ಅಂಕಣ 

ಶೋಷಿತರ ಧ್ವನಿಯನ್ನು ನೆನೆಯುತ್ತಾ…….

Taluknewsmedia.com

Taluknewsmedia.comಇಸಂಗಳನ್ನು ಮೀರಿ ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದ ಸನ್ನಿವೇಶದಲ್ಲಿ…..ಕಮ್ಯುನಿಸ್ಟ್ ಜಗತ್ತಿನ ಗ್ಲಾಮರಸ್ ಹೀರೋ ಆರ್ನೆಸ್ಟ್ ಚೆಗುವಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳುತ್ತಾ,ಜೂನ್ 14………ಬಂಡವಾಳ ಶಾಹಿ ವ್ಯವಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಬಹುತೇಕ ಇಡೀ ಜಗತ್ತನ್ನು ಆಕ್ರಮಿಸಿರುವಾಗ, ಜಾಗತೀಕರಣದ ಮುಕ್ತ ಮಾರುಕಟ್ಟೆಯ ಹೊಸ ಪೀಳಿಗೆ ಮುಖ್ಯವಾಹಿನಿಯಲ್ಲಿ ಮಹತ್ವ ಪಡೆದಿರುವಾಗ ಕಾರ್ಲ್ ಮಾರ್ಕ್ಸ್, ಮಾವೋ, ಸ್ಟಾಲಿನ್, ಕ್ಯಾಸ್ಟ್ರೋ ಮುಂತಾದವರು ಈ ಕೊಳ್ಳುಬಾಕ ಸಂಸ್ಕೃತಿಯ ಜನರ ನಡುವೆ ವಿಲನ್ ರೀತಿಯಲ್ಲಿ ಬಿಂಬಿತವಾಗುತ್ತಿರುವಾಗ, ಬಹುತೇಕ ಯುವ ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮವಾಗಿ ಸೂಕ್ಷ್ಮತೆ ಕಳೆದುಕೊಂಡಿರುವಾಗ, ಈಗಲೂ ಈ ವ್ಯವಸ್ಥೆಯ ಬಂಡಾಯಗಾರರಿಗೆ ” ಚೆ ” ಅತ್ಯಂತ ಆಕರ್ಷಕ ಮತ್ತು ಸ್ಪೂರ್ತಿದಾಯಕವಾಗಿದ್ದಾರೆ.ಚೆಗುವಾರ ಅವರ ಹೋರಾಟದ ಹಾದಿಯನ್ನು ಮೆಚ್ಚುತ್ತಲೇ ಅವರ ಅಭಿಮಾನಿಗಳಾಗಿ ಈಗಲೂ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಪಿಕ್ಚರ್ ಚೆಗುವಾರ ಆಗಿರುವುದನ್ನು ಕಾಣಬಹುದು.ಆಧುನಿಕ ಸಂಕೀರ್ಣ ಜೀವನಶೈಲಿಯ ಮೋಹಕ್ಕೆ ಒಳಗಾಗಿ ವಸ್ತು ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವ್ಯಾಪಾರವಾಗಿಸಿರುವಾಗ ಪ್ರತಿಯೊಬ್ಬರು…

ಮುಂದೆ ಓದಿ..
ಅಂಕಣ 

ಅಪ್ಪನ ದಿನ……..ತಂದೆ ಎಂಬ ಪಾತ್ರವ ಕುರಿತು……ಅಪ್ಪಾ…………ಸ್ವಲ್ಪ ಇಲ್ಲಿ ನೋಡಪ್ಪಾ…….

