ಸುದ್ದಿ 

ಯಲಹಂಕ ಗಸ್ತಿನಲ್ಲಿ ಗಾಂಜಾ ಮಾರಾಟ ಗುತ್ತಿಗೆ: ಸಿಸಿಬಿ ದಾಳಿ, ಆರೋಪಿಗಳ ಬಂಧನ

ಬೆಂಗಳೂರು: ಜುಲೈ 16, 2025 ಬೆಂಗಳೂರಿನ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ, ನಗರ ಸಿಸಿಬಿ ಮಾದಕ ದ್ರವ್ಯ ನಿಯಂತ್ರಣ ದಳದ ಪೊಲೀಸರು ಅಪಾರ ಪ್ರಮಾಣದ ಗಾಂಜಾ ಸಾಗಾಣಿಕೆ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕ ದ್ರವ್ಯ ದಳದ ಇನ್‌ಸ್ಪೆಕ್ಟರ್ ಮಂಜಪ್ಪ ಅವರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಳಗ್ಗೆ ಸುಮಾರು 11:20 ರ ಸಮಯದಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದರು. ಆರೋಪಿಗಳು ತಮ್ಮ ಜೊತೆಗೆ ಇರಿಸಿಕೊಂಡಿದ್ದ 20-25 ಕಿಲೋಗ್ರಾಂ ತೂಕದ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡಿದ್ದು, ಅದನ್ನು ರೈಲಿನಲ್ಲಿ ಸಾಗಿಸಿ ಬೆಂಗಳೂರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳು ಓಯಾಗಬುದೊಂಗ ಹಾಗೂ ಇನ್ನೊಬ್ಬ ವ್ಯಕ್ತಿಯಾಗಿದ್ದು, ಅವರು ಮಹತ್ವದ ಮಾದಕ ದ್ರವ್ಯ ಸಾಗಾಣಿಕೆಯಲ್ಲಿ ತೊಡಗಿರುವ ಸಾಧ್ಯತೆ ಇದೆ. ಯಲಹಂಕ ಪೊಲೀಸರು…

ಮುಂದೆ ಓದಿ..
ಸುದ್ದಿ 

ಚಿನ್ನಾಭರಣ ಕಳ್ಳತನ: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಆಭರಣ ಮಿಸ್ಸಿಂಗ್

ಬೆಂಗಳೂರು ಗ್ರಾಮಾಂತರ ಜುಲೈ 16:2025 ವಿಜಯನಗರ ಗ್ರಾಮದಲ್ಲಿ ದಿನಾಂಕ 13-07-2025 ರಂದು ದಿನದ ಬೆಳಗ್ಗೆ ಸಂಭವಿಸಿದ ಕಳ್ಳತನದ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆ ಮಾಲೀಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆ ಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ರಾಜಮ್ಮ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ಬೆಳಗ್ಗೆ 07:15 ಕ್ಕೆ ಕೆಲಸಕ್ಕೆ ಹೋಗಿದ್ದಾಗ ಮನೆಗೆ ತಾಯಿ ಅಕ್ಕಯಮ್ಮ, ಅಜ್ಜಿ ಮುನಿಯಮ್ಮ ಇದ್ದರು. ಮಧ್ಯಾಹ್ನ 02:20ರ ವೇಳೆಗೆ ಮನೆಗಿನ ಎಲ್ಲರೂ ಊರಿನ ಸಂಬಂಧಿಕರ ಜನ್ಮದಿನ ಪಾರ್ಟಿಗೆ ಹೋಗಿದ್ದರು. ಸಂಜೆ 04:00ಕ್ಕೆ ಮನೆಗೆ ವಾಪಸು ಬಂದಾಗ, ಬಾಗಿಲಿನ ಚಿಲಕ ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ಮನೆ ಒಳಗೆ ಪರಿಶೀಲನೆ ನಡೆಸಿದಾಗ, ಬೀರುವಿನ ಲಾಕರ್ ಮುರಿಯಲಾಗಿದ್ದು, ಒಳಗೆ ಇಟ್ಟಿದ್ದ ಬಹುಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದವು. ಕಳ್ಳರು ಕದ್ದ್ದುಕೊಂಡು ಹೋದ ವಸ್ತುಗಳ ವಿವರ ಹೀಗಿದೆ: 11…

