ಸುದ್ದಿ 

ಕೇಂದ್ರ ಸರ್ಕಾರದ 12 ಲಕ್ಷ ಇಮೇಲ್ ಖಾತೆಗಳು ಸ್ವದೇಶಿ ವೇದಿಕೆಯೆಡೆ: ಸಾರ್ವಜನಿಕ ಪ್ರತಿಕ್ರಿಯೆ ಮಿಶ್ರಿತ

ಕೇಂದ್ರ ಸರ್ಕಾರದ 12 ಲಕ್ಷ ಇಮೇಲ್ ಖಾತೆಗಳು ಸ್ವದೇಶಿ ವೇದಿಕೆಯೆಡೆ: ಸಾರ್ವಜನಿಕ ಪ್ರತಿಕ್ರಿಯೆ ಮಿಶ್ರಿತ ದೆಹಲಿ: ಕಳೆದ ಒಂದು ವರ್ಷದಲ್ಲಿ, ಪ್ರಧಾನಮಂತ್ರಿಗಳ ಕಚೇರಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ 12 ಲಕ್ಷ ಇಮೇಲ್ ಖಾತೆಗಳು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಆಧಾರಿತ ವ್ಯವಸ್ಥೆಯಿಂದ ಸ್ವದೇಶಿ ಝೋಹೋ ವೇದಿಕೆಯ ಕಡೆಗೆ ಸ್ಥಳಾಂತರಗೊಂಡಿವೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಹಿಂದಿನಂತೆ, ಸರ್ಕಾರದ ಇಮೇಲ್ ಸೇವೆಗಳನ್ನು ಎನ್‌ಐಸಿ ನಿರ್ವಹಿಸುತ್ತಿತ್ತು. ಆದರೆ ಇತ್ತೀಚೆಗೆ, ಇವುಗಳ ಡೇಟಾ ಸಂಗ್ರಹಣೆ ಮತ್ತು ಸಂಸ್ಕರಣೆಯ ಜವಾಬ್ದಾರಿಯನ್ನು ಝೋಹೋ ಕಂಪನಿ ವಹಿಸಿದೆ. ಡೊಮೇನ್ ಹೆಸರುಗಳು (gov.in ಅಥವಾ nic.in) ಬದಲಾಗದೆ ಉಳಿದಿದ್ದರೂ, ಡೇಟಾವನ್ನು ಈಗ ಝೋಹೋ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಸ್ವದೇಶಿ ತಂತ್ರಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ತಮ್ಮ ವೈಯಕ್ತಿಕ ಇಮೇಲ್ ಖಾತೆಗಳನ್ನು ಗೂಗಲ್‌ನಿಂದ ಝೋಹೋಗೆ ಬದಲಿಸಿದ್ದಾರೆ. ಸಾಮಾಜಿಕ ಪ್ರತಿಕ್ರಿಯೆ:ಸೋಶಿಯಲ್…

ಮುಂದೆ ಓದಿ..
ಸುದ್ದಿ 

ಏಕೋಪಾಧ್ಯಾಯ ಶಾಲೆಗಳು: ಶಿಕ್ಷಣದ ಭ್ರಷ್ಟತೆಯ ಸಂಕೇತವೇ?