Taluknewsmedia.com

Taluknewsmedia.comಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಸ್ವಾವಲಂಬನೆ ಸಾಧ್ಯವಾದ ನಂತರ ಸ್ವಲ್ಪ ಬದಲಾವಣೆ ಕಾಣುತ್ತಿದೆ. )ಈ ದೇಶದ ಇಂದಿನ ಎಲ್ಲಾ ಪರಿಸ್ಥಿತಿಗಳ ಬಹುಮುಖ್ಯ ಪಾತ್ರದಾರಿ ಅಪ್ಪ, ಅಮ್ಮ ಪೋಷಕ ಪಾತ್ರದಾರಿ ಮಾತ್ರ.ಇವತ್ತಿನ ಸಂದರ್ಭದಲ್ಲಿ ನಿಮಗೆ ನಮ್ಮ ಒಟ್ಟು ವ್ಯವಸ್ಥೆಯ ಬಗ್ಗೆ ಹೆಮ್ಮೆಯಿದ್ದರೆ ಅದಕ್ಕೆ ಅಪ್ಪ ಕಾರಣ ಅಥವಾ ಇದರ ಬಗ್ಗೆ ಅತೃಪ್ತಿ, ಅಸಹನೆ ಇದ್ದರೆ ಅದಕ್ಕೂ ಅಪ್ಪನೇ ಕಾರಣ.ಅಪ್ಪ, ಈ ಸಂಬಂಧವನ್ನು ಅರ್ಥೈಸುವುದು ಹೇಗೆ.ಸ್ವಂತ ಮಕ್ಕಳು ಅಪ್ಪನನ್ನು ಆಕಾಶಕ್ಕೆ ಏರಿಸುತ್ತವೆ, ನನ್ನ ಅಪ್ಪನಂತ ಅಪ್ಪ ಯಾರೂ ಇಲ್ಲ, ಆತನೇ ಪ್ರತ್ಯಕ್ಷ ದೇವರು, ನನ್ನ ಸ್ಪೂರ್ತಿ, ನನ್ನ ಮಾರ್ಗದರ್ಶಕ, ನನ್ನ ಬದುಕು ಕಲಿಸಿದವ ಮುಂತಾಗಿ ವರ್ಣಿಸುತ್ತಾರೆ. ( ಕೆಲವು…

ಮುಂದೆ ಓದಿ..
ಅಂಕಣ 

ಮರಣವೇ ಮಹಾ ನವಮಿ…….ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ..

Taluknewsmedia.com

Taluknewsmedia.comಮರಣವೇ ಮಹಾ ನವಮಿ…….ಮೊನ್ನೆ ಅಹಮದಾಬಾದಿನ ವಿಮಾನ ನಿಲ್ದಾಣದ ಬಳಿ ನಡೆದ ಬೋಯಿಂಗ್ ಡ್ರೀಮ್ ಲೈನರ್ 787 ವಿಮಾನದ 265 ಕ್ಕೂ ಹೆಚ್ಚು ಜನರ ಸಾವಿನ ದುರ್ಘಟನೆ ನಮ್ಮ ಬದುಕಿಗೆ ಹೇಗೆಲ್ಲಾ ಪಾಠವಾಗಬಹುದು…….. ಏಕೆಂದರೆ ಆಧುನಿಕ ಕಾಲದಲ್ಲಿ ಅಪಘಾತಗಳೆಂಬುದು ಬಹುತೇಕ ಸಾಮಾನ್ಯ ಸಹಜ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಹೇಗೆ ನಾವು ಸುರಕ್ಷಿತೆಗಾಗಿ, ಅಧೀಕೃತವಾಗಿ ಜೀವವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಟ್ಟುಕೊಳ್ಳುತ್ತೇವೆಯೋ ಹಾಗೆಯೇ ಅನಧೀಕೃತವಾಗಿ ನಮ್ಮ ಬೆನ್ನ ಹಿಂದೆಯೇ ನೆರಳಿನಂತೆ ಸಾವು ಎಂಬ ಅಂತಿಮ ಸತ್ಯವೂ ಹಿಂಬಾಲಿಸುತ್ತಿರುತ್ತದೆ. ಬದುಕಿನ ಪ್ರಯಾಣದಲ್ಲಿ ಅದೂ ಸಹ ಜೊತೆಗಾರ…….ಅದರಲ್ಲೂ ನಾವು ವಿದೇಶಕ್ಕೆ ಹೋಗಬೇಕಾದರೆ ಸಧ್ಯದಲ್ಲಿ ಇರುವ ಅತ್ಯಂತ ಸುಲಭ, ಸುರಕ್ಷಿತ ಪ್ರಯಾಣದ ಮಾರ್ಗವೆಂದರೆ ವಾಯುಯಾನ ಮಾತ್ರ. ಸಮುದ್ರ ಮತ್ತು ರಸ್ತೆ ತೀರಾ ಅವಾಸ್ತವಿಕ. ನೀವು ಅನಿವಾರ್ಯವಾಗಿ ವಿಮಾನದಲ್ಲಿ ಅದರಲ್ಲಿ ಸಂಚರಿಸಲೇಬೇಕು ಅಂತಹ ಸಂದರ್ಭದಲ್ಲಿ ಅಪರೂಪಕ್ಕೊಮ್ಮೆ ಈ ರೀತಿಯ ಅಪಘಾತವು ಕೂಡ ಆಕಸ್ಮಿಕ ಮತ್ತು ಅನಿರೀಕ್ಷಿತವೇ…

ಮುಂದೆ ಓದಿ..
ಅಂಕಣ 

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಜೂನ್ 12..

