ಸುದ್ದಿ 

ಕೋಲಾರ: ಜಮೀನು ವಿವಾದ ಹಿನ್ನಲೆ ಯುವಕನ ಮೇಲೆ ಹಲ್ಲೆ

ಕೋಲಾರ: ಜಮೀನು ವಿವಾದ ಹಿನ್ನಲೆ ಯುವಕನ ಮೇಲೆ ಹಲ್ಲೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೈರಪಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ಕಾರ್ತಿಕ್ ಎನ್ನುವ ಯುವಕನ ಮೇಲೆ ಗ್ರಾಮದಲ್ಲಿನ ವೆಂಕಟರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಎಂಬುವವರಿಂದ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್ ಫೋನ್‌ಗಳಲ್ಲಿ ಸೆರೆದಲ್ಲಿದ್ದು, ಹಲ್ಲೆಯ ವೇಳೆ ಗಡಾರಿಯನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯಲ್ಲಿ ಕಾರ್ತಿಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಜಮೀನು ವಿಚಾರದಲ್ಲಿ ನಡೆದ ವಾಗ್ವಾದವು ಕೈಯಂಚಿಗೆ ತಿರುಗಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭಿಸಿದೆ. ಪ್ರಕರಣದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಜಮೀನಿನ ಖಾತೆ ಬದಲಾವಣೆಗೆ ಲಂಚ ಬೇಡಿಕೆ: ಮಂಜುನಾಥ ಲೋಕಾಯುಕ್ತ ಬಲೆಗೆ

ಜಮೀನಿನ ಖಾತೆ ಬದಲಾವಣೆಗೆ ಲಂಚ ಬೇಡಿಕೆ: ಮಂಜುನಾಥ ಲೋಕಾಯುಕ್ತ ಬಲೆಗೆ ತುಮಕೂರು: ಜಮೀನು ಖಾತೆ ಹಸ್ತಾಂತರಕ್ಕೆ ಲಂಚ ಬೇಡಿಕೆ ಇಟ್ಟಿದ್ದ ಕ್ಯಾತ್ಸಂದ್ರ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದ್ದಾರೆ. ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ಗ್ರಾಮದ ಬಿ. ಯೋಗೀಶ್ ಅವರ ತಾತನ ಹೆಸರಿನಲ್ಲಿದ್ದ 38 ಗುಂಟೆ ಜಮೀನನ್ನು ಅವರ ತಂದೆಯ ಹೆಸರಿಗೆ ವರ್ಗಾಯಿಸಲು ಮಂಜುನಾಥ ಬಳಿ ಕಾರ್ಯಾಚರಣೆಗಾಗಿ ಸಂಪರ್ಕಿಸಿದ್ದರು. ಈ ವೇಳೆ ಮಂಜುನಾಥ ಅವರು ಮೊದಲಿಗೆ ₹10 ಸಾವಿರ ಲಂಚವನ್ನು ವಸೂಲಿ ಮಾಡಿಕೊಂಡು, ಇನ್ನೂ ₹10 ಸಾವಿರ ನೀಡಬೇಕೆಂದು ಒತ್ತಡಹಾಕಿದಿದ್ದಾರೆಂದು ತಿಳಿದುಬಂದಿದೆ. ಹೆಚ್ಚುವರಿ ಹಣ ನೀಡಲು ಯೋಗೀಶ್ ಸಮ್ಮತಿಸದೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ಅದರಂತೆ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಊರ್ಡಿಗೆರೆ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿ ಬಳಿ ಲಂಚದ ಹಣ ಸ್ವೀಕರಿಸುವ ಕ್ಷಣದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ…

ಮುಂದೆ ಓದಿ..
ಸುದ್ದಿ 

ಕೆ–ಸೆಟ್ ಪರೀಕ್ಷೆ ವಿವಾದ: ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಘಟನೆ – ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶದ ಜ್ವಾಲೆ!

