ಸುದ್ದಿ 

ಅಭಿಯುಕ್ತನನ್ನು ಬಂಧಿಸಿದ ಪೊಲೀಸ್ ಇಲಾಖೆ – ನ್ಯಾಯಾಲಯದ ಶರತ್ತು ಉಲ್ಲಂಘಿಸಿದ್ದಕ್ಕಾಗಿ ವಾರೆಂಟ್ ಜಾರಿಗೆ ಕ್ರಮ

ಬೆಂಗಳೂರು, ಜುಲೈ 12:2025 ಅಮೃತಹಳ್ಳಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಅವರು ವಾರೆಂಟ್ ಕರ್ತವ್ಯದಲ್ಲಿ ತೊಡಗಿದ್ದ ಸಂದರ್ಭ, ನ್ಯಾಯಾಲಯದ ಶರತ್ತುಗಳನ್ನು ಉಲ್ಲಂಘಿಸಿ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಭಿಷೇಕ್ ಎಂಬ ಆರೋಪಿಯನ್ನು ಅಮೃತಳ್ಳಿ ಪೊಲೀಸರು ಬಂಧಿಸಿದ್ದಾರೆ. ಮೂರು ವರ್ಷ ಹಳೆಯದಾದ ಪ್ರಕರಣ ಸಂಖ್ಯೆ 217/2023 (ಸೆಕ್ಷನ್ 323, 324, 341, 504, 506 ರ along with 34 IPC) ನಿಂದ ಪ್ರತ್ಯಕ್ಷವಾಗಿ ಹೊರಬಂದಿರುವ ಈ ಆರೋಪಿಯು, ಹಿಂದೆ ನ್ಯಾಯಾಲಯದಿಂದ ಶರತ್ತುಬದ್ಧ ಜಾಮೀನು ಪಡೆದು ಹೊರಬಂದಿದ್ದನು. ಆದರೆ, ನಂತರ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ಈ ಕಾರಣದಿಂದಾಗಿ ನ್ಯಾಯಾಲಯವು ಆತನ ವಿರುದ್ಧ ವಾರೆಂಟ್ ಜಾರಿಗೆ ಒಪ್ಪಿಗೆ ನೀಡಿತ್ತು. ಜುಲೈ 9ರಂದು ಬೆಳಿಗ್ಗೆ 6:30ಕ್ಕೆ, ಪ್ರಕರಣದ ಪ್ರಕಾರ ಮುಖ್ಯ ಪೇದೆ ಹಾಗೂ ಹೆಡ್ ಕಾನ್ಸ್‌ಟೇಬಲ್ ರವಿ ಲಮಾಣಿ ಅವರನ್ನು ಕರ್ತವ್ಯಕ್ಕೆ ನೇಮಕಗೊಳಿಸಲಾಗಿತ್ತು. ಬಾತ್ಮಿದಾರರಿಂದ ದೊರಕಿದ ಖಚಿತ ಮಾಹಿತಿ ಆಧರಿಸಿ, ಬೆಳಗ್ಗೆ…

ಮುಂದೆ ಓದಿ..
ಸುದ್ದಿ 

ಚಿಗುರು ಆಸ್ಪತ್ರೆಯಲ್ಲಿ ನಸುಕಿನಲ್ಲಿ ನಗದು ಕಳ್ಳತನ – ಸಿಸಿ ಟಿವಿಯಲ್ಲಿ ಸೆರೆ ಸಿಕ್ಕ ದುಷ್ಕರ್ಮಿ