Taluknewsmedia.com

Taluknewsmedia.comಹೊಟ್ಟೆ ಪಾಡಿನ ವೇಶ್ಯೆಯರ ನಂತರ ನನ್ನನ್ನು ಅತಿಹೆಚ್ಚು ಕಾಡುವುದು ಬಾಲ ಕಾರ್ಮಿಕರು. ಪುಟ್ಟ ಮಕ್ಕಳು ಆ ಎಳೆಯ ವಯಸ್ಸಿನಲ್ಲಿ ಅತ್ಯಂತ ಕಠಿಣ ಕೆಲಸಗಳನ್ನು ಮಾಡುವುದು ಮತ್ತು ಅದೇ ಸಮಯದಲ್ಲಿ ಕೆಲವು ಶ್ರೀಮಂತರ ಮಕ್ಕಳು ಮಾಡಬಾರದ ಮೋಜು ಮಸ್ತಿ ಮಾಡುವುದನ್ನು ನೋಡಲು ಹಿಂಸೆಯಾಗುತ್ತದೆ…..ನಾವೇ ಹುಟ್ಟಿಸಿದ ನಮ್ಮದೇ ಅತ್ಯಂತ ಮುದ್ದಾದ ಮಕ್ಕಳು ಹೊಟ್ಟೆ ಪಾಡಿಗಾಗಿ ಇನ್ನೊಬ್ಬರ ಬಳಿ ದೈನೇಸಿಯಾಗಿ ದುಡಿಯುವ ದೃಶ್ಯಗಳನ್ನು ಒಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ, ದು:ಖದ ಕಟ್ಟೆ ಒಡೆಯುತ್ತದೆ…….ಅಂತಹ ಒಂದು ನೈಜ ಘಟನೆ…..ಅದು ಮಧ್ಯಮ ವರ್ಗದವರೇ ಹೆಚ್ಚಾಗಿ ಹೋಗುವ ಆಂಧ್ರ ಶೈಲಿಯ ಊಟದ ಹೋಟೆಲ್‌. ಅಂದು ಶೂಟಿಂಗ್ ಕೆಲಸ ಮುಗಿಸಿ ಜೊತೆಗಾರರೊಂದಿಗೆ ರಾತ್ರಿ ೧೧ ಗಂಟೆಗೆ ಹೋಟೆಲ್ ಒಳಗೆ ಪ್ರವೇಶಿಸಿದೆ. ಮ್ಯಾನೇಜರ್ ನನಗೆ ಬಹಳ ಪರಿಚಯದವರು. ಹೋಟೆಲ್ ಮುಚ್ಚುವ ಸಮಯ ೧೦/೪೫ . ಆದರೂ ನಾನು ಒಳಗೆ ಹೋದೆ. ಕೇವಲ ಒಂದು ಕುಟುಂಬದವರು ಮಾತ್ರವೇ ಊಟ ಮುಗಿಸಿ ಬಿಲ್…

