ಸುದ್ದಿ 

ಕೊಪ್ಪಳದಲ್ಲಿ ತಾಯಿಯ ಹೃದಯ ವಿದ್ರಾವಕ ಹೆಜ್ಜೆ!

Taluknewsmedia.com

Taluknewsmedia.comಕೊಪ್ಪಳದಲ್ಲಿ ತಾಯಿಯ ಹೃದಯ ವಿದ್ರಾವಕ ಹೆಜ್ಜೆ! ಕೊಪ್ಪಳ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆ ಜನರನ್ನು ಕಂಗಾಲು ಮಾಡಿದೆ. ಕುಕನೂರ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ತಾಯಿ ಇಬ್ಬರು ಮಕ್ಕಳನ್ನು ಕೊಂದು ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತರನ್ನು ಲಕ್ಷ್ಮವ್ವ ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ನಡೆಯುತ್ತಿದ್ದ ನಿರಂತರ ಕಲಹದಿಂದ ಬೇಸತ್ತ ಲಕ್ಷ್ಮವ್ವ ನಾಲ್ಕು ವರ್ಷದ ಮಗ ರಮೇಶ್ ಹಾಗೂ ಎರಡು ವರ್ಷದ ಮಗಳು ಜಾನು ಅವರನ್ನು ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಾಥಮಿಕ ಮಾಹಿತಿ ಲಭಿಸಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಮುಂದೆ ಓದಿ..
ಸಿನೆಮಾ ಸುದ್ದಿ 

ಪ್ರಭಾಸ್-ಹನು ರಾಘವಪುಡಿ ಸಿನಿಮಾ ಟೈಟಲ್ ರಿವೀಲ್ – ‘ಫೌಜಿ’ನಲ್ಲಿ ರೆಬಲ್ ಸ್ಟಾರ್ ಸೇನೆಗೆ..

Taluknewsmedia.com

Taluknewsmedia.comಪ್ರಭಾಸ್-ಹನು ರಾಘವಪುಡಿ ಸಿನಿಮಾ ಟೈಟಲ್ ರಿವೀಲ್ – ‘ಫೌಜಿ’ನಲ್ಲಿ ರೆಬಲ್ ಸ್ಟಾರ್ ಸೇನೆಗೆ.. ಪ್ರಭಾಸ್ ಮತ್ತು ಹನು ರಾಘವಪುಡಿ ಜೋಡಿಯ ಹೊಸ ಪ್ಯಾನ್ ಇಂಡಿಯಾ ಚಿತ್ರ ಟೈಟಲ್ ಪೋಸ್ಟರ್ ಇದೀಗ ಬಹಿರಂಗವಾಗಿದೆ. ಬಹುನಿರೀಕ್ಷಿತ ಚಿತ್ರಕ್ಕೆ ‘ಫೌಜಿ’ ಎಂಬ ಹೆಸರಿಡಲಾಗಿದೆ, ಮತ್ತು ಪೋಸ್ಟರ್ ಬಿಡುಗಡೆಯಾಗುತ್ತಲೇ ಅಭಿಮಾನಿಗಳ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಪ್ರಭಾಸ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1940ರ ದಶಕದ ವಸಾಹತುಶಾಹಿ ಭಾರತದ ಹಿನ್ನೆಲೆಯನ್ನು ತೋರಿಸುತ್ತಿರುವ ಪೋಸ್ಟರ್‌ನಲ್ಲಿ ಬ್ರಿಟಿಷ್ ಧ್ವಜ ಉರಿಯುತ್ತಿರುವ ದೃಶ್ಯವಿದೆ, ಇದು ದೇಶಭಕ್ತಿ, ಹೋರಾಟ ಮತ್ತು ಪ್ರತಿರೋಧದ ಸಂಕೇತವಾಗಿ ಕಾಣಿಸುತ್ತದೆ. ಉರಿಯುತ್ತಿರುವ ಬೆಂಕಿಯ ದೃಶ್ಯ ಚಿತ್ರದಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಪೋಸ್ಟರ್‌ನಲ್ಲಿ ಪ್ರಭಾಸ್ ಪಾತ್ರದ ವ್ಯಕ್ತಿತ್ವವನ್ನು ಚುರುಕಾಗಿ ವಿವರಿಸಲಾಗಿದೆ. ಪಾರ್ಥ (ಅರ್ಜುನ)ನಂತಹ ಧೈರ್ಯ, ಕರ್ಣನಂತಹ ನ್ಯಾಯಪ್ರಿಯತೆಯನ್ನು, ಏಕಲವ್ಯನಂತಹ ಶೌರ್ಯವನ್ನು ಅವನು ಪ್ರತಿಫಲಿಸುತ್ತಾರೆ. ಬ್ರಾಹ್ಮಣ ಬುದ್ಧಿವಂತಿಕೆ ಹಾಗೂ ಕ್ಷತ್ರಿಯ ಕರ್ತವ್ಯ (ಧರ್ಮ) ಎರಡನ್ನೂ ಅವನು ಸಮನ್ವಯಗೊಳಿಸುತ್ತಾರೆ, ಇದು ನಾಯಕನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ರಾಜಕುಮಾರ್ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿಗೆ ಮುಖ್ಯ ಆಯುಕ್ತರ ತಪಾಸಣೆ

