ಸುದ್ದಿ 

ಅತ್ತಿಬೆಲೆ ಸರ್ಕಲ್‌ನಲ್ಲಿ 13 ವರ್ಷದ ಬಾಲಕ ನಿಥಿನ್ ಕಾಣೆಯಾದ ಘಟನೆ – ಪೋಷಕರ ಆತಂಕ

Taluknewsmedia.com

Taluknewsmedia.comನಗರದ ಅತ್ತಿಬೆಲೆ ಸರ್ಕಲ್ ಬಳಿ 13 ವರ್ಷದ ಬಾಲಕ ನಿಥಿನ್ ಎಂಬವರು ಶಂಕಾಸ್ಪದ ರೀತಿಯಲ್ಲಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಿಥಿನ್ ಜಯಭಾರತಿ ಸರ್ಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಪ್ರತಿದಿನದಂತೆ ದಿ. 22/06/2025 ರಂದು ಶಾಲೆಯಿಂದ ಮನೆಗೆ ಬರುವ ಸಂದರ್ಭ ಸಂಜೆ 5:30ರ ವೇಳೆಗೆ ತನ್ನ ತಾಯಿಯೊಂದಿಗೆ ನಡೆದುಕೊಂಡು ಬರುತ್ತಿದ್ದಾಗ, ಅತ್ತಿಬೆಲೆ ಸರ್ಕಲ್ ಬಳಿ ಏಕಾಏಕಿ ಕಾಣೆಯಾಗಿದ್ದಾನೆ. ಪೋಷಕರು ತಮ್ಮ ಮಗನನ್ನು ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೋಷಕರ ಪ್ರಕಾರ, ನಿಥಿನ್ ನೋಡಲು ಎಣ್ಣೆ ಗೆಂಪು ಮೈಬಣ್ಣ ಹೊಂದಿದ್ದು, ಸುಮಾರು 4 ಅಡಿ ಎತ್ತರವಿದೆ. ಆತನಿಗೆ ಕಪ್ಪು ಕೂದಲು ಇದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಕಂಡುಹಿಡಿಯುವ ಪ್ರಮುಖ ಲಕ್ಷಣವೆಂದರೆ, ನಿಥಿನ್‌ನ ಮುಂಭಾಗದ ಮೇಲಿನ ಹಲ್ಲು ಅರ್ಧ ಮುರಿದಿರುತ್ತದೆ. ಕಾಣೆಯಾದಾಗ ನಿಥಿನ್ ನೀಲಿ ಬಣ್ಣದ ಗೆರೆ-ಗೆರೆ ಶರ್ಟ್ ಹಾಗೂ ಕ್ರೀಂ ಬಣ್ಣದ ಪ್ಯಾಂಟ್ ಧರಿಸಿಕೊಂಡಿದ್ದನು.…

ಮುಂದೆ ಓದಿ..
ಸುದ್ದಿ 

ಚಿನ್ನಪ್ಪ ಗಾರ್ಡನ್ ಬಳಿ ರಸ್ತೆ ದಾಟುತ್ತಿದ್ದ 7 ವರ್ಷದ ಬಾಲಕನಿಗೆ ಸ್ಕೂಟರ್ ಡಿಕ್ಕಿ – ಪ್ರಕರಣ ದಾಖಲಾಗಿದೆ.

