ಬೆಂಜ್ ಕಾರಿಗೆ ಗುಪ್ತವಾಗಿ GPS ಅಳವಡಿಕೆ: ಶಂಕಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜುಲೈ 25: 2025ನಗರದ ಸಹಕಾರನಗರ ನಿವಾಸಿಯೊಬ್ಬರ Mercedes Benz G350D ಕಾರಿನಲ್ಲಿ ಗುಪ್ತವಾಗಿ GPS ಟ್ರ್ಯಾಕರ್ ಅಳವಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ತಕ್ಷಣವೇ ಕುಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮಂಜುನಾಥ್ ಶಾಸ್ತ್ರಿ ಅವರು 19 ಜುಲೈ 2025ರಂದು ಬೆಳಿಗ್ಗೆ 7.40ರ ಸುಮಾರಿಗೆ ತಮ್ಮ ಕಾರು (ನಂ. KA05MU1800) ತೊಳೆಯುತ್ತಿದ್ದಾಗ, ಚಾಲಕರ ಸೀಟಿನ ಕೆಳಭಾಗದಲ್ಲಿರುವ ಚಕ್ರದ ಬಳಿ GPS ಟ್ರ್ಯಾಕಿಂಗ್ ಸಾಧನವೊಂದು ಪತ್ತೆಯಾಯಿತು. ತಕ್ಷಣವೇ ಅವರು ತಮ್ಮ ಕಚೇರಿಯಲ್ಲಿ ಸ್ಥಾಪಿತವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, 16 ಜುಲೈ 2025ರಂದು ಬೆಳಿಗ್ಗೆ 11.22ರ ವೇಳೆಗೆ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬನು ಕಾರಿಗೆ ಟ್ರ್ಯಾಕರ್ ಅಳವಡಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದೇ ದೂರುನಲ್ಲಿ, ದೂರುದಾರರು ಅಮ್ಮತ್ ಕುಲಕರ್ಣಿ ಎಂಬ ವ್ಯಕ್ತಿಯನ್ನು ಕೂಡ ಉಲ್ಲೇಖಿಸಿದ್ದು, ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಆರದೇಶನ ಹಳ್ಳಿಯಲ್ಲಿ 8 ಎಕರೆ ಜಮೀನನ್ನು ನಿವಾಸದ…
ಮುಂದೆ ಓದಿ..
