ಸುದ್ದಿ 

ರಾತ್ರಿ ಪಾಳಿ ( Night shift ) ತುಂಬಾ ಗಂಭೀರ ವಿಷಯ. ದಯವಿಟ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ………

ರಾತ್ರಿ ಪಾಳಿ ( ನೈಟ್ ಶಿಫ್ಟ್ ) ಎಂಬ ಉದ್ಯೋಗಿಗಳ ಕೆಲಸದ ಅವಧಿಯು ಒಂದು ಯುವ ಪೀಳಿಗೆಯನ್ನೇ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಸಿಲುಕಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತುಂಬಾ ದುಷ್ಪರಿಣಾಮವನ್ನು ಬೀರುತ್ತಿದೆ. ನನಗೆ ಪರಿಚಯದ ಎಲ್ಲಾ ಕ್ಷೇತ್ರಗಳ ಕಂಪನಿ, ಕಾರ್ಖಾನೆ, ಇತ್ಯಾದಿಗಳಲ್ಲಿ  ರಾತ್ರಿ ಪಾಳಿಯಲ್ಲಿ ನಿಯಮಿತವಾಗಿ ಕೆಲಸ ಮಾಡುವ ಉದ್ಯೋಗಿಗಳನ್ನು, ಆತ್ಮೀಯರನ್ನು ಮಾತನಾಡಿಸಿದೆ. ಅವರೆಲ್ಲರ ಅನಿಸಿಕೆ, ಅಭಿಪ್ರಾಯವೇನೆಂದರೆ ರಾತ್ರಿ ಪಾಳಿಯಲ್ಲಿ ಖಂಡಿತವಾಗಲೂ ನಿದ್ರಾಹೀನತೆಯಿಂದ ಕೆಲವಷ್ಟು ಸಾಮಾನ್ಯ ಮತ್ತು ದೀರ್ಘ ಖಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ಕೆಲವರಂತೂ ರಾತ್ರಿ ಪಾಳಯ ಒಂದು ದುಃಸ್ವಪ್ನ. ಅದರಿಂದಾಗಿ ನಾನು ಖಿನ್ನತೆಗೆ ಒಳಗಾಗಿ ವೈದ್ಯರ ಸಲಹೆ ಪಡೆಯುತ್ತಿದ್ದೇನೆ ಎಂದರು. ಹಲವರು ಕೌಟುಂಬಿಕ ಸಮಸ್ಯೆಗೂ ಇದು ಕಾರಣವಾಗಿದೆ ಎಂದು ಹೇಳಿದರು. ಕೆಲವು  ಕ್ಷೇತ್ರಗಳಲ್ಲಿ ರಾತ್ರಿ ಪಾಳಿಯು ಅನಿವಾರ್ಯವೇನೋ ನಿಜ. ಆದರೆ ಅದಕ್ಕೆ ಕೆಲವೊಂದು ಪರಿಹಾರ ರೂಪದ ಬದಲಾವಣೆಯು ತೀರ ಅಗತ್ಯವಾಗಿದೆ. ಇದು ಅತಿಯಾಗಿ ದೇಹ ಮತ್ತು…

