ಸುದ್ದಿ 

ರಾಯರ ಹುಂಡಿಯಲ್ಲಿ 21 ದಿನಗಳಲ್ಲಿ 3.06 ಕೋಟಿ ರೂ. ಕಾಣಿಕೆ ಸಂಗ್ರಹ

ರಾಯರ ಹುಂಡಿಯಲ್ಲಿ 21 ದಿನಗಳಲ್ಲಿ 3.06 ಕೋಟಿ ರೂ. ಕಾಣಿಕೆ ಸಂಗ್ರಹ ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿರುವ ಪ್ರಸಿದ್ಧ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 21 ದಿನಗಳ ಅವಧಿಯಲ್ಲಿ ಭಕ್ತರಿಂದ ಒಟ್ಟು 3.06 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿರುವುದು ತಿಳಿದುಬಂದಿದೆ. ಶ್ರೀಮಠದ ಆವರಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಮಠದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ಭದ್ರತಾ ಕ್ರಮಗಳೊಂದಿಗೆ ಹುಂಡಿಯನ್ನು ತೆರೆಯಲಾಗಿದ್ದು, ಕ್ರಮಬದ್ಧವಾಗಿ ಎಣಿಕೆ ಕಾರ್ಯ ನಡೆಸಲಾಯಿತು. ಈ ಅವಧಿಯಲ್ಲಿ ಹುಂಡಿಯಲ್ಲಿ 2,97,44,661 ರೂಪಾಯಿ ನಗದು ನೋಟುಗಳು, 9,37,000 ರೂಪಾಯಿ ಮೌಲ್ಯದ ನಾಣ್ಯಗಳು, ಜೊತೆಗೆ 23 ಗ್ರಾಂ ಚಿನ್ನ ಹಾಗೂ 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರಿಂದ ಸಲ್ಲಿಕೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಶ್ರೀ ರಾಘವೇಂದ್ರಸ್ವಾಮಿಗಳ ಮೇಲೆ ಅಪಾರ ನಂಬಿಕೆ ಹಾಗೂ ಭಕ್ತಿಯಿಂದ ತಮ್ಮ…

ಮುಂದೆ ಓದಿ..
ಸುದ್ದಿ 

ಮನಿ ಡಬ್ಲಿಂಗ್ ಹಾಗೂ ಕ್ರಿಪ್ಟೋ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ

ಮನಿ ಡಬ್ಲಿಂಗ್ ಹಾಗೂ ಕ್ರಿಪ್ಟೋ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ತೀರ್ಥಹಳ್ಳಿ: ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಕ್ರಿಪ್ಟೋ ಕರೆನ್ಸಿ, ಬಿಟ್‌ಕಾಯಿನ್, ಮನಿ ಡಬ್ಲಿಂಗ್ ಎಂಬ ಆಮಿಷಗಳನ್ನು ಮುಂದಿಟ್ಟು ಜನರನ್ನು ವಂಚಿಸುವ ಘಟನೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಮನವಿ ಮಾಡಿದ್ದಾರೆ. ಆನ್‌ಲೈನ್ ಮಾರ್ಕೆಟಿಂಗ್ ಹೆಸರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ದುಪ್ಪಟ್ಟು ಲಾಭ ನೀಡಲಾಗುತ್ತದೆ ಎಂದು ನಂಬಿಸಿ, ಸಂಗ್ರಹಿಸಿದ ಹಣವನ್ನು ಬಿಟ್‌ಕಾಯಿನ್ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಇಂತಹ ವಂಚನಾ ಜಾಲದಲ್ಲಿ ಭಾಗಿಯಾದವರ ವಿರುದ್ಧ ದೂರು ಬಂದಲ್ಲಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಡಿಸೆಂಬರ್ 19ರಿಂದ ಆರಂಭಗೊಳ್ಳಲಿರುವ ಎಳ್ಳಮಾವಾಸ್ಯೆ ಜಾತ್ರೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಾತ್ರೆ ನಡೆಯುವ ದಿನಗಳಲ್ಲಿ…

