ಮದುವೆ ಮುನ್ನದ ದುರ್ಘಟನೆ: ಯುವತಿಯ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ವಾತಾವರಣ
Taluknewsmedia.comಮದುವೆ ಮುನ್ನದ ದುರ್ಘಟನೆ: ಯುವತಿಯ ಅಕಾಲಿಕ ಸಾವು ಗ್ರಾಮದಲ್ಲಿ ಶೋಕದ ವಾತಾವರಣ ಚಿಕ್ಕಮಗಳೂರು: ಮದುವೆ ಸಂಭ್ರಮದ ತಯಾರಿಯಲ್ಲಿದ್ದ ಮನೆಗೆ ದುಃಖದ ಮೋಡ ಆವರಿಸಿದ ಘಟನೆ ಅಕ್ಟೋಬರ್ 30ರ ಗುರುವಾರ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಶೃತಿ (24) ಎಂಬ ಯುವತಿಯು ಅಕಾಲಿಕವಾಗಿ ಮೃತಪಟ್ಟಿದ್ದು, ಕುಟುಂಬ ಹಾಗೂ ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ತರೀಕೆರೆಯ ದಿಲೀಪ್ ಎಂಬ ಯುವಕರೊಂದಿಗೆ ಶೃತಿಯ ಮದುವೆ ಅಕ್ಟೋಬರ್ 31ರಂದು ನಡೆಯಬೇಕಿತ್ತು. ಆದರೆ, ಮದುವೆಯ ಸಂಭ್ರಮದ ಮಧ್ಯೆ ಶೃತಿಗೆ ಅಕಸ್ಮಿಕವಾಗಿ ಲೋ ಬಿಪಿ ಹಾಗೂ ಹೃದಯಾಘಾತ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶೃತಿಯ ಸಾವು ಕುಟುಂಬದವರ ಮೇಲೆ ಭಾರೀ ಆಘಾತ ಮೂಡಿಸಿದ್ದು, ನಾಳೆ ಮದುವೆ ನಡೆಯಬೇಕಿದ್ದ ಮನೆಯಲ್ಲಿ ಈಗ ಕಣ್ಣೀರು ಮತ್ತು ನೋವಿನ ವಾತಾವರಣ ನಿರ್ಮಾಣವಾಗಿದೆ.
ಮುಂದೆ ಓದಿ..