Taluknewsmedia.com

Taluknewsmedia.comಬೆಂಗಳೂರು: ರಾಜಕುಮಾರ್ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿಗೆ ಮುಖ್ಯ ಆಯುಕ್ತರ ತಪಾಸಣೆ ಬೆಂಗಳೂರು ಪಶ್ಚಿಮ ವಿಭಾಗದ ರಾಜಕುಮಾರ್ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿಗಳನ್ನು ನಗರ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಇಂದು ಬೆಳಿಗ್ಗೆ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಶ್ಚಿಮ ವಿಭಾಗದ ಆಯುಕ್ತ ಡಾ. ರಾಜೇಂದ್ರ ಕೆ.ವಿ, ಜಂಟಿ ಆಯುಕ್ತ ಆರತಿ ಆನಂದ್, ಮುಖ್ಯ ಅಭಿಯಂತರ ಸ್ವಯಂಪ್ರಭಾ ಹಾಗೂ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಆಯುಕ್ತರು ಕಾಮಗಾರಿ ಗುಣಮಟ್ಟ ಹಾಗೂ ವೇಗದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಅವರು ಸ್ಥಳೀಯ ನಿವಾಸಿಗಳ ಪ್ರತಿಕ್ರಿಯೆ…

ಮುಂದೆ ಓದಿ..
ಸುದ್ದಿ 

ಚಿಕ್ಕೋಡಿಯಲ್ಲಿ ಪರಸ್ತ್ರೀಯೊಂದಿಗೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪತಿರಾಯ — ಪತ್ನಿಯಿಂದ ರಸ್ತೆ ಮಧ್ಯೆ ಧರ್ಮದೇಟು!

Taluknewsmedia.com

Taluknewsmedia.comಚಿಕ್ಕೋಡಿಯಲ್ಲಿ ಪರಸ್ತ್ರೀಯೊಂದಿಗೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪತಿರಾಯ — ಪತ್ನಿಯಿಂದ ರಸ್ತೆ ಮಧ್ಯೆ ಧರ್ಮದೇಟು! ಬೆಳಗಾವಿ: ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದ್ದ ಜನರು ಶಾಕ್ ಆಗಿದ್ದಾರೆ. ಪತಿ ಪರಸ್ತ್ರೀಯೊಂದಿಗೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದಿದ್ದು, ಪತ್ನಿಯು ಲಾಡ್ಜ್‌ನಿಂದಲೇ ಎಳೆದು ಸಾರ್ವಜನಿಕವಾಗಿ ಚಪ್ಪಲಿಯಿಂದ ಧರ್ಮದೇಟು ನೀಡಿದ ಘಟನೆ ನಡೆದಿದೆ. ಮಾಹಿತಿ ಪ್ರಕಾರ, ಚಿಕ್ಕೋಡಿಯ ಅವಿನಾಶ್ ಭೋಸಲೆ ಎಂಬ ವ್ಯಕ್ತಿ ಪರಸ್ತ್ರೀಯೊಂದಿಗೆ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಸಮಯ ಕಳೆಯುತ್ತಿದ್ದ. ಈ ವಿಷಯ ತಿಳಿದ ಪತ್ನಿ ಹಾಗೂ ಮಾವ ಸ್ಥಳಕ್ಕೇ ಬಂದು ಪತಿಯನ್ನು ಲಾಡ್ಜ್‌ನಿಂದ ಎಳೆದು ಹೊರತೆಗೆದರು. ನಂತರ ಪತ್ನಿಯು ಚಪ್ಪಲಿಯಿಂದ ಪತಿಯನ್ನ ಉಳ್ಳಾಡಿಸಿ ಹೊಡೆದ ದೃಶ್ಯಗಳು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದವು. ಅವಿನಾಶ್ ಹಾಗೂ ಪತ್ನಿಯ ನಡುವೆ ಕಳೆದ ನಾಲ್ಕು ವರ್ಷಗಳಿಂದ ಗಂಭೀರ ಅಸಮಾಧಾನವಿದ್ದು, ವಿಚ್ಛೇದನಕ್ಕಾಗಿ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

