ಯಲಹಂಕ ರಾಜಾನಕುಂಟೆ ಸರ್ಕಲ್‌ನಲ್ಲಿ ಲಾರಿ-ಕಾರು ಡಿಕ್ಕಿ
ಯಲಹಂಕ ರಾಜಾನಕುಂಟೆ ಸರ್ಕಲ್‌ನಲ್ಲಿ ಲಾರಿ-ಕಾರು ಡಿಕ್ಕಿ ಬೆಂಗಳೂರು, ಆಗಸ್ಟ್ 30 :2025ಯಲಹಂಕ–ದೊಡ್ಡಬಳ್ಳಾಪುರ ರಸ್ತೆಯ ರಾಜಾನಕುಂಟೆ ಸರ್ಕಲ್ ಬಳಿ ಗುರುವಾರ ಸಂಜೆ ಅಪಘಾತ ಸಂಭವಿಸಿದೆ. ಸಂಜೆ ಸುಮಾರು 7 ಗಂಟೆ ವೇಳೆಗೆ ಕಾರು ಚಾಲನೆ ಮಾಡುತ್ತಿದ್ದ ರೀತ್ಯಾ ಅವರ ವಾಹನಕ್ಕೆ, ಯಲಹಂಕ ದಿಕ್ಕಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ KA38A5858 ಲಾರಿ ಬಲಭಾಗದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಹಾನಿಗೊಳಗಾದರೂ, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು, ಲಾರಿ ಚಾಲಕನ ವಿರುದ್ಧ ಕೇಸ್ ನಂ. 244/2025 ಅಡಿಯಲ್ಲಿ BNS 281, 500 ಕಲಂ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜನಕುಂಟೆ ಪೊಲೀಸರು ವಾಹನ ಸವಾರರು ವೇಗ ನಿಯಂತ್ರಣ ಕಾಪಾಡಿಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಂದೆ ಓದಿ..