ಮುಂದೆ ಓದಿ..
ಅಂಕಣ 

” ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು ” ಜಾರ್ಜ್ ವಾಷಿಂಗ್ಟನ್…

Taluknewsmedia.com

Taluknewsmedia.comಅರ್ಥವಾಯಿತೆ ? ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರಳ ಅರ್ಥ ನೀಡುವ ಪ್ರಯತ್ನ. ಇದು ಎಲ್ಲಾ ವಯಸ್ಸಿನ, ಎಲ್ಲಾ ಪ್ರದೇಶದ, ಎಲ್ಲಾ ವರ್ಗಗಳಿಗೂ ಅನ್ವಯಿಸುವ ಮಾತು. ಆದರೂ ಹೆಚ್ಚಾಗಿ ಯುವ ವಯಸ್ಸಿನವರಿಗೆ ತುಂಬಾ ಎಚ್ಚರಿಕೆಯ ಅರ್ಥ ಕೊಡುತ್ತದೆ.ಮೊದಲಿಗೆ ಕೆಟ್ಟವರು ಎಂದರೆ ಯಾರು ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಜೂಜು, ಕುಡಿತ, ಅನೈತಿಕವಾಗಿ ಹೆಣ್ಣಿನ ಸಹವಾಸ, ಡ್ರಗ್ಸ್, ಕಳ್ಳತನ ಮುಂತಾದ ದುರಭ್ಯಾಸಗಳನ್ನು ಅನಿಯಂತ್ರಿತವಾಗಿ ಹೊಂದಿರುವವರನ್ನು ಕೆಟ್ಟವರು ಎನ್ನಲಾಗುತ್ತದೆ. ಜೊತೆಗೆ ಆಧುನಿಕ ಸಮಾಜದಲ್ಲಿ ರೌಡಿಸಂ, ಕಾನೂನು ಬಾಹಿರ ಚಟುವಟಿಕೆಗಳು, ಅಕ್ರಮ ವ್ಯವಹಾರಗಳು, ಸಮಾಜದ ಸ್ಥಾಪಿತ ಹಿತಾಸಕ್ತಿಗೆ ವಿರುದ್ಧವಾಗಿ ಹಿಂಸೆಯಲ್ಲಿ ತೊಡಗುವುದು ಮುಂತಾದ ಕ್ರಿಮಿನಲ್ ಚಟುವಟಿಕೆಗಳನ್ನು ಮಾಡುವವರು ಸಹ ಕೆಟ್ಟ ಜನರು ಎನಿಸಿಕೊಳ್ಳುತ್ತಾರೆ. ( ಇದನ್ನು ಹೊರತುಪಡಿಸಿ ಆಂತರ್ಯದಲ್ಲಿ ಕೋಪ, ಅಸೂಯೆ, ದುಡುಕುತನ ಮುಂತಾದ ಕೆಲವು ಕೆಟ್ಟ ಚಾಳಿಗಳು…

ಮುಂದೆ ಓದಿ..
ಅಂಕಣ 

ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ……….

Taluknewsmedia.com

Taluknewsmedia.comಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು……ಮನುಷ್ಯ ಸಂಬಂಧಗಳು, ನಂಬಿಕೆಗಳು, ಕೌಟುಂಬಿಕ ವ್ಯವಸ್ಥೆಗಳು, ಪ್ರೀತಿ ಪ್ರೇಮ ಪ್ರಣಯದ ಪಾವಿತ್ರ್ಯತೆ, ಕಾನೂನು ಸುವ್ಯವಸ್ಥೆ ಒಟ್ಟಾರೆ ಸಾಮಾಜಿಕ ವ್ಯವಸ್ಥೆಯೇ ಕುಸಿದು ಬೀಳುವ ಹಂತಕ್ಕೆ ತಲುಪಬಹುದು ಎಂಬಷ್ಟು ವೇಗವಾಗಿ ಮತ್ತು ತೀವ್ರವಾಗಿ ವ್ಯಾಪಿಸುತ್ತಿದೆ……..ಬಹಳ ಹಿಂದೆ ಕಡಿಮೆ ಜನಸಂಖ್ಯೆ, ಸಂಪರ್ಕ ಮಾಧ್ಯಮಗಳ ಕೊರತೆ, ಕೌಟುಂಬಿಕ ಮೌಲ್ಯಗಳ ಗಾಢತೆ, ಹೆಣ್ಣು ಗಂಡು ಸಂಬಂಧಗಳ ಗೌಪ್ಯತೆ, ಆರ್ಥಿಕ ಅಸಮಾನತೆ, ಪುರುಷ ಕೇಂದ್ರಿತ ಸಮಾಜ ಮುಂತಾದ ಕಾರಣಗಳಿಂದ ಅಕ್ರಮ ಸಂಬಂಧಗಳು ಕಡಿಮೆ ಇದ್ದವು, ಹೆಚ್ಚು ಹೊರಗೆ ಬರುತ್ತಿರಲಿಲ್ಲ ಮತ್ತು ಅದಕ್ಕೆ ಬಹುತೇಕ ಪುರುಷರೇ ಹೆಚ್ಚು ಹೊಣೆಗಾರರಾಗಿದ್ದರು……..ಆದರೆ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ, ಉದ್ಯೋಗ, ನಗರೀಕರಣ, ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿ, ಸಣ್ಣ ಕುಟುಂಬಗಳ ಅನಿವಾರ್ಯತೆ, ವಲಸೆ, ದೂರ…