ದಿನಾಂಕ: ಜುಲೈ 12, 2025ಸ್ಥಳ: ಚಿಗುರು ಆಸ್ಪತ್ರೆ, ಬೆಂಗಳೂರು ನಗರದ ಚಿಗುರು ಆಸ್ಪತ್ರೆಯಲ್ಲಿ ಜುಲೈ 9 ರಂದು ನಸುಕಿನ ಜಾವ ಸುಮಾರು 3:25 ಗಂಟೆ ಸಮಯದಲ್ಲಿ, ಅಪರಿಚಿತ ವ್ಯಕ್ತಿಯೊಬ್ಬರು ರಿಸೆಪ್ಷನ್ ಕೌಂಟರ್‌ನ ಬೀಗ ಮುರಿದು ರೂ. 83,400 ನಗದು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆಯ ವ್ಯವಸ್ಥಾಪಕ ಸದಸ್ಯರೊಬ್ಬರು ನೀಡಿದ ದೂರಿನ ಪ್ರಕಾರ, ಬೆಳಿಗ್ಗೆ ಬಂದಾಗ ಕೌಂಟರ್‌ನ ಬೀಗ ಮುರಿದಿರುವುದನ್ನು ಗಮನಿಸಿದ ಅವರು ತಕ್ಷಣವೇ ಸುತ್ತಮುತ್ತ ನೋಡಿದರೂ ಯಾರನ್ನೂ ಕಾಣಲಾಗಲಿಲ್ಲ. ಬಳಿಕ ಸೆಕ್ಯುರಿಟಿ ಸಿಬ್ಬಂದಿಯನ್ನು ವಿಚಾರಿಸಿದರೂ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನು ತಲೆಗೆ ಟೋಪಿ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ, ರಿಸೆಪ್ಷನ್ ಕೌಂಟರ್‌ನ ಬೀಗ ಮುರಿದು ನಗದು ಹಣವನ್ನು ಕದ್ದೊಯ್ದಿರುವುದು ದೃಢಪಟ್ಟಿದೆ. ಆಸ್ಪತ್ರೆಯ ನಿರ್ವಹಣಾ ಮಂಡಳಿ ಸದಸ್ಯರು ಚರ್ಚಿಸಿ, ಈ ರಾಜನಕುಂಟೆ…

ಮುಂದೆ ಓದಿ..
ಸುದ್ದಿ 

ಪತ್ನಿ ಹಾಗೂ ಮಕ್ಕಳ ಮೇಲೆ ನಿರಂತರ ಹಲ್ಲೆ – ಗಂಡನ ವಿರುದ್ಧ ಗಂಭೀರ ಎಫ್‌ಐಆರ್ ದಾಖಲು

ದೊಡ್ಡಬಳ್ಳಾಪುರ, ಜುಲೈ 12:2025 ದೊಡ್ಡಬಳ್ಳಾಪುರ ತಾಲ್ಲೂಕಿನ ಕಸ್ತೂರು ಗ್ರಾಮದ ಮಹಿಳೆ ತನ್ನ ಗಂಡನ ವಿರುದ್ಧ ನಿರಂತರ ಮಾನಸಿಕ ಹಾಗೂ ದೈಹಿಕ ಹಲ್ಲೆ, ಅಕ್ರಮ ಸಂಬಂಧ ಹಾಗೂ ಕೊಲೆ ಬೆದರಿಕೆ ನೀಡಿದ ಪ್ರಕರಣವಾಗಿ ರಾಜನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಂಡನ ವಿರುದ್ದ BNS ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರೆಯು ತನ್ನ ಗಂಡ ಮೂರ್ತಿಯೊಂದಿಗೆ ಮದುವೆಯಾಗಿದ್ದು, ಅವರಿಗೆ ಅಮೃತ (14 ವರ್ಷ) ಹಾಗೂ ಆಕಾಂಶ (11 ವರ್ಷ) ಎಂಬ ಇಬ್ಬರು ಪುತ್ರಿಯರಿದ್ದಾರೆ. ಮದುವೆಯಾದ ಮೊದಲ ಮೂರು ವರ್ಷಗಳವರೆಗೆ ಸಂಸಾರ ಸುಗಮವಾಗಿದ್ದರೂ ನಂತರ ಮೂರ್ತಿ ದಿನವೂ ಮದ್ಯಪಾನ ಮಾಡಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪತ್ನಿಗೆ ಹಲ್ಲೆ ಮಾಡುತ್ತಿದ್ದ. ಅಲ್ಲದೆ, ಮೂರ್ತಿ “ಅಮೃತ” ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡು ನಂತರ ಆಕೆಯನ್ನೇ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ, 2025ರ…

