ಸುದ್ದಿ 

ದೊಡ್ಡಬಳ್ಳಾಪುರ ರಸ್ತೆಯಲ್ಲಿ ಬೈಕ್ ಡಿಕ್ಕಿ: ವೃದ್ಧರು ಗಂಭೀರ ಗಾಯ

ಬೆಂಗಳೂರು, ಜುಲೈ 17:2025 ನಗರದ ರೈಲ್ ಫ್ರೇಮ್ ಫ್ಯಾಕ್ಟರಿ ಬಳಿ ಇದೇ ದಿನ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 66 ವರ್ಷದ ಲಕ್ಷ್ಮೀನಾರಾಯಣಕಾಂತನ ಎಂಬ ವೃದ್ಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್.ಪಿ. ವಿನೋದರ ದೂರಿನಂತೆ, ಅಪಘಾತವು ಜುಲೈ 12ರಂದು ಬೆಳಿಗ್ಗೆ 5:40 ಗಂಟೆಯ ಸುಮಾರಿಗೆ ನಡೆದಿದೆ. ಲಕ್ಷ್ಮೀನಾರಾಯಣಕಾಂತನವರು ತಮ್ಮ ಬಜಾಜ್ ಡಿಸ್ಕವರ್ ಬೈಕ್ (ನಂ: KA 04 HU 5538) ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಎದುರಿನಿಂದ ಬರುತ್ತಿದ್ದ ಇನ್ನೊಂದು ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅವರ ಕಾಲಿಗೆ ತೀವ್ರ ಪೆಟ್ಟು ಬಿದ್ದು, ತುರ್ತು ಚಿಕಿತ್ಸೆ ಅಗತ್ಯವಾಯಿತು. ಸ್ಥಳೀಯರು ಕೂಡಲೇ ಲಕ್ಷ್ಮೀನಾರಾಯಣಕಾಂತನರನ್ನು ರಾಜಾನುಕುಂಟೆ ರಕ್ಷಾ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಅಪಘಾತಕ್ಕೆ ಕಾರಣನೆಂದು ತಿಳಿಯಲ್ಪಡುವ ಬೈಕ್ ಸವಾರ ಲೋಕೇಶ ವಿರುದ್ಧ ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ…

ಮುಂದೆ ಓದಿ..
ಸುದ್ದಿ 

ಟವರ್ ಹಿಂಭಾಗದಿಂದ ಎಲೆಕ್ಟ್ರಿಕಲ್ ಕೇಬಲ್ ಕಳ್ಳತನ

ಬೆಂಗಳೂರು, ಜುಲೈ 17: 2025 ನಗರದ ಒಂದು ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನ ಟವರ್ ಹಿಂಭಾಗದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕಲ್ ಕೇಬಲ್ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ರೋಬಿನ್ ಆವರ ಪ್ರಕಾರ, ಅವರು ತಮ್ಮ ನಿವಾಸದಲ್ಲಿದ್ದಾಗ 13/07/2025 ರಂದು ಬೆಳಿಗ್ಗೆ ಸುಮಾರು 06:00 ಗಂಟೆಗೆ ಟವರ್-ಡಿ ಹಿಂಭಾಗದಿಂದ ಅಂದಾಜು 500ರಿಂದ 600 ಮೀಟರ್ ಉದ್ದದ ಎಲೆಕ್ಟ್ರಿಕಲ್ ಕೇಬಲ್‌ನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕೇಬಲ್‌ನ ಮೌಲ್ಯವನ್ನು ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ದೂರುದಾರರು ಈ ಬಗ್ಗೆ ಸುತ್ತಮುತ್ತ ಮಾಹಿತಿ ಕಲೆಹಾಕಿದರೂ ಯಾವುದೇ ಪತ್ತೆಯಾಗದೆ ಹಿನ್ನಲೆಯಲ್ಲಿ ಕೊನೆಗೆ ಪೊಲೀಸರು ಕೈಜೋಡಿಸಲು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ಮುಂದೆ ಓದಿ..
ಸುದ್ದಿ 