ಮುಂದೆ ಓದಿ..
ಸುದ್ದಿ 

ವಾಟ್ಸಪ್ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಹಣದ ಮೋಸ: ರೂ. 1.90 ಲಕ್ಷ ವಂಚನೆ

ಬೆಂಗಳೂರು, ಜುಲೈ 16: 2025 ವಾಟ್ಸಪ್ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಜನರನ್ನು ಮೋಸಗೊಳಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅನಾಮಿಕ ವ್ಯಕ್ತಿಯೊಬ್ಬರು ಹಲವು ನಕಲಿ ಖಾತೆಗಳ ಮೂಲಕ ಹಣ ಕೇಳಿ, ಒಟ್ಟು ರೂ. 1,90,000/- ವಂಚಿಸಿದ್ದಾರೆ. ರೋಹಿನಿ ಬೋಪಣ್ಣ ಅವರು ನೀಡಿದ ದೂರಿನ ಪ್ರಕಾರ, M8929185981 ಎಂಬ ವಾಟ್ಸಪ್ ಸಂಖ್ಯೆಯಿಂದ, ಮತ್ತು @ssamishka7477, @financedepartment725, @dinesh9888 ಎಂಬ ಖಾತೆಗಳನ್ನು ಬಳಸಿಕೊಂಡು ಹಣದ ಬಗ್ಗೆ ಆಮಿಷವಿಡಲಾಗಿತ್ತು. ವಿವಿಧ ಅವಕಾಶಗಳು, ಸಾಲದ ಮಂಜೂರಾತಿ, ಸಬ್ಸಿಡಿ, ಅಥವಾ ನಕಲಿ ಉದ್ಯೋಗಗಳ ಹೆಸರಲ್ಲಿ ಹಂತ ಹಂತವಾಗಿ ಹಣ ಕಳೆಯಲಾಗಿದ್ದು, ಮೊತ್ತಗಳು 700/-, 910/-, 3000/-, 10,500/-, 29,500/-, ಹಾಗೂ 1,00,000/- ಸೇರಿ ಒಟ್ಟು 1.90 ಲಕ್ಷ ರೂಪಾಯಿ ಕಳಿಸಲಾಗಿದೆ. ಈ ಎಲ್ಲಾ ಹಣ ವರ್ಗಾವಣೆಗಳು 13-07-2025 ರಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ನಡೆದಿದ್ದು, ನಂತರ ಯಾವುದೇ ಹಣ ವಾಪಸ್ಸಾಗಿಲ್ಲ. ಸಂಬಂಧಿಸಿದ ವ್ಯಕ್ತಿಗಳು…

