ಸುದ್ದಿ 

ದ್ವಿಚಕ್ರ ವಾಹನ ಕಳವು ಪ್ರಕರಣ – ಗಂಭೀರ ತನಿಖೆ ಆರಂಭ

ಗೌರಿಬಿದನೂರಿನ ತಾಲೂಕ್ ತೌಸಮಾಕಲಹಳ್ಳಿ ಗ್ರಾಮದ ನಿವಾಸಿಯಾದ ನವೀನ್ ಕುಮಾರ T.V ರವರು ಜೈಪುರದ ಬಳಿ ಇರುವ ನಾಟಿ ರುಚಿ ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕನೊಬ್ಬನ ಬೈಕ್ ಕಳವುಗೆ ಒಳಗಾಗಿದೆ. ಆರೋಪಿಯು ತನ್ನ ಹೆಸರಿನಲ್ಲಿ ನೋಂದಾಯಿತ ಬಜಾಜ್ ಪಲ್ಸರ್ ಬೈಕ್ (ನಂ: ಕೆಎ-50-ಎನ್-2659) ಅನ್ನು ದೊಡ್ಡ ಜಾಲದಲ್ಲಿರುವ ಸ್ನೇಹಿತ ಮಂಜುನಾಥ ಡಿ.ಜಿ. ರವರ ಮನೆಯ ಬಳಿ ನಿಲ್ಲಿಸಿದ್ದನು. ದಿನಾಂಕ 15/06/2025 ರಂದು ಬೆಳಿಗ್ಗೆ ಬೈಕ್ ನೋಡಲು ಹೋದಾಗ, ಅದು ನಿಲ್ಲಿಸಿದ್ದ ಸ್ಥಳದಲ್ಲಿ ಕಾಣೆಯಾಗಿದ್ದು, ತಕ್ಷಣ ಸ್ನೇಹಿತನ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ 04:40 ರಿಂದ 04:50ರ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಕಳ್ಳತನ ಮಾಡಿರುವುದು ದೃಢಪಟ್ಟಿದೆ. ನವೀನ್ ಕುಮಾರ್ ಹಾಗೂ ಸ್ನೇಹಿತರು ಅನೇಕ ಕಡೆ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗದ ಕಾರಣ, ತಡವಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಚಿಕ್ಕಜಾಲ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡು…

ಮುಂದೆ ಓದಿ..
ಸುದ್ದಿ 

ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ವ್ಯಕ್ತಿಯ ಆತ್ಮಹತ್ಯೆ? ಕುಟುಂಬಸ್ಥರಿಂದ ಅನುಮಾನ ವ್ಯಕ್ತ.

ಯಲಹಂಕದ ಬಳಿ ಇರುವ ಖಾಸಗಿ ಜಾಗೃತಿ ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಇಗ್ನಿಸಿಯಸ್ ಸಭಾಸ್ಟಿಯನ್ ಪರ್ಟಾಡೋ ಎಂದು ಗುರುತಿಸಲಾಗಿದ್ದು, ಅವರು ಮದ್ಯಪಾನ ವ್ಯಸನದಿಂದ ಪೀಡಿತರಾಗಿದ್ದರಿಂದ ದಿನಾಂಕ 11 ಜೂನ್ 2025 ರಂದು ರಿಹಾಬ್ ಸೆಂಟರ್‌ಗೆ ದಾಖಲಿಸಲಾಗಿತ್ತು. ದಿನಾಂಕ 16 ಜೂನ್ 2025 ರಂದು ಸಂಜೆ 6:30ರ ವೇಳೆಗೆ ರಿಹಾಬ್ ಸಿಬ್ಬಂದಿಯಿಂದ ಮೃತರ ಕುಟುಂಬಕ್ಕೆ ಕರೆ ಮಾಡಿ, ಅವರು ತಮ್ಮ ಬೆಲ್ಟ್ ಬಳಸಿ ನೇಣು ಬಿಗಿದುಕೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು. ತಕ್ಷಣ ಚಿಕಿತ್ಸೆ ನೀಡಿದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಮೃತರ ಸಹೋದರರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಈ ಘಟನೆಯ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. “ಸೆಂಟರ್‌ನಲ್ಲಿ ಮೊಬೈಲ್ ಚಾರ್ಜರ್, ವೈರ್, ಬ್ಲೇಡ್ ಮುಂತಾದ ಆತ್ಮಹತ್ಯೆಗೆ ಬಳಸಬಹುದಾದ ವಸ್ತುಗಳನ್ನು ವಾಪಸ್ ಪಡೆದುಕೊಂಡು, ಬೆಲ್ಟ್…

