ಹೆಬ್ಬಾಳ ಫ್ಲೈಓವರ್ ನಲ್ಲಿ ಅಪಘಾತ: ಆಟೋ ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಗಾಯ
ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಾಯವಾಗಿದೆ. ಬೆಳಗ್ಗೆ ಸುಮಾರು 9.00 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಅತಿವೇಗದ ಆಟೋ ಚಾಲನೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೀಮಣ್ಣ ಅವರು ತಮ್ಮ KA-03-AC-4483 ಸಂಖ್ಯೆಯ ಕಾರನ್ನು ಚಾಲನೆ ಮಾಡುತ್ತಾ ಬಿ.ಬಿ ರಸ್ತೆಯ ಕೋಡಿಗೇಹಳ್ಳಿ ಫ್ಲೈಓವರ್ ಮೂಲಕ ದೇವನಹಳ್ಳಿ ಕಡೆಗೆ ತೆರಳುತ್ತಿದ್ದರು. ಇದೇ ವೇಳೆಯಲ್ಲಿ KA-53-A-6419 ಸಂಖ್ಯೆಯ ಆಟೋ ಒಂದು ಹಿಂದಿನಿಂದ ಬಂದು ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿ ರಸ್ತೆ ಮೇಲೆ ಉರುಳಿದ್ದು, ಆಟೋದೊಳಗೆ ಪ್ರಯಾಣಿಸುತ್ತಿದ್ದ ಮುದ್ದು ಲಕ್ಷ್ಮಿ ಎಂಬುವವರು ಕಾಲಿಗೆ ಪೆಟ್ಟಾಗಿದ್ದಾರೆ. ಆಟೋ ಚಾಲಕ ವೆಂಕಟೇಶ್ ಅವರಿಗೂ ಮುಖದಲ್ಲಿ ಗಾಯವಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ತಕ್ಷಣವೇ ನೆರವಿಗೆ ಧಾವಿಸಿ ಆಟೋವನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ಕಾಪಾಡಿದ್ದಾರೆ. ಘಟನೆಯ ಮಾಹಿತಿ ಪಡೆದ…
ಮುಂದೆ ಓದಿ..