ಕೆ–ಸೆಟ್ ಪರೀಕ್ಷೆ ವಿವಾದ: ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಘಟನೆ – ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶದ ಜ್ವಾಲೆ! ಬಳ್ಳಾರಿ: ರಾಜ್ಯದಾದ್ಯಂತ ನಿನ್ನೆ ನಡೆದ ಕೆ–ಸೆಟ್ (K-SET) ಪರೀಕ್ಷೆ ವೇಳೆ ನಡೆದ ಘಟನೆಯೊಂದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪರೀಕ್ಷಾ ನಿಯಮಗಳ ಹೆಸರಿನಲ್ಲಿ ಕೆಲವು ಕೇಂದ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಕಿವಿಯೋಲೆ, ಮೂಗುತಿ ಮತ್ತು ಕೈಕಡಗಗಳನ್ನು ಬಿಚ್ಚಿಸಲು ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂಬ ಆರೋಪ ಹೊರಬಿದ್ದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನರ ಕೋಪ ಉಕ್ಕಿ ಹರಿಯುತ್ತಿದೆ. ಕೆಲವು ತಿಂಗಳ ಹಿಂದೆ ನೀಟ್ (NEET) ಪರೀಕ್ಷೆ ಸಮಯದಲ್ಲೂ ವಿದ್ಯಾರ್ಥಿಗೆ ಜನಿವಾರ ತೆಗೆಯಲು ಒತ್ತಾಯಿಸಿದ ಘಟನೆ ನೆನಪಿನಲ್ಲೇ ಇರುವಾಗ, ಇದೀಗ ಕೆ–ಸೆಟ್ ಪರೀಕ್ಷೆಯಲ್ಲಿಯೂ ಇಂತಹ ಅಸಹ್ಯಕರ ಘಟನೆ ನಡೆದಿರುವುದು ಖೇದಕಾರಿಯಾಗಿದೆ. ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಈ ಬಾರಿ ಕೆ–ಸೆಟ್ ಪರೀಕ್ಷೆ ನಡೆದಿತ್ತು. ಸುಮಾರು…

ಮುಂದೆ ಓದಿ..
ಸುದ್ದಿ 

ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಅಗತ್ಯ : ಶಿವಶಂಕರ್‌ಮುಖ್ಯಮಂತ್ರಿ ಬದಲಾದರೆ ದಲಿತರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ

ಖಾಲಿ ಹುದ್ದೆಗಳ ಭರ್ತಿಗೆ ತ್ವರಿತ ಕ್ರಮ ಅಗತ್ಯ : ಶಿವಶಂಕರ್‌ಮುಖ್ಯಮಂತ್ರಿ ಬದಲಾದರೆ ದಲಿತರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಖಾಲಿಯಿರುವ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರಗೊಳಿಸಬೇಕು ಎಂದು ಪ.ಜಾತಿ/ವರ್ಗದ ಸರಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್‌ ಅವರು ಆಗ್ರಹಿಸಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ — ಸರ್ಕಾರದ ವಿವಿಧ ಇಲಾಖೆಯಲ್ಲಿ 7.70 ಲಕ್ಷ ಹುದ್ದೆಗಳಿದ್ದರೂ, ಸುಮಾರು 2.80 ಲಕ್ಷ ಹುದ್ದೆಗಳು ಇನ್ನೂ ಖಾಲಿಯಾಗಿವೆ. ಯುವಕರಿಗೆ ಅವಕಾಶ ದೊರಕಬೇಕಾದ ಈ ಹುದ್ದೆಗಳನ್ನು ತುಂಬದೆ ಇರುವುದು ಬೇಸರ ತಂದಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ದಲಿತರ ಹಿತಕ್ಕಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು. ಒಳಮೀಸಲಾತಿ ವಿಷಯದಲ್ಲಿ ಸರಿಯಾದ ನಿರ್ವಹಣೆ ಅಗತ್ಯವಾಗಿತ್ತು, ಆದರೆ ಅದರಿಂದ ದಲಿತರಲ್ಲಿ ಭಿನ್ನಾಭಿಪ್ರಾಯ…