ಮುಂದೆ ಓದಿ..
ಸುದ್ದಿ 

ಕೋಗಿಲು ಕ್ರಾಸ್ ಬಳಿ ಬಾರ್ ಮೇಲೆ ಪೀಸ್ ಪೊಲೀಸ್ ದಾಳಿ: ಅಕ್ರಮ ಮದ್ಯ ಮಾರಾಟ ಪತ್ತೆ

ನಗರದ ಯಲಹಂಕದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕೋಗಿಲು ಕ್ರಾಸ್ ಬಳಿಯ Siri Spirit Bar ನಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಾರ್ ತೆರೆಯುವ ಮೂಲಕ ಗ್ರಾಹಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಪೊಲೀಸರು ಸ್ಥಳದಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮಂಗಳವಾರ ಮುಂಜಾನೆ 4:00 ರಿಂದ 8:00 ಗಂಟೆಯವರೆಗೆ ಜನಸಾಮಾನ್ಯರು ವಾಕಿಂಗ್ ಮಾಡುವ ಪ್ರದೇಶಗಳಲ್ಲಿ ವಿಶೇಷ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಪಿ.ಸಿ. 19261 ಹಾಗೂ ಸಿ.11190 ರವರು ಗಸ್ತು ಹೊಡುತ್ತಿದ್ದ ವೇಳೆ, ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಕೋಗಿಲು ಕ್ರಾಸ್ ಬಳಿ ಬಾರ್ ಬಾಗಿಲು ತೆರೆಯಲಾಗಿದ್ದು.ಕೆಲ ವ್ಯಕ್ತಿಗಳು ಒಳಗೆ ಮತ್ತು ಹೊರಗೆ ನಿಂತಿರುವುದು ಗಮನಿಸಿದರು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋದಾಗ ಬಾರ್ ಒಳಗೆ ಗ್ರಾಹಕರಿಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದ್ದು, ಇದು ಬಾರ್ ಲೈಸೆನ್ಸ್ ನಿಯಮ ಉಲ್ಲಂಘನೆಯಾಗಿರುವುದಾಗಿ ದೃಢಪಟ್ಟಿದೆ. ಬಾರ್ ಮಾಲೀಕರು ಮತ್ತು ಸಿಬ್ಬಂದಿ…

ಮುಂದೆ ಓದಿ..
ಸುದ್ದಿ 

ಖಾಸಗಿ ಅಂಗಡಿಗೆ ಅಕ್ರಮ ಪ್ರವೇಶ – ಪ್ರಕರಣ ದಾಖಲಾತಿ

ಧಾರವಾಡ ನಗರದ ಹೊಸಯಲ್ಲಾಪುರದ ವನಿತಾ ಸೇವಾ ಸಮಾಜದ ಬಳಿ ಇರುವ ಖಾಸಗಿ ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿದ ಘಟನೆ ಸಂಬಂಧ ಧಾರವಾಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ನೂರುದ್ದೀನ್ ಕಲಾಸಿ (38), ರಸೂಲ್ಪೂರ ಓಣಿ, ಧಾರವಾಡ ನಿವಾಸಿಯವರು ದೂರು ನೀಡಿದ್ದು, ಘಟನೆ ಜುಲೈ 1, 2024ರ ಮಧ್ಯರಾತ್ರಿ 12.01 ರಿಂದ 12.02ರ ನಡುವೆ ನಡೆದಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಕುರಿತು ತಡವಾಗಿ (24-06-2025ರಂದು ರಾತ್ರಿ 11 ಗಂಟೆಗೆ) ಠಾಣೆಗೆ ಮಾಹಿತಿ ನೀಡಲಾಗಿದೆ. ಪ್ರಕರಣ ಸಂಖ್ಯೆ 0105/2025 ರಂತೆ ದಾಖಲೆಯಾಗಿದೆ. ಈ ಕುರಿತು ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 318(4) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿತನು ಸತೀಶ ಚಂದ್ರಶೇಖರ್ ಭಟ್, ವಯಸ್ಸು 34, ಉತ್ತರ ಕನ್ನಡ ಜಿಲ್ಲೆಯ ಸಿರಸಿಯ ಆಗಸಾರ್ ಗ್ರಾಮದ ನಿವಾಸಿ. ಇವರು ಖಾಸಗಿ ಉದ್ಯೋಗದಲ್ಲಿದ್ದು, ಘಟನಾ ಸ್ಥಳದ ಸಮೀಪದ ಅಂಗಡಿಗೆ ಅಕ್ರಮವಾಗಿ…

