ವಿದ್ಯಾರಣ್ಯಪುರದಲ್ಲಿ 19 ವರ್ಷದ ಯುವತಿ ನಾಪತ್ತೆ – ತಾಯಿ ಠಾಣೆಗೆ ದೂರು
ಬೆಂಗಳೂರು, ಜುಲೈ 15:2025 ರಾಜಾಜಿನಗರದ ESI ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದ ತಾಯಿ ಮತ್ತು ಮಗ ಮನೆಗೆ ಮರಳಿದಾಗ 19 ವರ್ಷದ ಯುವತಿ ಕಾಣೆಯಾಗಿರುವ ಘಟನೆ ವಿದ್ಯಾರಣ್ಯಪುರದಲ್ಲಿದೆ. ಯುವತಿಯ ತಾಯಿ ಈ ಕುರಿತು ವಿದ್ಯಾರಣ್ಯಪುರ ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಶೀಲಾ ಅವರು ತನ್ನ ಪತಿ, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೆಂಗಳೂರಿನ ವಿದ್ಯಾರಣ್ಯಪುರ ಪ್ರದೇಶದಲ್ಲಿ ವಾಸವಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ತ್ಯಜಿಸಿದ್ದಾರಂತೆ. ಅವರ ಮಗ ಬ್ರಿಂದಾವನ ಸ್ಟೇಟಿಂಗ್‌ನಲ್ಲಿ ಭಾಗಕಾಲಿಕವಾಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮೊದಲ ಮಗಳು ಬೀಬಿ ಕೇರ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಜುಲೈ 11ರಂದು ಬೆಳಿಗ್ಗೆ 11 ಗಂಟೆಗೆ ತಾಯಿ ಮತ್ತು ಮಗ ಆಸ್ಪತ್ರೆಗೆ ತೆರಳಿದಾಗ, ಅವರ ಎರಡನೇ ಮಗಳಾದ ಶೃತಿ ಪಿ (19) ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ 12 ಗಂಟೆ ಸುಮಾರಿಗೆ ತಾಯಿ ಶೃತಿಗೆ ಕರೆ ಮಾಡಿದಾಗ, “ವಿದ್ಯಾರಣ್ಯಪುರ 1ನೇ…
ಮುಂದೆ ಓದಿ..
