ಸುದ್ದಿ 

ಶಾಂತಿನಗರದಲ್ಲಿ ದುರಂತ ಅಪಘಾತ: ಬೈಕ್ ಸವಾರರನ್ನು ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಇಬ್ಬರ ದುರ್ಮರಣ

Taluknewsmedia.com

Taluknewsmedia.comಶಾಂತಿನಗರದಲ್ಲಿ ದುರಂತ ಅಪಘಾತ: ಬೈಕ್ ಸವಾರರನ್ನು ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ – ಇಬ್ಬರ ದುರ್ಮರಣ ಬೆಂಗಳೂರು, ನವೆಂಬರ್ 02: ನಗರದ ಶಾಂತಿನಗರ ಬಸ್ ನಿಲ್ದಾಣದ ಸಮೀಪ ನಡುರಾತ್ರಿ ವೇಳೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ರೆಡ್ ಸಿಗ್ನಲ್‌ನ ಬಳಿ ನಿಂತಿದ್ದ ಎರಡು ಬೈಕ್‌ಗಳಿಗೆ ರಿಚ್ಮಂಡ್ ಸರ್ಕಲ್ ದಿಕ್ಕಿನಿಂದ ಬಂದ ಆಂಬ್ಯುಲೆನ್ಸ್ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಇಸ್ಮಾಯಿಲ್ (40) ಹಾಗೂ ಸಮೀನ ಬಾನು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ತೀವ್ರತೆ ಇಷ್ಟು ಭೀಕರವಾಗಿದ್ದು, ಆಂಬ್ಯುಲೆನ್ಸ್ ಸುಮಾರು 50 ಮೀಟರ್ ದೂರಕ್ಕೆ ಬೈಕ್‌ಗಳನ್ನು ಎಳೆದೊಯ್ದ ನಂತರ ರಸ್ತೆ ಬದಿಯ ಪೊಲೀಸ್ ಚೌಕಿಗೆ ಗುದ್ದಿದೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ…

ಮುಂದೆ ಓದಿ..
ಸುದ್ದಿ 

ರಾಯಚೂರು ಪಿಡಿಒ ಅಮಾನತು ಪ್ರಕರಣದಲ್ಲಿ ಕೆಎಸ್‌ಎಟಿ ತಡೆ — ಸರ್ಕಾರಕ್ಕೆ ಮುಖಭಂಗ

Taluknewsmedia.com

Taluknewsmedia.comರಾಯಚೂರು ಪಿಡಿಒ ಅಮಾನತು ಪ್ರಕರಣದಲ್ಲಿ ಕೆಎಸ್‌ಎಟಿ ತಡೆ — ಸರ್ಕಾರಕ್ಕೆ ಮುಖಭಂಗ ಬೆಂಗಳೂರು: ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಮಾನತುಗೊಂಡಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಅವರ ಅಮಾನತು ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) ತಾತ್ಕಾಲಿಕ ತಡೆ ನೀಡಿದೆ. ಪ್ರವೀಣ್ ಕುಮಾರ್ ಅವರನ್ನು ರಾಜಕೀಯ ಒತ್ತಡದ ಹಿನ್ನೆಲೆ ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ ಎಂಬ ಆಕ್ಷೇಪದ ಮೇರೆಗೆ, ಕಚೇರಿಯ ಕಾನೂನು ತಂಡವು ನ್ಯಾಯಮಂಡಳಿಯ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೆಎಸ್‌ಎಟಿ, ರಾಜ್ಯ ಸರ್ಕಾರದ ಆದೇಶಕ್ಕೆ ಅಕ್ಟೋಬರ್ 30 ರಂದು ತಡೆ ನೀಡಿರುವ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್’ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. “ಯಾವುದೇ ರೀತಿಯ ರಾಜಕೀಯ ಬೆದರಿಕೆ ಅಥವಾ ಒತ್ತಡದಿಂದ ಆರ್‌ಎಸ್‌ಎಸ್‌ನ ದೇಶ ನಿರ್ಮಾಣದ ಆದರ್ಶಗಳನ್ನು…