ಮುಂದೆ ಓದಿ..
ಸುದ್ದಿ 

ಅಪ್ರಾಪ್ತ ಬಾಲಕಿ ರಕ್ಷಿತಾ ವಿವಾಹ ಪ್ರಕರಣ: ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಕ್ರಮ

ಅಪ್ರಾಪ್ತ ವಯಸ್ಸಿನ ಬಾಲಕಿಯಾದ ಕುಮಾರಿ ರಕ್ಷಿತಾ (ವಯಸ್ಸು: 14 ವರ್ಷ), ತಂದೆ: ಈರಣಾ, ಇಂಗೋಳಿ, ವಿಳಾಸ: ಹೊಸಯಲಾಪೂರ, ಬನಶಂಕರಿ ದೇವಸ್ಥಾನದ ಹತ್ತಿರ, ನೇಕಾರ ಓಣಿ, ಧಾರವಾಡ – ಈಕೆಯ ವಿವಾಹ ಮಾಡಿರುವ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದರ್ಶನಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಎಚ್.ಹೆಚ್. ಕೂಕನೂರ ಅವರ ಮೊಬೈಲ್ ಸಂಖ್ಯೆ ಗೆ ವಾಟ್ಸಪ್ ಮೂಲಕ ಒಂದು ಭಾವಚಿತ್ರ ಸಹಿತ ಸಂದೇಶ ಬಂದಿತ್ತು. ಈ ಕುರಿತು ಅವರು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರಕಾಶ ಕೊಡಿವಾಡ ಮತ್ತು ಸಂಬಂಧಪಟ್ಟ ಪಿರ್ಯಾದಿದಾರರಿಗೆ ಮಾಹಿತಿಯನ್ನು ಹಂಚಿದರು. ಇದರ ಪ್ರಕಾರ, ದಿನಾಂಕ: 20-06-2025 ರಂದು ಸಂಬಂಧಪಟ್ಟವರು ರಕ್ಷಿತಾ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶಾಲಾ ದಾಖಲಾತಿ ಆಧಾರವಾಗಿ ಅವಳ ಜನ್ಮ ದಿನಾಂಕ 03-08-2010 ಎಂಬುದಾಗಿ ದೃಢಪಡಿಸಿದರು. ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ರಕ್ಷಿತಾ ಅವರ ಪೋಷಕರ ವಿರುದ್ಧ ಬಾಲ್ಯ ವಿವಾಹ…

ಮುಂದೆ ಓದಿ..
ಸುದ್ದಿ 

ಅನಧಿಕೃತ ಮದ್ಯ ಮಾರಾಟ: ವಿದ್ಯಾನಗರದಲ್ಲಿ ಏಸಿಪಿ ನೇತೃತ್ವದಲ್ಲಿ ದಾಳಿ, ಒಬ್ಬ ವ್ಯಕ್ತಿ ಬಂಧನ

ಹುಬ್ಬಳ್ಳಿ, ಜೂನ್ 26: ಬೆಳಿಗ್ಗೆ 08.15 ಗಂಟೆಯ ಸಮಯದಲ್ಲಿ ಮಾರ್ನಿಂಗ್ ರೌಂಡ ಕರ್ತವ್ಯದಲ್ಲಿದ್ದ ಸಿಇಎನ್ ಕ್ರೈಂ ಠಾಣೆಯ ಎಸಿಪಿ ಶ್ರೀ ಎಸ್.ಕೆ. ಕಟಕಬಾವಿ ರವರಿಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ವಿದ್ಯಾನಗರದ ಅಂಬಿಕಾ ವೈನ್ಯ ಪಕ್ಕದ ಕೋಣೆಯಲ್ಲಿ ನಡೆಸಿದ ದಾಳಿಯಲ್ಲಿ, ವಾಸು ತಂದೆ ವಿಷು ರಾವ್ ಕಲಾಲದೊಡಮನಿ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತನು ಯಾವುದೇ ಪಾಸ್ ಅಥವಾ ಪರಮಿಟ್ ಇಲ್ಲದೇ ತನ್ನ ಸ್ವಂತ ಪಾಯ್ದೆಗೊಸರಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಮಧ್ಯ ಸೇವನೆಗೆ ಅವಕಾಶ ನೀಡುವ ಉದ್ದೇಶದಿಂದ ಮೂರು ರಟ್ಟಿನ ಬಾಕ್ಸ್‌ಗಳಲ್ಲಿ ಟೆಟ್ರಾ ಪ್ಯಾಕ್ ಮದ್ಯವನ್ನು ಇಟ್ಟುಕೊಂಡು ಮಾರಾಟಕ್ಕೆ ಹೊಂದಿಸಿದ್ದನ್ನೂ ಅಧಿಕಾರಿಗಳು ಸ್ಥಳದಲ್ಲಿಯೇ ಪತ್ತೆ ಹಚ್ಚಿದರು. ಈ ಕುರಿತು ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ಆರೋಪಿತನ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15(ಎ), 32 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ…