ಮುಂದೆ ಓದಿ..
ಸುದ್ದಿ 

ವರ್ಕ್ ಫ್ರಂ ಹೋಮ್ ಮೋಸ — ಆರ್ಥಿಕ ನಿರ್ಭರತೆಯ ಹೆಸರಿನಲ್ಲಿ ಮಹಿಳೆಯರ ಭರವಸೆಯ ದೌರ್ಜನ್ಯ.

Taluknewsmedia.com

Taluknewsmedia.comವರ್ಕ್ ಫ್ರಂ ಹೋಮ್ ಮೋಸ — ಆರ್ಥಿಕ ನಿರ್ಭರತೆಯ ಹೆಸರಿನಲ್ಲಿ ಮಹಿಳೆಯರ ಭರವಸೆಯ ದೌರ್ಜನ್ಯ. ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ “ವರ್ಕ್ ಫ್ರಂ ಹೋಮ್” ವಂಚನೆಯ ಘಟನೆ ಕೇವಲ ಆರ್ಥಿಕ ಅಪರಾಧವಲ್ಲ — ಅದು ಸಾವಿರಾರು ಮಹಿಳೆಯರ ಜೀವನದ ಮೇಲಿನ ಕ್ರೂರ ಹಕ್ಕುಚ್ಯುತಿಯಾಗಿದೆ. ಮನೆಯಲ್ಲೇ ಕೆಲಸ ಮಾಡಿ ಸ್ವಲ್ಪ ಆದಾಯ ಗಳಿಸೋ ಭರವಸೆಯ ಮೇಲೆ 8,000 ಕ್ಕೂ ಹೆಚ್ಚು ಮಹಿಳೆಯರು ತಮ್ಮ ಸಂಗ್ರಹವನ್ನು ಹೂಡಿದ್ದರು. ಆದರೆ, “ಅಗರಬತ್ತಿ ಪ್ಯಾಕಿಂಗ್” ಎಂಬ ಸುಲಭವಾದ ಮಾತಿನ ಹಿಂದೆ ಕೋಟ್ಯಂತರ ರೂ.ಗಳ ಮೋಸ ನಡೆದಿದೆ. ಇದು ಕೇವಲ ಒಂದು ವ್ಯಕ್ತಿಯ ಕೃತ್ಯವಲ್ಲ, ಬದಲಿಗೆ ಮಹಿಳೆಯರ ಶ್ರಮ, ನಂಬಿಕೆ ಮತ್ತು ಆರ್ಥಿಕ ಅಸುರಕ್ಷತೆಯ ದುರುಪಯೋಗದ ನಿದರ್ಶನ. ಪತಿಯ ನಿಧನದಿಂದ, ಕುಟುಂಬದ ಭಾರದಿಂದ ಅಥವಾ ಉದ್ಯೋಗದ ಕೊರತೆಯಿಂದ ಮನೆಯಿಂದ ಕೆಲಸ ಹುಡುಕುತ್ತಿರುವ ಮಹಿಳೆಯರ ಭಾವನೆಗಳ ಮೇಲೆ ಈ ರೀತಿಯ ವಂಚನೆಗಳು ನಡೆಯುತ್ತಿರುವುದು ಸಾಮಾಜಿಕವಾಗಿ ಅಸಹ್ಯಕರ. ಮಹಿಳಾ…

