ಸುದ್ದಿ 

ಬೀದಿ ನಾಯಿಗಳಿಗೆ ಊಟ ಹಾಕಲು ಹೋಗಿದ್ದ ಮಹಿಳೆಗೆ ದೌರ್ಜನ್ಯ – ಮೂವರ ವಿರುದ್ಧ ಕೇಸ್

ಬೆಂಗಳೂರು, ಜುಲೈ 28 2025ಬೀದಿ ನಾಯಿಗಳಿಗೆ ಊಟ ಹಾಕಲು ಹೊರಟ್ಟಿದ್ದ ಒಂಟಿ ಮಹಿಳೆಯೊಬ್ಬರ ಮೇಲೆ ನಿಂದನೆ, ಹಲ್ಲೆ, ಲೈಂಗಿಕ ಕಿರುಕುಳ ಹಾಗೂ ಚಿನ್ನದ ಸರ ಲೂಟಿಗೀಡಾದ ಘಟನೆ ಬೆಂಗಳೂರಿನ ಲಕ್ಷ್ಮಯ್ಯ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ. ದೂರಿನ ಪ್ರಕಾರ, ಜೂನ್ 17 ರಂದು ರಾತ್ರಿ 9:15ರ ಸುಮಾರಿಗೆ ಮಹಿಳೆ ಕೋಗಿಲು ಕ್ರಾಸ್, ಲಕ್ಷ್ಮಯ್ಯ ಗಾರ್ಡನ್, 7ನೇ ಕ್ರಾಸ್, ಮನೆ ನಂ.97 ಹತ್ತಿರದ ರಸ್ತೆಬದಿ ಹೋದಾಗ ಮನೆ ನಂ.96 ರ ನಿವಾಸಿಗಳಾದ ರಮೇಶ್, ಅಶ್ವಿನಿ, ಲಕ್ಷ್ಮೀ ಹಾಗೂ ಇನ್ನಿಬ್ಬರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕೈಗಳಿಂದ ಹಲ್ಲೆ ಮಾಡಿ, ರಮೇಶ್ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಜಗಳದ ಸಂದರ್ಭದಲ್ಲಿ ಮಹಿಳೆಯ ಡ್ರೈಮೆಂಡ್ ಪೆಂಡೆಂಟ್ ಇರುವ ಚಿನ್ನದ ಸರವನ್ನು ಬಲವಂತವಾಗಿ ಎಳೆದಿದ್ದು, ಈ ಗಲಾಟೆಯಲ್ಲಿ ಆಕೆಯ ಐಫೋನ್ ನೆಲಕ್ಕೆ ಬಿದ್ದು ಹಾನಿಯಾಗಿದೆ. ಈ ಸಂಬಂಧ ಮಹಿಳೆ ಬಿಎಸ್‌ಸಿ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹2.15 ಲಕ್ಷ ವಂಚನೆ: ಸೈಬರ್ ಕ್ರೈಂ ದೂರು