ಮುಂದೆ ಓದಿ..
ಸುದ್ದಿ 

ಪತ್ನಿಗೆ ಮಾನಸಿಕ, ದೈಹಿಕ ಹಿಂಸೆ – ಗಂಡನ ವಿರುದ್ಧ ಕೇಸು ದಾಖಲು

ಬೆಂಗಳೂರು ಗ್ರಾಮಾಂತರ, ಜುಲೈ 8, 2025: ತಾವು ಹಲವು ವರ್ಷಗಳಿಂದ ಗಂಡನಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಗಾಗುತ್ತಿದ್ದೇನೆ ಎಂಬ ಪತ್ನಿಯ ದೂರಿನ ಮೇರೆಗೆ, ಗಂಡನ ವಿರುದ್ಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ದೂರುದಾರರಾದ ಮಹಿಳೆ ತಮ್ಮ ಮನವಿಯಲ್ಲಿ, ತವರು ಮನೆ ಗಂಡರಗೋಳಿಪುರವಾಗಿದ್ದು, 2018ರ ಮೇ 9 ರಂದು ಕನ್ನಮಂಗಲ ಗ್ರಾಮದ ಎಲ್.ಜಿ. ಮಹಲ್ ಕಲ್ಯಾಣ ಮಂಟಪದಲ್ಲಿ ಹರೀಶ್ ಎಸ್.ಆರ್ ಅವರೊಂದಿಗೆ ವಿವಾಹವಾಗಿದೆ ಎಂದು ತಿಳಿಸಿದ್ದಾರೆ. ದಂಪತಿಗೆ 2019ರ ಜನವರಿ 31ರಂದು ಮಗುವೂ ಆಗಿದೆ. ಆದರೆ ಮದುವೆಯ ಬಳಿಕ, ಗಂಡ ಮೊಬೈಲ್‌ನಲ್ಲಿ ಇತರ ಮಹಿಳೆಯರೊಂದಿಗೆ ಮಾತನಾಡುತ್ತಿದ್ದುದು ಕಂಡು ಬಂದು ವಿಚಾರಿಸಿದಾಗ, ತಪ್ಪು ಒಪ್ಪಿಕೊಂಡಿದ್ದ. ನಂತರವೂ ಪ್ರತಿದಿನ ಮದ್ಯಪಾನ ಮಾಡಿ ಮನೆಯವರಿಗೆ ವಿರೋಧವಾಗಿ ಮಾತನಾಡಿದೆಯೆಂದು ಆರೋಪಿಸಿ, ಜಗಳವಾಡಿ, ದೈಹಿಕವಾಗಿ ಹೊಡೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ಹೇಳಲಾಗಿದೆ. 07 ಜುಲೈ 2025ರಂದು ರಾತ್ರಿ ಸುಮಾರು 7:30ರ…

