ಸುದ್ದಿ 

ಸ್ಟುಡಿಯೋ ಕಳ್ಳತನ: ಎರಡು ಕ್ಯಾಮೆರಾ ಹಾಗೂ ನಗದು ಕಳವು – ಒಟ್ಟು ನಷ್ಟ ₹90,000

ಬೆಂಗಳೂರು, ಜೂನ್ 19: ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ಬಳಿಯಲ್ಲಿರುವ ಸಾಯಿ ಡಿಜಿಟಲ್ ಸ್ಟುಡಿಯೋದಲ್ಲಿ ಕಳ್ಳತನ ನಡೆದಿರುವ ಘಟನೆ ಸ್ಥಳೀಯರಲ್ಲಿ ಆತಂಕವನ್ನುಂಟುಮಾಡಿದೆ. ಹುಳಿಮಾವು ಪೊಲೀಸ್ ಠಾಣೆಗೆ ನೀಡಲಾದ ದೂರಿನ ಪ್ರಕಾರ, ಶಿವರಾಜ್ ಮದ್ದರಕಿ ಅವರು ತಮ್ಮ ಅಂಗಡಿಯ ಬಾಗಿಲು ದಿನಾಂಕ 16.06.2025 ರಂದು ರಾತ್ರಿ 10 ಗಂಟೆಗೆ ಮುಚ್ಚಿ ಮನೆಗೆ ತೆರಳಿದ್ದರು. ಆದರೆ ಮರು ದಿನ ಬೆಳಿಗ್ಗೆ ಸುಮಾರು 9:30 ಗಂಟೆಗೆ ಅಂಗಡಿಗೆ ಬಂದಾಗ ಶಟರ್ ಅರ್ಧ ತೆರೆಯಲ್ಪಟ್ಟಿದ್ದು, ಬೀಗವನ್ನು ಕೀಳಿಟ್ಟು ಒಡೆದು ಹಾಕಲಾಗಿದೆ ಎಂಬುದು ಅವರಿಗೆ ಗೊತ್ತಾಯಿತು. ಅಂಗಡಿಯೊಳಗೆ ಪರಿಶೀಲಿಸಿದಾಗ, ಎರಡು ಪ್ರಮುಖ ಕ್ಯಾಮೆರಾಗಳು ಮತ್ತು ₹10,000 ನಗದು ಕಳವಾಗಿರುವುದು ತಿಳಿಯಿತು. ಕಳ್ಳತನವಾದ ಕ್ಯಾಮೆರಾಗಳ ಅಂದಾಜು ಮೌಲ್ಯ ₹80,000 ಎಂದು ಹೆಸರಿಸಲಾಗಿದೆ. ಒಟ್ಟೂ ₹90,000 ಮೌಲ್ಯದ ವಸ್ತುಗಳು ಕಳವುಗೊಂಡಿವೆ.ಈ ಕುರಿತು ಹುಳಿಮಾವು ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿವರಾಜ್…

ಮುಂದೆ ಓದಿ..
ಸುದ್ದಿ 

ಮೈಲಸಂದ್ರದಲ್ಲಿ ಗಾಂಜಾ ಮಾರಾಟದ ಯತ್ನ – ಯುವಕನ ಬಂಧನ

ಬೆಂಗಳೂರು, ಜೂನ್ 19 – ಬೆಂಗಳೂರು ನಗರದ ಮೈಲಸಂದ್ರ ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೀನ್ ಹೌಸ್ ಲೇಔಟ್‌ನ ಮುಂಭಾಗದ ಖಾಲಿ ಜಾಗದಲ್ಲಿ ಈ ಘಟನೆ ನಡೆದಿದ್ದು, ಸದರಿ ಘಟನೆ ಕುರಿತಂತೆ ದರ್ಶನ್ ಅಲಗೂರು ಪಿ.ಎಸ್.ಐ. ಅವರು ಹೇಳಿಕೆ ಕೊಟ್ಟಿದ್ದಾರೆ.ದರ್ಶನ್ ಅಲಗೂರು ಪಿ.ಸಿ.ಐ ಗೆ ಖಚಿತ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮಧ್ಯಾಹ್ನ 12:00 ಗಂಟೆಗೆ ಮೈಲಸಂದ್ರ ಪ್ರದೇಶದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿ ಲಭಿಸಿತು. ತ್ವರಿತ ಕ್ರಮವಾಗಿ, ಮಾನ್ಯ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಂದ ಮೌಖಿಕ ಅನುಮತಿ ಪಡೆದು, ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಮಧ್ಯಾಹ್ನ 1:45ರ ಸುಮಾರಿಗೆ ಶಂಕಿತ ವ್ಯಕ್ತಿಯ ಚಲನವಲನ ಗಮನಿಸಿದರು. ಆಟೋದಲ್ಲಿ ಬಂದು ಇಳಿದ ಯುವಕನು, ಪೊಲೀಸರು ಸಮೀಪಿಸುತ್ತಿದ್ದಂತೆ ತನ್ನ…