Taluknewsmedia.com

Taluknewsmedia.comಚಿನ್ನಪ್ಪ ಗಾರ್ಡನ್ ಬಳಿ ರಸ್ತೆ ದಾಟುತ್ತಿದ್ದ 7 ವರ್ಷದ ಬಾಲಕನಿಗೆ ಸ್ಕೂಟರ್ ಡಿಕ್ಕಿ – ಪ್ರಕರಣ ದಾಖಲಾಗಿದೆ. ನಗರದ ಚಿನ್ನಪ್ಪ ಗಾರ್ಡನ್ ಮುಖ್ಯ ರಸ್ತೆಯಲ್ಲಿ ನಡೆದ ದುರಂತದಲ್ಲಿ, 7 ವರ್ಷದ ಬಾಲಕ ಆರೀಜ್ ದೌಲತ್ ಅವರು ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಡಿಕ್ಕಿಗೆ ಒಳಗಾದ ಘಟನೆ ನಡೆದಿದೆ. ಘಟನೆ ಜೂನ್ 23ರಂದು ಸಂಜೆ ಸುಮಾರು 6:40ರ ಸಮಯದಲ್ಲಿ ಮಕಾ ಮಸೀದಿಯ ಹತ್ತಿರದ ರಸ್ತೆ ದಾಟುವಾಗ ಸಂಭವಿಸಿದೆ. ದೌಲತ್ ಭಾಷಾ ಅವರ ಪುತ್ರ ಆರೀಜ್ ದೌಲತ್ ರಸ್ತೆಯನ್ನು ದಾಟುತ್ತಿದ್ದ ವೇಳೆ, KA-03-KY-7568 ಸಂಖ್ಯೆಯ ಸ್ಕೂಟರ್ ವೇಗವಾಗಿ ಬರುತ್ತಿದ್ದು, ಎಚ್ಚರಿಕೆ ಇಲ್ಲದೆ ನೇರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಾಲಕ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಘಟನೆಯ ಬಳಿಕ ಸ್ಥಳೀಯರು ಕೂಡಲೇ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದು, ಪೋಷಕರು ತಕ್ಷಣವೇ ಸ್ಥಳೀಯ ಆರ್ ಟಿ ನಗರ ಟ್ರಾಫಿಕ…

ಮುಂದೆ ಓದಿ..
ಅಂಕಣ 

ದಿಢೀರ್ ಸಾವುಗಳ ಸುತ್ತಾ…..ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು..

Taluknewsmedia.com

Taluknewsmedia.comದಿಢೀರ್ ಸಾವುಗಳ ಸುತ್ತಾ….. ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು ವೈದ್ಯಕೀಯ ಸಂಶೋಧನಾ ಕ್ಷೇತ್ರ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವು ಆ ನಿಟ್ಟಿನಲ್ಲಿ ಪ್ರಯತ್ನ ಪಡಲಿ…… ಆದರೆ ಈ ಕ್ಷಣದಲ್ಲಿ ಆ ವಿಷಯಗಳ ಬಗ್ಗೆ ನಾವು ಹೊಂದಬಹುದಾದ ಕೆಲವು ಮಾನಸಿಕ ಮತ್ತು ದೈಹಿಕ ಪೂರ್ವ ತಯಾರಿಗಳ ಬಗ್ಗೆ ನನ್ನ ವೈಯಕ್ತಿಕ ಅನಿಸಿಕೆ. ಯಾರಿಗೂ ಮನುಷ್ಯನ ಆಯಸ್ಸಿನ ಬಗ್ಗೆ, ಮನುಷ್ಯನ ಬದುಕಿನ ಬಗ್ಗೆ ಸಂಪೂರ್ಣ ಖಚಿತತೆ ಇರುವುದಿಲ್ಲ. ನಾವು ವಾಸಿಸುವ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ, ನಮ್ಮ ಅನುವಂಶೀಯ ದೇಹ ಪ್ರಕೃತಿಯ ಅನುಸಾರವಾಗಿ, ನಮ್ಮ ಬುದ್ಧಿ ಶಕ್ತಿಯ ಬೆಳವಣಿಗೆಯ ರೀತಿಗೆ ತಕ್ಕಂತೆ, ನಮ್ಮ ಆಡಳಿತ ವ್ಯವಸ್ಥೆ ಮತ್ತು ಒಟ್ಟು ವ್ಯವಸ್ಥೆಗೆ ನಾವು ಪ್ರತಿಕ್ರಿಯಿಸುವ ರೀತಿ ಸಾಮಾನ್ಯವಾಗಿ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ನಗರದಲ್ಲಿ ಆಟೋ ದರ ದಂಧೆ: ಸಾರ್ವಜನಿಕರ ನಡಿಗೆಗೆ ಕಡಿವಾಣ ಹಾಕಬೇಕಾದ ಅಗತ್ಯ.

