ಆನ್ಲೈನ್ ವಂಚನೆ: ಗ್ರಾಹಕರ ಕ್ರೆಡಿಟ್ ಕಾರ್ಡ್ನಿಂದ ₹40,183 ಅಕ್ರಮ ವಹಿವಾಟು
ನಗರದಲ್ಲೊಂದು ಮತ್ತೊಂದು ಆನ್ಲೈನ್ ಹಣಕಾಸು ವಂಚನೆಯ ಘಟನೆ ಬೆಳಕಿಗೆ ಬಂದಿದೆ. HSBC ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕ ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರು ತಮ್ಮ ಕಾರ್ಡ್ನಿಂದ ಅಕ್ರಮವಾಗಿ ಹಣ ವರ್ಗಾವಣೆಗೊಂಡ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ ರವರ ಪ್ರಕಾರ, ಅವರು ಹೊಂದಿರುವ Visa Platinum ಕ್ರೆಡಿಟ್ ಕಾರ್ಡ್ (ನಂ. 4862 XXXX XXXX 2595) ಮೂಲಕ ದಿನಾಂಕ 08.06.2025 ರಂದು Jioeat.in ಎಂಬ ಆನ್ಲೈನ್ ಆಹಾರ ವಿತರಣಾ ವೇದಿಕೆಯ ಲಿಂಕ್ ಮೂಲಕ ಆರ್ಡರ್ ಮಾಡಲು ಯತ್ನಿಸಿದ್ದು, ಆ ಸಮಯದಲ್ಲಿ ಬಂದ ಓಟಿಪಿ (OTP) ಅನ್ನು ಅವರು ಶೇರ್ ಮಾಡಿದ ಬಳಿಕ ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಹಂತ ಹಂತವಾಗಿ ಮೊತ್ತ ₹40,183 ರಷ್ಟು ಹಣವನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ. ಶ್ರೀ ರಮೀಜ್ ರಾಜಾ ಅಮನುಲ್ಲಹಾ ಮಾಹಿತಿ ಪ್ರಕಾರ, ಈ…
ಮುಂದೆ ಓದಿ..