ಏಕೋಪಾಧ್ಯಾಯ ಶಾಲೆಗಳು: ಶಿಕ್ಷಣದ ಭ್ರಷ್ಟತೆಯ ಸಂಕೇತವೇ? ಕರ್ನಾಟಕಕ್ಕೆ ಐದನೇ ಸ್ಥಾನ… ಭಾರತದಲ್ಲಿ 1,04,125 ಶಾಲೆಗಳು ಮಾತ್ರ ಒಬ್ಬರೇ ಶಿಕ್ಷಕರಿಂದ ನಿರ್ವಹಿಸಲ್ಪಡುತ್ತಿದ್ದು, 33 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪಾಠಮೌಲ್ಯವನ್ನು ತಲುಪಿಸುತ್ತಿವೆ. ಸರ್ಕಾರದ ಪ್ರಚಾರ ಮತ್ತು ಅಂಕಿ-ಅಂಶಗಳ ಮೇಲಿನ ನಂಬಿಕೆ ಬೇಡ—ಈ ಸ್ಥಿತಿ ಸ್ವತಃ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ದುರ್ಬಲತೆಯನ್ನು ತೋರಿಸುತ್ತದೆ. ಒಬ್ಬರೇ ಶಿಕ್ಷಕರಿಂದ ಶಾಲೆ ನಡೆಸುವ ಇಂಥ ಎಕೈಕೋಶದ ವಿಧಾನ, ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನ ನೀಡುವುದರಲ್ಲಿ ವಿಫಲವಾಗಿದೆ. ಸರಾಸರಿ 34 ವಿದ್ಯಾರ್ಥಿಗಳು ಒಂದೇ ಶಿಕ್ಷಕನ ಕೈಯಲ್ಲಿ ಓದುತ್ತಿರುವುದು, ಮಕ್ಕಳ ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ತೊಂದರೆ ಉಂಟುಮಾಡುತ್ತದೆ. ಆಧುನಿಕ ಶಿಕ್ಷಣದಲ್ಲಿ ಸಮಗ್ರ ಮಾರ್ಗದರ್ಶನ ಅಗತ್ಯವಿದ್ದರೆ, ಈ ನಿರೀಕ್ಷೆ ಈ ಶಾಲೆಗಳಲ್ಲಿ ಸಾಧ್ಯವಿಲ್ಲ. ಸ್ಥಿತಿಯ ತೀವ್ರತೆಯನ್ನು ಹೀಗೆ ವಿವರಿಸಬಹುದು: ಅತಿ ಹೆಚ್ಚು ಏಕೋಪಾಧ್ಯಾಯ ಶಾಲೆಗಳು ಆಂಧ್ರಪ್ರದೇಶ (12,912), ಉತ್ತರ ಪ್ರದೇಶ (9,508), ಜಾರ್ಖಂಡ್ (9,172), ಮಹಾರಾಷ್ಟ್ರ (8,152), ಕರ್ನಾಟಕ…

ಮುಂದೆ ಓದಿ..
ಅಂಕಣ 

ತಾಲಿಬಾನ್ ಮಂತ್ರಿಯ ಆದೇಶ…….

ತಾಲಿಬಾನ್ ಮಂತ್ರಿಯ ಆದೇಶ……. ಮಾನ್ಯ ಪ್ರಧಾನಿಗಳೇ ಇದಕ್ಕೆ ನಿಮ್ಮ ಟ್ವೀಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಸಿಗಬಹುದೇ…. ಮೂಲಭೂತವಾದ ಎಂಬ ಶ್ರೇಷ್ಠತೆಯ ವ್ಯಸನ ಎಲ್ಲಿಗೆ ಬಂದು ನಿಂತಿದೆ ಎಂದರೆ, ಭಾರತ ಸರ್ಕಾರ ಮತ್ತು ಬಹುತೇಕ ಜನರಿಂದ” ಭಯೋತ್ಪಾದಕರು ” ಎಂದು ಕರೆಯಲ್ಪಡುತ್ತಿದ್ದ ತಾಲಿಬಾನ್ ಎಂಬ ಸಂಘಟನೆ ಆಫ್ಘಾನಿಸ್ತಾನದಲ್ಲಿ ಆಡಳಿತ ಮಾಡುತ್ತಿರುವಾಗ, ಅದರ ಜೊತೆಗೆ ಸ್ನೇಹ ಬೆಳೆಸಿಕೊಂಡು ಶತ್ರುವಿನ ಶತ್ರು ನಮ್ಮ ಮಿತ್ರ ಎಂಬ ಸಿದ್ಧಾಂತಕ್ಕೆ ಬಲಿಯಾಗಿ, ಆ ತಾಲಿಬಾನಿ ಸರ್ಕಾರದ ಮಂತ್ರಿಯೊಬ್ಬ ನಮ್ಮದೇ ಸರ್ಕಾರದ ಆಹ್ವಾನದ ಮೇರೆಗೆ ಭಾರತಕ್ಕೆ ಬಂದು, ಪತ್ರಿಕಾಗೋಷ್ಠಿ ನಡೆಸುವಾಗ, ಅಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಆದೇಶ ಹೊರಡಿಸಿ ತಾನು ಪತ್ರಿಕಾಗೋಷ್ಠಿ ನಡೆಸುವ ಹಂತಕ್ಕೆ ಬಂದುಬಿಡುತ್ತದೆ….. ಛೇ ಛೇ ಛೇ……. ತೀರಾ ಅನ್ಯಾಯ, ಅಸಹಾಯಕ ಮತ್ತು ನಾಚಿಕೆಗೇಡಿನ ಸಂಗತಿ….. ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ನೋಡಿದ ಯಾವ ನಾಗರಿಕ ಮನುಷ್ಯನು ಸಹ ಅಲ್ಲೊಂದು ಸರ್ಕಾರವಿದೆ ಎಂದು…