ಬೆಂಗಳೂರು, ಜುಲೈ 28:2025 ಆನ್‌ಲೈನ್‌ನಲ್ಲಿ ಹೆಚ್ಚು ಲಾಭ ನೀಡುವ ಹೂಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುವಕನೊಬ್ಬ ತನ್ನಿಂದ ₹2.15 ಲಕ್ಷದಷ್ಟು ಹಣ ವಂಚಿಸಲ್ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಠಾಣೆಗೆ ಫಿರ್ಯಾದು ನೀಡಲಾಗಿದೆ. ಫಿರ್ಯಾದಿದಾರರ mobiel ನಂ. 9365070779 ಗೆ ಅಪರಿಚಿತ ನಂಬರಿನಿಂದ ಸಂದೇಶವೊಂದು ಬಂದಿದ್ದು, ಅದರಲ್ಲಿ “ಹಣ ಹೂಡಿದರೆ ಹೆಚ್ಚಿನ ಲಾಭ ಸಿಗುತ್ತದೆ” ಎಂಬ ಮಿಥ್ಯಾ ಪ್ರಚಾರವಿತ್ತು. ಪ್ರಾರಂಭದಲ್ಲಿ ಸ್ಕ್ರೀನ್‌ಶಾಟ್‌ಗಳ ಹಂಚಿಕೆ ಮಾಡಿಸುವಂತೆ ಟಾಸ್ಕ್‌ಗಳನ್ನು ನೀಡಿ, ನಂತರ ಟೆಲಿಗ್ರಾಂ (Telegram) ಆ್ಯಪ್‌ಗೆ ಸೇರಿಸುವಂತೆ ಸೂಚನೆ ನೀಡಲಾಯಿತು. ಟೆಲಿಗ್ರಾಂ ಆ್ಯಪ್‌ಗೆ ಸೇರಿದ್ದ ಫಿರ್ಯಾದಿದಾರರಿಗೆ ಪ್ರಾರಂಭದಲ್ಲಿ ₹200ರಿಂದ ₹5000 ವರೆಗೆ ಲಾಭದಂತೆ ತೋರಿಸಿ, ಬಳಿಕ ₹15,000, ₹50,000, ₹1,50,000 ಹಂತ ಹಂತವಾಗಿ ಹಣ ಪಾವತಿಸಲು ಒತ್ತಡ ಹಾಕಲಾಯಿತು. ಈ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಐಡಿಗಳ ಮೂಲಕ ಪಾವತಿಸಬೇಕೆಂದು ತಿಳಿಸಲಾಯಿತು. ಅಂತಿಮವಾಗಿ ₹4…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಉದ್ಯೋಗಸ್ಥನ ಲ್ಯಾಪ್‌ಟಾಪ್ ಕಳವು – ₹1.5 ಲಕ್ಷ ನಷ್ಟ

ಬೆಂಗಳೂರು, ಜುಲೈ 28 – 2025ನಗರದ ನಾಗವಾರದ ಮಣಿತೇಜ ಬೂರ್ಲಾ ಎಂಬವರು ತಮ್ಮ ಲ್ಯಾಪ್‌ಟಾಪ್ ಕಳವಾಗಿರುವ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಪ್ರಕಾರ, ಡೆಲ್ ಕಂಪನಿಯ 5450 ಮಾದರಿಯ ಲ್ಯಾಪ್‌ಟಾಪ್ (Serial Number: GD6RL84) ಅನ್ನು ಯಾರೋ ಅಜ್ಞಾತ ವ್ಯಕ್ತಿಗಳು ಕದ್ದೊಯ್ಯಲಾಗಿದೆ. ಮಣಿತೇಜ ಅವರು ಕೆಲಸಮಾಡುತ್ತಿರುವ ಎ.ಎನ್.ಝಡ್ ಸಪೋಟರ್ ಸರ್ವೀಸ್ ಕಂಪನಿಗೆ ಸೇರಿದ ಈ ಲ್ಯಾಪ್‌ಟಾಪ್‌ನ ಅಂದಾಜು ಮೌಲ್ಯ ₹1,50,000 ಆಗಿದ್ದು, ಜುಲೈ 24 ರಂದು ಬೆಳಿಗ್ಗೆ 11:30 ರಿಂದ ಜುಲೈ 25 ರಂದು ಸಂಜೆ 3:40ರ ನಡುವೆ ಕಳವಾಗಿದೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಮುಂದಿನ ತನಿಖೆ ನಡೆಯುತ್ತಿದೆ

ಮುಂದೆ ಓದಿ..
ಸುದ್ದಿ 

ಬೆಂಗಳೂರು: ನಿವೇಶನ ಮಾರಾಟದಲ್ಲಿ 40 ಲಕ್ಷ ರೂ. ವಂಚನೆ – ಕೊಲೆ ಬೆದರಿಕೆ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ಪ್ರಕರಣ