ಮುಂದೆ ಓದಿ..
ಸುದ್ದಿ 

ಕಾಣೆಯಾದ ಯುವತಿ: ಪೋಷಕರಿಂದ ಮಗಳ ಪತ್ತೆಗಾಗಿ ಮನವಿ

ಹುಬ್ಬಳ್ಳಿಯ ಸೆಟ್ಲ್ ಮೆಂಟ್ 6ನೇ ಕ್ರಾಸ್ ನಿವಾಸಿ ಮಾರುತಿ ನವಲಗುಂದ ಅವರು ದಿನಾಂಕ 21-06-2025 ರಂದು ತಮ್ಮ ಅಪ್ರಾಪ್ತ ವಯಸ್ಸಿನ ಮಗಳಾದ ಕು: ದೀಪಿಕಾ (ವಯಸ್ಸು: 17 ವರ್ಷ 01 ತಿಂಗಳು) ಕಾಣೆಯಾಗಿರುವ ಕುರಿತು ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿರ್ಯಾದಿದಾರರ ಹೇಳಿಕೆಯಂತೆ, ದೀಪಿಕಾ ಬೆಳಿಗ್ಗೆ 10.00 ರಿಂದ 10.30 ಗಂಟೆಯ ನಡುವೆ “ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟು ಹೋಗಿದ್ದಳು. ಆದರೆ ಅಷ್ಟರಿಂದಲೂ ಮನೆಗೆ ಹಿಂದಿರುಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಗುರುತಿನ ಎಲ್ಲಾ ಕಡೆ ಹುಡುಕಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಯುವತಿಯನ್ನು ಶೀಘ್ರ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ದೀಪಿಕಾ ಬಗ್ಗೆ ಯಾವುದೇ ಮಾಹಿತಿ ಪಡೆದಿದ್ದರೆ, ದಯವಿಟ್ಟು ಸಮೀಪದ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಬೇಕೆಂದು…

ಮುಂದೆ ಓದಿ..
ಸುದ್ದಿ 

ಮಗಳು ಕಾಣೆಯಾದ ಕುರಿತು ತಂದೆಯಿಂದ ದೂರು..

ಮಗಳು ಕಾಣೆಯಾದ ಕುರಿತು ತಂದೆಯಿಂದ ದೂರು ಈ ದಿನ 25-06-2025 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ, ಪಿರ್ಯಾದಿದಾರರ ಮಗಳಾದ ಅನುಷಾ, ತಂದೆ ಗೋಕುಲ ಸುತಾರ, ವಯಸ್ಸು 19 ವರ್ಷ, ಇವಳು ಮನೆಯವರಿಗೆ ತಿಳಿಸದೆ ಹೊರಗೆ ಹೋಗಿದ್ದಾಳೆ. ಮೂಲತಃ, ಈಕೆ ತನ್ನ ಗೆಳತಿಯರ ಮನೆಯಲ್ಲಿ ಇದ್ದಿರಬಹುದೆಂದು ಮನೆಯವರು ಮೊದಲಿಗೆ ಶಂಕಿಸಿ ಸುಮ್ಮನಿದ್ದರು. ಆದರೆ ಬಹುಸಮಯವಾದರೂ ಅನುಷಾ ಮನೆಗೆ ವಾಪಸ್ಸು ಬಾರದೇ ಇದ್ದುದರಿಂದ, ಮನೆಯವರು ಮತ್ತು ಸಂಬಂಧಿಕರು ಸೇರಿ ಎಲ್ಲೆಡೆ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿಲ್ಲ. ಅಲ್ಲದೆ, ಸಂಬಂಧಿಕರು ಹಾಗೂ ಗೆಳತಿಯರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ ಯಾರಿಗೂ ಅನುಷಾದ ಬಗ್ಗೆ ಮಾಹಿತಿ ಇಲ್ಲವೆಂದು ತಿಳಿದುಬಂದಿದೆ. ಈ ಹಿನ್ನೆಲೆಪರವಾಗಿ, ತನ್ನ ಮಗಳು ಅನುಷಾ ಕಾಣೆಯಾಗಿರುವ ಬಗ್ಗೆ ಪತ್ತೆಹಚ್ಚಿ ಮನೆಗೆ ವಾಪಸ್ಸು ಕರೆತರಲಿ ಎಂಬ ಮನವಿಯಿಂದ ಪಿರ್ಯಾದಿದಾರರು ಸಂಬಂಧಿತ ಪೊಲೀಸರಿಗೆ ದೂರು ನೀಡಿರುವುದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವರದಿ :…