ಮುಂದೆ ಓದಿ..
ಸುದ್ದಿ 

ಹೆಬ್ಬಾಳ ಸೇತುವೆ ಬಳಿ ಕಂಟೈನರ್ ಲಾರಿ ಡಿಕ್ಕಿ – ತಾಯಿ-ಮಗನಿಗೆ ಗಂಭೀರ ಗಾಯ

ಬೆಂಗಳೂರು: ಅಕ್ಕಿಪೇಟೆಯಿಂದ ಕೋಡಿಗೆಹಳ್ಳಿಯಲ್ಲಿರುವ ಬಂಧುವಿನ ಮನೆಗೆ ತೆರಳುತ್ತಿದ್ದ ತಾಯಿ-ಮಗನ ಸ್ಕೂಟರ್‌ಗೆ ಮಧ್ಯರಾತ್ರಿ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಆಗಸ್ಟ್ 6ರ ಮಧ್ಯರಾತ್ರಿ ನಡೆದಿದೆ. ಪೊಲೀಸರ ಪ್ರಕಾರ, ಗಾಯಗೊಂಡವರು ರಾಜೇಶ್ ಎ. (ಮಗ) ಮತ್ತು ಶಾಂತಿ (ತಾಯಿ). ಇಬ್ಬರೂ ಸ್ಕೂಟರ್ (KA-01-JC-6720) ನಲ್ಲಿ ಬಿಬಿ ರಸ್ತೆ ಮಾರ್ಗವಾಗಿ ಹೆಬ್ಬಾಳ ನ್ಯಾರೋ ಬ್ರಿಡ್ಜ್ ಹತ್ತಿರ ಕೋಡಿಗೆಹಳ್ಳಿಯ ಕಡೆಗೆ ತೆರಳುತ್ತಿದ್ದಾಗ, ಸುಮಾರು 1 ಗಂಟೆಗೆ ಹಿಂಬದಿಯಿಂದ ಬಂದ ಕಂಟೈನರ್ ಲಾರಿ (RJ-14-GG-8561) ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ, ಸ್ಕೂಟರ್ ಸವಾರರು ರಸ್ತೆ ಮೇಲೆ ಬಿದ್ದು, ಲಾರಿಯ ಚಕ್ರ ಕಾಲುಗಳ ಮೇಲೆ ಹರಿದ ಪರಿಣಾಮ ರಾಜೇಶ್ ಎ. ಅವರಿಗೆ ಎರಡೂ ಕಾಲು, ಎಡ ಕೈ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಎಡ ಕಾಲಿನ ಮಂಡಿಯ ಕೆಳಭಾಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ. ಶಾಂತಿ…

ಮುಂದೆ ಓದಿ..
ಸುದ್ದಿ 

ರೂಪೇನ ಅಗ್ರಹಾರದ ಯುವತಿ ನಾಪತ್ತೆ

ಬೆಂಗಳೂರು, ಆ.09— ನಗರದ ರೂಪೇನ ಅಗ್ರಹಾರ ಪ್ರದೇಶದ 25 ವರ್ಷದ ಯುವತಿ ಸುಶ್ಮಿತಾ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀನಿವಾಸ್ ಬಿನ್ ವೆಂಕಟರಮಣಪ್ಪ (ತರಕಾರಿ ವ್ಯಾಪಾರಿ) ಅವರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಸುಶ್ಮಿತಾ ಪ್ರತಿದಿನ ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆ ತೆರಳಿ ರಾತ್ರಿ 8 ಗಂಟೆಗೆ ಮನೆಗೆ ವಾಪಸ್ಸಾಗುತ್ತಿದ್ದಳು. ಆಗಸ್ಟ್ 7 ರಂದು ಬೆಳಿಗ್ಗೆ “ಕೆಲಸಕ್ಕೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟ ಸುಶ್ಮಿತಾ, ರಾತ್ರಿ ಮನೆಗೆ ವಾಪಸ್ಸಾಗಲಿಲ್ಲ. ಕುಟುಂಬಸ್ಥರು ಅವಳ ಮೊಬೈಲ್ ನಂಬರುಗಳಿಗೆ (7904224909, 8884864909) ಕರೆ ಮಾಡಿದರೂ, ಫೋನ್ ಸ್ವಿಚ್ ಆಫ್ ಆಗಿತ್ತು. ಸಂಬಂಧಿಕರು, ಸ್ನೇಹಿತರು ಹಾಗೂ ಕೆಲಸ ಮಾಡುವ ಕಚೇರಿಯಲ್ಲಿ ವಿಚಾರಿಸಿದಾಗಲೂ ಅವಳ ಬಗ್ಗೆ ಯಾವುದೇ ಮಾಹಿತಿ ದೊರಕಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಸುಳಿವು ಸಿಗದೆ ಹೋದ ಹಿನ್ನೆಲೆಯಲ್ಲಿ ತಡವಾಗಿ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಸೇಲಂ ಕೈದಿ ಪತ್ನಿಯಿಂದ ಗಂಭೀರ ಆರೋಪ – ಅಪಹರಣ, ಕೊಲೆ ಪ್ರಕರಣದಲ್ಲಿ ಗಂಡನಿಗೆ ಸುಳ್ಳು ಆರೋಪ?