ಮುಂದೆ ಓದಿ..
ಸುದ್ದಿ 

ಬೀದರ್: ಭಾಲ್ಕಿ ಬಳಿ ಭೀಕರ ರಸ್ತೆ ಅಪಘಾತ — ಮೂವರಿಗೆ ಸ್ಥಳದಲ್ಲೇ ಸಾವು

ಬೀದರ್: ಭಾಲ್ಕಿ ಬಳಿ ಭೀಕರ ರಸ್ತೆ ಅಪಘಾತ — ಮೂವರಿಗೆ ಸ್ಥಳದಲ್ಲೇ ಸಾವು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಇಂದು (ಬುಧವಾರ) ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವ್ಯಕ್ತಿಗಳು ದುರ್ಮರಣ ಹೊಂದಿದ್ದಾರೆ. ಕಾರು ಮತ್ತು ಕೊರಿಯರ್ ವಾಹನದ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದ ಈ ದುರಂತ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಐವರು ಪ್ರಯಾಣಿಸುತ್ತಿದ್ದ ಕಾರು ಹುಮ್ನಾಬಾದ್ ಮಾರ್ಗವಾಗಿ ಬೀದರ್–ಕಲಬುರಗಿ ಹೆದ್ದಾರಿಯತ್ತ ತಿರುಗುತ್ತಿದ್ದಾಗ ಕೊರಿಯರ್ ಸೇವೆಗೆ ಬಳಸುತ್ತಿದ್ದ ಲೋಡ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಕಾರಿನಲ್ಲಿದ್ದ ನವೀನ್‌ (25), ರಾಚಪ್ಪ (45) ಮತ್ತು ನಾಗರಾಜ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರು — ಕಾಶಿನಾಥ ಮತ್ತು ಪ್ರತಾಪ — ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ತೆಲಂಗಾಣದ ಸಂಗಾರೆಡ್ಡಿ…

ಮುಂದೆ ಓದಿ..
ಸುದ್ದಿ 

ವಿಜಯಪುರ: ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಎಂ.ಬಿ. ಪಾಟೀಲ್ ಅವರ ಜೀವದಾಯಿ ನೆರವು

ವಿಜಯಪುರ: ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಎಂ.ಬಿ. ಪಾಟೀಲ್ ಅವರ ಜೀವದಾಯಿ ನೆರವು ವಿಜಯಪುರದಲ್ಲಿ ಆರ್ಥಿಕ ಅಡಚಣೆಯಿಂದ ವೈದ್ಯಕೀಯ ಶಿಕ್ಷಣ ತೊರೆಯುವ ಸ್ಥಿತಿಗೆ ತಲುಪಿದ್ದ ಆರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಆಶಾಕಿರಣವಾಗಿ ಪರಿಣಮಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಮೆರುಗು ತೋರಿಸಿ ಸರ್ಕಾರಿ ಕೋಟಾದಡಿ MBBS ಸೀಟು ಪಡೆದಿದ್ದರೂ, ಶಿಕ್ಷಣ ಶುಲ್ಕ ಪಾವತಿಸಲು ಸಾಧ್ಯವಾಗದೇ ಆತಂಕಗೊಂಡಿದ್ದ ಈ ವಿದ್ಯಾರ್ಥಿಗಳ ವಿಷಯ ತಿಳಿದ ಪಾಟೀಲ್ ಅವರು, ತಮ್ಮ ಕಚೇರಿಯ ಮೂಲಕ ಒಟ್ಟು ₹10,21,380ರ ಸಹಾಯಧನವನ್ನು ಬಿಡುಗಡೆ ಮಾಡಿಸಿದ್ದಾರೆ. ಈ ಮೊತ್ತದಿಂದ ಮೊದಲ ವರ್ಷದ ಕಾಲೇಜು ಫೀಸ್‌, ವಸತಿ ಮತ್ತು ಊಟದ ವೆಚ್ಚಗಳನ್ನು ನಿಭಾಯಿಸಲು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಪಾಟೀಲ್ ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, “ನೀವು ಉತ್ತಮ ಅಂಕಗಳೊಂದಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿ ಸಮಾಜಕ್ಕೆ ಸೇವೆ ಸಲ್ಲಿಸುವ ಆದರ್ಶ ವೈದ್ಯರಾಗಬೇಕು” ಎಂದು ಹಾರೈಸಿದರು. ಈ ಸಂದರ್ಭ ಬಿಎಲ್ಡಿಇ ಸಂಸ್ಥೆಯ ಮುಖ್ಯ…

ಮುಂದೆ ಓದಿ..
ಸುದ್ದಿ 

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರವೇ ಅನುಮತಿ ನೀಡಿದೆ: ಸಚಿವ ಮಂಕಾಳು ವೈದ್ಯ

ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರವೇ ಅನುಮತಿ ನೀಡಿದೆ: ಸಚಿವ ಮಂಕಾಳು ವೈದ್ಯ ಕಾರವಾರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ (Sharavathi Pump Storage Project) ಕುರಿತು ವಿವಾದ ಮುಂದುವರಿಯುತ್ತಿದ್ದರೂ, ಈ ಯೋಜನೆಗೆ ಅನುಮತಿ ನೀಡಿದವರು ಕೇಂದ್ರ ಸರ್ಕಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರವೆಂದು ಸಚಿವ ಮಂಕಾಳು ವೈದ್ಯ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,“ಜನರಿಗೆ ತೊಂದರೆ ಉಂಟಾಗುತ್ತಿದ್ದರೆ ನಾನು ವೈಯಕ್ತಿಕವಾಗಿ ಈ ಯೋಜನೆಗೆ ವಿರೋಧಿಯೇ. ಇದನ್ನು ಬಹಳ ಹಿಂದೆಯೇ ಹೇಳಿದ್ದೇನೆ, ಈಗಲೂ ಅದೇ ನಿಲುವು ಇದೆ,” ಎಂದು ಹೇಳಿದರು. ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಎರಡೂ ಜಿಲ್ಲೆಗಳಲ್ಲಿ ವಿಸ್ತರಿಸಿಕೊಳ್ಳುತ್ತಿರುವುದಾಗಿ ಸಚಿವರು ಹೇಳಿದರು.“ಈ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸದರು, ಶಾಸಕರ ಅಭಿಪ್ರಾಯ ಮುಖ್ಯ. ತಜ್ಞರಿಂದ ಅಧ್ಯಯನ ಮುಂದುವರಿದಿದೆ. ಸರ್ಕಾರದ ವಿವಿಧ ಇಲಾಖೆಗಳ ತಜ್ಞರು…

ಮುಂದೆ ಓದಿ..
ಸುದ್ದಿ 

ಕಬ್ಬಿನ ಎಂಆರ್‌ಪಿ ನಿಗದಿ ಕೇಂದ್ರದ ವ್ಯಾಪ್ತಿ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಕಬ್ಬಿನ ಎಂಆರ್‌ಪಿ ನಿಗದಿ ಕೇಂದ್ರದ ವ್ಯಾಪ್ತಿ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೋಲಾರ: ರಾಜ್ಯದಲ್ಲಿ ಕಬ್ಬು ದರ ಹೆಚ್ಚಿಸಬೇಕೆಂಬ ಬೇಡಿಕೆಯಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಕಬ್ಬಿನ ಕನಿಷ್ಠ ಬೆಲೆ ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಇದು ಕೇಂದ್ರ ಸರ್ಕಾರದ ಅಧೀನ ಎಂದು ಅವರು ಹೇಳಿದರು. ಕೋಲಾರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಕಬ್ಬಿಗೆ ನೀಡಬೇಕಾದ ಎಂಆರ್‌ಪಿ ಅಥವಾ ಕನಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪಾವತಿ ನೀಡಲಾಗುತ್ತಿದೆ ಎನ್ನುವ ಕಾರಣದಿಂದ ಕೃಷಿಕರು ಅದೇ ಮಟ್ಟದ ದರ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದರು. ಈ ಕುರಿತಂತೆ ರೈತರ ಬೇಡಿಕೆಗಳನ್ನು ಕೇಳಿ ಪರಿಹಾರ ಕಂಡುಕೊಳ್ಳಲು ಸತೀಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ತಿಮ್ಮಾಪುರ್, ಮತ್ತು ಎಂ.ಬಿ. ಪಾಟೀಲ್ ಸೇರಿದಂತೆ ಸಂಬಂಧಿತ…

ಮುಂದೆ ಓದಿ..
ಸುದ್ದಿ 

ಕೆಎಂಎಫ್ ಮತ್ತೆ ಜನರನ್ನು ‘ತುಪ್ಪ’ದಲ್ಲಿ ಜಾರಿಸಿದೆ!

