ಸುದ್ದಿ 

ಸ್ವತ್ತಿನ ವಿವಾದ: ಜಮೀನಿಗೆ ಬೋರ್ಡ್ ಹಾಕಿ ಬೆದರಿಕೆ

ಬೆಂಗಳೂರು, ಜುಲೈ 19:2025ಸ್ವಂತ ಜಮೀನಿನಲ್ಲಿ ಮನೆ ಕಟ್ಟಲು ಹೋಗಿದ್ದ ವ್ಯಕ್ತಿಗೆ ಸ್ಥಳೀಯರು ಬೆದರಿಕೆ ಹಾಕಿದ ಘಟನೆ ನಡೆದಿದೆ. ಗೋವಿಂದರಾಜು ತಮ್ಮ ಪತ್ನಿಯಿಂದ 2023ರ ಮೇ 29ರಂದು 50×80 ಅಡಿ ಗಾತ್ರದ ನಿವೇಶನವನ್ನು ಹಕ್ಕು ಬಿಡುಗಡೆ ಮೂಲಕ ಪಡೆದಿದ್ದರು. ಆದರೆ 2024ರಿಂದ ಯಾರೋ ಅಪರಿಚಿತರು “ಲೋಕಾಯುಕ್ತದಲ್ಲಿ ಪ್ರಕರಣ ಬಾಕಿಯಿದೆ” ಎಂದು ಬೋರ್ಡ್ ಹಾಕಿದ್ದರು. ದಿನಾಂಕ 21/04/2025 ರಂದು ದೂರುದಾರರು ಸ್ಥಳಕ್ಕೆ ಹೋದಾಗ, ಹರೀಶ್ ಕುಮಾರ್, ರವಿ ಮತ್ತು ನಾರಾಯಣ ಎಂಬ ಮೂವರು ಆರೋಪಿಗಳು ಬಂದು ಜಗಳವಾಡಿ, “ಇಲ್ಲಿಗೆ ಬರಬೇಡಿ, ಬೋರ್ಡ್ ತೆಗೆಯಿರಿ” ಎಂದು ಹೇಳಿ, ದೂರು ನೀಡಿದರೆ ಜೀವ ಬೆದರಿಕೆ ಹಾಕಿದರು. ಮತ್ತೆ 10/05/2025 ರಂದು ಅವರು ಸ್ಥಳಕ್ಕೆ ಹೋದಾಗ ಮತ್ತೆ ಬೆದರಿಕೆ ನೀಡಿ, ಜಮೀನನ್ನು ಮಾರಲು ಪ್ರಯತ್ನಿಸಿದಾಗ ಖರೀದಿದಾರರಿಗೂ “ಪ್ರಕರಣ ಇದೆ, ಕೊಳ್ಳಬೇಡಿ” ಎಂದು ಹೇಳಿ ಹಣಕ್ಕೂ ಒತ್ತಡ ಹಾಕಿದರು. ಈ ಹಿನ್ನೆಲೆಯಲ್ಲಿ ಗೋವಿಂದರಾಜು ಅವರು ನ್ಯಾಯಾಲಯದ…

ಮುಂದೆ ಓದಿ..
ಸುದ್ದಿ 

ಭುವನೇಶ್ವರದಲ್ಲಿ ಬಾಡಿಗೆ ಮನೆ ಹೆಸರಿನಲ್ಲಿ ₹1.09 ಲಕ್ಷ ವಂಚನೆ

ಬೆಂಗಳೂರು, ಜುಲೈ 19:2025 ಮನೆ ಬಾಡಿಗೆ ಕೊಡಬೇಕೆಂದು ಆನ್‌ಲೈನ್‌ನಲ್ಲಿ ಮಾಹಿತಿ ಹಾಕಿದ್ದ ಮಹಿಳೆಗೆ ಮೋಸವಾಗಿರುವ ಘಟನೆ ನಡೆದಿದೆ. ಅಶೀಷ್ ಕುಮಾರ್ ಪಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಸೇನೆ ಸೇರುವವನಾಗಿ ಗುರುತಿಸಿಕೊಂಡು ಮನೆ ಬಾಡಿಗೆಗಾಗಿ ಫೋಟೋ ಮತ್ತು ಲೋಕೇಶನ್ ಕಳುಹಿಸಲು ಕೇಳಿದ. ಮಹಿಳೆ ಫೋಟೋ ಕಳುಹಿಸಿದ್ದ ನಂತರ, ಅವನು ₹33,000 ಅಡ್ವಾನ್ಸ್ ನೀಡುತ್ತೇನೆ ಎಂದು ಹೇಳಿದ್ದ. ಆದರೆ ನಂತರ ಗೂಗಲ್ ಪೇ ಮೂಲಕ ₹5 ಹಾಕಿ ನಿಯಮ ಪಾಲಿಸಬೇಕು ಎಂದು ಹೇಳಿ ಹಂತ ಹಂತವಾಗಿ ₹1,09,985 ರೂ. ಹಣ ವಂಚಿಸಲಾಗಿದೆ. ಮಹಿಳೆ ಯಲಹಂಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್‌ ಇಲಾಖೆ ತನಿಖೆ ಆರಂಭಿಸಿದೆ.