ಬೆಂಗಳೂರು, ಜುಲೈ 28: ನಿವೇಶನ ಖರೀದಿಗಾಗಿ 40 ಲಕ್ಷ ರೂ. ಹಣ ಪಾವತಿಸಿದ ವ್ಯಕ್ತಿಗೆ ನೊಂದಾಯಿತ ದಾಖಲೆ ನೀಡದೆ ಮೋಸ ಮಾಡಿರುವ ಪ್ರಕರಣವು ಯಲಹಂಕದ ಕೋಗಿಲು ಲೇಔಟ್‌ನಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭರತ್ ಬಿ ರ್ ಪ್ರಕಾರ, ಅವರು ಕಿಶೋರ್ ಪಟೇಲ್ ಎಂಬುವವರಿಂದ 4.34 ಕೋಟಿ ರೂ.ಗೆ ನಿವೇಶನ ಖರೀದಿಗೆ ಒಪ್ಪಂದ ಮಾಡಿಕೊಂಡು, ಮೊದಲ ಹಂತದಲ್ಲಿ 40 ಲಕ್ಷ ರೂ. ಪಾವತಿಸಿದ್ದಾರೆ. ಆದರೆ, ನಿಗದಿಯಂತೆ ಮಾರಾಟದ ನೊಂದಣಿ ಮಾಡದೆ ಸಮಯ ತಡಮಾಡಿ, ನಂತರ ಅವರ ಮಗ ಹರೀಶ್ ಪಟೇಲ್ ಹಕ್ಕು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಇಬ್ಬರು, ಭರತ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳೀಯ ರೌಡಿಗಳ ಸಹಾಯದಿಂದ ಕೊಲೆ ಮಾಡುವ ಬೆದರಿಕೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಿಶೋರ್ ಪಟೇಲ್ ಮತ್ತು ಹರೀಶ್ ಪಟೇಲ್ ವಿರುದ್ಧ…

ಮುಂದೆ ಓದಿ..
ಸುದ್ದಿ 

ಅಂಗಡಿಗೆ ನುಗ್ಗಿ ಲಕ್ಷ ರೂಪಾಯಿಯ ಮಷಿನ್ ಕಳ್ಳತನ – ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯಲ್ಲಿ ಘಟನೆ

ಆನೇಕಲ್, ಜುಲೈ 27:ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿ ಗ್ರಾಮದಲ್ಲಿ ಅಂಗಡಿ ಕಳ್ಳತನದ ಘಟನೆ ನಡೆದಿದೆ. ಮಹಾಲಕ್ಷ್ಮಿ ಟ್ರೇಡರ್ಸ್ ಎಂಬ ಹೆಸರಿನಲ್ಲಿ ಅಳವಡಿಸಿರುವ ಗ್ರಾನೈಟ್ ಕಟಿಂಗ್ ಮತ್ತು ಪಾಲಿಶಿಂಗ್ ಅಂಗಡಿಗೆ ಯಾರೋ ಅಜ್ಞಾತ ಕಳ್ಳರು ನುಗ್ಗಿ, ಸುಮಾರು ₹1 ಲಕ್ಷ ಮೌಲ್ಯದ ಮಷಿನ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಶ್ರೀ ಪಂಕಜ್ ಕುಮಾರ್ ಬಿನ್ ಜಗದೀಶ್ ಸಿಂಗ್, ಕಾವಲಹೊಸಹಳ್ಳಿ ನಿವಾಸಿಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಮಂಜುನಾಥರೆಡ್ಡಿಯವರಿಗೆ ಸೇರಿದ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ವ್ಯವಹಾರ ನಡೆಸುತ್ತಿದ್ದರು. ಸದರಿ ಅಂಗಡಿಯಲ್ಲಿ ಗ್ರಾನೈಟ್ ಕಟಿಂಗ್ ಹಾಗೂ ಪಾಲಿಶಿಂಗ್ ಮಷಿನ್‌ಗಳು ಇಡಲಾಗಿದ್ದವು. ಶ್ರೀ ಪಂಕಜ್ ಕುಮಾರ್ ಅವರ ಪ್ರಕಾರ, ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿಯನ್ನು ಮುಚ್ಚಿ, ಮನೆಗೆ ಹೋದ ಅವರು, ಜುಲೈ 27 ಬೆಳಿಗ್ಗೆ 8 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಮಷಿನ್‌ಗಳು ಕಾಣೆಯಾಗಿದ್ದವು. ಕೂಡಲೇ ಆನೇಕಲ್ ಗ್ರಾಮಾಂತರ ಠಾಣೆಗೆ ದೂರು ನೀಡಲಾಯಿತು.…

