ಆನೇಕಲ್ ನಲ್ಲಿ ದ್ವಿಚಕ್ರ ವಾಹನ ಕಳ್ಳತನ – ವ್ಯಕ್ತಿಯಿಂದ ಠಾಣೆಗೆ ದೂರು
ಆನೇಕಲ್ ಪಟ್ಟಣದ ನಾರಾಯಣಸ್ವಾಮಿ ಬಡಾವಣೆಯ ನಿವಾಸಿ ಸತೀಶ್ ಬಿನ್ ಯಳೆಯಪ್ಪ ಅವರು ತಮ್ಮ ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ಆನೇಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸತೀಶ್ ರವರ ಮಾಹಿತಿ ಪ್ರಕಾರ, ಅವರಿಗೆ ಸೇರಿದ ಕೆಎ-01-ಜೆಎನ್-7119 ಸಂಖ್ಯೆಯ ಆಕ್ಟಿವಾ 125 ಬೈಕ್ ಅನ್ನು ಅವರು ಜೂನ್ 6, 2025 ರಂದು ಬೆಳಗ್ಗೆ ಸುಮಾರು 10:50 ಗಂಟೆಗೆ ಆನೇಕಲ್–ಅತ್ತಿಬೆಲೆ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಹತ್ತಿರ, ಅಪ್ಪ-ಅಮ್ಮ ಕಾಂಪ್ಲೆಕ್ಸ್ ಪಕ್ಕ ನಿಲ್ಲಿಸಿದ್ದರು. ಅವರು ಕೆಲ ಸಮಯ ಟ್ಯೂಲ್ಸ್ ಅನ್ನು ಬಿಲ್ಡಿಂಗ್‌ನಲ್ಲಿ ಇಟ್ಟು ಮರಳಿ ಬಂದಾಗ ಅವರ ವಾಹನವನ್ನು ಯಾರೋ ಕಳ್ಳರು ಕದ್ದೊಯ್ದಿದ್ದರು. ಸ್ಥಳೀಯರ ಬಳಿ ವಿಚಾರಣೆ ನಡೆಸಿದರೂ ಹಾಗೂ ಸುತ್ತಮುತ್ತ ಹುಡುಕಾಟ ಮಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸತೀಶ್ ಅವರು ತಡವಾಗಿ ಠಾಣೆಗೆ ಹಾಜರಾಗಿ ಜುಲೈ 16ರಂದು ತಮ್ಮ ದೂರು ದಾಖಲಿಸಿದ್ದಾರೆ. ಸತೀಶ್ ರವರ ವಾಹನದ…
ಮುಂದೆ ಓದಿ..