ಮುಂದೆ ಓದಿ..
ಸುದ್ದಿ 

ಜಮೀನಿನ ವಿವಾದದಿಂದ ರಸ್ತೆಯಲ್ಲಿ ಘರ್ಷಣೆ – 9 ಮಂದಿ ಬಂಧನ

ಬೆಂಗಳೂರು, ಜುಲೈ 16:2025 ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಜಮೀನಿನ ಸಂಬಂಧಿತ ವಿಚಾರದ ಹಿನ್ನೆಲೆಯಲ್ಲಿ ಸಂಬಂಧಿಕರೇ ಒಬ್ಬರ ಮೇಲೆ ಒಬ್ಬರು ಹಲ್ಲೆ ನಡೆಸಿದ ಪ್ರಕರಣ ಸಂಭವಿಸಿದ್ದು, ಒಟ್ಟು 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರಣ್ಯಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ನಂದೀಶ್ ಹಾಗೂ ಪಿಸಿ ನಿಸ್ಸಾರ್ ಖಾನ್ ಅವರು ಬೆಳಿಗ್ಗೆ 8.30ರ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಗಸ್ತು ಕಾರ್ಯದೊಂದಿಗೆ ಸಂಭ್ರಮ ಕಾಲೇಜು ಸಮೀಪದ ರಸ್ತೆಯ ಮೂಲಕ ಅಂಬಾ ಭವಾನಿ ದೇವಸ್ಥಾನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸಾರ್ವಜನಿಕ ರಸ್ತೆಯಲ್ಲಿ 8-9 ಮಂದಿ ಎರಡು ಗುಂಪುಗಳಾಗಿ ಕೈಕಾಲು ಬೀಸಿ ಜಗಳವಾಡುತ್ತಿದ್ದ ದೃಶ್ಯ ಗಮನಕ್ಕೆ ಬಂದಿದೆ. ತಕ್ಷಣ ಘಟನಾ ಸ್ಥಳಕ್ಕೆ ಸೇರಿ ಜಗಳ ತಡೆಯುವಲ್ಲಿ ಸಕ್ರಿಯರಾದ ಅವರು, ಕೂಡಲೇ ಹೊಯ್ಸಳ 169 ವಾಹನದ ಸಹಾಯದಿಂದ ಎಸ್‌ಐ ಸರೋಜ ಹಾಗೂ ಎಪಿಸಿ ರುದ್ರೇಶ್ ಫಿರಂಗಿ…

ಮುಂದೆ ಓದಿ..
ಸುದ್ದಿ 

ವಿದ್ಯಾರಣ್ಯಪುರದಲ್ಲಿ 19 ವರ್ಷದ ಯುವತಿ ನಾಪತ್ತೆ – ತಾಯಿ ಠಾಣೆಗೆ ದೂರು

ಬೆಂಗಳೂರು, ಜುಲೈ 15:2025 ರಾಜಾಜಿನಗರದ ESI ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದ ತಾಯಿ ಮತ್ತು ಮಗ ಮನೆಗೆ ಮರಳಿದಾಗ 19 ವರ್ಷದ ಯುವತಿ ಕಾಣೆಯಾಗಿರುವ ಘಟನೆ ವಿದ್ಯಾರಣ್ಯಪುರದಲ್ಲಿದೆ. ಯುವತಿಯ ತಾಯಿ ಈ ಕುರಿತು ವಿದ್ಯಾರಣ್ಯಪುರ ಪೋಲಿಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಶೀಲಾ ಅವರು ತನ್ನ ಪತಿ, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೆಂಗಳೂರಿನ ವಿದ್ಯಾರಣ್ಯಪುರ ಪ್ರದೇಶದಲ್ಲಿ ವಾಸವಿದ್ದು, ಆರೋಗ್ಯ ಸಮಸ್ಯೆಯಿಂದಾಗಿ ಉದ್ಯೋಗ ತ್ಯಜಿಸಿದ್ದಾರಂತೆ. ಅವರ ಮಗ ಬ್ರಿಂದಾವನ ಸ್ಟೇಟಿಂಗ್‌ನಲ್ಲಿ ಭಾಗಕಾಲಿಕವಾಗಿ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಮೊದಲ ಮಗಳು ಬೀಬಿ ಕೇರ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಜುಲೈ 11ರಂದು ಬೆಳಿಗ್ಗೆ 11 ಗಂಟೆಗೆ ತಾಯಿ ಮತ್ತು ಮಗ ಆಸ್ಪತ್ರೆಗೆ ತೆರಳಿದಾಗ, ಅವರ ಎರಡನೇ ಮಗಳಾದ ಶೃತಿ ಪಿ (19) ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ 12 ಗಂಟೆ ಸುಮಾರಿಗೆ ತಾಯಿ ಶೃತಿಗೆ ಕರೆ ಮಾಡಿದಾಗ, “ವಿದ್ಯಾರಣ್ಯಪುರ 1ನೇ…

