ಮಂಡ್ಯ : ಮಳೆಗೆ ಮಂಡ್ಯ ಜನ ಕಂಗೆಟ್ಟು – ಸಚಿವರ ಭೇಟಿ, ಪರಿಹಾರ ಭರವಸೆ ಮಾತ್ರ!
ಮಂಡ್ಯ : ಮಳೆಗೆ ಮಂಡ್ಯ ಜನ ಕಂಗೆಟ್ಟು – ಸಚಿವರ ಭೇಟಿ, ಪರಿಹಾರ ಭರವಸೆ ಮಾತ್ರ! ಸಕ್ಕರೆನಾಡು ಮಂಡ್ಯ ಜಿಲ್ಲೆ ಮತ್ತೆ ವರುಣನ ಕೋಪಕ್ಕೆ ತತ್ತರಿಸಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡು ಜನರು ನರಳುತ್ತಿದ್ದಾರೆ. ರೈತರ ದುಡಿಮೆ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ದೊಡ್ಡ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಲಾವೃತಗೊಂಡ ಮಂಡ್ಯದ ಕೆರೆ ಅಂಗಳದಲ್ಲಿರುವ ಕೆ.ಹೆಚ್.ಬಿ. ಬಡಾವಣೆಗೆ ಸಚಿವ ಎನ್. ಚಲುವರಾಯಸ್ವಾಮಿ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದರು. ಅವರೊಂದಿಗೆ ಶಾಸಕ ಗಣಿಗ ಪಿ. ರವಿಕುಮಾರ್, ಡಿಸಿ, ಎಸ್ಪಿ, ಸಿಇಓ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಸಚಿವರು ಮಾತನಾಡುತ್ತಾ, “ಮಂಡ್ಯದಲ್ಲೂ ಶ್ರೀರಂಗಪಟ್ಟಣ, ದಸರಗುಪ್ಪೆ ಸೇರಿದಂತೆ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಕೆ.ಹೆಚ್.ಬಿ ಕಾಲೋನಿಗೂ ನೀರು ನುಗ್ಗಿದ್ದು, ತಡೆಗೋಡೆ ನಿರ್ಮಿಸಲು 41 ಕೋಟಿ ರೂ. ಟೆಂಡರ್ ಕರೆಯಲಾಗಿದೆ,” ಎಂದರು.…
ಮುಂದೆ ಓದಿ..