ಕೆಎಂಎಫ್ ಮತ್ತೆ ಜನರನ್ನು ‘ತುಪ್ಪ’ದಲ್ಲಿ ಜಾರಿಸಿದೆ! ನಂದಿನಿ ತುಪ್ಪದ ದರಕ್ಕೆ ಗಗನಕ್ಕೇ ಏರಿಕೆ – ಸಾಮಾನ್ಯ ಜನರ ಮೇಲೆ ಮತ್ತೋಮ್ಮೆ ಹೊಡೆತ ರಾಜ್ಯದ ಜನತೆಗೆ ಕೆಎಂಎಫ್ ಮತ್ತೊಂದು ‘ಶಾಕ್’ ಗಿಫ್ಟ್ ನೀಡಿದೆ. ಇತ್ತೀಚೆಗೆ ದರ ಇಳಿಕೆ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದ ನಂದಿನಿ, ಈಗ ಹಠಾತ್ ಆಗಿ ತುಪ್ಪದ ದರಕ್ಕೆ ಗಗನಕ್ಕೇ ಏರಿಕೆ ಮಾಡಿ ಮತ್ತೊಮ್ಮೆ ಹೊಡೆತ ನೀಡಿದೆ.ಸಾಮಾನ್ಯ ಜನರು ಪದ್ದತಿ ಬದಲಿಸಿ ಅಚ್ಚುಕಟ್ಟಾಗಿ ಖರ್ಚು ನಡೆಸುತ್ತಿದ್ದಾ ಕ್ಷಣ… ಮತ್ತೆ ಕೆಎಂಎಫ್ “ಇಲ್ಲ್ರಿ! ನೀವು ಸಂತೋಷವಾಗಬಾರದು” ಎಂದು ದರ ಏರಿಕೆ ಮಾಡಿ ಬಿಡಿದೆ. ಹೆಚ್ಚಿದ ದರ ಎಷ್ಟು? ಒಂದು ಲೀಟರ್ ನಂದಿನಿ ತುಪ್ಪಕ್ಕೆ 610 ರೂ. ಇದ್ದ ದರವನ್ನು ಸೋಲು–ಮಾತಿಲ್ಲದೆ 700 ರೂ. ಗೆ ಏರಿಸಲಾಗಿದೆ.ಇದೂ ಸಾಕ್ಕಿಲ್ಲವೆಂಬಂತೆ, ಕೆಲವು ಪ್ರದೇಶಗಳಲ್ಲಿ 720 ರೂ.ಗೂ ಮಾರಾಟದ ಸಾಧ್ಯತೆ! ಕೆಲವೇ ವಾರಗಳ ಹಿಂದೆ, ಜಿಎಸ್‍ಟಿ ಇಳಿಕೆ ನಂತರ 40…

ಮುಂದೆ ಓದಿ..
ಸುದ್ದಿ 

ಶಿವಮೊಗ್ಗ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಶಿವಮೊಗ್ಗ ನಗರದಲ್ಲಿ ಮತ್ತೊಂದು ದುಃಖಕರ ಘಟನೆ ಬೆಳಕಿಗೆ ಬಂದಿದೆ. ನಗರದ ಕೋಟೆ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಓದುತ್ತಿದ್ದ 21 ವರ್ಷದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿ ಭದ್ರಾವತಿ ತಾಲೂಕು ದೊಡ್ಡೇರಿ ಗಂಗೂರು ಗ್ರಾಮದ ಮನೀಷಾ. ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎಸ್.ಸಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಸುಮಾರು 10:15ರ ವೇಳೆಯಲ್ಲಿ ಹಾಸ್ಟೆಲ್‌ನ ಟೆರೇಸ್‌ಗೆ ತೆರಳಿದ್ದ ಮನೀಷಾ, ಅಲ್ಲಿರುವ ಆ್ಯಂಗ್ಲರ್‌ಗೆ ಬೇಣ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ವಿಶೇಷವಾಗಿ ಆತ್ಮಹತ್ಯೆಯ ಮೊದಲು ಮನೀಷಾ ಬೆಳಗ್ಗೆಯ ತಿಂಡಿ ಸೇವಿಸಿದ್ದಾಳೆ ಎನ್ನುವುದು ಪ್ರಾಥಮಿಕ ಮಾಹಿತಿ. ಘಟನೆಯ ಸುದ್ದಿಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ನಿಖರ ಕಾರಣ…

ಮುಂದೆ ಓದಿ..