ದಾವಣಗೆರೆ ಹೊರವಲಯದಲ್ಲಿ ರೊಟ್ವೀಲರ್ ದಾಳಿ: ಮಹಿಳೆಯ ದಾರುಣ ಸಾವು
ದಾವಣಗೆರೆ ಹೊರವಲಯದಲ್ಲಿ ರೊಟ್ವೀಲರ್ ದಾಳಿ: ಮಹಿಳೆಯ ದಾರುಣ ಸಾವು ತಾಲೂಕಿನ ಹೊನ್ನೂರು–ಗೊಲ್ಲರಹಟ್ಟಿ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ನಡೆದ ದಾರುಣ ಘಟನೆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. ಮಾಲೀಕರು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದ ಎರಡು ರೊಟ್ವೀಲರ್ ಜಾತಿಯ ನಾಯಿಗಳ ದಾಳಿಗೆ ಒಳಗಾಗಿ, ಮಲ್ಲಶೆಟ್ಟಿಹಳ್ಳಿಯ ನಿವಾಸಿ 38 ವರ್ಷದ ಅನಿತಾ ಅವರು ದುರ್ಮರಣ ಹೊಂದಿದ್ದಾರೆ. ರಾತ್ರಿ ಸುಮಾರು 11:30ರ ಸುಮಾರಿಗೆ ಮಕ್ಕಳೊಂದಿಗೆ ಜಗಳವಾದ ನಂತರ ತವರು ವಡ್ಡನಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ ಆ ಎರಡು ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ಕಚ್ಚಿದ ಪರಿಣಾಮ, ಅವರು ಭಾರೀ ಗಾಯಗಳೊಂದಿಗೆ ನೆಲಕ್ಕುರುಳಿದ್ದಾರೆ. ಘಟನೆಯ ವಿಷಯ ಗ್ರಾಮಸ್ಥರಿಗೆ ಬೆಳಗಿನ ಜಾವ 3:30ಕ್ಕೆ ತಿಳಿದುಬಂದಿದ್ದು, ತಕ್ಷಣ ಅವರು ಪೊಲೀಸರ ಸಹಾಯದಿಂದ ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ಶಿರಾ ಬಳಿ ಅವರು ಮೃತರಾಗಿದ್ದಾರೆ. ಘಟನೆಯ…
ಮುಂದೆ ಓದಿ..