ಮುಂದೆ ಓದಿ..
ಅಂಕಣ 

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ…….

ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ…….. ಭಾರತದ ವ್ಯಕ್ತಿಯೊಬ್ಬರು ಅಂತರಿಕ್ಷದಲ್ಲಿ ವೈಜ್ಞಾನಿಕ ಸಂಶೋಧನೆಗೆ ಹೊರಟು ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿರುವಾಗ, ಇಡೀ ದೇಶ ಆ ಅದ್ಬುತ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಿರುವಾಗ, ಕರ್ನಾಟಕದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ನಂಜಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪಾತಾಳದೊಳಗೆ ಇಳಿಯುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತಿದೆ….. ಎಲ್ಲಿದೆ ಜಾತಿ, ಎಲ್ಲಿದೆ ಜಾತಿ, ಈಗ ಜಾತಿಯೇ ಇಲ್ಲ, ಹೋಟೆಲ್ ಗಳಲ್ಲಿ ಇಲ್ಲ, ಸಿನಿಮಾ ಮಂದಿರಗಳಲ್ಲಿಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲ, ಪ್ರಯಾಣದಲ್ಲಿ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಇಲ್ಲ, ಎಲ್ಲಿಯೂ ಇಲ್ಲ ಎನ್ನುವವರು, ಭಾರತೀಯರ ಬಹುತೇಕರ ಮನಸ್ಸಿನಲ್ಲಿ ಇದೆ ಎಂಬುದನ್ನು ಮರೆಯುತ್ತಾರೆ. ಅದು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಆಚರಣೆಯಲ್ಲೂ ಇದೆ ಎಂಬುದನ್ನು ಖಂಡಿತ ಸಾಕ್ಷಿ ಸಮೇತ…

ಮುಂದೆ ಓದಿ..
ಅಂಕಣ 

ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ?

” ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? ………… ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ ನಡೆ ನುಡಿಗಳ ಈ ಸಂದರ್ಭದಲ್ಲಿ ಈ ಮಾತುಗಳು ತುಂಬಾ ಕಾಡುತ್ತಿದೆ. ಅದಕ್ಕಾಗಿ…… ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ….. ನೀವು ಯಾವಾಗಲೂ ಸಮಾಜದಲ್ಲಿರುವ ಕೆಟ್ಟ ಅಂಶಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೀರಿ ಮತ್ತು ಬರೆಯುತ್ತೀರಿ. ಏಕೆ?ಇಲ್ಲಿನ ಒಳ್ಳೆಯಅಂಶಗಳು ನಿಮಗೆ ಕಾಣುವುದಿಲ್ಲವೆ? ಸಮಾಜದಲ್ಲಿನ ಶಾಂತಿ, ಸಾಮರಸ್ಯ, ಅಭಿವೃದ್ಧಿ ನಿಮಗೆಗೋಚರಿಸುವುದಿಲ್ಲವೆ ? ಧರ್ಮ, ದೇವರು, ಜಾತಿಗಳಿಂದ ನಮ್ಮ ಮೇಲಾಗಿರುವ ಒಳ್ಳೆಯ ಪರಿಣಾಮಗಳು ನಿಮಗೆ ತಿಳಿಯುವುದಿಲ್ಲವೆ ? ಭಕ್ತಿ, ನಂಬಿಕೆ, ಭಾವನೆಗಳು ವ್ಯೆಚಾರಿಕತೆಗಿಂತ ಬಲಿಷ್ಟವಾಗಿಲ್ಲವೆ ?…… ನೀವು ನೋಡುವ ದೃಷ್ಟಿ ಸರಿ ಇಲ್ಲ ,ನಿಮ್ಮ ಮನಸ್ಸು ಶುಧ್ದವಿಲ್ಲ,ನೀವು ಒಂದು ರೀತಿಯ ಕೊಳಕರು. ಆದ್ದರಿಂದಲೇ…

ಮುಂದೆ ಓದಿ..