ಮುಂದೆ ಓದಿ..
ಸುದ್ದಿ 

ಅಪಘಾತದ ನಾಟಕವಾಡಿ ₹50,000 ಸುಲಿಗೆ: ಕಾರು ಸುತ್ತುವರಿದು ಬೆದರಿಸಿದ ಘಟನೆ ಬೆಂಗಳೂರು ತಿಲಕ್ ನಗರದಲ್ಲಿ ನಡೆದಿದೆ.

ಬೆಂಗಳೂರು, ಜೂನ್ 18, 2025: ನಗರದ ಬನ್ನೇರುಘಟ್ಟ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ಕಾರು ಚಾಲಕನೊಬ್ಬರನ್ನು ಅಪಘಾತದ ನೆಪದಲ್ಲಿ ರಸ್ತೆಯ ಮಧ್ಯೆ ತಡೆದು ನಿಲ್ಲಿಸಲ್ಪಟ್ಟು, ಅಪರಿಚಿತರ ಗುಂಪೊಂದು ಕಾರು ಸುತ್ತುವರಿದು ಬೆದರಿಕೆ ಹಾಕಿ ₹50,000 ಹಣವನ್ನು ಕ್ಯೂಆರ್ ಕೋಡ್‌ ಮೂಲಕ ಬಲವಂತವಾಗಿ ಪಡೆದಿದ್ದಾರೆ. ಇಂತಹ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸನ್ನ ಕುಮಾರ್ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ದಿನಾಂಕ 02/06/2025 ರಂದು ಸಂಜೆ 5:00 ಗಂಟೆಯ ಸುಮಾರಿಗೆ ತಮ್ಮ ಕಾರಿನಲ್ಲಿ ಬನ್ನೇರುಘಟ್ಟ ರಸ್ತೆಯ ಕಚೇರಿಯಿಂದ ಮನೆಗೆ ಹೋಗುತ್ತಿದ್ದರು. ತಿಲಕ್ ನಗರದ ಈಸ್ಟ್ ಎಂಡ್ ಮುಖ್ಯರಸ್ತೆಯ ಕೆಫೆ ಕೃಷ್ಣಂ ಬಳಿ ರಸ್ತೆ ಬದಿಯಿಂದ ಅಸಾಧಾರಣ ರೀತಿಯಲ್ಲಿ ಬರುತ್ತಿದ್ದ ಒಂದು ವಾಹನ ಪ್ರಸನ್ನ ರವರ ಕಾರಿನ ಹಿಂದಿನ ಚಕ್ರಕ್ಕೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದರು.ಅತಂತ್ರ ಸ್ಥಿತಿಯಲ್ಲಿ ಪ್ರಸನ್ನ ರವರು ಏನಾಗುತ್ತಿದೆ ಎಂದು ನೋಡುತ್ತಿದ್ದ ಹಾಗೆಯೆ ತಕ್ಷಣವೇ ಕೆಲವರು ಅವರ…

ಮುಂದೆ ಓದಿ..
ಅಂಕಣ 

ವಿಚಿತ್ರ ಸ್ವಾರ್ಥದ ನ್ಯಾಯ ನೀತಿ…..