ಮುಂದೆ ಓದಿ..
ವಿಶೇಷ ಸುದ್ದಿ 

ಸಿರಾದಲ್ಲಿ ಸ್ಯಾಂಡಲ್ ವುಡ್ ಕಿರುಚಿತ್ರೋತ್ಸವ : ರಾಜ್ಯಮಟ್ಟದ ಸ್ವರ ಶೃಂಗಾರ ಸ್ಪರ್ಧೆ ಆಕರ್ಷಣೆ

ಸಿರಾದಲ್ಲಿ ಸ್ಯಾಂಡಲ್ ವುಡ್ ಕಿರುಚಿತ್ರೋತ್ಸವ : ರಾಜ್ಯಮಟ್ಟದ ಸ್ವರ ಶೃಂಗಾರ ಸ್ಪರ್ಧೆ ಆಕರ್ಷಣೆ ಸಿರಾ (ತುಮಕೂರು ಜಿಲ್ಲೆ): ಕಲಾಕಾರ್ ಈವೆಂಟ್ಸ್ ರಂಜನೆ ಚಿಂತನೆ ವೇದಿಕೆ ಮತ್ತು ಸಿರಾ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಿರಾದಲ್ಲಿ ಮೂರು ದಿನಗಳ “ಸಿರಾ ಸ್ಯಾಂಡಲ್ ವುಡ್ ಕಿರುಚಿತ್ರೋತ್ಸವ” ಹಾಗೂ ರಾಜ್ಯಮಟ್ಟದ ಸ್ವರ ಶೃಂಗಾರ ಕರೋಕೆ ಗೀತ ಗಾಯನ ಸ್ಪರ್ಧೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮವು ನವೆಂಬರ್ 15, 16 ಮತ್ತು 17 ರಂದು ಸಿರಾ ನಗರದಲ್ಲಿರುವ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಕಿರುಚಿತ್ರಗಳು ಹಾಗೂ ಆಲ್ಬಂ ಹಾಡುಗಳ ಪ್ರದರ್ಶನ ಮತ್ತು ಸ್ಪರ್ಧೆಗಳು ನಡೆಯಲಿವೆ. ರಾಜ್ಯಾದ್ಯಂತದ ಪ್ರತಿಭಾವಂತ ಕಲಾವಿದರು, ಗಾಯಕ-ಗಾಯಕಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಿರುಚಿತ್ರ ಕ್ಷೇತ್ರದ ಪೋಷಕರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಗಣ್ಯರು ಹಾಗೂ ಸ್ಥಳೀಯ ಗಣ್ಯಮಾನ್ಯರು ಉಪಸ್ಥಿತರಿದ್ದು…

ಮುಂದೆ ಓದಿ..
ಸುದ್ದಿ 

ಹಾವೇರಿ ಜಿಲ್ಲೆಯಲ್ಲಿ ಲೋಕಾಯುಕ್ತದ ಭಾರಿ ದಾಳಿ – ಇಬ್ಬರು ಅಧಿಕಾರಿಗಳಿಂದ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ

ಹಾವೇರಿ ಜಿಲ್ಲೆಯಲ್ಲಿ ಲೋಕಾಯುಕ್ತದ ಭಾರಿ ದಾಳಿ – ಇಬ್ಬರು ಅಧಿಕಾರಿಗಳಿಂದ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ ಹಾವೇರಿ : ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಅಚ್ಚರಿಯ ದಾಳಿ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ನಡೆದ ಶೋಧದಲ್ಲಿ ಕೋಟಿಗೂ ಮೀರಿದ ಆಕ್ರಮ ಆಸ್ತಿ ಪತ್ತೆಯಾಗಿದೆ. ವಿವರಗಳ ಪ್ರಕಾರ, ಸವಣೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶೀಡೆನೂರು ಅವರ ಮನೆಯಲ್ಲಿ ನಡೆದ ಶೋಧದಲ್ಲಿ ₹1.67 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಮತ್ತು ನಗದು ಪತ್ತೆಯಾಗಿದೆ. ಇದೇ ವೇಳೆ, ರಾಣೇಬೆನ್ನೂರು ತಾಲೂಕಿನ ಕಂದಾಯ ನಿರೀಕ್ಷಕ ಅಶೋಕ್ ಅವರ ಮನೆಯಲ್ಲಿ ನಡೆದ ದಾಳಿಯಲ್ಲಿ ₹1.35 ಕೋಟಿಗೂ ಅಧಿಕ ಮೌಲ್ಯದ ಆಸ್ತಿ, ಬಂಗಾರದ ಆಭರಣಗಳು ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಲೋಕಾಯುಕ್ತ ಅಧಿಕಾರಿಗಳು ರಾಣೇಬೆನ್ನೂರು ಪಟ್ಟಣದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಹಾಗೂ ಒಟ್ಟು ಐದು ಸ್ಥಳಗಳಲ್ಲಿ ಸಮಗ್ರ ಶೋಧ ನಡೆಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆ ಆರ್ಭಟ ಮುಂದುವರಿದಿದ್ದು

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆ ಆರ್ಭಟ ಮುಂದುವರಿದಿದ್ದು, ಕಳಸ ಪಟ್ಟಣದಲ್ಲಿ ಸಿಡಿಲು ಬಡಿದ ಪರಿಣಾಮ ಎಲೆಕ್ಟ್ರೀಷಿಯನ್ ಒಬ್ಬರು ದುರ್ಮರಣ ಹೊಂದಿರುವ ಘಟನೆ ವರದಿಯಾಗಿದೆ. ಮೃತರನ್ನು ಮೊಹಮ್ಮದ್ ಇಸ್ಮಾಯಿಲ್ (42) ಎಂದು ಗುರುತಿಸಲಾಗಿದೆ. ಅವರು ಕಳಸ ಪಟ್ಟಣದ ನಿವಾಸಿಯಾಗಿದ್ದು, ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ವಿದ್ಯುತ್ ವೈರ್ ಕಾಮಗಾರಿ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಸಂಜೆ ವೇಳೆಯಲ್ಲಿ ಮಳೆ ಜೋರಾಗಿ ಸುರಿಯುತ್ತಿದ್ದ ವೇಳೆ ಅಕಸ್ಮಾತ್ ಸಿಡಿಲು ಬಡಿದು ಇಸ್ಮಾಯಿಲ್ ಅವರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯ ನಂತರ ಕಳಸ ಪಟ್ಟಣದ ಜನರು ಬೆಚ್ಚಿಬಿದ್ದಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಮಳೆ ಮತ್ತು…

ಮುಂದೆ ಓದಿ..
ಸುದ್ದಿ 

ಚಿತ್ರದುರ್ಗದಲ್ಲಿ ಲೋಕಾಯುಕ್ತ ಸಿಡಿಲಿನ ದಾಳಿ – ಕೃಷಿ ಇಲಾಖೆಯ ಎಡಿ ಚಂದ್ರಕುಮಾರ್ ಮನೆ ಸೇರಿ 3 ಕಡೆ ಶೋಧ

ಚಿತ್ರದುರ್ಗದಲ್ಲಿ ಲೋಕಾಯುಕ್ತ ಸಿಡಿಲಿನ ದಾಳಿ – ಕೃಷಿ ಇಲಾಖೆಯ ಎಡಿ ಚಂದ್ರಕುಮಾರ್ ಮನೆ ಸೇರಿ 3 ಕಡೆ ಶೋಧ ಬೆಳ್ಳಂ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಸಿಡಿಲಿನ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಕೃಷಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಕುಮಾರ್ ಎಡಿ ಅವರ ವಿರುದ್ಧ ಲೋಕಾಯುಕ್ತ ತನಿಖೆ ಪ್ರಾರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮೂರು ಕಡೆ ಏಕಕಾಲದಲ್ಲಿ ಶೋಧ ನಡೆಸಿದೆ. ದಾಳಿ ನಡೆದ ಸ್ಥಳಗಳು: ತರಳಬಾಳು ನಗರದ ಮನೆ, ಹೊಳಲ್ಕೆರೆ ತಾಲೂಕು ಕಚೇರಿ, ಟಿ.ನುಲೇನೂರು ಗ್ರಾಮದ ನಿವಾಸ. ಲೋಕಾಯುಕ್ತ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಚಂದ್ರಕುಮಾರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಗಳು ಕೇಳಿಬಂದಿದ್ದು, ಅದರ ಆಧಾರದ ಮೇಲೆ ಶೋಧ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಶೋಧ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ವಿವಿಧ ದಾಖಲೆಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಆಸ್ತಿ ದಾಖಲೆಗಳು,…