ಮುಂದೆ ಓದಿ..
ಸುದ್ದಿ 

ಸಂಸ್ಥೆಯಲ್ಲಿ ನಕಲಿ ಆರ್ಡರ್‌ಗಳ ಮೂಲಕ ₹15 ಲಕ್ಷದ ಮೋಸ: ಉದ್ಯೋಗಿ ಸೆಲ್ವಕುಮಾರ್ ವಿರುದ್ಧ FIR

ಬೆಂಗಳೂರು, ಜುಲೈ 12:2025 ರಾಜಧಾನಿ ಬೆಂಗಳೂರು ಸೇರಿದ ಖಾಸಗಿ ಎಲೆಕ್ಟ್ರಾನಿಕ್ಸ್ ಕಂಪನಿಯಾದ Nenton Electronics (EL 11863) ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸಮಾಡುತ್ತಿದ್ದ ಸೆಲ್ವಕುಮಾರ್ ಸಕರ ಎಂಬವರು ಕಂಪನಿಯ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ನಕಲಿ ಪರ್ಚೇಸ್ ಆರ್ಡರ್‌ಗಳ ಮೂಲಕ ₹15,45,800 ಮೊತ್ತದ ಹಣವನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತದಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಂಪನಿಯವರ ಪ್ರಕಾರ, ಈ ಹಣಕಾಸು ಅವ್ಯವಹಾರದ ಪರಿಣಾಮವಾಗಿ ಸಂಸ್ಥೆಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ದೂರಿನಲ್ಲಿ ಕೇಳಲಾದ ಪ್ರಮುಖ ಬೇಡಿಕೆಗಳು: ಆರೋಪಿಯನ್ನು ತಕ್ಷಣ ಬಂಧಿಸಬೇಕು ಕಂಪನಿಗೆ ವಂಚನೆಯ ಮೂಲಕ ಉಂಟಾದ ಮೊತ್ತವನ್ನು ಮರುಪಡೆಯಬೇಕು ಸೆಲ್ವಕುಮಾರ್ ವಿರುದ್ಧ ಸಂಪೂರ್ಣ ತನಿಖೆ ನಡೆಯಬೇಕು ಬಾಗಲೂರು ಪೊಲೀಸ್ ಠಾಣೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಹೋಟೆಲ್‌ಗೆ ಹೋದ ಗಂಡ ಮರಳದೇ ಕಾಣೆಯಾಗಿದ್ದಾನೆ – ಪತ್ನಿಯಿಂದ ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಜುಲೈ 12 –2025 ನಗರದ ರೆಸಿಡೆನ್ಶಿಯಲ್ ಪ್ರದೇಶವೊಂದರಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಗಂಡನೊಂದು ಕಾಣೆಯಾಗಿರುವ ಘಟನೆ ಇದೀಗ ಆತಂಕವನ್ನು ಉಂಟುಮಾಡಿದೆ. ಪತ್ನಿ ನೀಡಿದ ದೂರಿನ ಆಧಾರದಲ್ಲಿ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ದೂರು ನೀಡಿದ ಮಹಿಳೆ ಹೇಳುವಂತೆ, “ನಾನು ನನ್ನ ತಂದೆ ತಾಯಿಯವರೊಂದಿಗೆ ವಾಸವಾಗಿದ್ದೇನೆ. ನನ್ನ ಗಂಡ ದಾದಪೀರ್ (26) ಅವರು 10/07/2025 ರಂದು ಬೆಳಗ್ಗೆ ಸುಮಾರು 6:30ರ ಸುಮಾರಿಗೆ ‘ಹೋಟೆಲ್‌ಗೆ ಹೋಗಿ ತಿಂಡಿ ಪಾರ್ಸಲ್ ತೆಗೆದುಕೊಂಡು ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೋದವರು, ಇದುವರೆಗೆ ವಾಪಸು ಬಂದಿಲ್ಲ.” ತಕ್ಷಣ ಅವರ ಗಂಡನ ತಾಯಿಗೆ ಹಾಗೂ ಸಂಬಂಧಿಕರಿಗೆ ವಿಚಾರಿಸಿದರೂ, ಅವರು ಸಹ ಮನೆಗೆ ಬಾರದ ಬಗ್ಗೆ ತಿಳಿಸಿದರು. ಗಂಡನ ಎರಡು ಮೊಬೈಲ್ ಸಂಖ್ಯೆಗಳಿಗೆ (8123937754 / 8217322608) ಸಂಪರ್ಕ ಮಾಡಲು ಯತ್ನಿಸಿದಾಗ, ಎರಡೂ ಸಂಖ್ಯೆಗಳೂ ಸ್ವಿಚ್ ಆಫ್ ಆಗಿದ್ದವು. ಕಾಣೆಯಾದ ವ್ಯಕ್ತಿಯ ವಿವರಗಳು ಹೀಗಿವೆ: ಹೆಸರು: ದಾದಪೀರ್…

ಮುಂದೆ ಓದಿ..
ಸುದ್ದಿ 

ಆತ್ಮೀಯರ ನಂಬಿಕೆಯನ್ನು ದುರ್ಬಳಕೆ ಮಾಡಿದ ಅಖಿಬರಾಯಿ ವಿರುದ್ಧ ಎಫ್‌ಐಆರ್: ಮಹಿಳೆಗೆ ಹಲ್ಲೆ, ಆಭರಣ ದೋಚಿದ ಆರೋಪ