ಮುಂದೆ ಓದಿ..
ಸುದ್ದಿ 

ಭೂಮಿ ಖರೀದಿಯ ನೆಪದಲ್ಲಿ ₹1.90 ಕೋಟಿ ವಂಚನೆ – ಪ್ರಕರಣ ದಾಖಲು

ಬೆಂಗಳೂರು ಜುಲೈ 19:2025 ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಕತ್ರಿ ಹೊಸಹಳ್ಳಿ ಗ್ರಾಮದಲ್ಲಿ ಜಮೀನನ್ನು ಖರೀದಿಸುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ ₹1.90 ಕೋಟಿ ವಂಚಿಸಿದ ಪ್ರಕರಣ ದಾಖಲಾಗಿದೆ. ಮೂರ್ತಿ ನಾಯಕ್ ಅವರು ನೀಡಿದ ದೂರಿನ ವಿವರದ ಪ್ರಕಾರ, ಅವರು ತಮ್ಮ ಸ್ವತ್ತಾದ ಜಮೀನನ್ನು ಜಗದೀಶ್ ಹಾಗೂ ಹನುಮಂತರಾಜು ಎಂಬವರಿಗೆ ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಅವರು ಜಮೀನು ನೋಡಿ ಒಳ್ಳೆಯ ಬೆಲೆಗೆ ಮಾರಾಟ ಮಾಡಿಸುತ್ತೇವೆ ಎಂದು ನಂಬಿಸಿ, ದಿನಾಂಕ 24/06/2025 ರಂದು ಜಮೀನನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊಂಡರು. ಮೊದಲ ಹೆಜ್ಜೆಯಾಗಿ ₹1.5 ಲಕ್ಷ ನೀಡಿದ್ದರು. ಉಳಿದ ಹಣವನ್ನು ನಂತರ ಚೆಕ್ ಮೂಲಕ ನೀಡುವುದಾಗಿ ಭರವಸೆ ನೀಡಿದರೂ ಅದನ್ನು ಪಾಲಿಸಲಿಲ್ಲ. ಜುಲೈ 7ರಂದು ಹನುಮಂತರಾಜು ಪೀಡಿತರನ್ನು ತಮ್ಮ ಮನೆಗೆ ಕರೆಯಿಸಿ, ಪತ್ನಿಗೆ ಧಮ್ಕಿ ನೀಡಿದರಂತೆ. ಹಣ ನೀಡದಿದ್ದರೆ ಪತಿಯ ಜೀವಕ್ಕೆ ಅಪಾಯವೆಂದು ಬೆದರಿಸಿದ ಕಾರಣ, ಪತ್ನಿ ಮನೆಯಲ್ಲಿದ್ದ ₹1.90 ಕೋಟಿ…

ಮುಂದೆ ಓದಿ..
ಸುದ್ದಿ 

ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ – ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು, ಜುಲೈ 19:2025 ಮುತ್ತುಗದಹಳ್ಳಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ 56 ವರ್ಷದ ಷಣ್ಮುಗೆ ಕುಮಾರ್ ಎಂಬುವವರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಗಾಯಗೊಂಡಿದ್ದಾರೆ. ಅವರು ಪ್ರತಿ ದಿನ ವಾಕಿಂಗ್ ಹೋಗುವವರಾಗಿದ್ದು, 17/07/2025 ರಂದು ಬೆಳಗ್ಗೆ 7:45ರ ವೇಳೆ ಮುತ್ತುಗದಹಳ್ಳಿ ರಸ್ತೆಯಲ್ಲಿ ನಡೆಯುತ್ತಿರುವಾಗ, KA05 EZ 7604 ನಂಬರಿನ ಮೋಟಾರ್ ಸೈಕಲ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಓಡಿಸಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ಸಾರ್ವಜನಿಕರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ದೂರಿನ ಆಧಾರದ ಮೇಲೆ 281, 125(A) BNS rw 187 IMV ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ರಾಜನಕುಂಟೆ ಪೊಲೀಸರು ಮುಂದಿನ ತನಿಖೆ ಮುಂದುವರೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ದಲಿತ ನಾಯಕರು ಜಾತಿ ನಿಂದನೆಗೆ ಗುರಿ – ಅಂಗಡಿ ಮಾಲೀಕನ ವಿರುದ್ಧ ಅಟ್ರಾಸಿಟಿ ಪ್ರಕರಣ