ನಕಲಿ ಪರಿಚಯ ನೀಡಿ ನಿವೃತ್ತ ಸಿಐಎಸ್ಎಫ್ ಅಧಿಕಾರಿ ಬಳಿ ₹45,000 ವಂಚನೆ

ಬೆಂಗಳೂರು, ಜುಲೈ 17:2025 ನಗರದಲ್ಲಿ ಮತ್ತೊಂದು ಆನ್‌ಲೈನ್ ವಂಚನೆ ಬೆಳಕಿಗೆ ಬಂದಿದೆ. ನಿವೃತ್ತ ಸಿಐಎಸ್ಎಫ್ ನೌಕರರೊಬ್ಬರಿಗೆ ತಮ್ಮನ್ನು “ಶರ್ಮ” ಎಂಬ ಸಹೋದ್ಯೋಗಿಯಾಗಿ ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬರು ₹45,000 ವಂಚಿಸಿದ ಘಟನೆ ನಡೆದಿದೆ. ಪ್ರಕಾಶ್ ಕುಮಾರ್ ನಾಯಕ್ ಅವರು ನೀಡಿದ ಮಾಹಿತಿಯ ಪ್ರಕಾರ, ಜುಲೈ 11 ರಂದು ಸಂಜೆ 10:30 ಗಂಟೆಗೆ ಅವರ ಮೊಬೈಲಿಗೆ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನ ಫೋನ್ ಕೆಲಸ ಮಾಡುತ್ತಿಲ್ಲ ಎಂದು ಕಾರಣ ನೀಡಿ ತಕ್ಷಣ ಹಣದ ಅವಶ್ಯಕತೆ ಇದೆ ಎಂದು ತಿಳಿಸಿದ್ದ. ಆತನು ನೀಡಿದ ಮೊಬೈಲ್ ನಂಬರ್ 8955492652 ಗೆ ಪಿರ್ಯಾದಿದಾರರು ಒಟ್ಟು ₹45,000 ಹಣವನ್ನು ನಾಲ್ಕು ಹಂತಗಳಲ್ಲಿ ಜುಲೈ 12 ರಂದು ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿದರು. ಹಣ ವರ್ಗಾವಣೆಯ ನಂತರ, ಪ್ರಕಾಶ್ ಕುಮಾರ್ ತಮ್ಮ ಖಾತೆ ಪರಿಶೀಲನೆ ನಡೆಸಿದಾಗ ಯಾವುದೇ ಹಣದ ಸ್ವೀಕೃತಿ ಇಲ್ಲದೆ, ಕರೆ…