ಬೆಂಗಳೂರು, ಜುಲೈ 12 2025 ನಗರದ ಎಸ್.ಆರ್.ಕೆ ನಗರ ಠಾಣಾ ವ್ಯಾಪ್ತಿಯ ರಾಚೀನಹಳ್ಳಿಯಲ್ಲಿ ಭದ್ರತೆಗೆ ಧಕ್ಕೆ ಉಂಟುಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಯುವತಿಗೆ, ಆರು ವರ್ಷಗಳ ದೀರ್ಘ ಸ್ನೇಹದ ಸಂಬಂಧವನ್ನು ನಂಬಿ ಶರಣಾದ ಅಖಿಬರಾಯಿ ಎಂಬ ಮಹಿಳೆ ಮತ್ತು ನರಸಿಂಹಮೂರ್ತಿ ಎಂಬವರು ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಪೀಡಿತ ಮಹಿಳೆ ಈಗ ರಾಚೀನಹಳ್ಳಿ ಭಾಗ್ಯಶ್ರೀ ರಾಯಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಈ ಹಿಂದೆ ಅಖಿಬರಾಯಿಯೊಂದಿಗೆ ಐದು ವರ್ಷಗಳ ಕಾಲ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದಳು. ಇತ್ತೀಚೆಗೆ ಅವಳೊಂದಿಗೆ ಸಂಬಂಧ ಮುರಿದುಬಿಟ್ಟು ಬೇರೆ ಮನೆಗೆ ಸ್ಥಳಾಂತರವಾದ ಪೀಡಿತೆಗೆ ಅಖಿಬರಾಯಿ ಜೂನ್ 6ರಂದು ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ‘ಅಪಘಾತವಾಗಿದೆ’ ಎಂಬ ನಾಟಕವಾಡಿ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಾಳೆ. ಬಾಗಿಲು ತೆರೆದ ತಕ್ಷಣ ಪೀಡಿತೆಯ ಮೇಲೆ ಹಲ್ಲೆ ನಡೆಸಿ, ಕೈ ಉಗುರಿನಿಂದ ಮೈಮೇಲೆ ಗಾಯಗೊಳಿಸಿ, ಮೊಬೈಲ್ ಫೋನ್…

ಮುಂದೆ ಓದಿ..
ಸುದ್ದಿ 

₹1.l64 ಲಕ್ಷ ಮೊತ್ತದ ಮೋಸ: ರೆಸ್ಟೋರೆಂಟ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್

ಬೆಂಗಳೂರು, ಜುಲೈ 12:2025 ನಗರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಡೈಲಿ ಸುತಿ ರೆಸ್ಟೋರೆಂಟ್‌ನ ಮಾಜಿ ಸೀನಿಯರ್ ವರ್ಕರ್ ದೇವೇಂದ್ರ ಪ್ರಸಾದ್ ಉಪಾಧ್ಯಾಯ ವಿರುದ್ಧ ₹1,64,423 ಮೊತ್ತದ ಹಣವನ್ನು ಕಂಪನಿಗೆ ವಾಪಸ್ ಮಾಡದೇ ಹಗರಣ ಮಾಡಿಕೊಂಡಿದ್ದಾನೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮಾಹಿತಿ ಈ ರೀತಿ ಇದೆ: BUZA FOODS PVT LTD ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರ ಉಪಾಧ್ಯಾಯರು 17-04-2023 ರಂದು ಇಂಕೋಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಡೈಲಿ ಸುತಿ ಘಟಕದಲ್ಲಿ ಕೆಲಸಕ್ಕೆ ಸೇರಿದ್ದರು. ಅವರು 31-12-2024 ರವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದರು. ನಂತರ 01-01-2025 ರಂದು ಅವರನ್ನು BUZA FOODS PVT LTD ಗೆ ವರ್ಗಾಯಿಸಲಾಯಿತು. ಆದರೆ, 03-07-2025 ರಂದು ಅವರು ಯಾವುದೇ ಪೂರ್ವ ಮಾಹಿತಿ ಇಲ್ಲದೆ ಕರ್ತವ್ಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ಸೇಲ್ಸ್‌ರಿಪೋರ್ಟ್ ಪರಿಶೀಲನೆ ವೇಳೆ ಗ್ರಾಹಕರಿಂದ ವಸೂಲಾದ ₹1,64,423…

ಮುಂದೆ ಓದಿ..
ಅಂಕಣ 

ಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ..

