ಹಾಸನದ 3 ಮಂದಿ ಮಹಿಳಾ IAS ಅಧಿಕಾರಿಗಳ ಕೆಲಸ ಶ್ಲಾಘಿಸಿದ ಡಿಕೆಶಿ – ಕಾರಣವೇನು?
ಹಾಸನದ 3 ಮಂದಿ ಮಹಿಳಾ IAS ಅಧಿಕಾರಿಗಳ ಕೆಲಸ ಶ್ಲಾಘಿಸಿದ ಡಿಕೆಶಿ – ಕಾರಣವೇನು? “ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಮೂರು ಮಂದಿ ಮಹಿಳಾ IAS ಅಧಿಕಾರಿ–ಎಸ್ಪಿ, ಡಿಸಿ ಮತ್ತು ಮತ್ತೊಬ್ಬರು–ಅದ್ಭುತ ಸಾಮರ್ಥ್ಯ ಹೊಂದಿರುವವರು. ಅವರಿಗೆ ನಾನು ಕೆಲವು ಸೂಚನೆಗಳನ್ನು ನೀಡಿದಾಗ, ಕೇವಲ ಒಂದೇ ತಿಂಗಳಲ್ಲಿ ಅವರು ಎತ್ತಿನಹೊಳೆ ನೀರಿನ ಸಮಸ್ಯೆಯನ್ನು ಬಗೆಹರಿಸಿ, ನೀರು ಮರುಪೂರೈಕೆ ಆಗುವಂತೆ ಮಾಡಿದ್ದಾರೆ. ಮೂರು ವರ್ಷಗಳಿಂದ ತೆರೆಯಲಾಗದೇ ಬಿಟ್ಟಿದ್ದ ಕೇವಲ 10 ಸಾವಿರ ಅಡಿ ಪೈಪ್‌ಲೈನ್ ಸಮಸ್ಯೆಯನ್ನು ಕೂಡ ಅವರು ಪರಿಹರಿಸಿದರು,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. “ಮಹಿಳೆಯರು ಪುರುಷರಿಗಿಂತ ಹೆಚ್ಚು ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂಬುದು ನನ್ನ ನಂಬಿಕೆ. ಅವರಿಗೆ ಸರಿಯಾದ ದಿಕ್ಕುನಿರ್ಧೇಶ ಮತ್ತು ರಕ್ಷಣೆಯನ್ನು ನೀಡಿದರೆ, ಅವರು ಇನ್ನೂ ದೊಡ್ಡ ಸಾಧನೆಗಳನ್ನು ಮಾಡಬಹುದು. ಯಾರೂ ಮಹಿಳೆಯರನ್ನು ಶೋಷಿಸಬಾರದು, ಅಧಿಕಾರಿಗಳೇ ಆದರೂ ಕೂಡ ಅದಕ್ಕೆ ಅವಕಾಶ ಕೊಡಬಾರದು. ನಮ್ಮ ಸರ್ಕಾರ…
ಮುಂದೆ ಓದಿ..