ಮುಂದೆ ಓದಿ..
ಸುದ್ದಿ 

ಅಪರಿಚಿತ ವ್ಯಕ್ತಿಯಿಂದ ಕ್ರೆಡಿಟ್ ಕಾರ್ಡ ಮೋಸ ಹೂಡಿಕೆದಾರರಿಂದ ₹70,000 ಕಳೆದು ಹೋದ ಪ್ರಕರಣ

ಬೆಂಗಳೂರು, ಜುಲೈ 17– 2025 ನಗರದ ನಿವಾಸಿಯೊಬ್ಬರಿಗೆ ಅವರ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ರೂಪಾಯಿ ರೂಪದಲ್ಲಿ ಪರಿವರ್ತಿಸಿ ನೀಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿಯೊಬ್ಬರು ಸೈಬರ್ ಮೋಸ ಮಾಡಿದ್ದಾರೆ. ರಮೇಶ್ ಅವರು ನೀಡಿದ ದೂರಿನ ಪ್ರಕಾರ, ದಿನಾಂಕ 07.06.2025 ರಂದು ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ತಮ್ಮನ್ನು ಬ್ಯಾಂಕ್ ಪ್ರತಿನಿಧಿಯಾಗಿ ಪರಿಚಯಿಸಿಕೊಂಡು, “ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಕ್ಯಾಶ್ ರೂಪದಲ್ಲಿ ಕೊಡಲಾಗುತ್ತದೆ, ದಯವಿಟ್ಟು OTP ಅನ್ನು ನೀಡಿ” ಎಂದು ತಿಳಿಸಿದ್ರು. ಭದ್ರತಾ ವಿವರಗಳನ್ನು ನೀಡಿದ ಬಳಿಕ, ವಿವಿಧ ದಿನಗಳಲ್ಲಿ ₹25,737.50, ₹18,424.80 ಮತ್ತು ₹70,527.22 ಮೊತ್ತಗಳನ್ನು ದ್ದೋಷಿಗಳಿಂದ ಡೆಬಿಟ್ ಮಾಡಲಾಗಿದೆ. ಮತ್ತೆ ಕರೆ ಮಾಡಿದಾಗ, “ನಮ್ಮ ಟೇಕ್ನಿಕಲ್ ಸಮಸ್ಯೆ ಇದೆ, ಎರಡು ದಿನಗಳ ಒಳಗೆ ನಿಮ್ಮ ಲಿಮಿಟ್ ಹೆಚ್ಚಾಗುತ್ತದೆ ಮತ್ತು ಹಣ ವಾಪಸ್ ಆಗುತ್ತದೆ” ಎಂದು ತಿಳಿಸಿದ್ರು. ಆದರೆ ನಂತರ ಯಾವುದೇ ಹಣ ವಾಪಸ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು: 14 ವರ್ಷದ ಬಾಲಕಿ ಮೇಘನಾ ಕಾಣೆ – ತಾಯಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು

ಬೆಂಗಳೂರು 17 2025 ನಗರದ BEL ಕಂಪನಿಯ ಕ್ಯಾನ್ಟೀನ್‌ನಲ್ಲಿ ಕೆಲಸಮಾಡುವ ಮಹಿಳೆಯ ಮಗಳು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿ ಮೇಘನಾ 2025ರ ಜುಲೈ 14ರಂದು ಮನೆಗೆ ಮರಳದೆ ಕಾಣೆಯಾದ ಬಗ್ಗೆ ತಾಯಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಣೇಶ್ ಜಿ ಅವರ ಪ್ರಕಾರ, ಆ ದಿನ ಬೆಳಗ್ಗೆ 6:30ರ ವೇಳೆಗೆ ಎಂದಿನಂತೆ ಮನೆ ಕೆಲಸಗಳನ್ನು ಪೂರ್ಣಗೊಳಿಸಿ ಹೊರಟಿದ್ದ ತಾಯಿ ಮಧ್ಯಾಹ್ನ 3:00 ಗಂಟೆಗೆ ಮನೆಗೆ ಹಿಂತಿರುಗಿದಾಗ, ತನ್ನ ಮಗಳು ಮನೆಯಲ್ಲಿಲ್ಲ ಎಂಬುದು ಗಮನಕ್ಕೆ ಬಂದಿದೆ. ತಕ್ಷಣವೇ ಆಕೆ ಆಸ್ಪತ್ರೆಗೆ, ಶಾಲೆಗೆ, ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ತೆರಳಿ ಹುಡುಕಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ತಾಯಿ ಆತಂಕಗೊಂಡು ಕೂಡಲೇ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಮನೆಮಂದಿ ಹಾಗೂ ನೆರೆಹೊರೆಯವರಿಂದ ಕೇಳಿದರೂ ಮೇಘನಾ ಎಲ್ಲಿ ಹೋದಾಳೆ ಎಂಬುದರ ಬಗ್ಗೆ ಯಾವುದೇ ಸುಳಿವು…

ಮುಂದೆ ಓದಿ..
ಅಂಕಣ 

ವಕ್ತಾರರು ಬೇಕಾಗಿದ್ದಾರೆ….ದಯವಿಟ್ಟು ಗಮನಿಸಿ, ವಕ್ತಾರರ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು……