Taluknewsmedia.com

Taluknewsmedia.comಬೆಂಗಳೂರು ನಗರದ ರಸ್ತೆಗಳ ಮೇಲೆ ಓಡುತ್ತಿರುವ ಎಲೆಕ್ಟ್ರಾನಿಕ್ ಬುಕ್ಕಿಂಗ್ ಆಧಾರಿತ ಆಟೋಗಳಾದ APP ಆಟೋಗಳು ಇತ್ತೀಚೆಗೆ ಸರ್ಕಾರ ನಿಗದಿಪಡಿಸಿದ ದರಗಳನ್ನು ಮೀರಿ ಭಾರಿ ದರಗಳನ್ನು ಕೇಳುತ್ತಿರುವುದರ ಕುರಿತು ಸಾರ್ವಜನಿಕ ಅಸಮಾಧಾನ ಗಟ್ಟಿಯಾಗಿ ಹೊರಹೊಮ್ಮಿದೆ. ಈ ಹಗರಣದ ವಿರುದ್ಧ ರಾಜ್ಯ ಸಾರಿಗೆ ಪ್ರಾಧಿಕಾರ ತನಿಖೆ ಕೈಗೊಂಡಿದೆ. ಇತ್ತೀಚೆಗೆ ಪ್ರಯಾಣಿಕರಿಂದ ಬಂದಿರುವ ದೂರುಗಳ ಆಧಾರದಲ್ಲಿ ತಿಳಿಯಲಾಗಿದೆ ಎಂಬಂತೆ, ಕೆಲ APP ಆಟೋ ಚಾಲಕರು ಅಂದಾಜು ₹100.89 ರಿಂದ ₹184.19 ವರೆಗೆ ಸರಾಸರಿ ದರ ಹೆಚ್ಚುವರಿ ವಸೂಲಾತಿ ಮಾಡುತ್ತಿದ್ದಾರೆ. ಇದು ಸರಕಾರದ ನಿಗದಿತ ದರಗಳನ್ನು ಮೀರಿ ಸಾರ್ವಜನಿಕರಿಗೆ ಅನಾವಶ್ಯಕ ಆರ್ಥಿಕ ಭಾರವನ್ನು ಉಂಟುಮಾಡುತ್ತಿದೆ. ಈ ದಂಡನೆ ದರದ ದಂಧೆ ವಿರುದ್ಧವಾಗಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳು ಹೆಚ್ಚುತ್ತಿರುವ ಹಿನ್ನೆಲೆ, ಇಲಾಖೆಯು ವಾಹನಗಳನ್ನು ಕಡ್ಡಾಯವಾಗಿ ಮೀಟರ್ ಆಧಾರಿತ ದರದ ಮೇರೆಗೆ ಚಾಲನೆ ಮಾಡಲು ಸೂಚನೆ ನೀಡಿದೆ. ಅದರೊಂದಿಗೆ, ಅಪ್ಲಿಕೇಷನ್‌ ಮೂಲಕ ದರ ನಿಗದಿಪಡಿಸುವ ವ್ಯವಸ್ಥೆಯಲ್ಲಿಯೂ ಮೌಲ್ಯಮಾಪನ…

ಮುಂದೆ ಓದಿ..
ಸುದ್ದಿ 

ನಾಗಮಂಗಲ : ಗಂಗನಹಳ್ಳಿಯ ಹಿರಿಯರಾದ ಜೆ.ವಿ. ತಿಮ್ಮೇಗೌಡರು ( ಚಿಕ್ಕಣ್ಣ) ಇನ್ನಿಲ್ಲ – ಕುಟುಂಬದಿಂದ ಶ್ರದ್ಧಾಂಜಲಿ ಸಭೆಗೆ ಆಹ್ವಾನ