ಮುಂದೆ ಓದಿ..
ಸುದ್ದಿ 

ಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ತನಿಖೆ

Taluknewsmedia.com

Taluknewsmedia.comಬಳ್ಳಾರಿ: ಶಬರಿಮಲೆ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ಸುಳಿವು ಹುಡುಕಾಟ – ಕೇರಳ ಎಸ್‌ಐಟಿ ಬಳ್ಳಾರಿಯಲ್ಲಿ ತನಿಖೆ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ನಾಪತ್ತೆ ಪ್ರಕರಣ ಇದೀಗ ಬಳ್ಳಾರಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ಬಳ್ಳಾರಿಯಲ್ಲಿ ಸಕ್ರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಬಳ್ಳಾರಿಯ ರೊದ್ದಂ ಜುವೆಲರಿ ಮಾಲೀಕ ಗೋವರ್ಧನ ಅವರನ್ನು ಎಸ್‌ಐಟಿ ತಂಡ ವಿಚಾರಣೆಗೊಳಪಡಿಸಿದ್ದು, ಅವರ ಅಂಗಡಿ ಹಾಗೂ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಮೂಲತಃ 2019ರಲ್ಲಿ ಶಬರಿಮಲೆ ದೇವಾಲಯದ ದ್ವಾರಪಾಲಕರ ವಿಗ್ರಹಗಳ ಚಿನ್ನದ ಕವಚವನ್ನು ಮರುಲೇಪನ ಮಾಡಲು ತೆಗೆದುಕೊಂಡ ವೇಳೆ ಸುಮಾರು ನಾಲ್ಕೂವರೆ ಕೆಜಿ ಚಿನ್ನ ಕಾಣೆಯಾಗಿರುವುದಾಗಿ ಆ ಸಮಯದಲ್ಲಿ ವರದಿಯಾಗಿತ್ತು. ಬಳ್ಳಾರಿ ಮೂಲದ ಗೋವರ್ಧನ ಅವರು ಅಯ್ಯಪ್ಪ ದೇವಾಲಯಕ್ಕೆ ಹೊಸ ಚಿನ್ನದ ಲೇಪಿತ ದ್ವಾರ ತಯಾರಿಸಿದ್ದರು. ಈ ಕೆಲಸವನ್ನು ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಅವರ…

ಮುಂದೆ ಓದಿ..
ಸುದ್ದಿ 

ಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ!

Taluknewsmedia.com

Taluknewsmedia.comಶ್ರೀರಂಗಪಟ್ಟಣ: ಮನೆಯ ಮುಂದೆ “ಶೋ ಗಿಡ” ಎಂದು ಹೇಳಿ ಗಾಂಜಾ ಬೆಳೆ! ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ಮನೆ ಮುಂದೆ ಅಲಂಕಾರ ಗಿಡದಂತೆ ಬೆಳೆಸಲಾಗಿದ್ದ ಗಾಂಜಾ ಗಿಡವನ್ನು ಪೊಲೀಸರು ಪತ್ತೆಹಚ್ಚಿ, ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಘಟನೆ ಅಕ್ಟೋಬರ್ 29ರಂದು ನಡೆದಿದೆ. ಗ್ರಾಮದ ನಿವಾಸಿ ಸುರೇಶ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯ ಮುಂಭಾಗದಲ್ಲಿ ಸೀರೆಗಳಿಂದ ಸುತ್ತು ಕಟ್ಟಿ ಮಧ್ಯದಲ್ಲಿ ಐದು ಗಾಂಜಾ ಗಿಡಗಳನ್ನು ಅಲಂಕಾರ ಗಿಡದಂತೆಯೇ ಬೆಳೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರಿಂದ ಬಂದ ನಿಖರ ಮಾಹಿತಿಯ ಮೇರೆಗೆ, ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುಮಾರು 9 ಕೆ.ಜಿ ತೂಕದ ಮತ್ತು ₹3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಹಿನ್ನೆಲೆ ತಹಶೀಲ್ದಾರ್ ಚೇತನ, ಸಿಡಿಪಿಒ ಪ್ರದೀಪ್ ಅವರ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಿ…