ಮುಂದೆ ಓದಿ..
ಅಂಕಣ 

ಅಲ್ಲಮ – ಅಕ್ಕಮಹಾದೇವಿಯವರ ಜೀವನೋತ್ಸಾಹ ತುಂಬುವ ವಚನದ ಸಾಲುಗಳು……

Taluknewsmedia.com

Taluknewsmedia.comಇದು ಪ್ರೀತಿಯ ಮಾಯೆಯೊಳಗೆ ಸಿಲುಕಿ, ಕಾಮದ ಬಲೆಯೊಳಗೆ ಬಂಧಿಯಾಗಿ, ಅಜ್ಞಾನದ ಮೋಹ ಪಾಶದಲ್ಲಿ ಒದ್ದಾಡಿ, ಹಣದ ದಾಹದಲ್ಲಿ ಮೈಮರೆತು ಅದರಿಂದ ಹೊರಬಂದ ವ್ಯಕ್ತಿಯೊಬ್ಬನ ಸ್ವಗತ…..)ಶಬ್ದವೆಂಬನೆ ಶೋತ್ರದೆಂಜಲು, ಸ್ಪರ್ಶವೆಂಬೆನೆ ತೊಕ್ಕಿ ನೆಂಜಲು, ರೂಪವೆಂಬನೆ ನೇತ್ರದೆಂಜಲು, ಪರಿಮಳವೆಂಬನೆ ಘ್ರಾಣದೆಂಜಲು, ರುಚಿಯೆಂಬೆನೆ ಜಿಹ್ವೆ ಎಂಜಲು, ನಾನೆಂಬೆನೆ ಅರಿವಿನೆಂಜಲು, ಎಂಜಲೆಂಬ ಬಿನ್ನವಳಿದ ಬೆಳಗಿನೊಳಗಣ ಬೆಳಗು, ಗುಹೇಶ್ವರ ಲಿಂಗವು……. ಅಲ್ಲಮಪ್ರಭು,ಸತ್ಯವೂ ಇಲ್ಲ ಅಸತ್ಯವೂ ಇಲ್ಲ, ಸಹಜವೂ ಇಲ್ಲ ಅಸಹಜವೂ ಇಲ್ಲ. ನಾನು ಇಲ್ಲ ನೀನು ಇಲ್ಲ, ಇಲ್ಲ ಇಲ್ಲ ಎಂಬುದು ತಾನಿಲ್ಲ, ಗುಹೇಶ್ವರ ಲಿಂಗತಾ ಬಯಲು….ಅಲ್ಲಮಪ್ರಭು,ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳ ಭಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು… – ಅಕ್ಕ ಮಹಾದೇವಿ,ಆಳ ಪ್ರೀತಿಯಲ್ಲಿ ಸಿಲುಕಿ ಅದರಿಂದ ವಂಚನೆಗೊಳಗಾಗಿ ವಿರಹಿಯಾದ ವ್ಯಕ್ತಿಗಳು ಹುಚ್ಚರಾಗುತ್ತಾರೆ ಅಥವಾ ವ್ಯಸನಿಗಳಾಗುತ್ತಾರೆ ಅಥವಾ ತತ್ವಜ್ಞಾನಿಗಳಾಗುತ್ತಾರೆ ಎಂಬ ಮಾತಿದೆ…..ಇಲ್ಲಿನ ವ್ಯಕ್ತಿಯು ತತ್ವಜ್ಞಾನಿಯಾಗುವ ಹಾದಿಯಲ್ಲಿದ್ದಾನೆ ಎನಿಸುತ್ತದೆ……ಪ್ರೀತಿಯ ಆಳದಲ್ಲಿ ಅರಳುವ…

