ಸುದ್ದಿ 

ಜಾಗದ ಹಕ್ಕಿಗೆ ಸಂಬಂಧಿಸಿದ ಗಲಾಟೆ: ಮಹಿಳೆ ಸೇರಿ ಹಲವರ ವಿರುದ್ಧ ದೂರು

ಬೆಂಗಳೂರು, ಆಗಸ್ಟ್ 2: 2025ದೇವನಹಳ್ಳಿಯಲಿ ವಾಸವಿರುವ ವ್ಯಕ್ತಿಯೊಬ್ಬರು ತಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ, ಬೆದರಿಕೆ ಮತ್ತು ಹಲ್ಲೆ ಯತ್ನ ಪ್ರಕರಣದ ಬಗ್ಗೆ ಬಾಗಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪಿರ್ಯಾದಿದಾರರ ಪ್ರಕಾರ, ಜುಲೈ 31ರಂದು ಮಂಜಮ್ಮ ಎಂಬುವರು ಅಜಿಂಉಲ್ಲಾ ಖಾನ್, ಫಹಾದ್, ಅಂಜದ್, ಬಾಬ್ ಮತ್ತು ಇನ್ನಿತರ ಮಹಿಳೆಯರೊಂದಿಗೆ ಬಂದು, ಜಾಗದ ಕಾಂಪೌಂಡ್ ಗೇಟ್ ಮುರಿದು ಒಳನುಗ್ಗಿದ್ದಾರೆ. ಅವರು ಬಾಡಿಗೆದಾರರಿಗೆ ಜಾಗ ಖಾಲಿ ಮಾಡಲು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪಿರ್ಯಾದಿದಾರನು ತಡೆಯಲು ಯತ್ನಿಸಿದಾಗ ಅವನಿಗೂ ಸಹ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಜಾಗವನ್ನು 2015ರಲ್ಲಿ ಸರಕಾರದ ಸ್ವತ್ತಾಗಿ ಘೋಷಿಸಲಾಗಿತ್ತು. ಆದರೂ, ಮಂಜಮ್ಮರವರು ಜಾಗದ ಹಕ್ಕು ಕೇಳಿ ವಿವಾದಕ್ಕೆ ಕಾರಣರಾಗಿದ್ದಾರೆ. ಈ ಕುರಿತು ದೇವನಹಳ್ಳಿ ನ್ಯಾಯಾಲಯದಲ್ಲಿ Already ದಾವೆ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಬಾಗಲೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿಸಲಾಗಿದೆ.

ಮುಂದೆ ಓದಿ..
ಸುದ್ದಿ 

ಕಾರು ಚಕ್ರ ಕಳವು ಪ್ರಕರಣ: 3 ಮಹೇಂದ್ರ ಎಕ್ಸ್‌ಯು.ವಿ-400 ವಾಹನಗಳ ಟೈರ್‌ಗಳು ಕದ್ದೊಯ್ಯಲಾಗಿದೆ

ಬೆಂಗಳೂರು, ಆಗಸ್ಟ್ 2: 2025ಬೆಂಗಳೂರಿನ ಬೇಗೂರು ಗ್ರಾಮದಲ್ಲಿ ರಿಪೇಶ್ ಗ್ರೀನ್ ಮೊಬಿಲಿಟಿ ಲಿಮಿಟೆಡ್ ಕಂಪನಿಯ ಮೂರು ಎಲೆಕ್ಟ್ರಿಕ್ ಕಾರುಗಳ ಟೈರ್‌ಗಳನ್ನು ಅಪರಿಚಿತ ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ 10 ವರ್ಷಗಳಿಂದ ಲೀಗಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯ ಉದ್ಯೋಗಿ ವ್ಯಕ್ತಿಯೊಬ್ಬರು, ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರು ತಮ್ಮ ಕಂಪನಿಯ ವಾಹನಗಳು – ಮೂರು ಮಹೇಂದ್ರ ಎಕ್ಸ್‌ಯು.ವಿ-400 ಮಾದರಿಯ ಕಾರುಗಳನ್ನು, ಬೇಗೂರು ಗ್ರಾಮದಲ್ಲಿರುವ ಸರ್ವೆ ನಂ. 6/1 ಮತ್ತು 6/2 ರಲ್ಲಿ ಸ್ಥಿತಿರುವ ಪಾರ್ಕಿಂಗ್ ಪ್ರದೇಶದಲ್ಲಿ 09/07/2025 ರಂದು ಬೆಳಗ್ಗೆ ಸುಮಾರು 11.30 ಗಂಟೆಗೆ ನಿಲ್ಲಿಸಿದ್ದರು. ಆದರೆ, ನಂತರ 10/07/2025 ರಂದು ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ, ವಾಹನಗಳ ಬಲಭಾಗದ ಎರಡು ಚಕ್ರಗಳನ್ನು ಯಾರೋ ಅಪರಿಚಿತ ವ್ಯಕ್ತಿಗಳು ಕಳವು ಮಾಡಿದ್ದು, ಒಟ್ಟು ಆರು ಟೈರ್‌ಗಳನ್ನು ಕದ್ದೊಯ್ಯಲಾಗಿದೆ ಎಂದು…

