ಸುಳ್ಳು ದಾಖಲೆ ಸೃಷ್ಟಿಸಿ ಜಮೀನಿನ ಮೋಸ: ತಿಗಳಚೌಡದೇನಹಳ್ಳಿಯಲ್ಲಿ ಮೂರು ಮಂದಿಗೆ ಆರೋಪ ಬೆಂಗಳೂರು, ಜುಲೈ 17, 2025
ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿಯ ತಿಗಳಚೌಡದೇನಹಳ್ಳಿ ಗ್ರಾಮದಲ್ಲಿ ಸಾವಿರಾರು ಲಕ್ಷ ರೂಪಾಯಿ ಮೌಲ್ಯದ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿರುವ ಆರೋಪದ ಮೇಲೆ ಮೂವರು ವಿರುದ್ಧ ಖಾಸಗಿ ದೂರು ದಾಖಲಾಗಿದ್ದು, ನ್ಯಾಯಾಲಯ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದೆ. ಶ್ರೀಮತಿ ಸುಶೀಲಮ್ಮ ಮತ್ತು ಅವರ ಕುಟುಂಬದವರು ತಿಗಳಚೌಡದೇನಹಳ್ಳಿಯ ಸರ್ವೆ ನಂ. 134 ರಲ್ಲಿ ವಿಸ್ತೀರ್ಣ 5 ಎಕರೆ 04 ಗುಂಟೆ ಜಮೀನಿನ ಸಹ ಮಾಲೀಕರಾಗಿದ್ದು, ಈ ಜಮೀನಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮೋಸಕ್ಕೆ ಯತ್ನಿಸಿದ್ದಾರೆ ಎಂಬ ಆರೋಪವು ದೂರುನಲ್ಲಿ ಉಲ್ಲೇಖವಾಗಿದೆ. ದೂರಿನ ಪ್ರಕಾರ, ಶ್ರೀಮತಿ ಸುಶೀಲಮ್ಮನವರು 2004 ರಲ್ಲಿ ತಮಗೆ ಸೇರಿದ್ದ ಸರ್ವೆ ನಂ. 120 ರಲ್ಲಿ 2 ಎಕರೆ ಜಮೀನನ್ನು ಆರೋಪಿ ಡಿ.ಎಸ್. ವೀರಾಂಜನೇಯ ಅವರಿಗೆ ಮಾರಾಟ ಮಾಡಿದ್ದರು. ಆದರೆ, ಆರೋಪಿಯು ಸದರಿ ನೋಂದಣಿಯ ಸಮಯದಲ್ಲಿ ಮೋಸಪೂರ್ವಕವಾಗಿ ಅಜ್ಞಾನವನ್ನು ದುರ್ಬಳಕೆ…
ಮುಂದೆ ಓದಿ..