ಭಾರತ್ ಬಂದ್…….ಜುಲೈ 9 ನೇ ತಾರೀಖಿನ ಭಾರತ್ ಬಂದ್ ಬಹುತೇಕ ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ……..ಸುಮಾರು 30 ವರ್ಷಗಳು ಅಥವಾ ಅದಕ್ಕಿಂತ ಹಿಂದೆ ಹೀಗೆ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದರೆ ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೆಂದರೆ ಇಡೀ ದೇಶದಲ್ಲಿ ಬಹುತೇಕ ಬಂದ್ ಆಚರಿಸಲಾಗುತ್ತಿತ್ತು. ಸಣ್ಣಪುಟ್ಟ ಗ್ರಾಮಗಳಲ್ಲಿ ಸಹ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ ಬೃಹತ್ ಮೆರವಣಿಗೆ ಘೋಷಣೆಗಳು ನಡೆಯುತ್ತಿದ್ದವು. ಜನರ ಪ್ರತಿಕ್ರಿಯೆ ಅದ್ಭುತವಾಗಿರುತ್ತಿತ್ತು. ವಾಹನ ಸಂಚಾರ ಸಂಪೂರ್ಣ ನಿಂತು ರಸ್ತೆಗಳು ಭಣಗುಡುತ್ತಿದ್ದವು. ಬೀದಿಗಳಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಲ್ಲಿ ಒಂದಷ್ಟು ಗಲಭೆ, ಬೆಂಕಿ, ಹಿಂಸಾಚಾರ, ಲಾಠಿಚಾರ್ಜ್, ಅಶ್ರುವಾಯು, ಗೋಲಿಬಾರ್ ನಡೆಯುತ್ತಿದ್ದವು. ಸರ್ಕಾರಗಳು ನಡುಗುತ್ತಿದ್ದವು. ಆದರೆ 2025 ರ ಜುಲೈ 9 ರ ಈ ಬಂದ್ ಇಷ್ಟೊಂದು ಸಂಪರ್ಕ ಕ್ರಾಂತಿಯ ನಡುವೆಯೂ ಎಷ್ಟೋ ಜನರಿಗೆ ಗೊತ್ತೇ ಆಗಲಿಲ್ಲ. ಮಾಧ್ಯಮಗಳು ಪ್ರಚಾರವನ್ನೂ ಕೊಡಲಿಲ್ಲ. ಕಾರಣ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿರುವುದೇ ಅಥವಾ…

ಮುಂದೆ ಓದಿ..
ಸುದ್ದಿ 

ಸಾಲದ ಹೆಸರಿನಲ್ಲಿ ಲೈಂಗಿಕ ಕಿರುಕುಳ: ಮಹಿಳೆಯ ದೂರಿನೊಂದಿಗೆ ಎಜಿ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು

ಬೆಂಗಳೂರು, ಜುಲೈ 10 –2025 ಅಕ್ಕಿ ವ್ಯವಹಾರ ನಡೆಸುತ್ತಿರುವ ಮಹಿಳೆ ಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪದ ಮೇಲೆ ಎ.ಜಿ. ಶಿವಕುಮಾರ್ ನಾರಾಯಣ ಎಂಬಾತನ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಹಿಳೆ ಮೂರು ವರ್ಷಗಳ ಹಿಂದೆ ತನ್ನ ಅಕ್ಕಿ ಬಿಸಿನೆಸ್‌ಗಾಗಿ ಹಣಕಾಸು ಸಹಾಯ ಪಡೆದಿದ್ದು, ಈ ಸಂದರ್ಭದಲ್ಲಿ ಪರಿಚಿತನಾಗಿದ್ದ ಶಿವಕುಮಾರ್ ನಾರಾಯಣನಿಂದ ಸಾಲ ಪಡೆದುಕೊಂಡಿದ್ದಳು. ಸಾಲ ನೀಡುವ ವೇಳೆ ಸೆಕ್ಯುರಿಟಿ ಡಿಪಾಸಿಟ್‌ವೆಂದು ಆಕೆಯ ಎಸ್ಸಿಐ ಬ್ಯಾಂಕ್‌ನ ಮೂವರು ಖಾಲಿ ಚೆಕ್‌ಗಳನ್ನು ತೆಗೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಲ ತೀರಿಸಿದ ನಂತರ, ಮಹಿಳೆ ಚೆಕ್‌ಗಳನ್ನು ಹಿಂತಿರುಗಿಸಬೇಕೆಂದು ಕೇಳಿದಾಗ, ಶಿವಕುಮಾರ್ ವಾಟ್ಸಪ್ ಮೂಲಕ “ನೀನು ನನ್ನ ಹತ್ತಿರ ಬಂದು ಮಲಗಿದರೆ ನಿನ್ನ ಚೆಕ್‌ಗಳನ್ನು ಕೊಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅವನು ಮಹಿಳೆಯ ನಂಬರಿಗೆ ಅನೇಕ ಬಾರಿ ತನ್ನ ನಗ್ನ…

ಮುಂದೆ ಓದಿ..