ಮುಂದೆ ಓದಿ..
ಸುದ್ದಿ 

ಅಂಗಡಿಯ ಶಟರ್ ಮುರಿದು ₹82,000 ನಗದು ಹಾಗೂ ವಸ್ತುಗಳ ಕಳವು

ನಗರದ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಜನ ಔಷಧಿ ಅಂಗಡಿಗೆ ಸಂಬಂಧಪಟ್ಟ ಈ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಅಂಗಡಿಯಲ್ಲಿ ಶಟರ್ ಮುರಿದು ಒಳ ನುಗ್ಗಿದ ಅಪರಿಚಿತ ಕಳ್ಳರು, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸುಮಾರು ₹82,000 ನಗದು ಹಾಗೂ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಶ್ರೀ ಶೈಲಕುಮಾರ್ ಅವರು ತಮ್ಮ ಅಂಗಡಿಯನ್ನು ದಿನಾಂಕ 26/07/2025 ರಂದು ರಾತ್ರಿ ಸುಮಾರು 09:30ರ ಹೊತ್ತಿಗೆ ಮುಚ್ಚಿ ಮನೆಗೆ ತೆರಳಿದ್ದರು. ದಿನಾಂಕ 27/07/2025 ರಂದು ಬೆಳಿಗ್ಗೆ 09:00ರ ವೇಳೆಗೆ ಅಂಗಡಿ ತೆರೆಯಲು ಬಂದಾಗ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿತು. ಶಂಕಿತ ಸ್ಥಿತಿಯಲ್ಲಿ ಅಂಗಡಿಯ ಒಳಗೆ ಪ್ರವೇಶಿಸಿದ ಶ್ರೀಶೈಲ ಕುಮಾರ್ ಅವರ, ಗಲ್ಲಾ ಪೆಟ್ಟಿಗೆಯ ಹಣ ಮತ್ತು ಕೆಲವು ವಸ್ತುಗಳು ಕಳುವಾಗಿರುವುದನ್ನು ಗಮನಿಸಿದರು. ತಕ್ಷಣವೇ ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ…

ಮುಂದೆ ಓದಿ..
ಸುದ್ದಿ 

ಸ್ನೇಹಿತನಿಗೆ ಸಾಲವಾಗಿ ಕೊಟ್ಟ ಹಣ ವಾಪಸಿಲ್ಲ – ಕೇಳಿದಂತೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ, ಜೀವ ಬೆದರಿಕೆ!

ಆನೇಕಲ್, ಜುಲೈ 27:ಸ್ನೇಹಿತನಿಗೆ ಮಾನವೀಯತೆ ನೆಪದಲ್ಲಿ ಸಾಲವಾಗಿ ಕೊಟ್ಟ ಹಣವನ್ನು ವಾಪಸೆಗೆ ಕೇಳಿದ ಪರಿಣಾಮ, ಆರೋಪಿಗಳು ಹಣ ಕೊಡುವ ಬದಲು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ಪ್ರಾಣಬೆದರಿಕೆ ಹಾಕಿದ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲೋಕೇಶ್ ಎಂಬವರು ದಿನಾಂಕ 27-07-2025 ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಸ್ನೇಹಿತ ಕರಿಯಲಪ್ಪ ನನ್ನಿಂದ ರೂ. 1,16,000/- ಅನ್ನು ಸಾಲವಾಗಿ ಪಡೆದು, ಕೆಲ ದಿನಗಳಲ್ಲಿ ಹಿಂತಿರುಗಿಸುತ್ತೇನೆಂದು ಭರವಸೆ ನೀಡಿದ್ದನು. ಬಳಿಕ ಚೆಕ್ (ಚೆಕ್ ನಂ. 054816) ನೀಡಿ ಹಣ ಕೊಡಲಿಲ್ಲ. ಮತ್ತೆ ನಾನು ಕೇಳಿದಾಗ ಹಲವು ದಿನಗಳಿಂದ ಹಣ ತಳ್ಳುತ್ತಿದ್ದನು. ಕೊನೆಗೆ ದಿನಾಂಕ 25-07-2025 ರಂದು ಜಿಗಣಿ ಕಡೆಯಿಂದ ಕರೆಸಿಕೊಂಡು, ಸಿಡಿಹೊಸಕೋಟಿ ರಸ್ತೆಯಲ್ಲಿರುವ ಒಂದು ಖಾಲಿ ಪ್ರದೇಶಕ್ಕೆ ಕರೆಯಲು ಮಾಡಿದರು” ಎಂದು ತಿಳಿಸಿದ್ದಾರೆ. ಅಲ್ಲಿ ಕರಿಯಲಪ್ಪ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ನಾರಾಯಣಸ್ವಾಮಿ, ಮರಸೂರು ನಿವಾಸಿ, ಹಣದ…

