ಮಹಿಳೆಯ ಮಾಂಗಲ್ಯ ಸರ ಕಳವಿಗೆ ಸಂಬಂಧಿಸಿ ಎಫ್ಐಆರ್
– ಬೆಂಗಳೂರು, ಜುಲೈ 14:2025 ನಗರದ ಹಲಸೂರು ಪ್ರದೇಶದಲ್ಲಿ ನಿದ್ರೆ ಮಧ್ಯೆ ಕಳ್ಳತನ ನಡೆದಿರುವ ಘಟನೆ ವರದಿಯಾಗಿದ್ದು, ಮಹಿಳೆಯ ಮಾಂಗಲ್ಯ ಸರ ಕಳವಾಗಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ. ಶ್ರೀಮತಿ ಸರಸ್ವತಿ ಎ. ಆರ್. ಎಂಬವರ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ಹಲಸೂರಿನಲ್ಲಿರುವ ಪಿಎಂಎಸ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಗಂಡ ಮತ್ತು ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಘಟನೆ ನಡೆದಿದೆ ಎನ್ನಲಾಗಿದೆ. ಸರಸ್ವತಿ ಅವರ ಪತಿ ಪೋಸ್ಟ್ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದು, ಅವರು 10-07-2025 ರಂದು ರಾತ್ರಿ ಪಾಳಿಯ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ, ಮನೆಯಲ್ಲಿ ಸರಸ್ವತಿ ಅವರು ತಮ್ಮ ರೂಮ್ನ ಕಿಟಕಿಯನ್ನು ತೆರೆದು ಮಲಗಿದ್ದರು. ಮಧ್ಯರಾತ್ರಿ ಸುಮಾರು 2:00 ಗಂಟೆಗೆ ನಿದ್ರೆಗೆ ಹೋಗಿದ್ದ ಅವರು, ಸುಮಾರು 3:45ರ ವೇಳೆಗೆ ಎಚ್ಚರಗೊಂಡಾಗ, ಅವರ ಕುತ್ರಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ…
ಮುಂದೆ ಓದಿ..