ಬೆಂಗಳೂರು , ಜುಲೈ 19:2025 ಅಂಚಿಪಾಳ್ಯ (ಶ್ರೀಕಂಠಪುರ) ಮೂಲದ ದಲಿತ ಸ್ವಾಭಿಮಾನಿ ಸೇವಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಹಾಗೂ ಸಂಘದ ಇತರ ಸದಸ್ಯರು ಜಾತಿ ನಿಂದನೆಗೆ ಗುರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬ್ಯಾತ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಸ್ಥಳೀಯ ರಾಜನಕುಂಟೆ ಪೊಲೀಸ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಜಮ್ಮ ಅವರ ಪ್ರಕಾರ, ದಿನಾಂಕ 17.07.2025ರಂದು ಮಧ್ಯಾಹ್ನ ಸುಮಾರು 12:15ಕ್ಕೆ ಸಂಘಟನೆಯ ಸಭೆಗೆ ತೆರಳುತ್ತಿದ್ದ ವೇಳೆ ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಸಿ. ಚನ್ನಕೇಶವ, ಸದಸ್ಯರು ರಾಜ್, ರೈನಿ, ಉಮಾಕ್ಷಿ, ವೆಂಕಟೇಶ್‌ ಅವರೊಂದಿಗೆ ಅವರು ಬ್ಯಾತ ಗ್ರಾಮದ “ಶ್ರೀ ಪೂರ್ವಿಕ ಎಂಟರ್‌ಪ್ರೈಸಸ್” ಅಂಗಡಿಯಲ್ಲಿ ವಿರಾಮ ಪಡೆದು ನೀರು ಹಾಗೂ ಜ್ಯೂಸ್ ಖರೀದಿಸಲು ಪ್ರಯತ್ನಿಸಿದರು. ಆದರೆ ಅಂಗಡಿಯ ಮಾಲೀಕ ಜೀವನ್ ಕುಮಾರ್, “ನಿಮ್ಮಂತಹ ಮಾದಿಗರು ಮತ್ತು ಹೊಲೆಯರು ಅಂಗಡಿಯೊಳಗೆ ಬರಬಾರದು. ನಿಮ್ಮ ಜಾತಿಯ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಿಗೂ…

ಮುಂದೆ ಓದಿ..
ಸುದ್ದಿ 

ಅಮೆಜಾನ್ ಶಾಖೆಯಿಂದ 50 ಮೊಬೈಲ್‌ಗಳು ಕಳವು – ಆರು ಉದ್ಯೋಗಿಗಳ ಮೇಲೆ ಆರೋಪ

ಬೆಂಗಳೂರು, ಜುಲೈ 19: 2025 ನಗರದ ಮಲೆಶ್ವರಂ ವೆಸ್ಟ್‌ನ ಡಾ. ರಾಜಕುಮಾರ್ ರಸ್ತೆಯಲ್ಲಿರುವ ಅಮೆಜಾನ್ ಸೆಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಪ್ರತಿನಿಧಿ ಹೆಚ್.ಡಿ. ಪರಮೇಶ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಸ್ಥೆಯ ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ನಾರ್ಥ್ ಪಾರ್ಕ್ (ಬಂಡಿಕೊಗೇಹಳ್ಳಿ) ಶಾಖೆಯಿಂದ ಒಟ್ಟು 50 ಮೊಬೈಲ್ ಫೋನ್‌ಗಳು ಕಳವಾಗಿವೆ ಎಂಬುದಾಗಿ ತಿಳಿಸಿದ್ದಾರೆ. ದಿನಾಂಕ 09 ಜುಲೈ 2025 ರಂದು ನಡೆದ ಆಡಿಟ್‌ ವೇಳೆ 50 ಮೊಬೈಲ್‌ಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು, ಕಂಪನಿಯ ಸೆಕ್ಯೂರಿಟಿ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರು ಉದ್ಯೋಗಿಗಳು ಕೆಲಸದ ಸಮಯದಲ್ಲೇ ಒಟ್ಟು 9 ಫೋನ್‌ಗಳನ್ನು ಕಳವು ಮಾಡುತ್ತಿರುವುದು ದೃಢಪಟ್ಟಿದೆ. ಆರೋಪದೊಳಗಾದವರು: ಇಂದ್ರಜೀತ್ ಲಹಾ ಶಿವಂ ಕೆ.ಆರ್ ಪಾಂಡೆ ಆಕಾಶ್ ಕುಮಾರ್ ವಿಕಾಸ್ ಕುಮಾರ್ ರೋಹಿತ್ ಕುಮಾರ್ ರಾಮ್ ರಾಜೇಶ್ ಕುಮಾರ್ ರಾಮ್ ಈ ಕುರಿತಂತೆ ಕಂಪನಿಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ…