ಮುಂದೆ ಓದಿ..
ಅಂಕಣ 

ಕುರ್ಚಿ………

Taluknewsmedia.com

Taluknewsmedia.comಕುರ್ಚಿ……… ಅಧಿಕಾರವೆಂಬ ಅಮಲು ಮತ್ತೆೇರಿ ವಿಧವಿಧದ ಕುರ್ಚಿಗಾಗಿ ಕೆಲವು ವ್ಯಕ್ತಿಗಳು ಮುಗಿ ಬೀಳುವುದು ನೋಡಿದಾಗ ಅನಿಸಿದ್ದು……… ಕುರ್ಚಿ ಬೇಕೆ ಕುರ್ಚಿ……… ” ಆ ” ಮಾಯಾ ಕುರ್ಚಿ….. ಏರಲು ದೈವ ಬಲ ಬೇಕಂತೆ ” ಆ ” ಕುರ್ಚಿ.ಕೂರಲು ಜನ ಬಲ ಬೇಕಂತೆ ” ಆ ” ಕುರ್ಚಿ.ಪಡೆಯಲು ಹಣ ಬಲ ಬೇಕಂತೆ ” ಆ ” ಕುರ್ಚಿ.ಗಳಿಸಲು ಜಾತಿ ಬಲ ಬೇಕಂತೆ ” ಆ ” ಕುರ್ಚಿ. ಮಾನ ಮರ್ಯಾದೆ ಬಿಡಬೇಕಂತೆ ” ಆ ” ಕುರ್ಚಿ ಸಿಗಲು.ಹೋಮ ಹವನ ಮಾಡ ಬೇಕಂತೆ ” ಆ ” ಕುರ್ಚಿ ಹೊಂದಲು.ತಲೆ ಹಿಡಿಯಲು ತಲೆ ಹೊಡೆಯಲು ಸಿದ್ದರಿರಬೇಕಂತೆ ” ಆ ” ಕುರ್ಚಿ ಗೆಲ್ಲಲು.ಜುಟ್ಟು ಹಿಡಿಯಲು, ಕೈ ಮುಗಿಯಲು, ಕಾಲು ಕಟ್ಟಲು ಗೊತ್ತಿರಬೇಕಂತೆ” ಆ ” ಕುರ್ಚಿ ನಿಮ್ಮದಾಗಲು. ಸಾಮಾನ್ಯರಿಗೆ ಸಿಗದಂತೆ” ಆ ” ಕುರ್ಚಿ.ಏಳು ಜನ್ಮದ…

ಮುಂದೆ ಓದಿ..
ಅಂಕಣ 

ಭಾರತೀಕರಣ………..

Taluknewsmedia.com

Taluknewsmedia.comಭಾರತೀಕರಣ……….. ಇಸ್ಲಾಮೀಕರಣ, ಕೇಸರೀಕರಣ ಎಂಬ ಎರಡು ಸಂಘರ್ಷಗಳ ಪ್ರಸ್ತುತ ಧಾರ್ಮಿಕ, ಸಾಮಾಜಿಕ ಸನ್ನಿವೇಶಗಳಲ್ಲಿ ಭಾರತೀಕರಣ ಎಂಬ ಪರಿಹಾರ ಹೆಚ್ಚು ಸೂಕ್ತವಾದದ್ದು ಮತ್ತು ದೇಶದ ಸಮಗ್ರತೆಯನ್ನು ಕಾಪಾಡಲು ಅತ್ಯವಶ್ಯವಾದದ್ದು. ಭಾರತೀಕರಣವೆಂದರೆ ಸಂವಿಧಾನದ ಶೀರ್ಷಿಕೆಯ ಪ್ರಾರಂಭದಲ್ಲಿ ಹೇಳಿರುವ ” ಭಾರತೀಯರಾದ ನಾವು……” ಎನ್ನುವ ಘೋಷ ವಾಕ್ಯ. ಈ ನಿಟ್ಟಿನಲ್ಲಿ ಆರ್ ಎಸ್ ಎಸ್ ಎಂಬ ಸಂಘಟನೆ ವಾಸ್ತವದಲ್ಲಿ ಏನು ಮತ್ತು ಅದು ನಿಜಕ್ಕೂ ದೇಶದ ಸಮಗ್ರ ಹಿತಾಸಕ್ತಿಯನ್ನು ಬಯಸುವುದಾದರೆ ಏನು ಮಾಡಬಹುದು ಎಂಬ ಚರ್ಚೆಯ ಸುತ್ತ ಒಂದು ಪಕ್ಷಿ ನೋಟ…….. ಆರ್ ಎಸ್ ಎಸ್ ಒಂದು ದೇಶಭಕ್ತ ಸಂಘಟನೆಯೇ : ಹೌದು, ಆರ್ ಎಸ್ ಎಸ್ ಹಿಂದುತ್ವದ ಸಂಘಟನೆಯೇ : ಹೌದು, ಆರ್ ಎಸ್ ಎಸ್ ಸನಾತನ ಧರ್ಮದ ಸಂಘಟನೆಯೇ : ಹೌದು, ಆರ್ ಎಸ್ ಎಸ್ ವರ್ಣಾಶ್ರಮ ವ್ಯವಸ್ಥೆಯನ್ನು ಬೆಂಬಲಿಸುತ್ತದೆಯೇ : ಹೌದು, ಈಗ ಮೇಲ್ನೋಟಕ್ಕೆ ಅದನ್ನು ವಿರೋಧಿಸುತ್ತದೆ,…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ

