ಮಾನವೀಯತೆ ಮರೆತವೇ ನಮ್ಮ ರಸ್ತೆಗಳು? ಆನೇಕಲ್ ಆಂಬ್ಯುಲೆನ್ಸ್ ಘಟನೆ ಬಿಚ್ಚಿಟ್ಟ ಕಹಿ ಸತ್ಯಗಳು..
Taluknewsmedia.comಮಾನವೀಯತೆ ಮರೆತವೇ ನಮ್ಮ ರಸ್ತೆಗಳು? ಆನೇಕಲ್ ಆಂಬ್ಯುಲೆನ್ಸ್ ಘಟನೆ ಬಿಚ್ಚಿಟ್ಟ ಕಹಿ ಸತ್ಯಗಳು.. ಇಂದಿನ ಆಧುನಿಕ ಸಮಾಜದಲ್ಲಿ ರಸ್ತೆಯ ಮೇಲೆ ಅಪಘಾತ ಸಂಭವಿಸಿದಾಗ ಅಥವಾ ಯಾರಾದರೂ ಸಂಕಷ್ಟದಲ್ಲಿದ್ದಾಗ ಸಹಾಯ ಹಸ್ತ ಚಾಚುವವರಿಗಿಂತ, ಮೊಬೈಲ್ ಕ್ಯಾಮೆರಾ ಹಿಡಿದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ‘ವೈರಲ್ ಸಂಸ್ಕೃತಿ’ ಹೆಚ್ಚಾಗುತ್ತಿದೆ. ಆನೇಕಲ್‌ನ ಅಲಯನ್ಸ್ ಕಾಲೇಜು ಬಳಿ ಇತ್ತೀಚೆಗೆ ನಡೆದ ಘಟನೆಯು ಕೇವಲ ಒಂದು ಸಂಚಾರ ವಿವಾದವಲ್ಲ; ಬದಲಾಗಿ ಅದು ನಮ್ಮ ಸಮಾಜ ತಲುಪಿರುವ ‘ನೈತಿಕ ದಿವಾಳಿತನ’ದ ನಗ್ನ ಪ್ರದರ್ಶನ. ಮಾನವೀಯತೆ ಎಂಬುದು ಕೇವಲ ಭಾಷಣದ ಸರಕಾಗುತ್ತಿದೆಯೇ ಎಂಬ ಅನುಮಾನ ಮೂಡಿಸುವ ಈ ಘಟನೆ ನಮ್ಮ ನೈತಿಕ ಪತನದ ಕನ್ನಡಿಯಾಗಿದೆ. ಜೀವಕ್ಕಿಂತಲೂ ‘ಜಂಗಮ’ (ಕಾರು) ಮುಖ್ಯವಾಯಿತೇ?… ಒಬ್ಬ ವ್ಯಕ್ತಿಯ ಪ್ರಾಣಾಪಾಯದ ಸ್ಥಿತಿಯಲ್ಲಿ ಪ್ರತಿಯೊಂದು ಸೆಕೆಂಡು ಕೂಡ ಅತ್ಯಂತ ಅಮೂಲ್ಯ. ಆನೇಕಲ್‌ನಲ್ಲಿ ರೋಗಿಯೊಬ್ಬರನ್ನು ಕರೆತರಲು ತುರ್ತಾಗಿ ಸೈರನ್ ಹಾಕಿಕೊಂಡು ಹೊರಟಿದ್ದ ಆಂಬ್ಯುಲೆನ್ಸ್,…
ಮುಂದೆ ಓದಿ..