ಮುಂದೆ ಓದಿ..
ಸುದ್ದಿ 

ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣ

ಬೆಂಗಳೂರು ಜುಲೈ 19, 2025ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರು ತಮ್ಮ ಮನೆ ಬಳಿ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಅನುಭವಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ರೇಣುಕಾ ಅವರ ಪ್ರಕಾರ, ಅವರು 30 ವರ್ಷಗಳಿಂದ ಕಾಲೋನಿಯಲ್ಲಿ ನೆಲೆಸಿದ್ದಾರೆ ಮತ್ತು ತಮ್ಮ ಮನೆಗೆ ಹೋಗುವ ದಾರಿಯನ್ನು ಬಳಕೆ ಮಾಡುತ್ತಿದ್ದಾರೆ. ಈ ದಾರಿಯ ಪಕ್ಕದಲ್ಲಿರುವ ಜಮೀನಿನ ಮಾಲೀಕರಾದ ಸಂಗೀತ ಮತ್ತು ಜಯಲಕ್ಷ್ಮಿ ಎಂಬುವವರು ಜುಲೈ 15 ರಂದು ಮಧ್ಯಾಹ್ನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, “ನಿಮ್ಮನ್ನು ಹೊಡೆದು ಸಾಯಿಸ್ತೀವಿ, ಮನೆ ಬಡಿದು ಹಾಕ್ತೀವಿ” ಎಂದು ಬೆದರಿಕೆ ಹಾಕಿದ್ದಾರೆ. ಮಹಿಳೆ ತಕ್ಷಣ ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡು ಪತಿಯ ಸಹಾಯವನ್ನು ಕೇಳಿದ್ದಾಳೆ. ಇದೇ ರೀತಿಯ ನಿಂದನೆಗಳು ಈ ಮೊದಲು ಕೂಡ ನಡೆದಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದೆ ಓದಿ..
ಸುದ್ದಿ 

ಚಿಕ್ಕಬೊಮ್ಮಸಂದ್ರದಲ್ಲಿ ಯುವಕ ನಾಪತ್ತೆ – ಪೋಷಕರು ಹಿಂಜರಿದ ಹೃದಯದಿಂದ ಹುಡುಕಾಟದಲ್ಲಿ

ಬೆಂಗಳೂರು, ಜುಲೈ 18:2025ಚಿಕ್ಕಬೊಮ್ಮಸಂದ್ರ ನಿವಾಸಿಯಾಗಿರುವ 26 ವರ್ಷದ ಯುವಕ ನಿತಿನ್ ಜಿ, ಜುಲೈ 8ರಂದು ಬೆಳಿಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದೇನೆಂದು ಮನೆಯಿಂದ ಹೊರಟು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಪೋಷಕರ ಪ್ರಕಾರ, ನಿತಿನ್ ಸೆಕ್ಯೂರಿಟಿ ಉದ್ಯೋಗಿಯಾಗಿದ್ದು, ಆಗಾಗ ವಾಪಸ್ ಮನೆಗೆ ತಡವಾಗಿ ಬರುತ್ತಿದ್ದವನಾಗಿದ್ದರೂ ಈ ಬಾರಿ ಬಂದುಬರುತ್ತದೆ ಎಂಬ ಯಾವುದೇ ಸುಳಿವು ನೀಡದೆ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ದಿನದಿಂದಲೇ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರು ಹಾಗೂ ಕೆಲಸದ ಸ್ಥಳದಲ್ಲಿ ವಿಚಾರಿಸಿದರೂ ಉಪಯೋಗವಾಗಿಲ್ಲ. ಹೆಚ್ಚುವರಿ ಮಾಹಿತಿ ಪ್ರಕಾರ, ನಿತಿನ್ ಕೊನೆಯದಾಗಿ ವೈಟ್ ಬಣ್ಣದ ಹಾಫ್ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದನು. ವಾಟ್ಸಾಪ್ ಮೆಸೇಜ್ ಗಳಲ್ಲಿ ಕೇವಲ ‘ಓಪನ್ ಆಗಿರುವ’ ಗುರುತು ಮಾತ್ರ ಕಂಡುಬರುತ್ತಿದ್ದು, ಪ್ರತಿಕ್ರಿಯೆ ಇಲ್ಲದಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪೋಷಕರು ಯಲಹಂಕ ಉಪನಗರ ಪೊಲೀಸರಲ್ಲಿ ದೂರು ನೀಡಿದ್ದು, ನಾಪತ್ತೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.…