Taluknewsmedia.com

Taluknewsmedia.comಚಿಕ್ಕಮಗಳೂರು : ಹೋಂಸ್ಟೇ ಬಾತ್‌ರೂಮ್‌ನಲ್ಲಿ ಯುವತಿಯ ಅನುಮಾನಾಸ್ಪದ ಸಾವು – ಪೊಲೀಸರ ತನಿಖೆ ಮುಂದುವರಿಕೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವತಿ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ರಂಜಿತಾ (27) ಎಂದು ಗುರುತಿಸಲಾಗಿದ್ದು, ಅವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿಯಾಗಿದ್ದಾರೆ. ರಂಜಿತಾ ಎಂಎಸ್ಸಿ ಪದವೀಧರರಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಅಕ್ಟೋಬರ್ 25ರಂದು ನಡೆದ ಈ ಘಟನೆ ಕುರಿತಂತೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ರಂಜಿತಾ ತಮ್ಮ ಸ್ನೇಹಿತೆ ರೇಖಾ ಅವರೊಂದಿಗೆ ಸ್ನೇಹಿತೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಹಾಂದಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಸ್ನಾನಕ್ಕೆ ಹೋದ ರಂಜಿತಾ ಬಹಳ ಹೊತ್ತಾದರೂ ಹೊರಬರದೇ ಇದ್ದ ಕಾರಣ ಅನುಮಾನಗೊಂಡ ರೇಖಾ ಬಾಗಿಲು ತೆರೆದು ನೋಡಿದಾಗ,…

ಮುಂದೆ ಓದಿ..
ಸುದ್ದಿ 

“ಮಾರಿಗಲ್ಲು”: ಶಿರಸಿ ಹಳ್ಳಿಯ ನೈಜ ಹಾಗೂ ಮಾಯಾಜಾಲದ ಕಥೆ

Taluknewsmedia.com

Taluknewsmedia.com“ಮಾರಿಗಲ್ಲು”: ಶಿರಸಿ ಹಳ್ಳಿಯ ನೈಜ ಹಾಗೂ ಮಾಯಾಜಾಲದ ಕಥೆ ZEE5 ಮತ್ತು PRK ಪ್ರೊಡಕ್ಷನ್ಸ್ ಹೊಸ ವೆಬ್ ಸರಣಿಯಾದ ‘ಮಾರಿಗಲ್ಲು’ ಮೂಲಕ ಕರ್ನಾಟಕದ ಹೃದಯದ ಕಥೆಯನ್ನು ಪ್ರಸ್ತುತಪಡಿಸುತ್ತಿದೆ. ಈ ಸರಣಿ 1990ರ ದಶಕದ ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯ ಹಿನ್ನೆಲೆ ಮೇಲೆ ಕಟ್ಟಲಾಗಿದೆ. ಕಥೆಯಲ್ಲಿ ಕದಂಬರ ಕಾಲಘಟ್ಟದ ಇತಿಹಾಸ ಮತ್ತು ಪರಂಪರೆ ಕೂಡ ಕಾಣಸಿಗುತ್ತದೆ. ಕದಂಬರ ರಾಜಧಾನಿಯಾಗಿರುವ ಬನವಾಸಿ ಅದರ ಪ್ರಮುಖ ಹಿನ್ನೆಲೆ. ಈ ಹಳ್ಳಿಯ ರಾಜಮನೆಯ ಐತಿಹಾಸಿಕ ನಿದರ್ಶನಗಳು, ನಂಬಿಕೆ, ಸ್ವಾರ್ಥ ಮತ್ತು ದುರಾಸೆಗಳಿಂದ ಬಳಲುವ ಮಾನವ ಭಾವನೆಗಳನ್ನು ಸರಣಿಯ ಪಾತ್ರಗಳ ಮೂಲಕ ವಿಸ್ತಾರವಾಗಿ ತೋರಿಸಲಾಗಿದೆ. ಪ್ರಪ್ರಥಮವಾಗಿ ವೆಬ್ ಸೀರೀಸ್‌ನಲ್ಲಿ ರಂಗಾಯಣ ರಘು ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ತೇಜ್, ಎಸ್.ಎಸ. ಸೂರಜ್, ಪ್ರಶಾಂತ್ ಸಿದ್ದಿ ಮುಂತಾದವರು ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮೂಲತಃ ಶಿರಸಿಯವರಾದ ಈ…