ಬೆಂಗಳೂರು, ಆಗಸ್ಟ್ 9:ಸೇಲಂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶ್ರೀನಿವಾಸ್ ಎಂಬುವವರ ಪತ್ನಿ ಯಲ್ಲಮ್ಮ ಅವರು ತಮ್ಮ ಗಂಡನ ವಿರುದ್ಧ ದಾಖಲಾಗಿರುವ ಪ್ರಕರಣ ಸುಳ್ಳು ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಯಲ್ಲಮ್ಮ ಅವರು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರು (ಪಿ.ಸಿ.ಆರ್ 265/2025) ಪ್ರಕಾರ, 17-09-2024ರ ರಾತ್ರಿ ಸರ್ಜಾಪುರ ರಸ್ತೆ ಚಂಬೇನಹಳ್ಳಿ ಗೇಟ್ ಬಳಿ ಶ್ರೀನಿವಾಸ್ ಅವರ ಟಾಟಾ ಏಸ್ ವಾಹನಕ್ಕೆ ಮತ್ತೊಂದು ಟಾಟಾ ಏಸ್ ಡಿಕ್ಕಿ ಹೊಡೆಸಲಾಗಿದ್ದು, ನಂತರ 4–5 ಜನರು ಅವರನ್ನು ಬಲವಂತವಾಗಿ ಕಾರಿನಲ್ಲಿ ಹತ್ತಿಸಿ ಚಿಕ್ಕ ತಿರುಪತಿ ರಸ್ತೆಯ ವಿಲ್ಲಾಕ್ಕೆ ಕರೆದೊಯ್ದಿದ್ದಾರೆ. ಆರೋಪಿಯರಲ್ಲೊಬ್ಬನಾದ ರೇವ (ರೋಹಿತ್ ಕುಮಾರ್) ಅವರು, “ನಿನ್ನ ಚಿಕ್ಕ ಮಗ ಮನು ನಮ್ಮ ಹಿಡಿತದಲ್ಲಿದ್ದಾನೆ, ನಾನು ಹೇಳಿದಂತೆ ಕೇಳಬೇಕು” ಎಂದು ಬೆದರಿಕೆ ಹಾಕಿ, ಮುಂದಿನ ದಿನ ದೇವಸ್ಥಾನದ ಬಳಿ ಮಾತುಕತೆಯ ವೇಳೆ ರೇವಂತ್ ಎಂಬ ಯುವಕನನ್ನು ಸಹ…

ಮುಂದೆ ಓದಿ..
ಸುದ್ದಿ 

ಕೆ.ಜಿ.ಹಳ್ಳಿಯಲ್ಲಿ ಮನೆಯ ಬೀಗ ಒಡೆದು ₹1.4 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣ ಕಳ್ಳತನ

