2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ
2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊಗೆ ಗೌರವ 2025ನೇ ಸಾಲಿನ ಬಹುನಿರೀಕ್ಷಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ ಪ್ರದಾನ ಮಾಡಲಾಗಿದೆ. ಈ ಬಾರಿ ಒಟ್ಟು 338 ಮಂದಿ ಮತ್ತು ಸಂಸ್ಥೆಗಳು ನಾಮನಿರ್ದೇಶಿತರಾಗಿದ್ದರು. ಮಚಾಡೊ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉಳಿಸಲು ಹಾಗೂ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ ಶಾಂತಿಯುತ ಬದಲಾವಣೆಗಾಗಿ ನಡೆಸಿದ ಹೋರಾಟಕ್ಕೆ ಈ ಗೌರವ ದೊರೆತಿದೆ. ಪ್ರಶಸ್ತಿಯ ಮೊತ್ತ ಸುಮಾರು ₹10.38 ಕೋಟಿ ಆಗಿದೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಕುರಿತು ಪ್ರಕಟಣೆ ನೀಡಿದ್ದು, “ಮಚಾಡೊ ಅವರು ಒಮ್ಮೆಗೆ ತೀವ್ರವಾಗಿ ವಿಭಜನೆಯಾಗಿದ್ದ ವಿರೋಧ ಪಕ್ಷಗಳಲ್ಲಿ ಸಾಮರಸ್ಯ ನಿರ್ಮಿಸಿ, ದೇಶದಲ್ಲಿ ಸ್ವತಂತ್ರ ಚುನಾವಣೆ ಮತ್ತು ಪ್ರಾತಿನಿಧಿಕ ಆಡಳಿತದ ಅಗತ್ಯತೆಯನ್ನು ಒತ್ತಿ ಹೇಳಿದರು. ಅವರ ಈ ನಿರಂತರ ಪ್ರಯತ್ನಗಳು ಪ್ರಜಾಪ್ರಭುತ್ವದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿವೆ” ಎಂದು…
ಮುಂದೆ ಓದಿ..