ಮುಂದೆ ಓದಿ..
ಸುದ್ದಿ 

ಕೋಲಾರ: ಪೋಕ್ಸೋ ಕೇಸ್ ಹೆಸರಿನಲ್ಲಿ ಹಣ ಸುಲಿಗೆ – ಮಕ್ಕಳ ಸಹಾಯವಾಣಿ ಸಂಯೋಜಕ ಬಂಧನ

ಕೋಲಾರ: ಪೋಕ್ಸೋ ಕೇಸ್ ಹೆಸರಿನಲ್ಲಿ ಹಣ ಸುಲಿಗೆ – ಮಕ್ಕಳ ಸಹಾಯವಾಣಿ ಸಂಯೋಜಕ ಬಂಧನ ಕೋಲಾರದಲ್ಲಿ ಮಕ್ಕಳ ಸಹಾಯವಾಣಿ ಸಂಯೋಜಕ ಕಲ್ಯಾಣ್ ಕುಮಾರ್ ಪೋಕ್ಸೋ ಕೇಸ್ ಹೆಸರಿನಲ್ಲಿ ಹಣಕ್ಕೆ ಸುಲಿಗೆ ಹಾಕಿದ ಆರೋಪದಲ್ಲಿ ಬಂಧಿತನಾಗಿ ಆತಂಕ ಉಂಟುಮಾಡಿದೆ. ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದಲ್ಲಿ ತ್ವರಿತ ತನಿಖೆ ನಡೆಯುತ್ತಿದೆ. ಪೊಲೀಸರು ತಿಳಿಸಿದ್ದಾರೆ, 17 ವರ್ಷ 7 ತಿಂಗಳ ಬಾಲಕಿ ಗರ್ಭಿಣಿಯಾಗಿದ್ದು, ಬಾಲ್ಯ ವಿವಾಹ ಸಂಬಂಧ ದೂರು ದಾಖಲಾಗಿತ್ತು. ಬಾಲಕಿ ಕುಟುಂಬಸ್ಥರಿಂದ ಸಹಾಯವಾಣಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ್ ಕುಮಾರ್ ಪೋಕ್ಸೋ ಕೇಸ್ ಹೆಸರಿನಲ್ಲಿ ಮೊತ್ತದ 50,000 ರೂ. ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಆರೋಪಿ ಕಲ್ಯಾಣ್ ಕುಮಾರ್ ಮೊದಲ ಹಂತದಲ್ಲಿ 30,000 ರೂ. ಪಡೆಯಲು ಯಶಸ್ವಿಯಾಗಿ ಒತ್ತಡ ಹೇರಿದ, ಉಳಿದ 20,000 ರೂ. ಪಡೆಯಲು ಬೆದರಿಕೆ ನೀಡಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.…