ಮುಂದೆ ಓದಿ..
ಸುದ್ದಿ 

ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಾರ್ವಜನಿಕರ ಆಕ್ರೋಶ

ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಾರ್ವಜನಿಕರ ಆಕ್ರೋಶ ಸವಣೂರ ಪಟ್ಟಣದ ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಗಂಭೀರ ಘಟನೆ ನಡೆದಿದೆ. ಆರೋಪಿತ ಶಿಕ್ಷಕ ಜಗದೀಶ ವಗ್ಗನವರ ವಿರುದ್ಧ ಆಕ್ರೋಶಗೊಂಡ ಪಾಲಕರು ಹಾಗೂ ಸ್ಥಳೀಯರು ಶಾಲಾ ಆವರಣದಲ್ಲಿ ಜಮಾಯಿಸಿ, ಅವರ ಬಟ್ಟೆ ಹರಿದು ಚಪ್ಪಲಿಗಳ ಹಾರ ಹಾಕಿ ಪೊಲೀಸ್ ಠಾಣೆಯವರೆಗೆ ಎಳೆದುಕೊಂಡು ಬಂದಿದ್ದಾರೆ. ಮೂರು ವರ್ಷಗಳಿಂದ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಜಗದೀಶ ವಗ್ಗನವರ ಕಳೆದ ಕೆಲವು ತಿಂಗಳಿಂದ ವಿದ್ಯಾರ್ಥಿನಿಯರ ಮೇಲೆ ಅಸಭ್ಯ ವರ್ತನೆ ನಡೆಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ವಿಷಯ ತಿಳಿದ ಎಸ್‌ಡಿಎಂಸಿ ಸದಸ್ಯರು ಹಾಗೂ ಮಕ್ಕಳ ಪಾಲಕರು ಸಾರ್ವಜನಿಕರೊಂದಿಗೆ ಸೇರಿ ಶಾಲೆಯಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದರು. ಶಾಲೆಯಲ್ಲಿನ ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ…

ಮುಂದೆ ಓದಿ..
ಸುದ್ದಿ 

ಲೊಕ್ಕನಹಳ್ಳಿ ಕೆಪಿಎಸ್ ಶಾಲೆಗೆ ನೂತನ ಕೊಠಡಿಗಳ ಕೊಡುಗೆ

ಲೊಕ್ಕನಹಳ್ಳಿ ಕೆಪಿಎಸ್ ಶಾಲೆಗೆ ನೂತನ ಕೊಠಡಿಗಳ ಕೊಡುಗೆ ಹನೂರು: ತಾಲೂಕಿನ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಒಸ್ಯಾಟ್ ಸಂಸ್ಥೆಯ ಸಹಕಾರದಿಂದ ನಿರ್ಮಿಸಲಾದ ನೂತನ ಶಾಲಾ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನಾ ಸಮಾರಂಭವು ಗುರುವಾರ ನಡೆಯಿತು. 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ಸುಸಜ್ಜಿತ ಕೊಠಡಿಗಳನ್ನು ಬಿಇಒ ಮಹೇಶ್ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಇಒ ಮಹೇಶ್ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಮೂಲಸೌಕರ್ಯ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಒಸ್ಯಾಟ್ ಸಂಸ್ಥೆ ದಾನಿಗಳ ಸಹಕಾರದಿಂದ ಲೊಕ್ಕನಹಳ್ಳಿ ಕೆಪಿಎಸ್ ಶಾಲೆಗೆ ಕೊಠಡಿಗಳನ್ನು ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಈ ಕೊಠಡಿಗಳು ಮಕ್ಕಳ ಕಲಿಕೆಗೆ ಉತ್ತೇಜನ ನೀಡಲಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು. ಜೊತೆಗೆ ಶಿಕ್ಷಕರು ಮಕ್ಕಳ ಕಲಿಕಾಮಟ್ಟ ಹೆಚ್ಚಿಸುವತ್ತ ಹೆಚ್ಚಿನ ಗಮನಹರಿಸಬೇಕು ಹಾಗೂ ಕೊಠಡಿಗಳ ಸ್ವಚ್ಛತೆ ಮತ್ತು ಸಮರ್ಪಕ…

