ಬೆಂಗಳೂರು ನಗರದಲ್ಲಿ ನಕಲಿ ಬೀಡಿ ಪತ್ತೆ: ನ್ಯೂ ಎಸ್.ಕೆ. ಕಂಪನಿ ಪೊಲೀಸ್ ದೂರು
ಬೆಂಗಳೂರು, ಜುಲೈ 20:2025ನಗರದ ಎಂ.ಎಸ್. ಪಾಳ್ಯ ಮುಖ್ಯ ರಸ್ತೆಯ ರಾಜಾರಾಮ್ ಟ್ರೇಡಿಂಗ್ ಅಂಗಡಿಯಲ್ಲಿ ನಕಲಿ ಬೀಡಿ ತಯಾರಿಕೆ ಹಾಗೂ ಮಾರಾಟ ನಡೆಯುತ್ತಿರುವುದನ್ನು ನ್ಯೂ ಎಸ್.ಕೆ. ಬೀಡಿ ಕಂಪನಿಯ ಪ್ರತಿನಿಧಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಂಪನಿಯ ಜಿ.ಪಿ.ಎ ಹೋಲ್ಡರ್ ಆಗಿರುವ ಸೇಲ್ಸ್ ಮ್ಯಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನ್ಯೂ ಎಸ್.ಕೆ. ಬೀಡಿ ಕಂಪನಿಗೆ ಭಾರತ ಸರ್ಕಾರದಿಂದ 2004 ರಲ್ಲಿ ಟ್ರೇಡ್ ಮಾರ್ಕ್ (ನಂ. 66370/2004) ನೊಂದಣಿ ದೊರೆತಿದ್ದು, ಕಂಪನಿ ಕಾನೂನುಬದ್ಧವಾಗಿ ಬೀಡಿ ತಯಾರಿಸುತ್ತಿದೆ. ದೂರುದಾರರು bengaluru ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಪನಿಯ ಮಾರಾಟ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜುಲೈ 17 ರಂದು ಬೆಳಿಗ್ಗೆ ಸುಮಾರು 6.30ಕ್ಕೆ, ದೂರುದಾರರು ಎಂ.ಎಸ್. ಪಾಳ್ಯ ಸರ್ಕಲ್ ಮೂಲಕ ತೆರಳುವ ಸಂದರ್ಭದಲ್ಲಿ ರಾಜಾರಾಮ್ ಅಂಗಡಿಯಲ್ಲಿ ನ್ಯೂ ಎಸ್.ಕೆ. ಬೀಡಿಗೆ ಹೋಲುವ ಬಣ್ಣ, ವಿನ್ಯಾಸ, ಲೇಬಲ್ ಹಾಗೂ ಪ್ಯಾಕಿಂಗ್ ಬಳಸಿ ನಕಲಿ ಬೀಡಿಗಳನ್ನು ಮಾರಾಟ…
ಮುಂದೆ ಓದಿ..
