ಬೈಕ್ ಕಳವು ಪ್ರಕರಣ: ಹೆಸರಘಟ್ಟದಲ್ಲಿ Yamaha RX-135 ದ್ವಿಚಕ್ರ ವಾಹನ ಕಳವು
Taluknewsmedia.comಹೆಸರಘಟ್ಟ, 07 ಜುಲೈ 2025:ಬೆಂಗಳೂರುನಗರ ಜಿಲ್ಲೆಯ ಹೆಸರಘಟ್ಟ ಹೋಬಳಿಯ ಐವರಕಂಡಪುರದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿದೆ. ವೆಂಕಟಾಚಲಯ್ಯ ಬಿನ್ ಮುನಿಕೃಷ್ಣಪ್ಪ (ವಯಸ್ಸು 40), ಸರ್ಕಾರಿ ಕಾಲೇಜು ಹತ್ತಿರ ವಾಸವಿದ್ದ ವೆಂಕಟಾಚಲಯ್ಯ ರವರು, ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಕೇಬಲ್ ಬಿಸಿನೆಸ್ ನಡೆಸುತ್ತಿದ್ದರು. ವೆಂಕಟಾಚಲಯ್ಯ ಅವರ ತಮ್ಮ ತಂಗಿಯ ಗಂಡನಾದ ಶ್ರೀಮೂರ್ತಿ ಅವರಿಗೆ ಸೇರಿದ Yamaha RX-135 ಬೈಕ್ (ನೋಂದಣಿ ಸಂಖ್ಯೆ: KA-04 EB-1792) ಅನ್ನು ದಿನನಿತ್ಯದ ಓಡಾಟಕ್ಕೆ ಬಳಸುತ್ತಿದ್ದು, ದಿನಾಂಕ 03.07.2025 ರಂದು ಬೆಳಿಗ್ಗೆ 10:30ರ ಸುಮಾರಿಗೆ ಹೆಸರಘಟ್ಟದ ಟಿ.ಬಿ. ಕ್ರಾಸ್ ಬಳಿ ಇರುವ ಶ್ರೀನಿವಾಸ ಕೋಳಿ ಅಂಗಡಿಯ ಮುಂಭಾಗ ಲಾಕ್‌ಮಾಡಿ ನಿಲ್ಲಿಸಿದ್ದರು. ಚಿಕಿತ್ಸೆಯ ಅಗತ್ಯದಿಂದ ಅವರು ಬಿಎಂಟಿಸಿ ಬಸ್ ಮೂಲಕ ಜಯನಗರಕ್ಕೆ ತೆರಳಿದ ಅವರು ಸಂಜೆ 06:00 ಗಂಟೆಗೆ ಮರಳಿ ಬಂದಾಗ ಬೈಕ್ ಕಣ್ಮರೆಯಾಗಿರುವುದು ಕಂಡುಬಂದಿದೆ. ಪರಿಸರದಲ್ಲಿ ಎಲ್ಲೆಡೆ ಹುಡುಕಿದರೂ ಬೈಕ್ ಪತ್ತೆಯಾಗದ ಹಿನ್ನೆಲೆಯಲ್ಲಿ, ಅಪರಿಚಿತ…
ಮುಂದೆ ಓದಿ..