ವಕ್ತಾರರು ಬೇಕಾಗಿದ್ದಾರೆ…. ದಯವಿಟ್ಟು ಗಮನಿಸಿ, ವಕ್ತಾರರ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು…… ಹುದ್ದೆಗಳ ಸಂಖ್ಯೆ : ಅನಿಯಮಿತ, ವಿದ್ಯಾರ್ಹತೆ : ಯಾವುದೇ ಅಕ್ಷರ ಜ್ಞಾನದ ಅವಶ್ಯಕತೆ ಇಲ್ಲ. ಸೇವಾ ಮನೋಭಾವ ಮಾತ್ರ. ಮೀಸಲಾತಿ : ಮನುಷ್ಯ ಎನಿಸಿಕೊಳ್ಳುವ ಎಲ್ಲರಿಗೂ ಅವಕಾಶವಿದೆ. ವಯಸ್ಸು : ಕನಿಷ್ಠ 25 ವರ್ಷ. ಗರಿಷ್ಠ ಮಿತಿ ಇಲ್ಲ. ಸಂಬಳ : ಯಾವುದೇ ನಿರೀಕ್ಷೆ ಬೇಡ. ಕೆಲವೊಮ್ಮೆ ಸ್ವಂತ ಹಣ ಖರ್ಚು ಮಾಡಬೇಕಾಗಿ ಬರಬಹುದು. ಕಾರ್ಯವ್ಯಾಪ್ತಿ : ಭಾರತ ದೇಶದ ಯಾವುದೇ ಸ್ಥಳದಲ್ಲಿ ಕೆಲಸ ನಿರ್ವಹಿಸಬೇಕಾಗಬಹುದು. ವರ್ಗಾವಣೆ : ನಿಮ್ಮ ಇಚ್ಛೆಗೆ ಅನುಗುಣವಾಗಿ. ಸಮಯ : ದಿನದ 24 ಗಂಟೆಗಳು ಮತ್ತು ವರ್ಷದ 365 ದಿನಗಳು, ನಿಮ್ಮ ಅನುಕೂಲಕ್ಕೆ ತಕ್ಕಂತೆ.ಕಾರ್ಯ ವಿಧಾನ ಮತ್ತು ಹುದ್ದೆಯ ಹೆಸರು…… 1) ಭಾರತ ದೇಶದ ವಕ್ತಾರರು. 2) ಭಾರತದ ಜನತೆಯ ವಕ್ತಾರರು. 3) ಭಾರತೀಯ ಸಂಸ್ಕೃತಿಯ…

ಮುಂದೆ ಓದಿ..
ಸುದ್ದಿ 

ಬಳ್ಳಾರಿಯಲ್ಲಿ ಜಾನಪದ ಸಂಗೀತ ಸೊಬಗು – ಗಂಗಾ ಕಲಾ ಟ್ರಸ್ಟ್ ಹಾಗೂ ಸಂಸ್ಕೃತಿ ಇಲಾಖೆಯಿಂದ ಸಂಯುಕ್ತ ಕಾರ್ಯಕ್ರಮ

ಬಳ್ಳಾರಿ, ಜುಲೈ 15:ಜಾನಪದ ಕಲೆಗಳು ನಾಡಿನ ನಂಟನ್ನು ಪ್ರತಿಬಿಂಬಿಸುವ ಅಪೂರ್ವ ಕಲಾ ರೂಪಗಳು. ಇವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಅಂದವಾದ ಜಾನಪದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬಳ್ಳಾರಿ) ಹಾಗೂ ಗಂಗಾ ಕಲಾ ಟ್ರಸ್ಟ್, ಇಬ್ರಾಹಿಂಪುರ (ಬಳ್ಳಾರಿ) ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 15, ಮಂಗಳವಾರ ಸಂಜೆ 5:30ಕ್ಕೆ, ಬಳ್ಳಾರಿ ನಗರದ ವಟ್ಟಪ್ಪ ಕೇರಿ 30ನೇ ವಾರ್ಡಿನ ಕೆಂಚಮ್ಮನ ಗುಡಿ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶ್ರೀಮತಿ ನಾರಾಯಣಮ್ಮ, ವಾರ್ಡಿನ ಹಿರಿಯ ಮುಖಂಡರು ಜಂಬೆ ನುಡಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ನಾಗಮ್ಮನವರು ವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಬಂಡಿಹಟ್ಟಿ ಹೈಸ್ಕೂಲ್‌ನ ಇಂಗ್ಲಿಷ್ ಉಪನ್ಯಾಸಕ ಶ್ರೀಯುತ ಹೆಚ್. ಏಸಯ್ಯ ಅವರಿಂದ ಮೂಲ ಜಾನಪದ ಕಲೆಗಳ ಮಹತ್ವದ ಕುರಿತ ಉಪನ್ಯಾಸ. ಅವರು ಈ…