ಮುಂದೆ ಓದಿ..
ಸುದ್ದಿ 

ನಿಟ್ಟೂರು ಸರ್ಕಾರಿ ಮಹಿಳಾ ನಿಲಯದಲ್ಲಿ ಜೋಡಿ ವಿವಾಹ ನೆರವೇರಿಕೆ

ನಿಟ್ಟೂರು ಸರ್ಕಾರಿ ಮಹಿಳಾ ನಿಲಯದಲ್ಲಿ ಜೋಡಿ ವಿವಾಹ ನೆರವೇರಿಕೆ ಜಿಲ್ಲಾಧಿಕಾರಿಗಳಿಂದ ನೂತನ ದಂಪತಿಗಳಿಗೆ ಶುಭಾಶಯ ಉಡುಪಿ: ನಿಟ್ಟೂರು ರಾಜ್ಯ ಮಹಿಳಾ ನಿಲಯದಲ್ಲಿ ಶುಕ್ರವಾರ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಇಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅನಾಥ ಯುವತಿಯರು ವಿವಾಹ ಬಂಧನಕ್ಕೆ ಕಾಲಿಟ್ಟು ಹೊಸ ಜೀವನದ ಆರಂಭ ಮಾಡಿದ್ದಾರೆ. ಜಿಲ್ಲಾಡಳಿತದ ಮುಂದಾಳತ್ವದಲ್ಲಿ ಆಯೋಜಿಸಲಾದ ಈ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸ್ವತಃ ಕನ್ಯಾದಾನ ನೆರವೇರಿಸಿ ಮಾನವೀಯತೆಯ ಉದಾಹರಣೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಮೂಲದ ಮಲ್ಲೇಶ್ವರಿ (22) ಪ್ರಸ್ತುತ ತೃತೀಯ ಬಿಎ ಓದುತ್ತಿದ್ದು, ಮೂಲ್ಕಿ ಬಪ್ಪನಾಡಿನ ಎಂ. ಸಂಜಯ ಪ್ರಭು (31) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎಂ.ಕಾಂ ಪದವೀಧರರಾದ ಸಂಜಯ ಪ್ರಭು ಬೆಂಗಳೂರಿನ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಇನ್ನೊಂದು ವಿವಾಹದಲ್ಲಿ ಕಿವಿ ಕೇಳಿಸದ ಹಾಗೂ ಮಾತು ಬಾರದ ಅನಾಥ ಯುವತಿ ಸುಶೀಲಾ (42) ಅವರನ್ನು ಹಾಸನ…

ಮುಂದೆ ಓದಿ..
ಸುದ್ದಿ 

ಮೇಕೆದಾಟು ಯೋಜನೆಯಲ್ಲಿ ಮಹತ್ವದ ಬೆಳವಣಿಗೆ : ರಾಮನಗರದಲ್ಲಿ ಆರಂಭವಾಗಲಿದೆ ಯೋಜನಾ ಕಚೇರಿ

ಮೇಕೆದಾಟು ಯೋಜನೆಯಲ್ಲಿ ಮಹತ್ವದ ಬೆಳವಣಿಗೆ : ರಾಮನಗರದಲ್ಲಿ ಆರಂಭವಾಗಲಿದೆ ಯೋಜನಾ ಕಚೇರಿ ರಾಮನಗರ: ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಹಾಗೂ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆ ನಡೆದಿದೆ. ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ರಾಮನಗರದಲ್ಲಿ ಮೇಕೆದಾಟು ಯೋಜನಾ ಕಚೇರಿ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್‌ಎಸ್‌) ನಿರ್ದೇಶಕರ ಮಾರ್ಗದರ್ಶನದಲ್ಲಿ ವಿಶೇಷ ಅಧಿಕಾರಿಗಳ ತಂಡ ರಚಿಸಲಾಗಿದ್ದು, ಈ ತಂಡ ರಾಮನಗರವನ್ನೇ ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯನಿರ್ವಹಿಸಲಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ, ಯೋಜನೆಗೆ ಇದ್ದ ಪ್ರಮುಖ ಕಾನೂನು ಅಡ್ಡಿ ನಿವಾರಣೆಯಾಗಿದೆ. ನವೆಂಬರ್ 18ರಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು…