Taluknewsmedia.com

Taluknewsmedia.comಗಂಗನಹಳ್ಳಿಯ ಹಿರಿಯರಾದ ಜೆ.ವಿ. ತಿಮ್ಮೇಗೌಡರು ( ಚಿಕ್ಕಣ್ಣ) ಇನ್ನಿಲ್ಲ – ಕುಟುಂಬದಿಂದ ಶ್ರದ್ಧಾಂಜಲಿ ಸಭೆಗೆ ಆಹ್ವಾನ ಗಂಗನಹಳ್ಳಿಯ ಹಿರಿಯ ನಾಗರಿಕರು ಹಾಗೂ ಸಮುದಾಯದಲ್ಲಿ ಹೆಸರುವಾಸಿಯಾದ ಶ್ರೀ ಜೆ.ವಿ. ತಿಮ್ಮೇಗೌಡರು (ಚಿಕ್ಕಣ್ಣ) ಅವರು ದಿನಾಂಕ 21-06-2025 ರಂದು ನಿಧನರಾದರು. ಅವರು ತಮ್ಮ ಜೀವಿತಾವಧಿಯಲ್ಲಿ ಗ್ರಾಮ ಅಭಿವೃದ್ಧಿಗೆ ಶ್ರದ್ಧೆಯಿಂದ ಕೆಲಸಮಾಡಿದವರು. ಅವರ ನಿಧನದಿಂದ ಊರಿನಲ್ಲಿ ಶೋಕಚ್ಛಾಯೆ ನೆಲೆಸಿದೆ. ಶ್ರೀ ತಿಮ್ಮೇಗೌಡರು ಅವರು ಬಹುಮಾನ್ಯ ವ್ಯಕ್ತಿತ್ವದವರು. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ನಿರಂತರ ಸೇವೆಯಿಂದ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಟಿ.ಬಿ.ಚನ್ನಮ್ಮರವರು ಹಾಗೂ ಮಕ್ಕಳು ಸೇರಿದಂತೆ ಸಮೃದ್ಧ ಕುಟುಂಬವನ್ನು ಅಗಲಿದ್ದಾರೆ. ಶ್ರದ್ಧಾಂಜಲಿ ಹಾಗೂ ಉತ್ತರಕ್ರಿಯೆಯ ಕಾರ್ಯಕ್ರಮ ಮೃತರ ಆತ್ಮಕ್ಕೆ ಶಾಂತಿ ಲಭಿಸಬೇಕೆಂಬ ಉದ್ದೇಶದಿಂದ ಶ್ರದ್ಧಾಂಜಲಿ ಸಭೆ ಹಾಗೂ ಉತ್ತರಕ್ರಿಯೆಯ ಕಾರ್ಯಕ್ರಮವನ್ನು ಅವರ ಪುತ್ರ ಶ್ರೀ ಜೆ.ವಿ. ಶಾಂತಕುಮಾರ ಹಾಗೂ ಕುಟುಂಬದ ಸದಸ್ಯರು ಅವರಿಂದ ದಿನಾಂಕ 01-07-2025 ರಂದು ಮಂಗಳವಾರ…

ಮುಂದೆ ಓದಿ..
ಸುದ್ದಿ 

ಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ.