ಬೆಂಗಳೂರು: ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ, ಸುಮಾರು ₹1.4 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಶಕ್ತಿ ನಾರಾಯಣರವರ ತಮ್ಮ ಮಾವ ತಿರುಪತಿ ಅವರ ಮನೆಯಿಂದ ಕೆಲ ಅಂತರದಲ್ಲಿ ವಾಸವಾಗಿದ್ದು, ಇಬ್ಬರೂ ಒಂದೇ ರಸ್ತೆಯಲ್ಲಿದ್ದರು. ಜುಲೈ 29ರಂದು ಮಾವನವರು ತಿರುಪತಿಯಲ್ಲಿ ನಿಧನರಾಗಿದ್ದರಿಂದ, ಅವರ ಕುಟುಂಬದವರು ತಮಿಳುನಾಡಿಗೆ ಅಂತ್ಯಕ್ರಿಯೆಗೆ ತೆರಳಿ, ಮನೆಗೆ ಬೀಗ ಹಾಕಿ ಹೋಗಿದ್ದರು. ಕುಟುಂಬವೂ ಅಂತ್ಯಕ್ರಿಯೆಗೆ ತೆರಳಿತ್ತು. ಆಗಸ್ಟ್ 8ರಂದು ಸಂಜೆ 4 ಗಂಟೆ ವೇಳೆಗೆ, ಪತ್ನಿ ಮಾವನ ಮನೆಗೆ ತೆರಳಿದಾಗ, ಬಾಗಿಲಿನ ಬೀಗ ಒಡೆದು ಒಳ ನುಗ್ಗಿರುವುದು ಗಮನಕ್ಕೆ ಬಂದಿದೆ. ಮನೆಯ ಒಳಭಾಗ ಪರಿಶೀಲಿಸಿದಾಗ, ಲಕ್ಷ್ಮೀ ಕಾಯಿನ್ಮಳ, ಎರಡು ಜೊಡಿ ಮಕ್ಕಳ ಚಿನ್ನದ ಓಲೆಗಳು (ಒಟ್ಟು 20 ಗ್ರಾಂ), ಬೆಳ್ಳಿಯ ಕಾಲು ಚೈನ್‌ಗಳು 4 ಜೊಡಿ ಹಾಗೂ 500…

ಮುಂದೆ ಓದಿ..
ಸುದ್ದಿ 

ವಿಶಾಲ ಮೆಡಿಕಲ್ ಬಳಿ ಸ್ಕೂಟರ್-ಲಾರಿ ಡಿಕ್ಕಿ – ಯುವಕ ಗಂಭೀರವಾಗಿ ಗಾಯ

ಬೆಂಗಳೂರು: ನಗರದ ಸಿ.ಬಿ.ಐ ಮುಖ್ಯ ರಸ್ತೆಯ ವಿಶಾಲ ಮೆಡಿಕಲ್ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ 20 ವರ್ಷದ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರ ಪ್ರಕಾರ, ಆಗಸ್ಟ್ 7ರಂದು ರಾತ್ರಿ ಸುಮಾರು 9.30ರ ವೇಳೆಗೆ ಹಿತೇಶ್ ಎಂ (20) ಸ್ಕೂಟರ್‌ (KA-41-HB-7777) ನಲ್ಲಿ ಸಂಚರಿಸುತ್ತಿದ್ದಾಗ, ಹಿಂದೆ ಬಂದ ಸಿಮೆಂಟ್ ಲಾರಿ (KA-51-A-8939) ವೇಗವಾಗಿ ಬಂದು ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಹಿತೇಶ್ ರಸ್ತೆ ಮೇಲೆ ಬಿದ್ದು ಎಡ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಸ್ಕೂಟರ್‌ ಕೂಡ ಜಖಂಗೊಂಡಿದೆ. ಅಪಘಾತದ ನಂತರ, ಲಾರಿ ಚಾಲಕನೇ ಗಾಯಾಳುವನ್ನು ಸ್ಥಳೀಯರ ಸಹಾಯದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ದಾಖಲಿಸಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಆನೆಕಲ್‌ನಲ್ಲಿ ನಕಲಿ ಸಿಗರೇಟ್ ಮಾರಾಟ – ITC ಕಂಪನಿ ಪ್ರತಿನಿಧಿಯಿಂದ ದೂರು