ಮುಂದೆ ಓದಿ..
ಸುದ್ದಿ 

ರೈಲ್ವೆ ಟ್ರ್ಯಾಕ್ ಬಳಿ ಗಾಂಜಾ ಸೇವೆ: ಸಯ್ಯದ್ ತಾರೀಕ್ ಜಮೀಲ್ ಬಂಧನ

ಬೆಂಗಳೂರು, ಆಗಸ್ಟ್ 2: 2025ನಗರದ ಶ್ರೀರಾಮಪುರ ರೈಲ್ವೆ ಬೀದಿಯ ರೈಲ್ವೆ ಟ್ರ್ಯಾಕ್ ಹತ್ತಿರ ಗಾಂಜಾ ಸೇವೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ಅಪರಿಚಿತ ವ್ಯಕ್ತಿಯು ಸಂಪಿಗೆಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದಾನೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಬಸವರಾಜ ಪೂಜಾರಿ ನೀಡಿದ ಮಾಹಿತಿಯ ಪ್ರಕಾರ, ಜುಲೈ 31ರಂದು ಬೆಳಿಗ್ಗೆ 10 ಗಂಟೆಯ ವೇಳೆಗೆ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಸಂಪಿಗೆಹಳ್ಳಿ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆಸಾಮಿ ಪೊಲೀಸರನ್ನು ಕಂಡು ಓಡಲು ಯತ್ನಿಸಿದ್ದರಾದರೂ ಕೂಡಲೇ ಬಂಧಿಸಲಾಯಿತು. ವಿಚಾರಣೆಯಲ್ಲಿ ಆತನು ಸಯ್ಯದ್ ತಾರೀಕ್ ಜಮೀಲ್ (30), ಮಂಜುನಾಥ್ ನಿಲಯ, 2ನೇ ಮಹಡಿ, 1ನೇ ಕ್ರಾಸ್, ಅಮರಜ್ಯೋತಿ ಲೇಔಟ್, ಬೆಂಗಳೂರು ನಿವಾಸಿಯಾಗಿರುವುದು ತಿಳಿದುಬಂದಿತು. ಪೊಲೀಸರು ಸ್ಥಳದಲ್ಲೇ ಆತನು ಅಮಲು ಪದಾರ್ಥ ಸೇವಿಸಿದ್ದನ್ನು ದೃಢಪಡಿಸಿದರು. ಸೂಕ್ತ ಮಾಹಿತಿ ನೀಡಲು ಆತನು ನಿರಾಕರಿಸಿದ ಕಾರಣ, ಮುಂದೆ ತನಿಖೆಗಾಗಿ…