Taluknewsmedia.com

Taluknewsmedia.comಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ. ಬೆಂಗಳೂರು ನಗರದಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಂಭವಿಸಿದ ರಿಯಲ್ ಎಸ್ಟೇಟ್ ವಂಚನೆ ಪ್ರಕರಣ ಇದಾಗಿದ್ದು, ಬಾಲಕೃಷ್ಣ, ಮುನಿಕೃಷ್ಣ, ಮೇರಿ ಜಯಶ್ರೀ, ಮತ್ತು ರೆಬಿಕಾ ಪ್ಯಾಟ್ರಿಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಶ್ರೀ ಸ್ಯೆಡ್ ಇಬ್ರಾಹಿಂ ಪ್ರಕಾರ, ಬಾಲಕೃಷ್ಣ ಎಂಬಾತನು ಸ್ನೇಹಿತನೇನಿದು ಹೇಳಿ, 3066 ಚದರ ಅಡಿಯ ಕಮರ್ಷಿಯಲ್ ಜಾಗವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಸುತ್ತೇನೆಂದು ನಂಬಿಸಿ, ₹17 ಲಕ್ಷಕ್ಕೂ ಹೆಚ್ಚು ಹಣದ ವಂಚನೆ ನಡೆಸಿದ್ದಾನೆ. ಜಾಗವೊಂದರ ಹುದ್ದಿಗೆ ಮೇರಿ ಜಯಶ್ರೀ ಎಂಬುವರ ಹೆಸರಿನಲ್ಲಿ ಜಿಪಿಎ ಇತ್ತು ಎಂದು ತಿಳಿಸಿ, ಆ ಜಾಗದ ಖರೀದಿಗೆ ಹಲವು ಹಂತಗಳಲ್ಲಿ ಹಣ ಪಡೆದು, ಬಳಿಕ MOU ಒಪ್ಪಂದ ಪತ್ರವನ್ನೂ ನೀಡಲಾಗಿದೆ. ಆದರೆ ಇತ್ತೀಚೆಗೆ ಬಹಿರಂಗವಾಗಿರುವ ಅಂಶವೇನೆಂದರೆ, ಈ ಜಾಗವನ್ನೇ ಮೇರಿ ಜಯಶ್ರೀ…

ಮುಂದೆ ಓದಿ..
ಸುದ್ದಿ 

ಹೊಸ ಬಿಸಿನೆಸ್ ಹೆಸರಲ್ಲಿ 47 ಲಕ್ಷ ರೂ. ಹಣಕ್ಕಾಗಿ ಮೋಸ – ವ್ಯಕ್ತಿಯಿಂದ ಮೂರು ಮಂದಿ ವಿರುದ್ಧ ಪೊಲೀಸ್ ದೂರು

Taluknewsmedia.com

Taluknewsmedia.comಹೊಸ ಬಿಸಿನೆಸ್ ಹೆಸರಲ್ಲಿ 47 ಲಕ್ಷ ರೂ. ಹಣಕ್ಕಾಗಿ ಮೋಸ – ವ್ಯಕ್ತಿಯಿಂದ ಮೂರು ಮಂದಿ ವಿರುದ್ಧ ಪೊಲೀಸ್ ದೂರು ಬೆಂಗಳೂರು, ಜೂನ್ 27 – ಹೊಸ ವ್ಯವಹಾರ ಆರಂಭಿಸಲು ಹಣವಿತ್ತು ಎಂದು ನಂಬಿಸಿ 47 ಲಕ್ಷ ರೂಪಾಯಿಗಳ ನಗದು ಪಡೆದು, ಹಣ ಹಿಂದಿರುಗಿಸದೆ ಮೋಸ ಮಾಡಿದ ಆರೋಪದಡಿ ಬೆಂಗಳೂರಿನ ಚಿಕ್ಕಜಾಲದಲ್ಲಿ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ನಾಗೇಂದ್ರ ಭಜಂತ್ರಿ ಅವರು ಕುಟುಂಬ ಸಮೇತ ನಗರದಲ್ಲಿ ವಾಸವಿದ್ದು, ತಮ್ಮ ಸ್ನೇಹಿತರಾದ ರಾಮಬಾಬು ಹಾಗೂ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ್ದರು. ಉದ್ಯಮ ಸಂಬಂಧಿತವಾಗಿ ಆಗಾಗ್ಗೆ ಹಣದ ವ್ಯವಹಾರವಾಗುತ್ತಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 2024ರ ಜುಲೈ 24ರಂದು, ನಗರದ ಗೋಲ್ಡ್ ಪಿಂಚ್ ಹೋಟೆಲ್ ಹತ್ತಿರ ನಾಗೇಂದ್ರ ಭಜಂತ್ರಿ ಅವರನ್ನು ಭೇಟಿಯಾದ ಆರೋಪಿಗಳು ಹೊಸ ಬಿಸಿನೆಸ್ ಪ್ರಾರಂಭಿಸುತ್ತಿರುವುದಾಗಿ ಹೇಳಿ , 47 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ…