ಮುಂದೆ ಓದಿ..
ಅಂಕಣ 

ಮನೆ ಗೆದ್ದು ಮಾರು ಗೆಲ್ಲುಅಥವಾಮನ ಗೆದ್ದು ಮಾರು ಗೆಲ್ಲು…

Taluknewsmedia.com

Taluknewsmedia.comಹೀಗೆ ಒಂದು ಜನಪದೀಯ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ…..ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಮನೆಯಲ್ಲಿಯೇ ಅತೃಪ್ತಿ ಇದ್ದರೆ ಅಥವಾ ಅದನ್ನು ಉತ್ತಮವಾಗಿ ನಿರ್ವಹಿಸದೆ ಸಮಾಜವನ್ನು ತಿದ್ದುವುದು ಸಾಧ್ಯವಿಲ್ಲ ಅದು ಒಂದು ರೀತಿಯ ವ್ಯಂಗ್ಯ ಎಂದು ಹೇಳಲಾಗುತ್ತದೆ. ಇದು ಸರಿಯೇ – ವಾಸ್ತವವೇ….ಆಧುನಿಕ ಸಂಕೀರ್ಣ ಬದುಕಿನ ಕುಟುಂಬಗಳನ್ನು ಗಮನಿಸಿದಾಗ ಮನೆ ಎಂಬ ಈ ಮಾತುಗಳು ತುಂಬಾ ಪರಿಣಾಮಕಾರಿ ಎಂದು ಅನಿಸುವುದಿಲ್ಲ. ಮನೆ ಗೆಲ್ಲುವುದು ಅದರಲ್ಲೂ ಕೌಟುಂಬಿಕ ವ್ಯವಸ್ಥೆಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಬಹುಶಃ ನಂಬುಗೆಯ ಏಳು ಜನ್ಮವಾದರೂ ಸಾಕಾಗುವುದಿಲ್ಲ. ಮಧ್ಯಮವರ್ಗದ ಬದುಕು ತುಂಬಾ ಕಷ್ಟಕರ. ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಅತ್ತೆ ಮಾವ ಸೊಸೆ ಅಳಿಯ ಮೈದುನ ಅತ್ತಿಗೆ ಅಜ್ಜ ಅಜ್ಜಿ ಈ ರೀತಿಯ ಸಂಬಂಧಗಳನ್ನು…

ಮುಂದೆ ಓದಿ..
ಅಂಕಣ 

ದೇವರು ಮತ್ತು ಸರ್ಕಾರ ಯಾರು ಹೊಣೆ…….

Taluknewsmedia.com

Taluknewsmedia.comತುಂಬಾ ಆಶ್ಚರ್ಯವಾಗುವ ವಿಷಯವೆಂದರೆ, ಸಾಮಾನ್ಯವಾಗಿ ಬಹುತೇಕ ಜನ ಪ್ರತಿಕ್ಷಣ ತಮ್ಮ ಎಲ್ಲಾ ಕೆಲಸ ಕಾರ್ಯಗಳು, ಪರಿಣಾಮಗಳು, ಫಲಿತಾಂಶಗಳು, ಪ್ರತಿ ಚಟುವಟಿಕೆಗಳಿಗೂ ದೇವರೇ ಕಾರಣ ಎಂದು ನಂಬುತ್ತಾರೆ, ಪೂಜಿಸುತ್ತಾರೆ. ತಮ್ಮೆಲ್ಲಾ ಯಶಸ್ಸು, ಕಷ್ಟ ಸುಖಗಳು, ಸೋಲು ಗೆಲುವುಗಳು ಎಲ್ಲವನ್ನು ಆ ದೇವರೇ ನಿರ್ಧರಿಸುವುದು ಎಂದೇ ಭಾವಿಸುತ್ತಾರೆ……ದೇವರಿಗಾಗಿ ಬೆಳಗ್ಗೆ, ಸಂಜೆ ಪೂಜೆ ಮಾಡುವುದಲ್ಲದೆ ದೇವಸ್ಥಾನಗಳಿಗೆ ಹೋಗುತ್ತಾರೆ. ತೀರ್ಥಕ್ಷೇತ್ರಗಳಿಗೂ ಭೇಟಿ ಕೊಡುತ್ತಾರೆ. ಪೂಜೆ, ಹೋಮ ಹವನಗಳನ್ನು ಮಾಡಿಸುತ್ತಾರೆ. ಅಂದರೆ ಅವರ ಪ್ರತಿ ಚಟುವಟಿಕೆಯಲ್ಲೂ ದೇವರಂತು ಇದ್ದೇ ಇರುತ್ತಾರೆ…. ಆದರೆ ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭ್ರಮದ ಆಚರಣೆ ಸಂದರ್ಭದಲ್ಲಿ ಕಾಲ್ತುಳಿತದಿಂದ 11 ಜನ ಸತ್ತು 45ಕ್ಕೂ ಹೆಚ್ಚು ಜನ ಗಾಯಾಳುವಾದ ಘಟನೆಗೆ ಪ್ರತಿಯೊಬ್ಬರೂ ಸರ್ಕಾರವನ್ನು, ಪೊಲೀಸರನ್ನು, ಕೆ ಎಸ್ ಸಿ ಎ ಅನ್ನೋ, ಐಪಿಎಲ್ ಅನ್ನೋ ದೂರುತ್ತಾರೆ. ಆದರೆ ಯಾರೊಬ್ಬರೂ ದೇವರನ್ನು ಮಾತ್ರ ಪ್ರಶ್ನಿಸುತ್ತಿಲ್ಲ. ಇದೇ ಆಶ್ಚರ್ಯದ ವಿಷಯ….. ನಿಜಕ್ಕೂ ಸರ್ಕಾರ,…