ಮುಂದೆ ಓದಿ..
ಸುದ್ದಿ 

ಅನಧಿಕೃತ ಆಸ್ಪತ್ರೆ ಕಾರ್ಯಚಟುವಟಿಕೆ: ವೈದ್ಯರ ವಿರುದ್ಧ ತನಿಖೆ

ಬೆಂಗಳೂರು, ಆಗಸ್ಟ್ 2: 2025ನಗರದ ಕಾಲೇಜ್ ರಸ್ತೆಯಲ್ಲಿ ಹೊಸದಾಗಿ ಸ್ಥಾಪಿತವಾಗಿರುವ ಸನ್ ಡೈಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಾವುದೇ ಸರ್ಕಾರಿ ಅನುಮತಿ ಇಲ್ಲದೇ ವೈದ್ಯಕೀಯ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಡಾ. ಸುಸೀಲ್ ಕುಮಾರ್ ಮತ್ತು ನಾ. ಕುಮಾರ್ ಎಂಬ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. 2025ರ ಮೇ 23ರಂದು ಇವರಿಬ್ಬರು ಸಾರ್ವಜನಿಕರಿಗೆ ತಿಳಿಯದಂತೆ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಯಾವುದೇ ವೈದ್ಯಕೀಯ ಪರವಾನಗಿ ಅಥವಾ ದಾಖಲೆಗಳು ಲಭ್ಯವಾಗಿಲ್ಲ. ಅಲ್ಲದೆ, ಶಸ್ತ್ರಚಿಕಿತ್ಸಾ ಘಟಕ ಮತ್ತು ವಾರ್ಡ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲನೆ ನಡೆಸಿದ್ದು, ಹಲವಾರು ನಿಯಮಾನುಸಾರ ಲೋಪಗಳಿರುವುದನ್ನು ಗಮನಿಸಿದ್ದಾರೆ. ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದ್ದ ಶಸ್ತ್ರಚಿಕಿತ್ಸೆಗಳ ಕುರಿತು ಯಾವುದೇ ದಾಖಲೆ ಅಥವಾ ಕುರುಹುಗಳು ಇಲ್ಲದಿರುವುದರಿಂದ, ಪ್ರಕರಣ…

ಮುಂದೆ ಓದಿ..
ಸುದ್ದಿ 

” ಅಬ್ ಕಿ ಬಾರ್ಟ್ರಂಪ್ ಕಿ ಸರ್ಕಾರ್ “

” ಅಬ್ ಕಿ ಬಾರ್ಟ್ರಂಪ್ ಕಿ ಸರ್ಕಾರ್ ” ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರತದ ಅಲಿಪ್ತ ನೀತಿಗೆ ವಿರುದ್ಧವಾಗಿತ್ತು. ಹಾಗೆಯೇ ಭಾರತದಂತ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಇನ್ನೊಂದು ರಾಷ್ಟ್ರದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವುದು ಉತ್ತಮ ನಡೆಯಾಗಿರಲಿಲ್ಲ. ಜೊತೆಗೆ ಇದು ಮೋದಿಯವರ ವಿದೇಶಾಂಗ ನೀತಿಯ ದೂರದೃಷ್ಟಿತ್ವ ಮತ್ತು ಗ್ರಹಿಕೆಯ ಕೊರತೆಯಲ್ಲಿನ ತಪ್ಪು ತೀರ್ಮಾನವಾಗಿತ್ತು. ಈಗ ಅದು ನಿಜವಾಗಿದೆ.ಕೊನೆಗೂ ಆ ಚುನಾವಣೆಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಧ್ಯಕ್ಷರಾಗುತ್ತಾರೆ. ಅಲ್ಲಿಂದಲೇ ಭಾರತ ಅಮೆರಿಕಾದ ನಡುವಿನ ಸಂಬಂಧ ಸ್ವಲ್ಪ ಮಟ್ಟಿಗೆ ಕುಸಿಯತೊಡಗಿತು. ವಾಸ್ತವವಾಗಿ ಅಮೆರಿಕಾದ ಅಧ್ಯಕ್ಷರಲ್ಲಿಯೇ ಅತ್ಯಂತ ಕೆಳಮಟ್ಟದ ನೈತಿಕತೆಯನ್ನು ಹೊಂದಿರುವವರು ಡೊನಾಲ್ಡ್ ಟ್ರಂಪ್.…