ಮುಂದೆ ಓದಿ..
ಸುದ್ದಿ 

ಮನೆ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಳ್ಳತನ – ₹1.20 ಲಕ್ಷ ಮೌಲ್ಯದ ವಿದ್ಯುತ್ ವೈರ್ ಕಳವು!

Taluknewsmedia.com

Taluknewsmedia.comಬಿಗ್ ಬ್ರೇಕಿಂಗ್: ಮನೆ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಳ್ಳತನ – ₹1.20 ಲಕ್ಷ ಮೌಲ್ಯದ ವಿದ್ಯುತ್ ವೈರ್ ಕಳವು! ಬೆಂಗಳೂರು, ಜೂನ್ 24: ನಗರದ ಶಿವರಾಮ ಕಾರಂತ್ ನಗರ ಪೋಸ್ಟ್ ವ್ಯಾಪ್ತಿಯ ಮೇಸ್ತ್ರಿ ಪಾಳ್ಯದಲ್ಲಿ ಕಳ್ಳತನದ ಘಟನೆ ವರದಿಯಾಗಿದೆ. ಸೇಂಟ್ ಹಾನ್ ಚರ್ಚ್ ರೋಡ್ ನಂ.182ರಲ್ಲಿ ಮನೆಯೊಂದರ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ಕಳ್ಳರು ಬೇಟೆಯಾಡಿದ್ದಾರೆ. ಮೂಲಗಳ ಪ್ರಕಾರ, ಮನೆ ನಿರ್ಮಾಣದ ವೇಳೆ ಗೌಂಡ್ ಫ್ಲೋರ್‌ನ ಹೊರಭಾಗದಲ್ಲಿ ಅಳವಡಿಸಿದ್ದ ವಿದ್ಯುತ್ ವೈರ್‌ಗಳನ್ನು ಕತ್ತರಿಸಿ ಕಳ್ಳರು ಕದಿದುಕೊಂಡು ಹೋಗಿದ್ದಾರೆ. ಜೂನ್ 23ರಂದು ರಾತ್ರಿ 11 ಗಂಟೆಯ ವೇಳೆಗೆ ಎಲ್ಲವೂ ಸರಿಯಾಗಿತ್ತು. ಆದರೆ 24 ದಿನ ಬೆಳಿಗ್ಗೆ 8 ಗಂಟೆಗೆ ವಸ್ತುಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಕಳ್ಳರು ಕತ್ತರಿಸಿ ಕದಿದ ವೈರ್‌ಗಳ ಮೌಲ್ಯ ಅಂದಾಜು ₹1,20,000 ರೂಪಾಯಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಪಿಗೆಹಳ್ಳಿ ಸ್ಥಳೀಯ ಠಾಣೆಯಲ್ಲಿ ದೂರು…