ಮುಂದೆ ಓದಿ..
ಸುದ್ದಿ 

ಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ

Taluknewsmedia.com

Taluknewsmedia.comಸಾಗರದಲ್ಲಿ ನಕಲಿ ಯೂಟ್ಯೂಬರ್ಸ್ ಅಟ್ಟಹಾಸ – ಪತ್ರಕರ್ತರ ಸಂಘದಿಂದ ಕಠಿಣ ಕ್ರಮಕ್ಕೆ ಒತ್ತಾಯ ಸಾಗರ: ನಕಲಿ ಯೂಟ್ಯೂಬರ್‌ಗಳ ಬ್ಲ್ಯಾಕ್‌ಮೇಲ್‌ ಅಟ್ಟಹಾಸದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆ ವತಿಯಿಂದ ಗುರುವಾರ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ “ಯೂಟ್ಯೂಬ್ ಪತ್ರಕರ್ತ” ಎಂದು ಹೇಳಿಕೊಂಡು ಅಕ್ರಮ ಚಟುವಟಿಕೆ ನಡೆಸುವವರ ಸಂಖ್ಯೆ ತೀವ್ರವಾಗಿ ಏರಿದೆ. ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಕೆಲವರು ಬ್ಲ್ಯಾಕ್‌ಮೇಲ್, ಹಣದ ವಸೂಲಿ ಮತ್ತು ಬೆದರಿಕೆ ಕೃತ್ಯಗಳಲ್ಲಿ ತೊಡಗಿರುವುದು ಸಂಘದ ಗಮನಕ್ಕೆ ಬಂದಿದೆ. ಇವರಿಗೆ ನಿಜವಾದ ಪತ್ರಕರ್ತತ್ವ ಅಥವಾ ಪತ್ರಕರ್ತರ ಸಂಘದೊಂದಿಗೆ ಯಾವುದೇ ನಂಟಿಲ್ಲ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಲೇಔಟ್ ಮಾಲೀಕರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಕರು ಇಂತಹ ನಕಲಿ ಪತ್ರಕರ್ತರ ಬಲಿಯಾಗುತ್ತಿದ್ದಾರೆ. “ನಿಮ್ಮ ವಿರುದ್ಧ ಯೂಟ್ಯೂಬ್‌ನಲ್ಲಿ ಸುದ್ದಿ ಹಾಕುತ್ತೇವೆ” ಎಂದು…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಗ್ರಾಮಾಂತರ: DDLR ಕಚೇರಿಯಲ್ಲಿ ಭ್ರಷ್ಟಾಚಾರದ ಬೃಹತ್ ಬಯಲು — ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಗಂಭೀರ ಲಂಚದ ಆರೋಪ!

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ: DDLR ಕಚೇರಿಯಲ್ಲಿ ಭ್ರಷ್ಟಾಚಾರದ ಬೃಹತ್ ಬಯಲು — ಉಪ ನಿರ್ದೇಶಕಿ ಕುಸುಮಲತಾ ವಿರುದ್ಧ ಗಂಭೀರ ಲಂಚದ ಆರೋಪ! ರಾಜ್ಯದಲ್ಲಿ ದಿನದಿಂದ ದಿನಕ್ಕೆ ಭ್ರಷ್ಟಾಚಾರದ ಪ್ರಮಾಣ ತಾರಕಕ್ಕೇರಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚವೇ ನಿಯಮವಾದಂತಾಗಿದೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಭವನದಲ್ಲಿರುವ ಭೂ ದಾಖಲೆಗಳ ಉಪ ನಿರ್ದೇಶಕರ (DDLR) ಕಚೇರಿಯಿಂದಲೇ ಭ್ರಷ್ಟಾಚಾರದ ದುರ್ಗಂಧ ಹೊರಬಿದ್ದಿದೆ. ಬಡ ರೈತರ ಹಕ್ಕಿನ ದಾಖಲೆಗಳನ್ನು ನೀಡುವ ಹೆಸರಿನಲ್ಲಿ ಲಂಚದ ಅಬ್ಬರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ಉಪ ನಿರ್ದೇಶಕಿ ಕುಸುಮಲತಾ ಅವರು ಯಾವುದೇ ಕೆಲಸಕ್ಕಾಗಿ ಲಂಚವಿಲ್ಲದೆ ಚಲಿಸುವುದೇ ಇಲ್ಲ ಎಂಬ ಮಾತು ಕಚೇರಿಯಲ್ಲೇ ಸಾಮಾನ್ಯವಾಗಿದೆ. ರೈತರಿಗೆ ದಾಖಲೆ ಪ್ರತಿಯನ್ನು ನೀಡಲು ಅಥವಾ ಅಂತಿಮ ಆದೇಶ ನೀಡಲು ₹50,000ರಿಂದ ₹1 ಲಕ್ಷದವರೆಗೆ ಲಂಚ ಬೇಡಿಕೆ ಇಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಇನ್ನಷ್ಟು ಅಘಾತಕಾರಿ ಸಂಗತಿ ಏನೆಂದರೆ — ಫೋನ್ ಪೇ,…

ಮುಂದೆ ಓದಿ..
ಸುದ್ದಿ 

ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….