ಮುಂದೆ ಓದಿ..
ಸುದ್ದಿ 

ವಿಶ್ವಚೇತನಾ ಕಾಲೇಜು ವಿದ್ಯಾರ್ಥಿನಿ ಭೂವಿಕಾ ಕಾಣೆಯಾದ ಘಟನೆ – ಪೋಷಕರಿಂದ ಪೊಲೀಸ್ ದೂರು

ಅನೇಕಲ್, ಜುಲೈ 26:ಶನಿವಾರದಂದು ಅನೇಕಲ್ ತಾಲೂಕಿನಲ್ಲಿ ವಿದ್ಯಾರ್ಥಿನಿ ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ. ವಿಶ್ವಚೇತನಾ ಕಾಲೇಜಿನಲ್ಲಿ ಬಿ.ಬಿ.ಎ ದ್ವಿತೀಯ ವರ್ಷದ ಅಧ್ಯಯನ ಮಾಡುತ್ತಿದ್ದ 19 ವರ್ಷದ ಯುವತಿ ಭೂವಿಕಾ ಎಸ್ ಅವರು ದಿನಾಂಕ 26-07-2025 ರಂದು ಮಧ್ಯಾಹ್ನ ಸುಮಾರು 12-00 ಗಂಟೆಯಿಂದ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಯುವತಿಯ ತಂದೆಯಾದ ಶ್ರೀನಿವಾಸ್ ಎಂ ಅವರು ಠಾಣೆಗೆ ಬಂದು ನೀಡಿದ ದೂರಿನಲ್ಲಿ, “ನನ್ನ ಮಗಳು ಭೂವಿಕಾ ಶನಿವಾರ ಮಧ್ಯಾಹ್ನದಿಂದ ಮನೆಗೆ ಬಾರದಿದ್ದಾಳೆ. ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ದೂರು ನೀಡುವುದು ಅನಿವಾರ್ಯವಾಯಿತು” ಎಂದು ತಿಳಿಸಿದ್ದಾರೆ. ಕಾಣೆಯಾದ ಯುವತಿ ಭೂವಿಕಾ ಕೋಲೆಜುಗಳಿಗೆ ಹೋಗುತ್ತಿದ್ದ ಬಗ್ಗೆ ಮಾಹಿತಿಯಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿಯ ಪತ್ತೆಗಾಗಿ ಸ್ಥಳೀಯ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಂದ ಸಹಕಾರ ಕೇಳಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪೋಷಕರು ತಮ್ಮ…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಮಾರಣಾಂತಿಕ ಹಲ್ಲೆ ಯತ್ನ: ರವಿಕುಮಾರ್ ಎಂಬ ವ್ಯಕ್ತಿಗೆ ಗುಂಪಿನಿಂದ ದೊಣ್ಣೆಗಳಿಂದ ಹಲ್ಲೆ

