ಚಿನ್ನಾಭರಣ ಕಳ್ಳತನ: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಆಭರಣ ಮಿಸ್ಸಿಂಗ್
ಬೆಂಗಳೂರು ಗ್ರಾಮಾಂತರ ಜುಲೈ 16:2025 ವಿಜಯನಗರ ಗ್ರಾಮದಲ್ಲಿ ದಿನಾಂಕ 13-07-2025 ರಂದು ದಿನದ ಬೆಳಗ್ಗೆ ಸಂಭವಿಸಿದ ಕಳ್ಳತನದ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆ ಮಾಲೀಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆ ಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ರಾಜಮ್ಮ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ಬೆಳಗ್ಗೆ 07:15 ಕ್ಕೆ ಕೆಲಸಕ್ಕೆ ಹೋಗಿದ್ದಾಗ ಮನೆಗೆ ತಾಯಿ ಅಕ್ಕಯಮ್ಮ, ಅಜ್ಜಿ ಮುನಿಯಮ್ಮ ಇದ್ದರು. ಮಧ್ಯಾಹ್ನ 02:20ರ ವೇಳೆಗೆ ಮನೆಗಿನ ಎಲ್ಲರೂ ಊರಿನ ಸಂಬಂಧಿಕರ ಜನ್ಮದಿನ ಪಾರ್ಟಿಗೆ ಹೋಗಿದ್ದರು. ಸಂಜೆ 04:00ಕ್ಕೆ ಮನೆಗೆ ವಾಪಸು ಬಂದಾಗ, ಬಾಗಿಲಿನ ಚಿಲಕ ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ಮನೆ ಒಳಗೆ ಪರಿಶೀಲನೆ ನಡೆಸಿದಾಗ, ಬೀರುವಿನ ಲಾಕರ್ ಮುರಿಯಲಾಗಿದ್ದು, ಒಳಗೆ ಇಟ್ಟಿದ್ದ ಬಹುಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದವು. ಕಳ್ಳರು ಕದ್ದ್ದುಕೊಂಡು ಹೋದ ವಸ್ತುಗಳ ವಿವರ ಹೀಗಿದೆ: 11…
ಮುಂದೆ ಓದಿ..
