ಮಹಿಳೆ ಕಾಣೆ ಪ್ರಕರಣ – ಪತಿಯು ಪೊಲೀಸರಿಗೆ ದೂರು ನೀಡಿದ ಘಟನೆ
ಹುಬ್ಬಳ್ಳಿ, ಜೂನ್ 26: ನಗರದ ಮಂಟೂರ ರಸ್ತೆ, ಭಾರತ ನಗರ, ಹೊಸ ಚರ್ಚ್ ಹತ್ತಿರ ವಾಸವಿರುವ ಯುವತಿಯೊಬ್ಬರು ಅನಿರೀಕ್ಷಿತವಾಗಿ ಮನೆಯಿಂದ ಕಾಣೆಯಾದ ಪ್ರಕರಣ ಇಂದು ಬೆಳಕಿಗೆ ಬಂದಿದೆ.ಈ ಕುರಿತು ಪ್ರಕರಣ ದಾಖಲಿಸಿರುವವರು ಶ್ರೀ ಜಮೀರಅಹಮ್ಮದ ತಂದೆ ದಾದಾಪೀರ ಬೇಪಾರಿ (ವಯಸ್ಸು: 32 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಸ್ಟೀಲ್ ಫರ್ನಿಚರ್ ಕೆಲಸಗಾರ, ನಿವಾಸಿ: ಮಂಟೂರ ರೋಡ್, ಭಾರತ ನಗರ, ಹೊಸನ ಚರ್ಚ್ ಹತ್ತಿರ, ಹುಬ್ಬಳ್ಳಿ. ಇವರು ಪೊಲೀಸ ಠಾಣೆಗೆ ನೀಡಿರುವ ದೂರು ಪ್ರಕಾರ, ಅವರ ಪತ್ನಿಯಾದ ನಜಮಾಬಾನು (ವಯಸ್ಸು: 28 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಮನೆಕೆಲಸದವರು, ದಿನಾಂಕ 19-06-2025 ರಂದು ಮಧ್ಯಾಹ್ನ 1.30 ರಿಂದ ರಾತ್ರಿ 9.00 ಗಂಟೆಯೊಳಗೆ ತಮ್ಮ ನಿವಾಸದಿಂದ ಯಾರಿಗೂ ತಿಳಿಸದೇ ಎಲ್ಲಿಯೋ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಮನೆಗೆ ಹಿಂತಿರುಗದೆ, ಬಹಳ ಕಾಲವಾದರೂ ಪತ್ತೆಯಾಗದ ಕಾರಣ ತಮ್ಮ ಪತ್ನಿಯನ್ನು ಎಲ್ಲ ಕಡೆಗಳಲ್ಲಿ…
ಮುಂದೆ ಓದಿ..
