ಅಂಕಣ 

ಕನ್ನಡ ತಾಯಿ ಭಾಷೆಯ ಉಳಿವಿಗಾಗಿ……

ಕನ್ನಡ ತಾಯಿ ಭಾಷೆಯ ಉಳಿವಿಗಾಗಿ…… ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ……. ೧) ಇನ್ನು ಮುಂದೆ ಕನ್ನಡದ ಯಾವುದೇ ಪೋಷಕರಿಗೆ ಹುಟ್ಟುವ ಮಕ್ಕಳಿಗೆ ಪರಂಪರಾನುಗತವಾಗಿ ಬೆಳೆದು ಬಂದ ಕನ್ನಡ ನೆಲಕ್ಕೆ ಹೆಚ್ಚು ಹತ್ತಿರದ ಮುದ್ದಾದ” ಹೆಸರುಗಳನ್ನು ” ಆಯ್ಕೆ ಮಾಡಿಕೊಂಡು ನಾಮಕರಣ ಮಾಡುವುದು. ಅದರಿಂದಾಗಿ ಕನ್ನಡದ ಘಮಲು ಸದಾ ಪಸರಿಸುತ್ತಿರುತ್ತದೆ. ೨) ಒಂದು ವೇಳೆ ಅನಿವಾರ್ಯವಾಗಿ ಮತ್ತು ಅವಶ್ಯಕತೆಗಾಗಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು ಸಹ ಮನೆಯಲ್ಲಿ ಎಲ್ಲರೂ ಸಂಪೂರ್ಣ ಅಚ್ಚ ಕನ್ನಡದಲ್ಲಿ ಮಾತನಾಡುವುದು. ಏಕೆಂದರೆ ಈಗ ಭಾಷಾ ವಾತಾವರಣ ಬದಲಾಗಿದೆ. ಹೇಗಿದ್ದರು ಆಂಗ್ಲ ಭಾಷೆಯನ್ನು ಎಲ್ಲಾ ಮಕ್ಕಳು ಸಹಜವಾಗಿ ಕಲಿಯುತ್ತಾರೆ. ನಾವು ಕನ್ನಡ ಕಲಿಸಲು…

ಮುಂದೆ ಓದಿ..
ಸುದ್ದಿ 

ಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ಚಿಕ್ಕಮಗಳೂರು: ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರು ಅರೆಸ್ಟ್ – 32 ಲಕ್ಷ ರೂ. ಮೌಲ್ಯದ ವಸ್ತುಗಳ ವಶ ನಗರದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತರಾಜ್ಯ ಚಡ್ಡಿ ಗ್ಯಾಂಗ್ ಕಳ್ಳರಿಬ್ಬರನ್ನು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹32 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಪೊಲೀಸ್ ಲೇಔಟ್ ಪ್ರದೇಶದ ನಿವಾಸಿ ಚೈತ್ರಾ ಅವರ ಮನೆಯಲ್ಲಿ ಜೂನ್ 18ರಿಂದ 20ರ ಅವಧಿಯಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಖಾಲಿಯಾಗಿದ್ದ ವೇಳೆ ಬೀಗ ಮುರಿದು ಒಳನುಗ್ಗಿ ಕಳ್ಳರು 495 ಗ್ರಾಂ ಚಿನ್ನದಾಭರಣ, 1 ಕೆಜಿ 10 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ₹75,000 ನಗದು ಕದ್ದೊಯ್ದಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸಿ, ಚಡ್ಡಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಬಂಧಿಸಿದರು. ಬಂಧಿತರಿಂದ 170 ಗ್ರಾಂ ಚಿನ್ನದ ಗಟ್ಟಿ,…

ಮುಂದೆ ಓದಿ..
ಸುದ್ದಿ 

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಅತ್ತಿಗೆ ಮೇಲೆ ಮೈದುನ ದಾಳಿ — ಜೀವ ಅಪಾಯದಿಂದ ಪಾರಾದ ಮಹಿಳೆ

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಅತ್ತಿಗೆ ಮೇಲೆ ಮೈದುನ ದಾಳಿ — ಜೀವ ಅಪಾಯದಿಂದ ಪಾರಾದ ಮಹಿಳೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಒಂದು ಕುಟುಂಬದೊಳಗಿನ ಭೀಕರ ಹಲ್ಲೆಯಿಂದ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, 17 ಗುಂಟೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಅಣ್ಣ ಇಲ್ಲದ ಸಮಯವನ್ನು ಪ್ರಯೋಜನ ಮಾಡಿಕೊಂಡು ಮೈದುನ ಮುನಿಕೃಷ್ಣ ಹಾಗೂ ಮಂಜಮ್ಮ ಎಂಬುವರು ಅತ್ತಿಗೆ ಲಕ್ಷ್ಮಿದೇವಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೈದುನನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ನಡು ರಸ್ತೆಯಲ್ಲೇ ದಾಳಿ ನಡೆಸಿದ್ದು, ಬಳಿಕ ಬಾವಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಆಘಾತಕಾರಿ ಆರೋಪ ಹೊರಹೊಮ್ಮಿದೆ. ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯಲ್ಪಟ್ಟಿದೆ, ಇದರಿಂದ ಪ್ರಕರಣ ಇನ್ನಷ್ಟು ಗಂಭೀರ ತಿರುವು ಪಡೆದಿದೆ. ಗಾಯಗೊಂಡ ಲಕ್ಷ್ಮಿದೇವಮ್ಮ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.…