ಮುಂದೆ ಓದಿ..
ಸುದ್ದಿ 

ಮಾಜಿ ಶಿಕ್ಷಕರ ದೂರು: 1.5 ಲಕ್ಷ ಶಾಲಾ ದಾಖಲೆಗಳನ್ನು ಡೌನ್‌ಲೋಡ್ ಮಾಡಿದ ಆರೋಪ

ಬೆಂಗಳೂರು, ಜುಲೈ 14, 2025:ನಗರದ ಖಾಸಗಿ ಶಾಲೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಶಿಕ್ಷಕಯೊಬ್ಬರ ವಿರುದ್ಧ ಶಾಲೆಯ ಮಹತ್ವದ ದಾಖಲೆಗಳನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ವರ್ಷ ಸೆಕ್ಸಿನ ಅವರ ಪ್ರಕಾರ, ಮಾಲತಿ ಅನಂತ ಎಂಬುವರು 06 ಮೇ 2019 ರಿಂದ 29 ಜೂನ್ 2024ರವರೆಗೆ ಇನ್ವೆಂಚರ್ ಅಕಾಡೆಮಿ ಶಾಲೆಯಲ್ಲಿ ಹೆಡ್ ಆಫ್ ಸೈನ್ಸ್ ಹಾಗೂ ಹಾಫ್ ಟೈಮ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 2024ರಲ್ಲಿ ಅವರು ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿಲ್ಲ. ಅವರು ಕೊಟ್ಟಿದ್ದ ರಾಜೀನಾಮೆಯಲ್ಲಿ “ಬೇರೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವುದಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿದ್ದರು. ಆದರೆ ನಂತರದ ದಿನಗಳಲ್ಲಿ ಮಾಲತಿ ಅನಂತ ಅವರು ಬೆಂಗಳೂರು ಸೀಗೆಹಳ್ಳಿಯ ವಾಲಿಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಡೆಪ್ಯುಟಿ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ತಾಂತ್ರಿಕ…

ಮುಂದೆ ಓದಿ..
ಸುದ್ದಿ 

ಮನೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ – ₹50 ಲಕ್ಷ ಮೌಲ್ಯದ ಹಾನಿ

ಬೆಂಗಳೂರು, ಜೂನ್ 14:ನಗರದ ನಿವಾಸವೊಂದರಲ್ಲಿ ಏರ್ ಕಂಡೀಷನರ್‌ನಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿಯಿಂದಾಗಿ ₹50 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶ್ರೀಮತಿ ನೇತ್ರಾ ಅವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದಿನಾಂಕ 23-06-2025 ರಂದು ಮಧ್ಯಾಹ್ನ 2:30ರ ಸಮಯದಲ್ಲಿ ಅವರು ಮತ್ತು ಅವರ ಮೊಮ್ಮಗಳು ಮನೆಯಲ್ಲಿದ್ದುಕೊಂಡಿದ್ದಾಗ, ಏರ್ ಕಂಡೀಷನರ್‌ನಿಂದ ಹೊಗೆ ಹೊರಬರುತ್ತಿರುವುದನ್ನು ಕಂಡು ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಯಿತು. ತಕ್ಷಣ ಅವರು ಮನೆಯ ನೆಲಮಹಡಿಗೆ ಇಳಿದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆದಾಗ್ಯೂ, ಅಗ್ನಿಶಾಮಕ ದಳವು ಘಟನಾ ಸ್ಥಳಕ್ಕೆ ತಲುಪಲು ಸುಮಾರು 45 ನಿಮಿಷಗಳ ಕಾಲವಾಯಿತು. ಈ ಅವಧಿಯಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಮನೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಉಂಟಾಗಿದೆ. ಬೆಂಕಿಯಿಂದ ನಾಶವಾದ ವಸ್ತುಗಳ ಪಟ್ಟಿ ಇಂತಿದೆ: ಸಿಲ್ಕ್ ಸ್ಮಾರಿಸ್, ಏರ್ ಕಂಡೀಷನರ್, ಲ್ಯಾಪ್‌ಟಾಪ್, ಹಾಸಿಗೆಗಳು (2…