ಮುಂದೆ ಓದಿ..
ಅಂಕಣ 

ದೇವರ ಕೋಪ………

ದೇವರ ಕೋಪ……… ಹಿಂದೆ ಹಳ್ಳಿಗಳಿಗಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು, ಈಗ ರಸ್ತೆಗಳಿಗಾಗಿ ಹಳ್ಳಿಗಳನ್ನೇ ನಾಶಗೊಳಿಸಲಾಗುತ್ತಿದೆ…… ಹಿಂದೆ ಹಸಿವಿನಿಂದ ಸಾಕಷ್ಟು ಜನ ಸಾಯುತ್ತಿದ್ದರು, ಈಗ ಅತಿ ಹೆಚ್ಚು ಆಹಾರ ಸೇವನೆಯಿಂದ ಜನ ಸಾಯುತ್ತಿದ್ದಾರೆ…… ಹಿಂದೆ ಹೊಲಗದ್ದೆಗಳಲ್ಲಿ ದುಡಿದು ವಿಶ್ರಾಂತಿಗಾಗಿ ಜನ ಕಾಯುತ್ತಿದ್ದರು, ಈಗ ಅತಿಯಾದ ವಿಶ್ರಾಂತಿಯಿಂದಾಗಿ ದೈಹಿಕ ಚಟುವಟಿಕೆಗಳಿಲ್ಲದೆ ಜನ ಸಾಯುತ್ತಿದ್ದಾರೆ…….. ಹಿಂದೆ ಹತ್ತಾರು ಮಕ್ಕಳನ್ನು ತಂದೆ-ತಾಯಿಗಳು ಸಾಕುತ್ತಿದ್ದರು, ಈಗ ಒಬ್ಬನೇ ಮಗನಿಗೆ ತಂದೆ – ತಾಯಿಗಳೇ ಭಾರವಾಗುತ್ತಿದ್ದಾರೆ……. ಹಿಂದೆ ಹಣ ಅಂತಸ್ತು ಇಲ್ಲದೆ ಮನುಷ್ಯ ನೆಮ್ಮದಿಯಾಗಿದ್ದನು, ಈಗ ಅತಿಯಾದ ಹಣದಿಂದಾಗಿ ಮನುಷ್ಯನ ನೆಮ್ಮದಿಯೇ ಹಾಳಾಗಿದೆ….. ಹಿಂದೆ ಮದುವೆ ಎಂಬುದು ಸಂಬಂಧವಾಗಿತ್ತು, ಇಂದು ಮದುವೆಗಳು ಒಪ್ಪಂದಗಳಾಗಿವೆ…… ಹೀಗೆ ಆದ ಬದಲಾವಣೆ ಕಂಡು ಕೋಪಗೊಂಡ ದೇವರ ಮನದಾಳದ ಮಾತುಗಳು……. ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ,ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ,ನೀನು ನಿಂತಿರುವ ನೆಲವೇ ನನ್ನದು,ನೀನು ಉಸಿರಾಡುವ ಗಾಳಿ,…