ಮುಂದೆ ಓದಿ..
ಸುದ್ದಿ 

ಜನ್ಮದಿನದ ಸಂಭ್ರಮ ಕಣ್ಣೀರಿಗೆ ತೇಲಿದ ಮನೆಯಲ್ಲಿ – ಬಿಎಂಟಿಸಿ ಬಸ್ ಡಿಕ್ಕಿ ದುರಂತದಲ್ಲಿ ಮಹಿಳೆ ಸಾವು

ಜನ್ಮದಿನದ ಸಂಭ್ರಮ ಕಣ್ಣೀರಿಗೆ ತೇಲಿದ ಮನೆಯಲ್ಲಿ – ಬಿಎಂಟಿಸಿ ಬಸ್ ಡಿಕ್ಕಿ ದುರಂತದಲ್ಲಿ ಮಹಿಳೆ ಸಾವು ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ನಿನ್ನೆ ಸಂಜೆ ಸಂಭವಿಸಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸ್ಥಳೀಯರಲ್ಲಿ ಶೋಕ ತಂದಿದೆ. ದುರಂತದಲ್ಲಿ ಮೃತಪಟ್ಟವರು ಮಾಲಾ (58) ಎಂದು ಗುರುತಿಸಲಾಗಿದೆ. ಮಾಲಾ ಇಂದು ತಮ್ಮ 58ನೇ ಜನ್ಮದಿನವನ್ನು ಆಚರಿಸಬೇಕಾಗಿತ್ತು. ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅವರು ನಿನ್ನೆ ಮಧ್ಯಾಹ್ನ ಬ್ಯೂಟಿ ಪಾರ್ಲರ್‌ಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪೊಲೀಸ್ ಮೂಲಗಳ ಪ್ರಕಾರ, ವಿಜಯನಗರದ ಆರ್‌ಪಿಸಿ ಲೇಔಟ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಿಯಂತ್ರಣ ತಪ್ಪಿ ಮಾಲಾ ಅವರನ್ನು ಡಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದರು. ಹಂಪಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾಸವಿದ್ದ ಮಾಲಾ ಸ್ಥಳೀಯರಲ್ಲಿ ಎಲ್ಲರಿಗೂ ಪರಿಚಿತರು. “ಮಕ್ಕಳು ಅಥವಾ ಹಿರಿಯರು ರಸ್ತೆ…

ಮುಂದೆ ಓದಿ..
ಸುದ್ದಿ 

ಮಹಿಳೆಯ ಕೊಲೆ, ಆಟೋದಲ್ಲಿ ಎಸ್ಕೇಪ್: ಪ್ರಿಯಕರನಿಗೆ ಪೊಲೀಸರ ಶೋಧ

ಮಹಿಳೆಯ ಕೊಲೆ, ಆಟೋದಲ್ಲಿ ಎಸ್ಕೇಪ್: ಪ್ರಿಯಕರನಿಗೆ ಪೊಲೀಸರ ಶೋಧ ತಿಲಕನ್ ನಗರ: ಸ್ಥಳೀಯರು ಪ್ರಭಾತ ಸಮಯದಲ್ಲಿ ಭಯಾನಕ ದೃಶ್ಯಕ್ಕೆ ಸಾಕ್ಷಿಯಾಗಿದ್ದಾರೆ. 35 ವರ್ಷದ ಸಲ್ಮಾ, ಮದುವೆಯಾಗಿ ನಾಲ್ವರು ಮಕ್ಕಳ ತಾಯಿ, ಗಂಡನ ಮೃತ್ಯುವಿನ ನಂತರ ಸುಬ್ಬುಮಣಿ ಎಂಬ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದಳು. ಆರೋಪಿಯು ತಿಲಕನ್ ನಗರ ಪ್ರದೇಶದ ನಿವಾಸಿ. ನಿನ್ನೆ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆಯಿತು. ಆ ಸಂದರ್ಭದಲ್ಲಿ ಆರೋಪಿ ತಮ್ಮ ಕೋಪದೊಂದಿಗೆ ಸಲ್ಮಾ ಅವರನ್ನು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಹತ್ಯೆಯ ನಂತರ, ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಆಟೋ ವಾಹನದಲ್ಲಿ ಎಸ್ಕೇಪ್ ಆಗಿದ್ದಾನೆ. ಇಂದಿನ ಸಂಜೆ ಸುಮಾರು ನಾಲ್ಕು ಗಂಟೆಗೆ ಸ್ಥಳೀಯರು ಶಂಕಿತ ಆಟೋವನ್ನು ಗಮನಿಸಿ ಪೊಲೀಸರುಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ

ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ ಮೈಸೂರು: ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕನ್ನಡ ಚಲನಚಿತ್ರ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ ಈ ದಿನ ಚಾಮುಂಡಿ ಬೆಟ್ಟದ ಪ್ರಸಿದ್ಧ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ನಿರ್ದೇಶಕ ಹಾಗೂ ನಾಯಕನಟ M.J. ಜಯರಾಜ್ ಈ ಸಂದರ್ಭ ಹಾಜರಾಗಿ ಪೂಜೆಯನ್ನು ಮುನ್ನಡೆಸಿದರು. ಅವರು “ದೈವ ಚಿತ್ರದಲ್ಲಿ ನಟಿಸಿ, ಆಕ್ಷನ್ ಕಟ್ ಹೇಳಿರುವ” ಅನುಭವವನ್ನು ಪಡೆದುಕೊಂಡ ನಂತರ, ಹೊಸ ಸಿನಿಮಾದ ಸದ್ದಿಗೆ ಫಿದಾ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಚಿತ್ರದ ನಿರ್ಮಾಪಕರು ಸಂಗಮ್ಮ ರಾಮಣ್ಣ ಮತ್ತು ಮೇಘಲಮನಿಯವರು, ನಿರ್ದೇಶನ ಜೊತೆಗೆ ನಾಯಕನಟನಾಗಿ ಅಭಿನಯಿಸುತ್ತಿರುವ ಜಯರಾಜ್ ಅವರನ್ನು ಬೆಂಬಲಿಸಿದ್ದಾರೆ. ಚಿತ್ರ ಕಥೆಯನ್ನು VCN ಮಂಜುರಾಜ್ ಸೂರ್ಯ ರಚಿಸಿದ್ದು, ಸಿದ್ಧಾರ್ಥ್ H.R. ಛಾಯಾಗ್ರಹಣ ಮತ್ತು ವಿಜಯ್ ಮಂಜಯ್ಯ ಸಂಗೀತ ನಿರ್ದೇಶನ ನಡೆಸುತ್ತಿದ್ದಾರೆ. ಪೂಜೆಯಲ್ಲಿ ನಿರ್ದೇಶಕ M.J. ಜಯರಾಜ್, ಕಥೆಗಾರ VCN ಮಂಜುರಾಜ್, ಛಾಯಾಗ್ರಾಹಕ…

ಮುಂದೆ ಓದಿ..
ಸುದ್ದಿ 

ಚಾಮರಾಜನಗರ: ಟಿಪ್ಪರ್ ಡಿಕ್ಕಿ – ಕಾರಿನಲ್ಲಿ ಸವಾರ ಕೇರಳ ದಂಪತಿ ಸಾವು

ಚಾಮರಾಜನಗರ: ಟಿಪ್ಪರ್ ಡಿಕ್ಕಿ – ಕಾರಿನಲ್ಲಿ ಸವಾರ ಕೇರಳ ದಂಪತಿ ಸಾವು ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಮಾದಾಪಟ್ಟಣದ ಬಳಿ ದಾರ್ಘಟನೆಯಾಗಿದೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಕಾರಿನ ಮೇಲೆ ಕರಿಕಲ್ಲು ವೆಸ್ಟ್ ಬಳಿ ತುಂಬಿದ್ಧ ಟಿಪ್ಪರ್ ಡಿಕ್ಕಿ ಹೊಡೆದು, ಕಾರು ಜಮೀನಿಗೆ ನುಗ್ಗಿದೆ. ಘಟನೆಯ ಪರಿಣಾಮವಾಗಿ ಕಾರಿನಲ್ಲಿದ್ದ ಕೇರಳ ಮೂಲದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ತಂಡ ತಲುಪಿದ್ದು, ದಾರ್ಘಟನೆಯ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಟಿಪ್ಪರ್ ನಿರ್ವಹಣೆಯಲ್ಲಿ ಲೋಪವಿದ್ದುದರಿಂದ ಈ ದುರಂತ ಸಂಭವಿಸಿದೆ ಎಂದು ಕಾಣುತ್ತಿದೆ. ಸ್ಥಳದಲ್ಲಿ ಪೊಲೀಸರ ಸಹಾಯವಾಣಿ ಮತ್ತು ಪೊಲೀಸರು ದುರಂತ ನಿರ್ವಹಣೆ ಕಾರ್ಯಾಚರಣೆ ನಡೆಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬ್ಯಾಂಕಾಕ್‌ನಿಂದ ಕಾನೂನು ವಿರೋಧಿ ಪ್ರಾಣಿಸಂಗ್ರಹ – ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ

