ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ!
ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಿಂದ ಮೊದಲ ಹಾಡು ಬಿಡುಗಡೆ! ಹೆಚ್ಚು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿರ್ದೇಶಕ ಸಿಂಪಲ್ ಸುನಿ, ಇದೀಗ ತಮ್ಮ ಶಿಷ್ಯನಾದ ಶೀಲಮ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದಾರೆ. ಅವರ ನಿರ್ದೇಶನದ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ಈಗ ಸುದ್ದಿಯಲ್ಲಿದೆ. ಶೀಲಮ್, ಸುನಿಯ ನಿರ್ದೇಶನದ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ನಾಯಕನಾಗಿ ನಟಿಸುತ್ತಿರುವ ಅವರು, ಈ ಹಿಂದೆ ಕೆಲವು ಚಿತ್ರಗಳಲ್ಲಿ ಸಣ್ಣಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಕನಸಿನ ನಾಯಕಪಾತ್ರದ ಮೂಲಕ ಅವರು ಹೊಸ ಹಾದಿ ಹಿಡಿದಿದ್ದಾರೆ. ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಚಿತ್ರದಲ್ಲಿನ ಮೊದಲ ಹಾಡು “ನನ್ನೆದೆಯ ಹಾಡೊಂದನು” ಬಿಡುಗಡೆಯಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಶೀಲಮ್, ಸಾತ್ವಿಕಾ ಮತ್ತು ಮೋಕ್ಷಾ ಕುಶಾಲ್ ನೃತ್ಯ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, “ಚಿತ್ರದ ಕಥೆ ರಿವರ್ಸ್ ಸ್ಕ್ರೀನ್…
ಮುಂದೆ ಓದಿ..