ಮುಂದೆ ಓದಿ..
ಸುದ್ದಿ 

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಾಗಲೂರು ಪೊಲೀಸರು

Taluknewsmedia.com

Taluknewsmedia.comಬೆಂಗಳೂರು, ಜೂನ್ 26, 2025: ವಿಚಾರಣೆಗೆ ಹಾಜರಾಗದೇ ಅಡಗಿಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಾಗಲೂರು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಎಚ್.ಸಿ-8385 ಮುನಿಸ್ವಾಮಿ ಅವರು ನೀಡಿದ ಮಾಹಿತಿಯ ಪ್ರಕಾರ, ಮುನಿರಾಜು ಬಿನ್ ಮುನಿಯಪ್ಪ (41 ವರ್ಷ), ವಿಳಾಸ: ವಿಚಾಗಾನಹಳ್ಳಿ ಗ್ರಾಮ, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೂಕು ಎಂಬಾತನ ವಿರುದ್ಧ ಪ್ರಕರಣ ಸಂಖ್ಯೆ 4-607/2014 ರಲ್ಲಿ ದಸ್ಸಿಗಿರಿ ವಾರಂಟ್ ಜಾರಿಯಾಗಿದೆ. ಆರೋಪಿತನು ಮೊದಲು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೂ, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಪೊಲೀಸರು ಅನೇಕ ಬಾರಿ ಆರೋಪಿಯ ವಿಳಾಸಕ್ಕೆ ಭೇಟಿ ನೀಡಿದರೂ ಅವನ ಪತ್ತೆಯಾಗಿರಲಿಲ್ಲ. ಆದರೆ, 26/06/2025 ರಂದು ಮಧ್ಯಾಹ್ನ 1 ಗಂಟೆಗೆ, ಖಚಿತ ಮಾಹಿತಿ ಮೇರೆಗೆ, ಹೆಡ್ ಕಾನ್‌ಸ್ಟೆಬಲ್ ಮುನಿಸ್ವಾಮಿ ಮತ್ತು ಆಂಜಿನಪ್ಪ (ಎಚ್.ಸಿ-8397) ಅವರು ಒಟ್ಟಾಗಾನಹಳ್ಳಿ ಗ್ರಾಮದಲ್ಲಿ ಮುನಿರಾಜುವನ್ನು ವಶಕ್ಕೆ ಪಡೆದು, 1:20ಕ್ಕೆ…

ಮುಂದೆ ಓದಿ..
ಸುದ್ದಿ 

ಅಂಬೇಡ್ಕರ್ ನಗರದಲ್ಲಿ ಯುವತಿ ನಾಪತ್ತೆ – ಪೊಲೀಸರಿಂದ ಹುಡುಕಾಟ ಪ್ರಾರಂಭ

Taluknewsmedia.com

Taluknewsmedia.comಬೆಂಗಳೂರು, ಜೂನ್ 22 – ನಗರದ ಅಂಬೇಡ್ಕರ್ ನಗರದಿಂದ 17 ವರ್ಷದ ಯುವತಿ ಮಾನಾ ಎಂಬವರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ನಾಗರಾಜ್ ಅವರು ತಮ್ಮ ಕುಟುಂಬ ಸಮೇತ ಅಂಬೇಡ್ಕರ್ ನಗರದಲ್ಲಿ ವಾಸವಾಗಿದ್ದು, ಜೂನ್ 18ರಂದು ಸಂಜೆ 7:30 ಗಂಟೆಗೆ ಮಾನಾ ಮನೆ ಬಿಟ್ಟು ಹೊರಟಿದ್ದರು. ಆದರೆ, ಈವರೆಗೆ ವಾಪಸ್ ಬಂದಿಲ್ಲ. ಯುವತಿ ನಾಪತ್ತೆಯಾಗಿರುವ ಕುರಿತು ಆತಂಕ ವ್ಯಕ್ತಪಡಿಸಿದ ನಾಗರಾಜ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಕಪಕ್ಕದ ಮನೆಯವರು ಮತ್ತು ಸಂಬಂಧಿಕರೊಂದಿಗೆ ಸಂಪರ್ಕ ಮಾಡಿಕೊಂಡರೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ, ಮಾನಾ ನಾಪತ್ತೆ ಪ್ರಕರಣವಾಗಿ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾಗಿರುವ ಯುವತಿಯ ಪತ್ತೆಗೆ ಸಾರ್ವಜನಿಕರಿಂದ ಸಹಕಾರ ಕೇಳಿಕೊಳ್ಳಲಾಗಿದೆ. ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಾಗಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅಧಿಕಾರಿಗಳು ವಿನಂತಿಸಿದ್ದಾರೆ.

ಮುಂದೆ ಓದಿ..