ಬ್ಯಾಂಕಾಕ್‌ನಿಂದ ಕಾನೂನು ವಿರೋಧಿ ಪ್ರಾಣಿಸಂಗ್ರಹ – ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ ಬೆಂಗಳೂರು: ಬ್ಯಾಂಕಾಕ್‌ನಿಂದ ಕಾನೂನು ಉಲ್ಲಂಘಿಸಿ ಪ್ರಾಣಿಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 27 ವರ್ಷದ ಪ್ರಯಾಣಿಕನ ಬ್ಯಾಗ್ ಪರಿಶೀಲನೆಯಾಗಿದ್ದಾಗ, ಲಗೇಜ್‌ನಲ್ಲಿ ಅಕ್ರಮ ಪ್ರಾಣಿ ಸಾಗಣೆ ಪತ್ತೆಯಾಗಿತ್ತು. ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಲಗೇಜ್ ಜೊತೆಗೆ ವಶಪಡಿಸಿಕೊಂಡು, ಪ್ರಕರಣ ದಾಖಲಾಗಿದ್ದು ಮುಂದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಮುಂದೆ ಓದಿ..
ಸುದ್ದಿ 

ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………

ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ……… ಇದು ನಿಜವೇ, ಆರೋಪ ಮಾತ್ರವೇ,ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ….. ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರೇಷ್ಠ ಎಂಬ ಮನೋಭಾವ ಬೆಳೆಸಿ, ಜೊತೆಗೆ ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆ ಮೂಡಿಸಿ ಅದರ ನಾಶಕ್ಕೆ ಪ್ರಯತ್ನಿಸುತ್ತಾ ಇರುವ ಧಾರ್ಮಿಕ ಮುಖಂಡರುಗಳು ಹೆಚ್ಚಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟ. ಭಾರತದಲ್ಲಿ ರಾಜಕೀಯ ಕಾರಣದಿಂದಾಗಿ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿದೆ. ಲವ್ ಜಿಹಾದ್ ಎಂಬುದು ನನಗೆ ಅರ್ಥವಾಗಿರುವುದೇನೆಂದರೆ ,ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಅಥವಾ ಪ್ರೀತಿಯ ನಾಟಕವಾಡಿ ಅವರನ್ನು ಮದುವೆಯಾಗಿ, ಅವರನ್ನು ಮತ್ತು ಅವರ ಮಕ್ಕಳನ್ನು ಇಸ್ಲಾಮೀಕರಣ ಮಾಡಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ…

ಮುಂದೆ ಓದಿ..
ಸುದ್ದಿ 

ನೆಲಮಂಗಲ: ಪಂಚಾಯತ್ ಸದಸ್ಯನ ಮೇಲೆ ಗುಂಡಿನ ದಾಳಿ – ಇಬ್ಬರು ಅಪರಿಚಿತರ ಕೃತ್ಯ!

ನೆಲಮಂಗಲ: ಪಂಚಾಯತ್ ಸದಸ್ಯನ ಮೇಲೆ ಗುಂಡಿನ ದಾಳಿ – ಇಬ್ಬರು ಅಪರಿಚಿತರ ಕೃತ್ಯ! ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಭೀಕರ ಗುಂಡಿನ ದಾಳಿ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸಲೀಂ ಅವರ ಮೇಲೆ ಇಬ್ಬರು ಅಪರಿಚಿತರು ಗುಂಡು ಹಾರಿಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಸಲೀಂ ತಮ್ಮ ಮನೆಯ ಮುಂದೆ ಕೆಲವು ಜನರ ಜೊತೆ ಮಾತನಾಡುತ್ತಿದ್ದ ವೇಳೆ, ಅಚ್ಚರಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳಕ್ಕೆ ಬಂದು ಗುಂಡು ಹಾರಿಸಿ ಪರಾರಿಯಾದರು. ಗುಂಡು ಸಲೀಂ ಅವರ ಕೈಗೆ ತಗುಲಿ ಅವರು ಗಾಯಗೊಂಡಿದ್ದಾರೆ. ಗಾಯಾಳು ಸಲೀಂ ಅವರನ್ನು ತಕ್ಷಣವೇ ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಆಸ್ಪತ್ರೆ ಬಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನತೆಯಾಗಿದೆ. ಘಟನೆಯ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ…

ಮುಂದೆ ಓದಿ..