ಮುಂದೆ ಓದಿ..
ಸುದ್ದಿ 

ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಪರೀಕ್ಷೆ ಬರೆದ ಬಾಲಕಿ : ಪುರಾತನ ‘ಗಾಂಧಾರಿ ವಿದ್ಯೆ’ಯ ಶಕ್ತಿ ಜಗತ್ತಿಗೆ ಪರಿಚಯಿಸಿದ ಬಳ್ಳಾರಿಯ ಹಿಮಾಬಿಂದು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಪರೀಕ್ಷೆ ಬರೆದ ಬಾಲಕಿ : ಪುರಾತನ ‘ಗಾಂಧಾರಿ ವಿದ್ಯೆ’ಯ ಶಕ್ತಿ ಜಗತ್ತಿಗೆ ಪರಿಚಯಿಸಿದ ಬಳ್ಳಾರಿಯ ಹಿಮಾಬಿಂದು ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿನಿ ಹಿಮಾಬಿಂದು ಪುರಾತನವಾದ ಹಾಗೂ ಅಪರೂಪದ ‘ಗಾಂಧಾರಿ ವಿದ್ಯೆ’ಯನ್ನು ಕರಗತ ಮಾಡಿಕೊಂಡು ಎಲ್ಲರ ಗಮನ ಸೆಳೆದಿದ್ದಾಳೆ. ಕಣ್ಣುಗಳನ್ನು ಮುಚ್ಚಿಕೊಂಡು ಸ್ಪರ್ಶ, ವಾಸನೆ ಹಾಗೂ ಶಬ್ದದ ಆಧಾರದಲ್ಲಿ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತಿಸುವ ಈ ವಿಶಿಷ್ಟ ಕಲೆಯನ್ನು ಆಕೆ ಆನ್‌ಲೈನ್ ಮೂಲಕ ಕಲಿತಿದ್ದಾಳೆ. ಇದರ ಅತ್ಯಂತ ವಿಶೇಷ ಅಂಶವೆಂದರೆ, 8ನೇ ತರಗತಿಯ ಎಫ್‌ಎ4 ಪರೀಕ್ಷೆಯನ್ನು ಕೂಡ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆಯುವ ಮೂಲಕ ಸಹಪಾಠಿಗಳು, ಶಿಕ್ಷಕರು ಹಾಗೂ ಪೋಷಕರನ್ನು ಅಚ್ಚರಿಗೊಳಿಸಿದ್ದಾಳೆ. ಹಿಮಾಬಿಂದು ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ರಾಮಾಂಜಿನಿ ಹಾಗೂ ಕವಿತಾ ದಂಪತಿಯ ಹಿರಿಯ ಪುತ್ರಿ. ಪ್ರಸ್ತುತ ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಕುರುವಳ್ಳಿ ತಿಮ್ಮಪ್ಪ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 8ನೇ ತರಗತಿಯಲ್ಲಿ…

ಮುಂದೆ ಓದಿ..
ಸುದ್ದಿ 

ವಾಯವ್ಯ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಭಾರಿ ಬೇಡಿಕೆ : 507 ಕೋಟಿ ರೂ. ವೆಚ್ಚದ ಸಾವಿರ ಬಸ್‌ಗಳ ಖರೀದಿ ಪ್ರಸ್ತಾವನೆ

ವಾಯವ್ಯ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಭಾರಿ ಬೇಡಿಕೆ : 507 ಕೋಟಿ ರೂ. ವೆಚ್ಚದ ಸಾವಿರ ಬಸ್‌ಗಳ ಖರೀದಿ ಪ್ರಸ್ತಾವನೆ ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾ) ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 1,000 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ಯೋಜನೆಗೆ ವಿಶ್ವಬ್ಯಾಂಕ್ ನೆರವು ದೊರಕುವ ಸಾಧ್ಯತೆ ಇದ್ದು, ಮಹಿಳೆಯರ ಉಚಿತ ಪ್ರಯಾಣ ‘ಶಕ್ತಿ’ ಯೋಜನೆಯಿಂದ ಹೆಚ್ಚಿದ ಪ್ರಯಾಣಿಕರ ಒತ್ತಡವನ್ನು ತಗ್ಗಿಸುವ ನಿರೀಕ್ಷೆ ವ್ಯಕ್ತವಾಗಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ವಾಕರಸಾ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ 700 ಬಸ್‌ಗಳನ್ನು ಪೂರೈಸಿದ್ದು, ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಇನ್ನೂ 200 ಎಲೆಕ್ಟ್ರಿಕ್ ಬಸ್‌ಗಳು ಶೀಘ್ರದಲ್ಲೇ ಸೇರ್ಪಡೆಯಾಗಲಿವೆ. ಇದರ ನಡುವೆಯೇ ಸಂಸ್ಥೆ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಾವಿರ ಎಲೆಕ್ಟ್ರಿಕ್ ಬಸ್‌ಗಳಿಗಾಗಿ…

ಮುಂದೆ ಓದಿ..
ಸುದ್ದಿ 

ರಿಷಬ್ ಶೆಟ್ಟಿ ಹರಕೆ ನೇಮ ವಿವಾದ: ಸಂಪ್ರದಾಯಬದ್ಧವಾಗಿ ನಡೆದ ನೇಮೋತ್ಸವ – ದೈವಸ್ಥಾನ ಸಮಿತಿಯಿಂದ ಸ್ಪಷ್ಟನೆ

