಕ್ಕೆ ಬಂದಿದೆ. ಇವರಿಗೆ ನಿಜವಾದ ಪತ್ರಕರ್ತತ್ವ ಅಥವಾ ಪತ್ರಕರ್ತರ ಸಂಘದೊಂದಿಗೆ ಯಾವುದೇ ನಂಟಿಲ್ಲ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಲೇಔಟ್ ಮಾಲೀಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು ಇಂತಹ ನಕಲಿ ಪತ್ರಕರ್ತರ ಬಲಿಯಾಗುತ್ತಿದ್ದಾರೆ. “ನಿಮ್ಮ ವಿರುದ್ಧ ಯೂಟ್ಯೂಬ್‌ನಲ್ಲಿ ಸುದ್ದಿ ಹಾಕುತ್ತೇವೆ” ಎಂದು…

ಮುಂದೆ ಓದಿ..