ಮುಂದೆ ಓದಿ..
ಸುದ್ದಿ 

ಆಸ್ಪತ್ರೆಯ ಎಸಿ ಕಾಪರ್ ಪೈಪ್ ಕಳವು: ₹25,000 ಮೌಲ್ಯದ pipe ಕಳ್ಳತನ

ಬೆಂಗಳೂರು, ಆಗಸ್ಟ್ 1: 2025ನಗರದ ಪ್ರಕೃತಿ ಆಸ್ಪತ್ರೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಎಸಿ ವ್ಯವಸ್ಥೆಗೆ ಅಳವಡಿಸಿದ್ದ ಸುಮಾರು 30 ಅಡಿ ಉದ್ದದ ಕಾಪರ್ ಪೈಪ್ ಕಳ್ಳರು ಕದ್ದಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಆಸ್ಪತ್ರೆಯ ವ್ಯವಸ್ಥಾಪಕರು ನೀಡಿದ ದೂರಿನ ಪ್ರಕಾರ, ಜುಲೈ 13ರಂದು ರಾತ್ರಿ 10 ಗಂಟೆಗೆ ಎಸಿ ಪರಿಶೀಲಿಸಿದಾಗ ಎಲ್ಲವೂ ಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಜುಲೈ 14ರ ಬೆಳಿಗ್ಗೆ 7 ಗಂಟೆಗೆ ಮರುಪರಿಶೀಲನೆ ಮಾಡಿದಾಗ ಎಸಿ ಕೆಲಸ ಮಾಡುತ್ತಿಲ್ಲವೆಂಬುದನ್ನು ಗಮನಿಸಿದರು. ತಕ್ಷಣ ಬಿಲ್ಡಿಂಗ್ ಹೊರಭಾಗದಲ್ಲಿರುವ ಬಿಲ್ಲಿಂಗ್ ಏರಿಯಾವರೆಗೆ ಹೋಗಿ ಪರಿಶೀಲಿಸಿದಾಗ, ಅಳವಡಿಸಲಾಗಿದ್ದ ಕಾಪರ್ ಪೈಪ್ ಕಳ್ಳತನಗೊಂಡಿರುವುದು ಕಂಡುಬಂದಿತು. ಕಳವಾದ pipe ಅನ್ನು ಎಸಿ ಬಿಲ್ಲಿಂಗ್ ಏರಿಯಾದಲ್ಲಿ ಅಳವಡಿಸಲಾಗಿದ್ದು, ಶ್ರಮಪಟ್ಟು ಅಳವಡಿಸಿದ ಈ pipe ನ ಮೌಲ್ಯವು ಸುಮಾರು ₹25,000 ಆಗಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ನಿರ್ವಾಹಕರು ಈ ಬಗ್ಗೆ ಶಂಕೆ…