ಮುಂದೆ ಓದಿ..
ಸುದ್ದಿ 

ಪ್ರಿಯತಮೆಗಾಗಿ ಮನೆಯಲ್ಲಿ ಕಳ್ಳತನ: ಆರೋಪಿ ಬಂಧನ

ಪ್ರಿಯತಮೆಗಾಗಿ ಮನೆಯಲ್ಲಿ ಕಳ್ಳತನ: ಆರೋಪಿ ಬಂಧನ ಹೆಬ್ಬಗೋಡಿ: ಪ್ರಿಯತಮೆಗಾಗಿ ಮನೆಯಲ್ಲಿ ಕಳ್ಳತನ ಮಾಡುವಲ್ಲಿ ಆರೋಪಿ ಶ್ರೇಯಸ್ (22) ಬಂಧಿತನಾಗಿದ್ದಾನೆ ಎಂದು ಹೆಬ್ಬಗೋಡಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದುದಾಗಿ ತನಿಖೆ ದಾಖಲೆಗಳು ಹೇಳಿವೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ಶ್ರೇಯಸ್ ತನ್ನ ಪ್ರಿಯತಮೆಯ ಚಿನ್ನದ ಓಲೆ ಮಾಡಿಸಿಕೊಡುವಂತೆ ಕೇಳಿದ್ದ ಕಾರಣ, ಹರೀಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆಸಿದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಪೊಲೀಸರು ಆರೋಪಿ ಶ್ರೇಯಸ್‌ನಿಂದ 415 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ನಿಮ್ಮೆಲ್ಲರಿಗೂ ಎಚ್ಚರಿಕೆ: ಪ್ರಿಯತೆಯಿಗಾಗಿ ಕೂಡ ಕಾನೂನು ತಲೆತಗಿಸುವಂತೆ ಕಳ್ಳತನ ಮಾಡುವುದು ಗಂಭೀರ ಅಪರಾಧ. ಪೊಲೀಸರು ಪ್ರಕರಣದ ಮುಂದಿನ ವಿಚಾರಣೆ ಮುಂದುವರಿಸುತ್ತಿದ್ದಾರೆ.

ಮುಂದೆ ಓದಿ..
ಅಂಕಣ 

ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು……

ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು…… ಭಾರತದ ವಿದೇಶ ( ಫಾರಿನ್ ) ಗೋವಾ,ಕಡಲ ತೀರದ ಪರ್ಯಾಯ ದ್ವೀಪ ಗೋವಾ,ಮೋಜು, ಮಸ್ತಿ, ಮನರಂಜನೆ, ಕ್ಯಾಸಿನೋಗಳ ಪ್ರದೇಶ ಗೋವಾ,ದೇಶದ ಅತ್ಯಂತ ದುಬಾರಿ ಬೆಲೆಯ ಪ್ರವಾಸಿ ಕೇಂದ್ರ ಗೋವಾ,ಭ್ರಷ್ಟ, ದುಷ್ಟ ದುಡ್ಡಿನ ಪ್ರದರ್ಶನದ ಮಜಾ ನಗರಿ ಗೋವಾ,ಪ್ರವಾಸಿಗರ ರಜಾ ದಿನಗಳ ಸುಂದರ ತಾಣ ಗೋವಾ,ಭಾರತದ ಸುರಕ್ಷತೆಯ, ಸ್ವಚ್ಛ ನಗರಗಳಲ್ಲಿ ಒಂದು ಗೋವಾ, ಪೋರ್ಚುಗೀಸರಿಂದ ಸುಮಾರು 500 ವರ್ಷಗಳಷ್ಟು ದೀರ್ಘಕಾಲದವರೆಗೆ ಆಡಳಿತಕ್ಕೊಳಪಟ್ಟ ಮತ್ತು ಈಗಲೂ ಅದರ ಕುರುಹುಗಳ ಸಂಕೇತವಾಗಿ ಉಳಿದಿರುವ ಹೆರಿಟೇಜ್ ಸಿಟಿ ಗೋವಾ,ಸಮುದ್ರದ ಜಲಚರಗಳ ಖಾದ್ಯದ, ಮದ್ಯಗಳ ಪಾನಪ್ರಿಯರ ಸ್ವರ್ಗ ಗೋವಾ,ಸಿನಿಮಾ, ಸಾಹಿತ್ಯ, ಸಂಗೀತ ಮುಂತಾದ ಲಲಿತಕಲೆಗಳ ಉತ್ಸವದ ನಗರ ಗೋವಾ. ಇಂತಹ ಗೋವಾದಲ್ಲಿ ಅಂತರಾಷ್ಟ್ರೀಯ ದಿವ್ಯಾಂಗ ಚೇತನರ ಮೂರನೇ ಅಂತರಾಷ್ಟ್ರೀಯ ಸಮ್ಮೇಳನ ಇದೇ ಅಕ್ಟೋಬರ್ ಒಂಬತ್ತರಿಂದ ಹನ್ನೆರಡರವರೆಗೆ ( 9th to 12th ) ಎಂಟರ್ಟೈನ್ಮೆಂಟ್ ಸೊಸೈಟಿ…

ಮುಂದೆ ಓದಿ..