ರಿಷಬ್ ಶೆಟ್ಟಿ ಹರಕೆ ನೇಮ ವಿವಾದ: ಸಂಪ್ರದಾಯಬದ್ಧವಾಗಿ ನಡೆದ ನೇಮೋತ್ಸವ – ದೈವಸ್ಥಾನ ಸಮಿತಿಯಿಂದ ಸ್ಪಷ್ಟನೆ ಮಂಗಳೂರು: ನಟ ರಿಷಬ್ ಶೆಟ್ಟಿ ಅವರು ಸಲ್ಲಿಸಿದ ಹರಕೆ ನೇಮೋತ್ಸವವು ದೈವಸ್ಥಾನದ ಪುರಾತನ ಸಂಪ್ರದಾಯಗಳಂತೆ ಸರಿಯಾಗಿ ನೆರವೇರಿದೆ ಎಂದು ಬಾರೆಬೈಲು ಶ್ರೀ ಜಾರಂದಾಯ ಬಂಟ ದೈವಸ್ಥಾನ ಹಾಗೂ ಶ್ರೀ ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ತಿಳಿಸಿದೆ. ಈ ಕುರಿತು ಹರಡಿರುವ ತಪ್ಪು ಮಾಹಿತಿಗೆ ಸ್ಪಷ್ಟನೆ ನೀಡಿದ ಸಮಿತಿ, ದೈವಸ್ಥಾನದ ಗೌರವಕ್ಕೆ ಧಕ್ಕೆಯಾಗುವ ರೀತಿಯ ಅಪಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ. ಶುಕ್ರವಾರ ಬಾರೆಬೈಲು ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ರವಿ ಪ್ರಸನ್ನ, ರಿಷಬ್ ಶೆಟ್ಟಿ ಅವರು ಕೆಲವು ತಿಂಗಳ ಹಿಂದೆ ನೇಮ ಸಲ್ಲಿಸುವ ಹರಕೆ ಹೇಳಿಕೊಂಡಿದ್ದು, ದೈವದ ಅನುಮತಿ ಪಡೆದು ಸಂಪ್ರದಾಯಾನುಸಾರ ನೇಮವನ್ನು ನಡೆಸಲಾಗಿದೆ ಎಂದರು. ಎಣ್ಣೆ ಬೂಳ್ಯದ ಸಂದರ್ಭದಲ್ಲಿ ದೈವವು ಯಾರ…

ಮುಂದೆ ಓದಿ..
ಸುದ್ದಿ 

ಮೈಸೂರು ಯೂನಿಟಿ ಮಾಲ್ ವಿಚಾರ: ನ್ಯಾಯಾಲಯದ ತಡೆಯಾಜ್ಞೆ ಕುರಿತು ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

ಮೈಸೂರು ಯೂನಿಟಿ ಮಾಲ್ ವಿಚಾರ: ನ್ಯಾಯಾಲಯದ ತಡೆಯಾಜ್ಞೆ ಕುರಿತು ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ ಮೈಸೂರಿನಲ್ಲಿ ಪ್ರಸ್ತಾಪಿತ ಯೂನಿಟಿ ಮಾಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಯೂನಿಟಿ ಮಾಲ್ ಸ್ಥಾಪನೆಗೆ ತಮ್ಮ ವಿರೋಧವಿಲ್ಲ ಎಂದು ಹೇಳಿದ ಅವರು, ಆದರೆ ಖಾಸಗಿ ಆಸ್ತಿಯಲ್ಲಿ ನಿರ್ಮಾಣ ನಡೆಸುವುದು ಸೂಕ್ತವಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ. ರಾಜ್ಯದ ಕರಕುಶಲ ವಸ್ತುಗಳು ಹಾಗೂ ಜಿಐ ಟ್ಯಾಗ್ ಪಡೆದ ಉತ್ಪನ್ನಗಳ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರವು ತನ್ನದೇ ಆದ ಭೂಮಿಯಲ್ಲಿ ಯೂನಿಟಿ ಮಾಲ್ ನಿರ್ಮಿಸಿದರೆ ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ಆದರೆ ತಮ್ಮ ಪೂರ್ವಜರಿಗೆ ಸೇರಿದ್ದ ಖಾಸಗಿ ಜಾಗವನ್ನು ಈ ಯೋಜನೆಗೆ ಬಳಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಕಸಬಾ ಹೋಬಳಿಯ ಸರ್ವೇ ನಂಬರ್…

ಮುಂದೆ ಓದಿ..