ಮುಂದೆ ಓದಿ..
ಸುದ್ದಿ 

ಯಲಹಂಕ ಗಸ್ತಿನಲ್ಲಿ ಗಾಂಜಾ ಮಾರಾಟ ಗುತ್ತಿಗೆ: ಸಿಸಿಬಿ ದಾಳಿ, ಆರೋಪಿಗಳ ಬಂಧನ

ಬೆಂಗಳೂರು: ಜುಲೈ 16, 2025 ಬೆಂಗಳೂರಿನ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ, ನಗರ ಸಿಸಿಬಿ ಮಾದಕ ದ್ರವ್ಯ ನಿಯಂತ್ರಣ ದಳದ ಪೊಲೀಸರು ಅಪಾರ ಪ್ರಮಾಣದ ಗಾಂಜಾ ಸಾಗಾಣಿಕೆ ಹಾಗೂ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕ ದ್ರವ್ಯ ದಳದ ಇನ್‌ಸ್ಪೆಕ್ಟರ್ ಮಂಜಪ್ಪ ಅವರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಳಗ್ಗೆ ಸುಮಾರು 11:20 ರ ಸಮಯದಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದರು. ಆರೋಪಿಗಳು ತಮ್ಮ ಜೊತೆಗೆ ಇರಿಸಿಕೊಂಡಿದ್ದ 20-25 ಕಿಲೋಗ್ರಾಂ ತೂಕದ ಬ್ಯಾಗ್‌ನಲ್ಲಿ ಗಾಂಜಾ ಇಟ್ಟುಕೊಂಡಿದ್ದು, ಅದನ್ನು ರೈಲಿನಲ್ಲಿ ಸಾಗಿಸಿ ಬೆಂಗಳೂರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳು ಓಯಾಗಬುದೊಂಗ ಹಾಗೂ ಇನ್ನೊಬ್ಬ ವ್ಯಕ್ತಿಯಾಗಿದ್ದು, ಅವರು ಮಹತ್ವದ ಮಾದಕ ದ್ರವ್ಯ ಸಾಗಾಣಿಕೆಯಲ್ಲಿ ತೊಡಗಿರುವ ಸಾಧ್ಯತೆ ಇದೆ. ಯಲಹಂಕ ಪೊಲೀಸರು…

ಮುಂದೆ ಓದಿ..
ಸುದ್ದಿ 

ಚಿನ್ನಾಭರಣ ಕಳ್ಳತನ: ಮನೆ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಆಭರಣ ಮಿಸ್ಸಿಂಗ್

ಬೆಂಗಳೂರು ಗ್ರಾಮಾಂತರ ಜುಲೈ 16:2025 ವಿಜಯನಗರ ಗ್ರಾಮದಲ್ಲಿ ದಿನಾಂಕ 13-07-2025 ರಂದು ದಿನದ ಬೆಳಗ್ಗೆ ಸಂಭವಿಸಿದ ಕಳ್ಳತನದ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮನೆ ಮಾಲೀಕರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ದುಷ್ಕರ್ಮಿಗಳು ಮನೆ ಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ. ರಾಜಮ್ಮ ಅವರು ನೀಡಿದ ಮಾಹಿತಿಯ ಪ್ರಕಾರ, ಅವರು ಬೆಳಗ್ಗೆ 07:15 ಕ್ಕೆ ಕೆಲಸಕ್ಕೆ ಹೋಗಿದ್ದಾಗ ಮನೆಗೆ ತಾಯಿ ಅಕ್ಕಯಮ್ಮ, ಅಜ್ಜಿ ಮುನಿಯಮ್ಮ ಇದ್ದರು. ಮಧ್ಯಾಹ್ನ 02:20ರ ವೇಳೆಗೆ ಮನೆಗಿನ ಎಲ್ಲರೂ ಊರಿನ ಸಂಬಂಧಿಕರ ಜನ್ಮದಿನ ಪಾರ್ಟಿಗೆ ಹೋಗಿದ್ದರು. ಸಂಜೆ 04:00ಕ್ಕೆ ಮನೆಗೆ ವಾಪಸು ಬಂದಾಗ, ಬಾಗಿಲಿನ ಚಿಲಕ ಮುರಿಯಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿತು. ಮನೆ ಒಳಗೆ ಪರಿಶೀಲನೆ ನಡೆಸಿದಾಗ, ಬೀರುವಿನ ಲಾಕರ್ ಮುರಿಯಲಾಗಿದ್ದು, ಒಳಗೆ ಇಟ್ಟಿದ್ದ ಬಹುಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದವು. ಕಳ್ಳರು ಕದ್ದ್ದುಕೊಂಡು ಹೋದ ವಸ್ತುಗಳ ವಿವರ ಹೀಗಿದೆ: 11…

ಮುಂದೆ ಓದಿ..