ಮುಂದೆ ಓದಿ..
ಸುದ್ದಿ 

ಬಸ್‌ನಲ್ಲಿ 50,000 ರೂ. ನಗದು ಕಳವು: ಅಪರಿಚಿತನ ಸಾಹಸಕ್ಕೆ ವ್ಯಾಪಾರಿ ಬಲಿ

ಬೆಂಗಳೂರು, ಆಗಸ್ಟ್ 1 : 2025ತೂಬಗೆರೆಯೊಂದರಲ್ಲಿ ಬಟ್ಟೆ ಅಂಗಡಿಯನ್ನು ನಡೆಸುವ ವ್ಯಕ್ತಿಯೊಬ್ಬರು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಬಸ್‌ನಲ್ಲಿ 50,000 ರೂಪಾಯಿ ನಗದು ಕಳವಾದ ಘಟನೆ ವರದಿಯಾಗಿದೆ. ಈ ಘಟನೆ ತಂತ್ರಭರಿತವಾಗಿ ನಡೆದಿದ್ದು, ಅಪರಿಚಿತ ವ್ಯಕ್ತಿಯೊಬ್ಬನು “ಕಾಲು ಫ್ರಾಕ್ಚರ್” ಆಗಿದೆ ಎಂದು ಹೇಳಿ ಸೀಟು ಪಡೆದು ನಂತರ ಹಣ ಕದ್ದಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ವ್ಯಾಪಾರ ಸಂಬಂಧಿತ ಕೆಲಸಕ್ಕಾಗಿ ವ್ಯಕ್ತಿಯು 29 ಜುಲೈ 2025 ರಂದು ಬೆಳಗ್ಗೆ 8 ಗಂಟೆಗೆ ತೂಬಗೆರೆಯಿಂದ ನಗದು ಹಣದೊಂದಿಗೆ ಬೆಂಗಳೂರಿಗೆ ಹೊರಟಿದ್ದರು. KA57F1968 ಸಂಖ್ಯೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರು ದೊಡ್ಡಬಳ್ಳಾಪುರದ ಮಾರ್ಗವಾಗಿ ಬರುತ್ತಿದ್ದರು. ಮಧ್ಯದಲ್ಲಿ ಬ್ಯಾಟರಾಯನಪುರ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾಲು ಫ್ರಾಕ್ಚರ್ ಆಗಿದೆ ಎಂದು ಹೇಳಿ ಸೀಟು ಕೇಳಿದ. ಮಾನವೀಯತೆಯಿಂದ ಪೀಡಿತ ವ್ಯಕ್ತಿ ಸೀಟನ್ನು ನೀಡಿದ ಬಳಿಕ, ಎಸ್ಟ್ರೀಮ್ ಮಾಲ್ ನಿಲ್ದಾಣದ ಬಳಿ ಆ ಅಪರಿಚಿತನು ಇಳಿದು…

ಮುಂದೆ ಓದಿ..
ಸುದ್ದಿ 

ಮಾದಕ ವಸ್ತು ಮಾರಾಟಕ್ಕೆ ಯತ್ನ: ತೆಲಂಗಾಣ ಮೂಲದ ವ್ಯಕ್ತಿಯಿಂದ 990 ಗ್ರಾಂ ಗಾಂಜಾ ವಶ – ಗಂಗಮ್ಮನ ಗುಡಿ ಪೊಲೀಸ್ ದಾಳಿ.

ಬೆಂಗಳೂರು, ಜುಲೈ 01 – ನಗರದ ಕೆ.ಜಿ.ಹಳ್ಳಿ ವ್ಯಾಪ್ತಿಯ ಅಂಗಾಳಪರಮೇಶ್ವರಿ ದೇವಸ್ಥಾನ ರಸ್ತೆ (ರೈಲ್ವೆ ಪ್ಯಾರಲಲ್ ರಸ್ತೆಯ ಬಳಿ) ಪಾಳು ಬಿದ್ದ ಮನೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 990 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ದಿನಾಂಕ 29-07-2025 ರಂದು ಮಧ್ಯಾಹ್ನ 3:05ಕ್ಕೆ ಪಿಎಸ್‌ಐ ಕವೀಶ್.ಎಸ್ ಅವರಿಗೆ ಬಾತ್ಮೀದಾರರಿಂದ ಮಾಹಿತಿ ದೊರಕಿದ್ದು, ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಖಚಿತ ವರದಿ ಸಿಕ್ಕಿತು. ಅವರು ACP ಪೀಣ್ಯ ಉಪ ವಿಭಾಗದ ಅನುಮತಿ ಪಡೆದು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿದರು. ಮಧ್ಯಾಹ್ನ 3:30ಕ್ಕೆ ನಡೆದ ದಾಳಿಯ ವೇಳೆ, ಸಿಮೆಂಟ್ ಬಣ್ಣದ ಪ್ಯಾಂಟ್ ಮತ್ತು ಜರ್ಕೀನ್ ಧರಿಸಿದ್ದ ವ್ಯಕ್ತಿಯೊಬ್ಬ ಬೂದು ಬಣ್ಣದ ಬ್ಯಾಗ್‌ನೊಂದಿಗೆ ಪಾಳು ಮನೆಯ ಬಳಿ ಶಂಕಿತವಾಗಿ ನಿಂತಿದ್ದನು. ಪೊಲೀಸರು ಹತ್ತಿರ ಹೋಗುತ್ತಲೇ, ಆತನು ಓಡಿ ಪಾಳು ಮನೆಯ ಓಣಿಯೊಳಗೆ…