Taluknewsmedia.com

Taluknewsmedia.comಕಣಿ……. ಕಣಿ ಹೇಳ್ತೀನಿ ಅಣ್ಣ ಕಣಿ,ಕಣಿ ಹೇಳ್ತೀನಿ ಅಕ್ಕ ಕಣಿ,….. ಖರೇನೇ ಹೇಳ್ತೀನಿ,ಸುಳ್ಳಾಡಂಗಿಲ್ಲ ನಾ, ನೋಟಿನ ಬಣ್ಣ ಬದಲಾಗೈತಿಮನ್ಸರ ಬದುಕೂ ಬದಲಾಗ್ತೈತಿ,ರಾಜನ ಪ್ರಭುತ್ವ ಕುಣಿತೈತಿ,ಭ್ರಷ್ಟರ ಮನಸ್ಸು ಕುದಿತೈತಿ,ಬಡವನ ಪ್ರಾಣ ಕುಸಿತೈತಿ. ಕಣಿ ಹೇಳ್ತೀನಿ ಅಕ್ಕ ಕಣಿ,…. ತರಕಾರಿ ಮಾರೌರ್ರು –ಹಣ್ಣು ಮಾರೌರ್ರು,ಮೀನು ಕೋಳಿ ಮಾರೌರ್ರು –ಪಾತ್ರೆ ಪಗಡೆ ಮಾರೌರ್ರು,ಕೂಲಿ ಮಾಡೌರ್ರು –ಮಂತ್ರ ತಂತ್ರ ಮಾಡೌರ್ರು,ಕಟಿಂಗ್ ಮಾಡೌರ್ರು –ಇಸ್ತ್ರೀ ಮಾಡೌರ್ರು,ಬದುಕು ಕುಸಿತೈತಿ…. ಕಂಪ್ಯೂಟರ್ ಮಾರೌರ್ರು –ಆನ್ ಲೈನ್ ವ್ಯಾಪಾರ ಮಾಡೌರ್ರು,ಈಗಾಗ್ಲೇ ಕಲಿತೌರ್ರು –ಒಂದಕ್ಕೆರಡು ಲಾಭ ಮಾಡೌರ್ರು,ದಲ್ಲಾಳಿ ಮಾಡೌರ್ರುಬದುಕು ಕುಣಿತೈತಿ. ಕಣಿ ಹೇಳ್ತೀನಿ ತಾಯಿ ಕಣಿ,…… ಕಾಂಚಾನ ಕುಣಿತೈತಿ –ಮನ್ಸತ್ವ ನೆಗಿತೈತಿ,ರಾಜಾನ ಕನಸು ದೊಡ್ಡದೈತಿ,ಬಡವನ ಆಯಸ್ಸು ಸಣ್ಣದೈತಿ,…. ನೂರ್ಕಳ್ರು ತಪ್ಪಿಸ್ಕಂಡ್ರು ಅಮಾಯಕನಿಗೆ ಹೊಡಿಬ್ಯಾಡ್ರಿ ಅಂತೈತಿ,ಕಾಲ ಬದಲಾಗೈತಿ,ಒಬ್ ಕಳ್ಳನ್ ಹಿಡಿಯಾಕ ಸಾವ್ರ ಅಮಾಯಕ್ರಿಗೆ ಹೊಡ್ದೈತಿ. ಕಣಿ ಹೇಳ್ತೀನಿ ಯಪ್ಪಾ ಕಣಿ,…. ಬಡವಾನ ಮನ್ಸಾಗ ಗೊಂದಲೈತಿ,ವ್ಯಾಪಾರಿ ಮುಖದಾಗ ನಗುವೈತಿ,ಹಾಲು ವಿಷವಾಗ್ತೈತಿ –ಕಾಲ ಉರುಳಾಗ್ತೈತಿ,ಕಳ್ರು…

ಮುಂದೆ ಓದಿ..
ಸುದ್ದಿ 

ಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಸ್ನೇಹಿತನ ಹತ್ಯೆ!