ನನ್ನ ತಾಯಿ ದೈವೀ ಸ್ವರೂಪಿ,ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ,ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು,ನನ್ನ ಹೆಂಡತಿ ಪ್ರೀತಿಯ ಸಾಗರ,ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ,ನನ್ನ ಅತ್ತಿಗೆ ಮಮತಾಮಯಿ,ನನ್ನ ತಂಗಿ ಕರುಣಾಮಯಿ,ನನ್ನ ಗಂಡ ದಕ್ಷ ಪ್ರಾಮಾಣಿಕ,ನನ್ನ ಮಗ ಮಗಳು ಅತ್ಯಂತ ಸಹೃದಯಿಗಳು,………..ಹೀಗೆ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮವರ ಬಗ್ಗೆ ಅದರಲ್ಲೂ ರಕ್ತ ಸಂಬಂಧಿಗಳ ಬಗ್ಗೆ ಹೇಳುತ್ತಿರುತ್ತಾರೆ.( ಕೆಲವು ಅಪರೂಪದ ಅಪವಾದಗಳು ಇರಬಹುದು )ಆದರೆ ಬಹುತೇಕ ಜನರ ಅಭಿಪ್ರಾಯ ಇದೇ ಆಗಿರುತ್ತದೆ.ಹಾಗಾದರೆ ಇಷ್ಟೊಂದು ಒಳ್ಳೆಯವರಿಂದ ಕೂಡಿರುವ ನಮ್ಮ ಸಮಾಜ ಅತ್ಯಂತ ಆದರ್ಶ ನಾಗರಿಕ ಸಮಾಜವಾಗಿರಬೇಕಿತ್ತಲ್ಲವೇ ?ಈ ಭ್ರಷ್ಟಾಚಾರ, ಮೋಸ, ವಂಚನೆ, ನಂಬಿಕೆ ದ್ರೋಹ, ಡಾಕ್ಟರ್, ಲಾಯರ್, ಪೋಲೀಸ್, ರಾಜಕಾರಣಿ, ಕಂಟ್ರಾಕ್ಟರ್ ಮುಂತಾದ ಸಮಾಜದ ಎಲ್ಲಾ ಕ್ಷೇತ್ರದ ಜನರ ಮೇಲೆ ಅನುಮಾನ ಏಕೆ. ಇವರೆಲ್ಲರೂ ನಮ್ಮ ತಾಯಿ, ತಂಗಿ, ಅಣ್ಣ, ಅಕ್ಕ, ಅಪ್ಪ, ಅಮ್ಮ, ಮಕ್ಕಳಲ್ಲಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಮಹಿಳೆಯರ ನಡುವೆ ಗಲಾಟೆ: ಇಬ್ಬರ ವಿರುದ್ಧ ಪೊಲೀಸ್ ದೂರು

ಹುಬ್ಬಳ್ಳಿ, ಜೂನ್ 17, 2025: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್ ನೌಕರಿಯಾಗಿರುವ ಮಹಿಳೆ ಹಾಗೂ ಆಕೆಯ ಪುತ್ರಿಗೆ ಹಲ್ಲೆ ನಡೆದಿದ್ದು, ಇಬ್ಬರ ವಿರುದ್ಧ ಆರೋಪಗಳು ದಾಖಲಾಗಿದೆ.ದೂರುದಾರರಾದ ಮುಮ್ತಾಜ್ ಬೆಗಂ ಇಮ್ತಿಯಾಜ್ (40) ಹಾಗೂ ಬಿಬಿ ಫಾತಿಮಾ (21) ಇವರುಗಳು ಹುಬ್ಬಳ್ಳಿಯ ಇಶ್ವರನಗರದ APMC ಬಳಿ ವಾಸವಿದ್ದಾರೆ. ಇವರ ಮೇಲೆ ಫಾತಿಮಾ ಸಾಜಾ ಹಾಗೂ ಆಕೆಯ ಸಹೋದರರಾದ ಸಾಜಾ ಎಂಬುವವರು ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.ಇದು ಜೂನ್ 5ರಂದು ಬೆಳಿಗ್ಗೆ 8:30ರಿಂದ 9 ಗಂಟೆಯ ಮಧ್ಯೆ ನಡೆದಿದ್ದು, ಗಲಾಟೆ ವೇಳೆ ದುಷ್ಕರ್ಮಿಗಳು 40,000 ರೂಪಾಯಿ ನಗದು, 20,000 ರೂ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ ಎಂಬ ದೂರು ದಾಖಲಾಗಿದೆ. ಹಲ್ಲೆ ಬಳಿಕ ಮಹಿಳೆಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ…

ಮುಂದೆ ಓದಿ..
ಸುದ್ದಿ 

ಗಾಂಜಾ ಸೇವನೆ ಮಾಡುತ್ತಿದ್ದ ಯುವಕನ ಬಂಧನ.