ಆನೆಕಲ್, ಆ. 9 – ಆನೆಕಲ್ ತಾಲೂಕಿನ ತಾಳಿ ರಸ್ತೆಯಲ್ಲಿರುವ ಒಂದು ಪ್ರೊವಿಷನ್ ಅಂಗಡಿಯಲ್ಲಿ ನಕಲಿ ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ITC ಕಂಪನಿಯ ಅಧಿಕೃತ ಪ್ರತಿನಿಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುರಗನ್ ಬಿನ್ ತಂಗಮಣಿ ಅವರು 30 ಮೇ 2025ರ ಅಧಿಕಾರ ಪತ್ರದ ಆಧಾರದಲ್ಲಿ ಕಂಪನಿಯ ಪರವಾಗಿ ನಕಲಿ ಸಿಗರೇಟ್‌ಗಳ ಪತ್ತೆ, ದೂರು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದಾರೆ. ITC ಕಂಪನಿ Insignia, India Kings, Gold Flake, Wills Navy Cut, Players ಸೇರಿದಂತೆ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಮಾಲೀಕತ್ವ ಹೊಂದಿದೆ. ಆಗಸ್ಟ್ 8 ಮತ್ತು 9 ರಂದು, ಮುರುಗನ್ ರವರು ಹಾಗೂ ಕಂಪನಿಯ ತನಿಖಾಧಿಕಾರಿ ಮಣಿಮಾರನ್ ಅವರು ಆನೆಕಲ್ ಟೌನ್ ತಾಳಿ ರಸ್ತೆಯಲ್ಲಿರುವ K.L.S Provision Store ನಲ್ಲಿ Kings ಮತ್ತು Kings Lights ಬ್ರ್ಯಾಂಡ್‌ನ ಸಿಗರೇಟ್‌ಗಳನ್ನು ಖರೀದಿಸಿದ್ದು, ಅವು…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಸ್ಥಳದಿಂದ ವೈರ್‌ ಬಂಡಲ್‌ ಕಳ್ಳತನ

ಆನೇಕಲ್: ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ಅಡಿಗಾರಕಲಹಳ್ಳಿ ರಸ್ತೆಯ ಎಸ್.ಮೇಡಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ “ವಿಲಾರ ಲಗೆಸಿ” ಅಪಾರ್ಟ್‌ಮೆಂಟ್‌ ನಿರ್ಮಾಣ ಸ್ಥಳದಲ್ಲಿ ಕಳ್ಳತನ ಘಟನೆ ನಡೆದಿದೆ. ಪೊಲೀಸರಿಗೆ ಲಭಿಸಿದ ಮಾಹಿತಿಯ ಪ್ರಕಾರ, ವಿಚಾರ ಇನ್ಮಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಭಾಗಶಃ ಕಟ್ಟಡ ಕಾರ್ಯ ಪೂರ್ಣಗೊಂಡಿದ್ದು, ವೈರಿಂಗ್ ಕೆಲಸ ನಡೆಯುತ್ತಿದೆ. ವೈರಿಂಗ್ ಕಾರ್ಯಕ್ಕಾಗಿ ಕೆಳಮಹಡಿಯಲ್ಲಿ ಇಡಲಾಗಿದ್ದ 1 sq, 1.5 sq, 2.5 sq ಮತ್ತು 4 sq ಗಾತ್ರದ ವೈರ್‌ ಬಂಡಲ್‌ಗಳನ್ನು ದಿನಾಂಕ 06ಆಗಸ್ಟ್‌ 2025ರ ರಾತ್ರಿ ಅಪರಿಚಿತ ಕಳ್ಳರು ಕಾಂಪೌಂಡ್‌ ಹಾರಿ ಕಳ್ಳತನ ಮಾಡಿದ್ದಾರೆ. ಕಳುವಾದ ವಸ್ತುಗಳ ನಿಖರ ಮೌಲ್ಯ ಇನ್ನೂ ಲೆಕ್ಕ ಹಾಕಲಾಗುತ್ತಿದ್ದು, ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ಸಿಬ್ಬಂದಿಯಿಂದ ವಿಚಾರಣೆ ನಡೆಸಿದರೂ, ಕಳ್ಳರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಈ ಸಂಬಂಧ ಪೀಡಿತರು ದಿನಾಂಕ 08 ಆಗಸ್ಟ್‌…

ಮುಂದೆ ಓದಿ..
ಸುದ್ದಿ 

ಧ್ಯಾನಸ್ಥ ಬದುಕು…….