ಮುಂದೆ ಓದಿ..
ಅಂಕಣ 

ನಮ್ಮ ತಪ್ಪುಗಳ ಆತ್ಮಾವಲೋಕನವೂ ಆಗಲಿ…….

Taluknewsmedia.com

Taluknewsmedia.comಕಾಲ್ತುಳಿತದ ಸಾವುಗಳಿಗೆ ಸರ್ಕಾರದ ತಪ್ಪು, ಕೆ ಎಸ್ ಸಿ ಎ ತಪ್ಪು, ಆರ್‌ಸಿಬಿ ಫ್ರಾಂಚೈಸಿ ತಪ್ಪು, ಪೊಲೀಸರ ತಪ್ಪು, ಮಾಧ್ಯಮಗಳ ತಪ್ಪು, ಆಟಗಾರರ ತಪ್ಪು, ಇವುಗಳ ನಡುವೆ ಇನ್ನೊಂದು ದೊಡ್ಡ ತಪ್ಪನ್ನು ಮರೆಯಬಾರದು. ಈ ಅವಘಡದ ಮತ್ತೊಂದು ಮುಖ……. 20/30 ವರ್ಷದ ಒಳಗಿನ ಯುವಕ ಯುವತಿಯರಿಗೆ ವಿದ್ಯುತ್ ಕಂಬದ ಮೇಲೆ ನಿಂತು ಖ್ಯಾತ ಕ್ರೀಡಾಪಟುವನ್ನೋ, ಸಿನಿಮಾ ನಟನನ್ನೋ, ರಾಜಕೀಯ ವ್ಯಕ್ತಿಯನ್ನೋ ನೋಡುವ ದುಸ್ಸಾಹಸ ಮಾಡಬಾರದು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ಹೇಗೆ…..ಅತಿ ಬುದ್ದಿವಂತ ಮುಂದಿನ ಭವಿಷ್ಯದ ಪ್ರಜೆಗಳು ಬುದ್ಧ, ವಿವೇಕಾನಂದ, ಬಸವಣ್ಣ ಗಾಂಧಿ, ಅಂಬೇಡ್ಕರ್, ರಾಣಿ ಚೆನ್ನಮ್ಮ, ರಾಯಣ್ಣ, ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರ ಪ್ರತಿಮೆಗಳ ತಲೆಯ ಮೇಲೆ ನಿಂತು ಸಿಗರೇಟು ಸೇದುತ್ತಾ ಕೋತಿಗಳಂತೆ ದಾರಿಯಲ್ಲಿ ಸಾಗುವ ಮೆರವಣಿಗೆ ವೀಕ್ಷಿಸಿದರೆ ಹೇಗೆ……ಇಂಜಿನಿಯರಿಂಗ್, ಡಾಕ್ಟರ್, ಪದವಿ, ಸ್ನಾತಕೋತ್ತರ, ಡಿಪ್ಲೋಮೋ ಮುಂತಾದ ಕಾಲೇಜುಗಳಲ್ಲಿ ಓದುತ್ತಿರುವ ಹುಡುಗರಿಗೆ ಸಮುದ್ರ ತೀರದಲ್ಲಿ…

ಮುಂದೆ ಓದಿ..