ಅಯ್ಯೋ, ಯಾವುದೀ ಪ್ರವಾಹವು,ಯಾವುದೀ ಮೇಘ ಸ್ಫೋಟಗಳು…..
ಅಯ್ಯೋ, ಯಾವುದೀ ಪ್ರವಾಹವು,ಯಾವುದೀ ಮೇಘ ಸ್ಫೋಟಗಳು….. ಇತ್ತೀಚೆಗೆ ಪ್ರತಿನಿತ್ಯ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಈ ರೀತಿಯ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಪ್ರವಾಹ, ಪ್ರಳಯ ಅಥವಾ ಆ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಸಾಧ್ಯವೇ ? ಇಲ್ಲ, ಬಹುಶಃ ವಿಶ್ವದ ಯಾವುದೇ ದೇಶ ಮತ್ತು ಮಾನವ ಕುಲ ಇನ್ನೂವರೆಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ದೇಶಗಳೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಭೂಕಂಪ, ಸುನಾಮಿ, ಚಂಡಮಾರುತ, ಮೇಘ ಸ್ಪೋಟ, ಕಾಳ್ಗಿಚ್ಚು ಎಲ್ಲವೂ ಯಾವುದೇ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅದು ತನ್ನ ಕೆಲಸ ಪೂರೈಸಿದ ನಂತರ ತಾನೇ ಕಡಿಮೆಯಾಗುತ್ತದೆ. ಭಾರತದ ದೇಶದಲ್ಲಿ ಪ್ರಕೃತಿಯ ಜೊತೆ ಮನುಷ್ಯ ಮತ್ತು ಸರ್ಕಾರಗಳಆಸೆಬುರುಕತನ ಸೇರಿ ಇನ್ನೂ ಹೆಚ್ಚುವರಿಯಾಗಿ ಕೆಲವು ಪ್ರಾಕೃತಿಕ ವಿಕೋಪಗಳು ಸೇರುತ್ತವೆ. ಅದು ರಣಭೀಕರ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೆಲವು ಸ್ಥಳಗಳು ಭೂಪಟದಿಂದಲೇ ನಾಶವಾಗಿಬಿಡುತ್ತದೆ. ಜನರ ಬದುಕು ಗಂಜಿ…
ಮುಂದೆ ಓದಿ..