ಮುಂದೆ ಓದಿ..
ಸುದ್ದಿ 

ಯುವಕನ ಮೇಲೆ ಮೂವರು ಸೇರಿ ಹಲ್ಲೆ – ಜೀವ ಬೆದರಿಕೆ ನೀಡಿ ಪರಾರಿಯಾದ ಆರೋಪಿಗಳು

ಬೆಂಗಳೂರು, ಜುಲೈ 15 – ನಗರದಲ್ಲಿನ ಲಕ್ಷ್ಮೀಪುರ ಮುಖ್ಯ ರಸ್ತೆಯಲ್ಲಿ ರಾತ್ರಿ ಟೀ ಅಂಗಡಿಯ ಬಳಿ ನಿಂತು ಟೀ ಕುಡಿಯುತ್ತಿದ್ದ ಯುವಕನ ಮೇಲೆ ಮೂವರು ದುಷ್ಕರ್ಮಿಗಳು ಸೇರಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಮಧು (26), ನಂದಕುಮಾರ್ ಅವರ ಪುತ್ರರು, ಈ ದಿನ ರಾತ್ರಿ ಸುಮಾರು 7:30ರಿಂದ 7:45ರ ಸಮಯದೊಳಗೆ ರಾಜಲಕ್ಷ್ಮೀ ಆಸ್ಪತ್ರೆ ಸಮೀಪದ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತ ನಿಂತಿದ್ದರು. ಈ ವೇಳೆ ಅಲ್ಲಿ ಇದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಧುವನ್ನು ಗುರಿಯಾಗಿಸಿಕೊಂಡು ನೋಡುತ್ತಿದ್ದು, ಮಧು ಅವರಲ್ಲಿ ಇದಕ್ಕೆ ಕಾರಣವನ್ನು ಕೇಳಿದಾಗ ಆ ಇಬ್ಬರು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕಾಏಕಿ ಹಲ್ಲೆಗೆ ಮುಂದಾದರು. ಮಧು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅವರ ಸ್ನೇಹಿತನಾದ ‘ಚಿನ್ನಿ’ ಎಂಬಾತ ಕೂಡ ಸ್ಥಳಕ್ಕೆ ಬಂದು ಇಬ್ಬರ ಜೊತೆ ಸೇರಿ ಮಧುವನ್ನು ಅಡ್ಡಗಟ್ಟಿ, ಕಾಲಿನಿಂದ ಮೊಣಕಾಲಿಗೆ ಹೊಡೆದು…

ಮುಂದೆ ಓದಿ..
ಸುದ್ದಿ 

ಎಂ.ಎಸ್. ಪಾಳ್ಯದಲ್ಲಿ ಟೀ ಅಂಗಡಿಯ ಬಳಿ ಜಗಳ – ಇಬ್ಬರಿಗೆ ಚಾಕು ಹಲ್ಲೆ

ಬೆಂಗಳೂರು, ಜುಲೈ 15 – ನಗರದಲ್ಲಿನ ಎಂ.ಎಸ್. ಪಾಳ್ಯ ಪ್ರದೇಶದಲ್ಲಿ ಟೀ ಅಂಗಡಿಯ ಬಳಿ ನಡೆದ ಸಾಮಾನ್ಯ ಜಗಳವು ಗಂಭೀರ ಹಲ್ಲೆಯಾಗಿ ಪರಿವರ್ತನೆಯಾಗಿ, ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವೇಕ್ಷಾ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು ರಾಘವೇಂದ್ರ.ಎಸ್ @ ರಘು ಬಿನ್ ಶ್ರೀನಿವಾಸ್ (25 ವರ್ಷ) ಅವರು ನೀಡಿದ ದೂರಿನ ಪ್ರಕಾರ, ಈ ದಿನ ಅವರು ತಮ್ಮ ಸ್ನೇಹಿತ ದೇವಯ್ಯನೊಂದಿಗೆ ಎಂ.ಎಸ್. ಪಾಳ್ಯದಲ್ಲಿರುವ ತಮ್ಮ ಮತ್ತೊಬ್ಬ ಸ್ನೇಹಿತ ರಾಜನನ್ನು ಭೇಟಿಸಲು ಹೋಗಿದ್ದರು. ಅವರು ಟೀ ಕುಡಿಯಲು ರಾಜಲಕ್ಷ್ಮೀಪುರ ಮುಖ್ಯ ರಸ್ತೆಯಲ್ಲಿರುವ ರಾಜಲಕ್ಷ್ಮಿ ಆಸ್ಪತ್ರೆಯ ಹತ್ತಿರದ ಟೀ ಅಂಗಡಿಯಲ್ಲಿ ನಿಂತಿದ್ದರು. ಅಲ್ಲಿಯೇ ಟೀ ಕುಡಿದುಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ದೇವಯ್ಯನನ್ನು ಅವನತ್ತ ನೋಡಿದ ಕಾರಣಕ್ಕೆ ‘ನಿನ್ನಮ್ಮನ್ ಯಾಕೋ ಗುರಾಯಿಸ್ತೀಯಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು, ಮುಖಕ್ಕೆ ಹೊಡೆದಿದ್ದಾನೆ. ಇದರ ನಂತರ ಜಗಳ ಉಂಟಾಗಿ, ಅಪರಿಚಿತ ವ್ಯಕ್ತಿ ತೀವ್ರ ಆಕ್ರೋಶದಿಂದ…