ಆನೇಕಲ್ ಪಟ್ಟಣದಲ್ಲಿ ದಿನಾಂಕ 26-07-2025ರಂದು ರಾತ್ರಿ ಭೀಕರ ಘಟನೆ ನಡೆದಿದೆ. ಸ್ಥಳೀಯ ಯುವಕನಾದ ರವಿಕುಮಾರ್ ಎಂಬುವವರಿಗೆ ಕೆಲ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಶ್ರೀ ನವೀನ್ ಕುಮಾರ್ ಎಂಬ ವ್ಯಕ್ತಿ ನೀಡಿದ ದೂರಿನ ಪ್ರಕಾರ, ಅವರು ತಮ್ಮ ಸ್ನೇಹಿತನೊಂದಿಗೆ ಆನೇಕಲ್ ನಲ್ಲಿರುವ ಯತೀಶ್ ಎಂಬುವರ ಮನೆಗೆ ಹೋಗುತ್ತಿದ್ದ ವೇಳೆ, ಅಂಬೇಡ್ಕರ್ ಸ್ಮಾರಕ ಹಿಂಭಾಗದಲ್ಲಿ ಕೆಲವರು ಗುಂಪು ಕಟ್ಟಿಕೊಂಡು ನಿಂತಿರುವುದು ಕಾಣಿಸಿಕೊಂಡಿತು. ಹತ್ತಿರ ಹೋಗಿ ನೋಡಿದಾಗ, ಒಬ್ಬ ವ್ಯಕ್ತಿ ಬಿದ್ದು, ತೀವ್ರವಾಗಿ ಗಾಯಗೊಂಡು ಸಹಾಯ ಕೇಳುತ್ತಿದ್ದನು. ಕೂಡಲೇ ಅವರು 112 ಹೆಲ್ಪ್ ಲೈನ್ ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ. ನಂತರ ತಮ್ಮ ಪರಿಚಿತ ಪೊಲೀಸ್ ಅಧಿಕಾರಿ ಸುರೇಶ್ ಅವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಆ ಸ್ಥಳಕ್ಕೆ ಹಾಜರಾದ ಪೊಲೀಸರ ತನಿಖೆಯಲ್ಲಿ, ಗಾಯಗೊಂಡ ವ್ಯಕ್ತಿಯ ಹೆಸರು ರವಿಕುಮಾರ್ ಎಂದು ಗುರುತಿಸಲಾಗಿದೆ. ಅವನು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ…

ಮುಂದೆ ಓದಿ..
ಸುದ್ದಿ 

ಅನೇಕಲ್‍ನಲ್ಲಿ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ನದೊಡ್ಡಿ ಗ್ರಾಮದಲ್ಲಿ ಮಧ್ಯಾಹ್ನದ ವೇಳೆ ಮನೆ ಬಾಗಿಲು ಮುರಿದು ಕೃತ್ಯ ಅನೇಕಲ್, ಜುಲೈ 26, 2025:

ಅನೇಕಲ್ ತಾಲೂಕಿನ ನದೊಡ್ಡಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಅಪರಿಚಿತ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದು ಹಣವನ್ನು ದೋಚಿದ್ದಾರೆ. ಘಟನೆಯಲ್ಲಿ ಮನೆ ಮಾಲೀಕರೊಬ್ಬರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ವೆಂಕಟೇಶ್ ಬಿನ್ ಲೇಟ್ ಕರಿಯಪ್ಪ ಎಂಬವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ನದೊಡ್ಡಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಅವರು ಕೆ.ಟಿ.ಟಿ.ಎಂ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಪತ್ನಿ ಸೆಡ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಜುಲೈ 26 ರಂದು ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ಮಕ್ಕಳೂ ತಮ್ಮ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಮನೆಯಿಂದ ಹೊರಟಿದ್ದರು. ವೆಂಕಟೇಶ್ ಅವರು ಮಧ್ಯಾಹ್ನ 2 ಗಂಟೆಗೆ ಬ್ಯಾಂಕಿಗೆ ಹೋಗುವ ಸಲುವಾಗಿ ಮನೆಯಿಂದ ಹೊರಟಿದ್ದರು. ಅವರು ಮನೆಗೆ ಬಾಗಿಲು ಹಾಕಿಕೊಂಡು ಹೊರಟಿದ್ದು, ಸಂಜೆ ಸುಮಾರು 6:30ರ ಸಮಯದಲ್ಲಿ ಪತ್ನಿಯನ್ನು ಕರೆದುಕೊಂಡು ಹಿಂದಿರುಗಿದಾಗ ಮನೆಯ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ…

ಮುಂದೆ ಓದಿ..