ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳಿಂದ ವಿಶೇಷ ಶೋಧನೆ – ನಿಷೇಧಿತ ವಸ್ತುಗಳ ಪತ್ತೆ!
ಬೆಂಗಳೂರು, ಜೂನ್ 19:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16-06-2025 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಶೇಷ ಶೋಧನಾ ಕಾರ್ಯಾಚರಣೆ ನಡೆಯಿತು. ಉಪ ಪೊಲೀಸ್ ಆಯುಕ್ತ (ಅಪರಾಧ-2) ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶೋಧನೆಯ ವೇಳೆ ಪತ್ತೆಯಾದ ವಸ್ತುಗಳು: ಸಿಸಿಬಿ ಸಂಘಟಿತ ಅಪರಾಧ ದಳ (ಪೂರ್ವ) PI ಕಿರಣ್ ಕುಮಾರ್ ಮತ್ತು ತಂಡವು ವಿಚಾರಣಾಧೀನ ಬಂಧಿಗಳು ತಂಗಿರುವ ಬ್ಯಾರಕ್ ನಂ.5/2ರಲ್ಲಿ ಶೋಧನೆ ನಡೆಸಿ ₹5,500 ನಗದು, ಕಸ್ತೂರಿ ಮೇತಿ ಸೊಪ್ಪು, ಬೆಂಕಿ ಪೊಟ್ಟಣ, SK ಬೀಡಿ ಪ್ಯಾಕೆಟ್‌ಗಳು, ಗಾಂಜಾ ಸೇದುವ ಕೊಳವೆಗಳು, ಚಾಕುಗಳು, ಗುಟ್ಕಾ ಪ್ಯಾಕೆಟ್‌ಗಳು ಮತ್ತು ಸುಣ್ಣದ ಡಬ್ಬಿಗಳನ್ನು ಪತ್ತೆಹಚ್ಚಿದ್ದಾರೆ. ವಿಶೇಷ ವಿಚಾರಣಾ ದಳ PI ಶಿವಕುಮಾರ್ ಹಾಗೂ PI ಶ್ರೀನಿವಾಸ ಜಿ.ಟಿ ನೇತೃತ್ವದ ತಂಡವು VIP ಸೆಕ್ಯೂರಿಟಿ ಬ್ಯಾರಕ್ ನಂ.2, ರೂಮ್ ನಂ.2ರಲ್ಲಿ ಸಜಾ…
ಮುಂದೆ ಓದಿ..