ಮುಂದೆ ಓದಿ..
ಸುದ್ದಿ 

ಚಾಲಕನಾಗಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕ ನಾಪತ್ತೆ: ಕುಟುಂಬಸ್ಥರಿಂದ ಆತಂಕ

ಕೆಜಿ ಹಳ್ಳಿ ನಿವಾಸಿ, 20 ವರ್ಷದ ವಿನಯ್ ಕುಮಾರ್ ಎಂಬ ಯುವಕ ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಂತೆ ಅವರ ಸೋದರಿಯವರುಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿಯವರ ಪ್ರಕಾರ, ವಿನಯ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 18-07-2025 ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ಆ ದಿನದ ನಂತರದಿಂದ ಇವತ್ತಿನವರೆಗೆ ಅವರು ಮನೆಗೆ ಮರಳಿಲ್ಲ. ಅದೇ ದಿನ ರಾತ್ರಿ ಅವರ ಮೊಬೈಲ್ ಸಂಖ್ಯೆಗಳಿಗೂ ಕರೆ ಮಾಡಿದಾಗ ಫೋನುಗಳು ಸ್ವಿಚ್ ಆಫ್ ಆಗಿವೆ. ವಿನಯ್ ಕುಟುಂಬದವರೊಂದಿಗೆ ಸಂಪರ್ಕ ಕೂಡ ಸಾಧಿಸಿಲ್ಲ. ಅಂಜಲಿ ಅವರು ನೀಡಿದ ಮಾಹಿತಿಯಂತೆ, ವಿನಯ್‌ಗೆ ಕನ್ನಡ ಸ್ವಲ್ಪ ಬರುವುದು ಹಾಗೂ ಹಿಂದಿಯಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಯಾವುದೇ ಸ್ನೇಹಿತರು ಇಲ್ಲ, ಮತ್ತು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮನನ್ನು ಪತ್ತೆ ಹಚ್ಚುವಂತೆ ಅವರು…

ಮುಂದೆ ಓದಿ..
ಸುದ್ದಿ 

ಮನೆ ಬೀಗ ಹಾಕಿ ಚಿನ್ನದ ಚೈನ್ ಕಳವು – ಕಳ್ಳತನ ಪ್ರಕರಣ ದಾಖಲು

ಬೆಂಗಳೂರು, ಜುಲೈ 30 – ಆನೇಕಲ್ ಪ್ರದೇಶದಲ್ಲಿ ಮನೆ ಬೀಗ ಹಾಕಿ ಒಳನುಗ್ಗಿದ ದುಷ್ಕರ್ಮಿಗಳು, ಗಾದ್ರೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಶ್ರೀಮತಿ ರಮಾ ಕೊಂ ರಾಮು ಅವರು, ತಾವು ಗಂಡ ಹಾಗೂ ಮಕ್ಕಳೊಂದಿಗೆ ವಾಸವಿದ್ದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ದಿನಾಂಕ 30-07-2025 ರಂದು ಬೆಳಗ್ಗೆ 7:30 ಗಂಟೆಗೆ ಅವರ ಮಕ್ಕಳು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದು, ನಂತರ ಬೆಳಗ್ಗೆ 9:00 ಗಂಟೆಗೆ ರಮಾ ದೆಯೂ ಸಹ ತನ್ನ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗಂಡನು ಮನೆಯಲ್ಲೇ ಇದ್ದನು. ಸಂಜೆ 6:30ರ ಸುಮಾರಿಗೆ ಮನೆಗೆ ಹಿಂತಿರುಗಿದಾಗ ಬಾಗಿಲಿಗೆ ಬೀಗ ಹಾಕಿರುವುದನ್ನು ಅವರು ಗಮನಿಸಿದರು. ತಕ್ಷಣ ಮನೆ ಮಾಲೀಕರ ಸಹಾಯದಿಂದ ಬೀಗ ತೆಗೆಯಲಾಯಿತು. ಮನೆಯೊಳಗೆ ಪ್ರವೇಶಿಸಿದಾಗ…

ಮುಂದೆ ಓದಿ..