ಧ್ಯಾನಸ್ಥ ಬದುಕು……. ಬಾಹ್ಯ ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ…………….. ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ……… ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ………… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ……… ನಮ್ಮನ್ನು ಪ್ರೀತಿಸುವ, ನಮ್ಮ ಯಶಸ್ಸಿಗೆ ಸಂತೋಷಿಸುವ, ನಮಗೆ ಮಾರ್ಗದರ್ಶನ ಮಾಡುವ ಜನರ ನಡುವೆ ನಾವು ಎಲ್ಲೇ ಇದ್ದರೂ ನೆಮ್ಮದಿಯಿಂದ ಇರುತ್ತೇವೆ………. ಆದರೆ,ನಾನಾ ಕಾರಣಗಳಿಂದ ನಮ್ಮನ್ನು ದ್ವೇಷಿಸುವ, ಅಸೂಯೆ ಪಡುವ, ನಮ್ಮ ಕಾಲೆಳೆಯುವ, ನಮಗೆ ತೊಂದರೆ ಕೊಡುವ ಜನರ ನಡುವೆ ನಾವು ವಾಸಿಸುವುದು ಕಷ್ಟವಾದಾಗ ನಾವು ಸಾಧನೆಯ ಬೆಟ್ಟವನ್ನು ‌ಏರಲು ಪ್ರಯತ್ನಿಸಬೇಕು……….. ಇಲ್ಲದಿದ್ದರೆ ಈ ಜನರ ನಡುವೆ ನಮ್ಮ ಬದುಕು ಅಸಹನೆಯಿಂದಲೇ ಮುಗಿದು ಹೋಗುತ್ತದೆ……. ಹಾಗಾದರೆ ಸಾಧನೆ ಎಂದರೇನು ? ನಮ್ಮ ‌ಸಾಮಾನ್ಯ ಜನರ ಭಾವನೆಯಲ್ಲಿ ಹೆಚ್ಚು ಹೆಚ್ಚು…

ಮುಂದೆ ಓದಿ..
ಸುದ್ದಿ 

ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ…….. ( ಆಗಸ್ಟ್ 7 )

ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ…….. ( ಆಗಸ್ಟ್ 7 ) ಅಷ್ಟು ಸುಲಭವಲ್ಲ ಪ್ರೀತಿಗೆ ಪ್ರತಿ ವಂದನೆ ಹೇಳುವುದು……… ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ ರೀತಿ ಪ್ರತಿಕ್ರಿಯಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಪ್ರೀತಿ ಅಭಿಮಾನದ ನುಡಿಗಳಿಗೆ ಪ್ರತಿ ವಂದನೆ ತುಂಬಾ ಕಷ್ಟ. ಅಕ್ಷರಗಳಿಗೆ ನಿಲುಕದ ಭಾವವದು. ಮಾನವೀಯ ಮೌಲ್ಯಗಳ ಪುನರುತ್ಥಾನದ ಕನಸಿನ ಯಾತ್ರೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾರಂಭಿಸಿ ಮುಂದೆ ಅದರ ಸಹಾಯದಿಂದಲೇ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಈಗಲೂ ಓದು ಬರಹ ಮತ್ತು ಕಾರ್ಯಕ್ರಮಗಳ ಮೂಲಕ ಒಂದಷ್ಟು ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಅದಕ್ಕೆ ಸಿಗುತ್ತಿರುವ ಸ್ಪಂದನೆಗೆ ಸಾಕ್ಷಿಯಾಗಿ ಜನ್ಮದಿನದ ನೆನಪಿನಲ್ಲಿ ನೀವುಗಳು ಶುಭ ಕೋರಿರುವುದು ನನಗೆ ತಲುಪಿದೆ. ಇಂದಿನ ಆಧುನಿಕ ಸಮಾಜದಲ್ಲಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದೇ ಒಂದು ಸವಾಲು. ವಿಚಿತ್ರವೆಂದರೆ, ಆತ್ಮ…

ಮುಂದೆ ಓದಿ..