ಹುಬ್ಬಳ್ಳಿ, ಜೂನ್ 17, 2025: ನಗರದ ನವನಗರ ಪ್ರದೇಶದಲ್ಲಿ ನಿಷೇಧಿತ ಮಾದಕ ವಸ್ತು ಸೇವನೆಯ ಪ್ರಕರಣ ಬೆಳಕಿಗೆ ಬಂದಿದೆ. ದಿನಾಂಕ 15-06-2025 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಹುಲ ಜಗದೀಶ ಕಾಲೇಬಾಗ (ವಯಸ್ಸು: 31), ನವನಗರದ 3ನೇ ಕ್ರಾಸ್, EWS-577 ನಿವಾಸಿಯಾಗಿ ಗುರುತಿಸಲಾಗಿದೆ. ಆರೋಪಿತನು ಹಿಂದೂ ಚಲವಾದಿ ಸಮುದಾಯದಿಂದ ಆಗಿದ್ದು, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ.ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ರಾಹುಲನು ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ಪದಾರ್ಥವಾದ ಗಾಂಜಾ (ಮಾದಕ ಔಷಧಿ ಅಥವಾ ಮನೋಪರಿಣಾಮಕಾರಿ ವಸ್ತು) ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಕರಣದ ಮಾಹಿತಿ ಪಡೆದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ತಕ್ಷಣವೇ ಆರೋಪಿತನನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದೆ.ಈ ಘಟನೆಯ ಹಿನ್ನೆಲೆಯಲ್ಲಿ ನವನಗರ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಅಬಕಾರಿ ಕಾಯ್ದೆ ಉಲ್ಲಂಘನೆ: ರಾಜುವ ವಿರುದ್ಧ ಕಾನೂನು ಕ್ರಮ.

ಹುಬ್ಬಳ್ಳಿ, ಜೂನ್ 17, 2025: ನಗರದ ಈಶ್ವರನಗರ ಕ್ರಾಸ್ ಹತ್ತಿರ ಅಬಕಾರಿ ಕಾಯ್ದೆ ಉಲ್ಲಂಘನೆಯ ಪ್ರಕರಣ ಒಂದರಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತನನ್ನು ರಾಜು ಎಂದು ಗುರುತಿಸಲಾಗಿದ್ದು, ಅವನು ಭಗ್ರಾ ಪೂಜಾರಿಯ ಪುತ್ರನೆಂದು ತಿಳಿದುಬಂದಿದೆ. ಅವನ ವಯಸ್ಸು ಸುಮಾರು 50 ರಿಂದ 55 ವರ್ಷಗಳ ಮಧ್ಯದಲ್ಲಿದೆ. ಸುದ್ದಿಯ ಪ್ರಕಾರ, ದಿನಾಂಕ 16-06-2025 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ, ವಿದ್ಯಾಧಿರಾಜ ಭವನದ ಹಿಂಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನು ತನ್ನ ನಿಯಂತ್ರಣದಲ್ಲಿ ಮಧ್ಯಪಾನ ಪ್ಯಾಕೆಟ್‌ಗಳನ್ನು (ಟೆಟ್ರಾ ಪ್ಯಾಕ್) ಇರಿಸಿಕೊಂಡು, ಯಾವುದೇ ಕಾನೂನುಬದ್ಧ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.ಈ ಘಟನೆ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂಗಳು 32 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿತನನ್ನು ಬಂಧಿಸಿ,…

ಮುಂದೆ ಓದಿ..
ಸುದ್ದಿ 

ಆಮರಗೋಳ ಮೆಟ್ರೋ ಹಿಂದುಗಡೆ ಗಾಂಜಾ ಸೇವಿಸುತ್ತಿದ್ದ ಆರೋಪಿತನ ಬಂಧನ

ಹುಬ್ಬಳ್ಳಿ, 17 ಜೂನ್ 2025: ಈ ದಿನದ ಮುಂಜಾನೆ ಸುಮಾರು 10:30ರ ಸುಮಾರಿಗೆ ಹುಬ್ಬಳ್ಳಿ ನಗರದ ಆಮರಗೋಳ ಮೆಟ್ರೋ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಅಮೀನ್ (ವಯಸ್ಸು: 29), ತಂದೆ: ಶಹಜಾನ್ ನಾಲಬಂದ, ಜಾತಿ: ಮುಸ್ಲಿಂ, ಉದ್ಯೋಗ: ಖಾಸಗಿ ಕೆಲಸ, ವಿಳಾಸ: ಮನೆ ಸಂಖ್ಯೆ 105, 3ನೇ ಕ್ರಾಸ್, ನಂದೀಶ್ವರ ನಗರ, ನವನಗರ, ಹುಬ್ಬಳ್ಳಿ ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಾಥಮಿಕ ತನಿಖೆಯಂತೆ, ಆರೋಪಿತನು ನಿಷೇಧಿತ ಮಾಧಕ ಪದಾರ್ಥವಾದ ಗಾಂಜಾ ಸೇವಿಸುತ್ತಿದ್ದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದು, ಮದ್ಯನಿಯಂತ್ರಣ ಮತ್ತು ಮಾದಕ ಪದಾರ್ಥಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪೋಲಿಸ ಠಾಣೆಯಲ್ಲಿ ಸೂಕ್ತ ಕಲಂರಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ,…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಯುವಕನಿಂದ ಗಾಂಜಾ ಸೇವನೆ.

