ಬೆಂಗಳೂರು ನಗರದಲ್ಲಿ 21 ವರ್ಷದ ಯುವತಿ ನಾಪತ್ತೆ: ತಾಯಿ ನೀಡಿದ ದೂರಿನ ಮೇಲೆ ತನಿಖೆ ಆರಂಭ
ಬೆಂಗಳೂರು, ಆಗಸ್ಟ್ 5 – 2025ಬೆಂಗಳೂರಿನ ಯಲಹಂಕದ 21 ವರ್ಷದ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಯುವತಿಯ ತಾಯಿ ನೀಡಿದ ದೂರಿನ ಮೇಲೆ ಯಲಹಂಕ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂಲತಃ ಕಲಬುರ್ಗಿ ಜಿಲ್ಲೆಗೆ ಸೇರಿದ ಈ ಕುಟುಂಬವು ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡು ಯಲಹಂಕದ ಬಾಡಿಗೆ ಮನೆಯಲ್ಲಿ ವಾಸವುತ್ತಿದೆ. ಕುಟುಂಬದಲ್ಲಿ ಪತಿ ಮತ್ತು ಮೂರು ಮಕ್ಕಳು ಇದ್ದು, ತಾಯಿ ಮತ್ತು ಮಗಳು ನಾಗರತ್ನ ಇಬ್ಬರೂ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಮಗಳು ನಾಗರತ್ನ ಎರಡು ವರ್ಷಗಳ ಹಿಂದೆ ಮಾವನ ಮಗನಾದ ನಾಗರಾಜ್ ಜೊತೆ ವಿವಾಹವಾಗಿದ್ದರು. ಆದರೆ ಗಂಡನ ಮದ್ಯಪಾನ ದುರಾಸೆಯಿಂದಾಗಿ ಕಳೆದ ಒಂದು ವರ್ಷದಿಂದ ತಾಯಿಯ ಜೊತೆ ವಾಸವಾಗಿದ್ದರು. ಜುಲೈ 30ರಂದು ನಾಗರತ್ನ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದಳು. ಸಂಜೆ ಮನೆಗೆ ಬಂದ ತಾಯಿ ಮಗಳು…
ಮುಂದೆ ಓದಿ..