Taluknewsmedia.com

Taluknewsmedia.comಚಿನ್ನ ಕಳ್ಳತನ ಆರೋಪದ ಹಿನ್ನಲೆಯಲ್ಲಿ ಸ್ನೇಹಿತನ ಹತ್ಯೆ! ಬೆಂಗಳೂರು ನಗರದ ಕೋಣನಕುಂಟೆ ಪ್ರದೇಶದ ಕೃಷ್ಣಪ್ಪ ಲೇಔಟಿನಲ್ಲಿ ದುರ್ಘಟನೆ ಸಂಭವಿಸಿದೆ. ತಾಯಿಯ ಚಿನ್ನ ಕಳುವಾದ ಪ್ರಕರಣದ ಬಗ್ಗೆ ನಡೆದ ವಾಗ್ವಾದದಲ್ಲಿ ಪ್ರೀತಂ ಎನ್ನುವ ಯುವಕ ತನ್ನ ಆಪ್ತ ಸ್ನೇಹಿತ ರಾಹುಲ್‌ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಮಾಹಿತಿಯ ಪ್ರಕಾರ, ಪ್ರೀತಂ ಮತ್ತು ರಾಹುಲ್ ಇಬ್ಬರೂ ಹತ್ತಿರದ ಸ್ನೇಹಿತರು. ಸುಮಾರು 10 ದಿನಗಳ ಹಿಂದೆ ಪ್ರೀತಂನ ತಾಯಿಯ 3 ಗ್ರಾಂ ಚಿನ್ನ ಕಾಣೆಯಾಗಿತ್ತು. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದವು. ಪ್ರೀತಂ ರಾಹುಲ್‌ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೆ, ರಾಹುಲ್ ಕೂಡ ಚಿನ್ನ ಕದ್ದಿದ್ದು ಪ್ರೀತಂ ಎಂದೇ ಹೇಳಿದ್ದ. ಘಟನೆಯ ದಿನ ರಾಹುಲ್ ಪ್ರೀತಂನ ಬ್ಯಾಗಿನಲ್ಲಿ ಚಿನ್ನ ಕಂಡು, “ನಿನ್ನ ಮಗನೇ ಕಳ್ಳ” ಎಂದು ಪ್ರೀತಂನ ತಾಯಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ಮಾತಿನಿಂದ ಆಕ್ರೋಶಗೊಂಡ ಪ್ರೀತಂ ರೋಷದ ಅಲೆಯಲ್ಲಿ…

ಮುಂದೆ ಓದಿ..
ಸುದ್ದಿ 

ಮಂಡ್ಯ: ಶಾಲಾ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದ ಮಹಿಳಾ ಪೊಲೀಸ್ ಅಧಿಕಾರಿ

Taluknewsmedia.com

Taluknewsmedia.comಮಂಡ್ಯ: ಶಾಲಾ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದ ಮಹಿಳಾ ಪೊಲೀಸ್ ಅಧಿಕಾರಿ ಮಂಡ್ಯ — ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಮಂಡ್ಯ ಮಹಿಳಾ ಪೊಲೀಸ್ ಠಾಣಾಧಿಕಾರಿಗಳು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸೈಬರ್ ಅಪರಾಧಗಳ ಅಪಾಯಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅತಿಯಾದ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಅವರು ಮಾತನಾಡಿ, “ಮಕ್ಕಳ ಭವಿಷ್ಯವನ್ನು ಕಾನೂನು ರಕ್ಷಿಸುತ್ತದೆ, ಆದರೆ ನಾವು ಕಾನೂನಿನ ಅರಿವು ಹೊಂದಿದಾಗ ಮಾತ್ರ ಅದರ ಫಲ ಸಿಗುತ್ತದೆ,” ಎಂದು ಹೇಳಿದರು. ಅವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಮಾಧ್ಯಮದ ಸರಿಯಾದ ಬಳಕೆ, ಅಜಾಗರೂಕತೆಯಿಂದಾಗುವ ಅಪಾಯಗಳು ಮತ್ತು ಆನ್‌ಲೈನ್ ಮೋಸಗಳಿಂದ ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.…

ಮುಂದೆ ಓದಿ..
ಸುದ್ದಿ 

ಬಾಗಲಕೋಟೆ: ರಜೆಗೆ ಬಂದಿದ್ದ ಯೋಧನ ದುರ್ಘಟನೆ ಸಾವು

Taluknewsmedia.com

Taluknewsmedia.comಬಾಗಲಕೋಟೆ: ರಜೆಗೆ ಬಂದಿದ್ದ ಯೋಧನ ದುರ್ಘಟನೆ ಸಾವು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನನ್ನು ಹನುಮಂತ ಹಟ್ಟಿ (26) ಎಂದು ಗುರುತಿಸಲಾಗಿದೆ. ಅವರು ಬಾದಾಮಿ ತಾಲೂಕಿನ ಸೋಮನಕೊಪ್ಪ ಗ್ರಾಮದ ನಿವಾಸಿ. ಮಾಹಿತಿಯ ಪ್ರಕಾರ, ಹನುಮಂತ ಹಟ್ಟಿ ಭಾರತೀಯ ಸೇನೆಯ RRMEG ರೆಜಿಮೆಂಟ್‌ನಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ರಜೆಗಾಗಿ ಸ್ವಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಕೆರೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಹಾಗೂ ಯೋಧನ ಕುಟುಂಬದಲ್ಲಿ ಆಘಾತ ಮೂಡಿಸಿದೆ.

ಮುಂದೆ ಓದಿ..