ಮುಂದೆ ಓದಿ..
ಸುದ್ದಿ 

ಮದ್ಯಪಾನ ಮಾಡಿ ಅಜಾಗರೂಕ ಚಾಲನೆ: ಕೆಂಪಾಪುರದಲ್ಲಿ ಚಾಲಕನ ವಿರುದ್ಧ ಪೊಲೀಸ್ ಕ್ರಮ

ಬೆಂಗಳೂರು, ಜುಲೈ 14ನಗರದ ಕೆಂಪಾಪುರ ಬಸ್ ನಿಲ್ದಾಣದ ಬಳಿ ಮದ್ಯಪಾನ ಮಾಡಿಕೊಂಡು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಕಾನೂನು ಕ್ರಮ ಹೇರಿದ್ದಾರೆ. ಜುಲೈ 12 ರಂದು ರಾತ್ರಿ, ಸ್ಥಳೀಯ ಪೊಲೀಸ್ ಠಾಣೆಯಿಂದ ಎ.ಎಸ್.ಐ. ಅನೀಲ್ ಕುಮಾರ ಕೆ., ಹೆಡ್ ಕಾನ್ಸ್‌ಟೇಬಲ್ ರಾಘವೇಂದ್ರ ನಾಯಕ (8122) ಹಾಗೂ ಇತರರು ಟ್ರಾಫಿಕ್ ಕರ್ತವ್ಯದಲ್ಲಿ ತೊಡಗಿದ್ದ ವೇಳೆ, ಸಾರ್ವಜನಿಕರೊಬ್ಬರು ಕಾರು ನಂಬರ್ KA-03-AH-3125 ನ ಚಾಲಕನು ಮದ್ಯಪಾನ ಮಾಡಿ ಅಪಾಯಕಾರಿಯಾಗಿ ಚಾಲನೆ ಮಾಡುತ್ತಿದ್ದಾನೆಂದು ಮಾಹಿತಿ ನೀಡಿದರು. ತಕ್ಷಣ ದೌಡಾಯಿಸಿದ ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದಾಗ, ಚಾಲಕನಿಂದ ಮದ್ಯಪಾನದ ವಾಸನೆ ಬಂದಿದ್ದು, ಆತನನ್ನು ಆಲೋಮೀಟರ್‌ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ 274 MG/100 ML ಮಟ್ಟದ ಮದ್ಯಪಾನ ಪತ್ತೆಯಾಗಿಕಾನೂನುಬದ್ಧ ಮಿತಿಯನ್ನು ಮೀರಿರುವುದಾಗಿ ದೃಢಪಟ್ಟಿತು. ಚಾಲಕನನ್ನು ದೀಪಕ್ ಡಿ.ಆರ್ (34), ಗಂಗಾನಗರದ ನಿವಾಸಿ ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಬಂಧಿಸಿ ಪ್ರಕರಣ…

ಮುಂದೆ ಓದಿ..