ಸಾರ್ವಜನಿಕ ಸ್ಥಳದಲ್ಲಿ ಕೃತ್ಯಹುಬ್ಬಳ್ಳಿ, ಜೂನ್ 17: ನಗರದ ನವನಗರದಲ್ಲಿರುವ ಕೆ.ಎಸ್.ಎಲ್.ಯು ರಸ್ತೆಯ ಹತ್ತಿರ ಇಂದು ಬೆಳಿಗ್ಗೆ ಸುಮಾರು 10:40ರ ಹೊತ್ತಿಗೆ ನಡೆದ ಘಟನೆದಲ್ಲಿ 19 ವರ್ಷದ ಯುವಕನೊಬ್ಬನು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವೇಳೆ ಹಿಡಿದಿಟ್ಟುಕೊಳ್ಳಲಾಗಿದೆ.ಆರೋಪಿತನನ್ನು ವಿನಾಯಕ ಜಗದೀಶ ಹಿರೇಮಠ ಎಂದು ಗುರುತಿಸಲಾಗಿದ್ದು, ಉಣಕಲ್ ಕ್ರಾಸ್, ದಾನಮ್ಮನ ಗುಡಿ ಹತ್ತಿರವಿರುವ ಸಂಜೀವಿನಿ ಪಾನ ಶಾಪ್ ಹತ್ತಿರ ಗ್ಯಾರೇಜಿನಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾನೆ. ಈತನಿಂದ ಗಾಂಜಾ ಎಂಬ ನಿಷೇಧಿತ ಮಾದಕ ವಸ್ತು ಪತ್ತೆಯಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರ ಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಆಟೋ ಡಿಕ್ಕಿಯಿಂದ ಮಹಿಳೆಗೆ ಗಾಯ: ಚಾಲಕನ ವಿರುದ್ಧ ಪ್ರಕರಣ ದಾಖಲು

ನಾಗಮಂಗಲ ಪಟ್ಟಣದಲ್ಲಿ ಸಂಭವಿಸಿದ ಅಜಾಗರೂಕ ಆಟೋ ಚಾಲನೆಯಿಂದ ಹಿರಿಯ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆ ನಿಂಗಮ್ಮ , ಘಟನೆ ನಡೆದ ಸಮಯದಲ್ಲಿ ನಾಗಮಂಗಲ ಸರ್ಕಲ್ ಬಳಿಯ ಆಟೋ ಸ್ಟ್ಯಾಂಡ್ ಬಳಿ ಫುಟ್‌ಪಾತ್‌ನಲ್ಲಿ ನಿಂತು ಊರಿಗೆ ತೆರಳಲು ಆಟೋ ನಿರೀಕ್ಷಿಸುತ್ತಿದ್ದರು. ಈ ಸಂದರ್ಭ ಆಟೋ ಚಾಲಕ ಆಫ್ರಾಬ್ ಪಾಷ (ಕೆಎ-05-ಎಎ-2738 ನಂ. ವಾಹನದ ಚಾಲಕ) ನಿರ್ಲಕ್ಷ್ಯದಿಂದ ಹಾಗೂ ಅಜಾಗರೂಕತೆಯಿಂದ ಆಟೋವನ್ನು ರಿವರ್ಸ್ ಚಾಲನೆ ಮಾಡಿ ನಿಂಗಮ್ಮಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ನಿಂಗಮ್ಮ ಕೆಳಗೆ ಬಿದ್ದು ಸೊಂಟದ ಬಲಭಾಗ ಮತ್ತು ಬಲಗಾಲಿನ ತೊಡೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲೇ ಇದ್ದ ಸಂಬಂಧಿ ರಾಮೇಗೌಡ ಮತ್ತು ಆಟೋಚಾಲಕ ಗಾಯಾಳುವಿಗೆ ತಕ್ಷಣ ಸಹಾಯ ಮಾಡಿದ್ದು, ಅವರನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ…

ಮುಂದೆ ಓದಿ..