ಜಯಮಹಲ್ ಹೋಟೆಲ್ ಬಳಿ ಬೈಕ್ ಡಿಕ್ಕಿ – ದಂಪತಿಗೆ ಗಾಯ, ಗಂಡ ಆಸ್ಪತ್ರೆಗೆ ದಾಖಲು
ನಗರದ ಜೆಸಿ ನಗರ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಗಂಡನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕವಾಗಿ ವಾಹನ ಚಲಾಯಿಸಿದ್ದ ಬೈಕ್ ಸವಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಾಹಿತಿಯ ಪ್ರಕಾರ, ಅಜಯ್ (36) ಎಂಬುವರುತಮ್ಮ ಪತ್ನಿಯನ್ನು ಹಿಂಬದಿ ಸವಾರನಾಗಿ ಕೂರಿಸಿಕೊಂಡು, ತಮ್ಮ ದ್ವಿಚಕ್ರ ವಾಹನ (ನೋಂದಣಿ ಸಂಖ್ಯೆ KA-04-HA-1827) ಮೇಲೆ ಜೆ ಸಿ ನಗರ ಪೊಲೀಸ್ ಠಾಣೆಯ ಕಡೆಯಿಂದ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಕಡೆಗೆ ಸಾಗುತ್ತಿದ್ದರು. ಬೆಳಿಗ್ಗೆ 10:00 ಗಂಟೆ ವೇಳೆಗೆ ಅವರು ಜಯಮಹಲ್ ಪ್ಯಾಲೇಸ್ ಹೋಟೆಲ್ ಹತ್ತಿರ, 18 ಸ್ಪೋಟ್ಸ್ ಕಾಂಪ್ಲೆಕ್ಸ್ ಹಾಗೂ ಚಾಮುಂಡಿ ಹೋಟೆಲ್ ಕಾಂಪೌಂಡ್ ಬಳಿಗೆ ಬಂದಾಗ, ಹಿಂದಿನಿಂದ ಬಂದ ಬೈಕ್ (ನೋಂದಣಿ ಸಂಖ್ಯೆ KA-04-KX-0260) ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಈ ಡಿಕ್ಕಿಯ ಪರಿಣಾಮವಾಗಿ…
ಮುಂದೆ ಓದಿ..