ಮುಂದೆ ಓದಿ..
ಸುದ್ದಿ 

ತಲೆಮರೆಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಜುಲೈ 18:2025ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿದ್ದರೂ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಸವರಾಜು ಎಸ್ (38 ವರ್ಷ) ಎಂಬವರನ್ನು ಬೆಂಗಳೂರು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೃಹತ್ ಅಪರಾಧ ಪ್ರಕರಣದಲ್ಲಿ ಸಂಡಿಸಿದ್ದನು. ಇವನ ವಿರುದ್ಧ 2024 ರಿಂದ 2025ರವರೆಗೆ ಹಲವಾರು ದಿನಾಂಕಗಳಲ್ಲಿ ವಾರೆಂಟ್‌ಗಳು ಹೊರಡಿಸಿತ್ತಾದರೂ ಹಾಜರಾಗದೆ ಜಾಮೀನಿನ ನಿಯಮ ಉಲ್ಲಂಘಿಸಿದ್ದ. ಪೊಲೀಸರಿಗೆ ಲಾಲ್‌ಬಾಗ್ ಸಿದ್ಧಾಪುರದಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ದೊರಕಿದ ನಂತರ, ಅವರು 16 ಜುಲೈ 2025ರಂದು ಬೆಳಿಗ್ಗೆ 8:30ಕ್ಕೆ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದರು. ಬಂಧಿತನನ್ನು ಠಾಣೆಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಯಲಹಂಕ ಪೊಲೀಸರು ಕಾನೂನು ಕ್ರಮ ಮುಂದುವರೆಸಿದ್ದಾರೆ.

ಮುಂದೆ ಓದಿ..
ಸುದ್ದಿ 

ರೇವಾ ಕಾಲೇಜ್ ಬಳಿ ವಿದ್ಯಾರ್ಥಿಗೆ ದಾಳಿ – ₹15,000 ಹಾಗೂ ಮೊಬೈಲ್ ಕಳ್ಳತನ

ಬೆಂಗಳೂರು, ಜುಲೈ 18:2025ನಗರದ ಯಲಹಂಕದ ರೇವಾ ಕಾಲೇಜ್ ರಸ್ತೆಯಲ್ಲಿ ಒಂದು ಗಂಭೀರ ದಾಳಿಯ ಘಟನೆ ನಡೆದಿದ್ದು, ಮೂರು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿರುವ ಶೋಕಾಂತರ ಘಟನೆ ಬೆಳಕಿಗೆ ಬಂದಿದೆ. ಶಾಹೀನ್ ಅಲಿ ಮೂಲತಃ ಕೇರಳದವರು. ಜುಲೈ 15, 2025 ರಂದು ಬೆಳಗ್ಗೆ ಸುಮಾರು 8:45ರ ಸಮಯದಲ್ಲಿ ಅವರು ರೇವಾ ಕಾಲೇಜ್ ರಸ್ತೆಯಲ್ಲಿರುವ ಎರಡನೇ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೂವರು ಅಪರಿಚಿತರು ಶಾಹೀನ್ ಅವರ ಹತ್ತಿರ ಬಂದು, ಅವರನ್ನು ಬಲವಂತವಾಗಿ ಹಿಡಿದು, ಚಾಕುವನ್ನು ತೋರಿಸಿ ಬೆದರಿಸಿದ್ದಾರೆ. ನಂತರ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮೊಬೈಲ್ ಕಿತ್ತುಕೊಂಡು ₹15,000 ಹಣವನ್ನು ಗೂಗಲ್ ಪೇ ಮುಖಾಂತರ ತಮ್ಮ ಖಾತೆಗೆ ವರ್ಗಾಯಿಸಲು ಮಾಡಿಸಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಆರೋಪಿಗಳು ಶಾಹೀನ್ ಅವರ ಮೊಬೈಲ್‌ ಸಹ ತೆಗೆದುಕೊಂಡು ಸ್ಥಳದಿಂದ ಪರಾರಿಯಾದರು.…

ಮುಂದೆ ಓದಿ..