ಮುಂದೆ ಓದಿ..
ಸುದ್ದಿ 

ಸಾವಿನಲ್ಲೂ ಒಂದಾದ ಜೀವಸಂಗಾತಿಗಳು — ಬೀದರ್‌ನಲ್ಲಿ ಮನಕಲಕುವ ಘಟನೆ

Taluknewsmedia.com

Taluknewsmedia.comಸಾವಿನಲ್ಲೂ ಒಂದಾದ ಜೀವಸಂಗಾತಿಗಳು — ಬೀದರ್‌ನಲ್ಲಿ ಮನಕಲಕುವ ಘಟನೆ ಬೀದರ್‌: ಜೀವಮಾನವಿಡೀ ಒಟ್ಟಾಗಿ ನಡೆದು, ಬದುಕಿನ ಎಲ್ಲ ನೋವು-ಸುಖ ಹಂಚಿಕೊಂಡ ವೃದ್ದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ಈ ಮನಕಲಕುವ ಘಟನೆ ಕಮಲನಗರ ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುಂಡಪ್ಪ ಹೋಡಗೆ (85) ಹಾಗೂ ಅವರ ಪತ್ನಿ ಲಕ್ಷ್ಮಿಬಾಯಿ ಹೋಡಗೆ (83) ಕಳೆದ ಹಲವು ವರ್ಷಗಳಿಂದ ಪರಸ್ಪರ ಆಶ್ರಯವಾಗಿ ಬದುಕುತಿದ್ದರು. ಸೋಮವಾರ ಬೆಳಿಗ್ಗೆ ಲಕ್ಷ್ಮಿಬಾಯಿ ಹೋಡಗೆ ನಿಧನರಾದರು. ಪತ್ನಿಯ ಸಾವಿನ ಸುದ್ದಿ ತಿಳಿದ ಕೆಲವೇ ಕ್ಷಣಗಳಲ್ಲಿ ಪತಿ ಗುಂಡಪ್ಪ ಕೂಡಾ ಕೊನೆಯುಸಿರೆಳೆದರು. ಗ್ರಾಮಸ್ಥರ ಪ್ರಕಾರ, ಇಬ್ಬರೂ ಪರಸ್ಪರದ ಪ್ರೀತಿಗೆ ಜೀವಂತ ಸಾಕ್ಷಿಯಾಗಿದ್ದರು. ಅಳಿಯದ ಬಾಂಧವ್ಯ ಮತ್ತು ಜೀವನಪರ್ಯಂತದ ನಂಟಿನ ಈ ಕತೆಯು ಗ್ರಾಮದಲ್ಲೆಲ್ಲಾ ದುಃಖದ ವಾತಾವರಣ ನಿರ್ಮಿಸಿದೆ. ಸ್ಥಳೀಯರು ಹೇಳುವಂತೆ, “ಇಬ್ಬರ ಪ್ರೀತಿಯ ಬಾಂಧವ್ಯ ಸ್ವರ್ಗದಲ್ಲೂ ಮುಂದುವರಿಯಲಿ” ಎಂಬ ಶ್ರದ್ಧಾಂಜಲಿ ಮಾತುಗಳು ಎಲ್ಲರ ತುಟಿಗಳಲ್ಲಿ…

ಮುಂದೆ ಓದಿ..