ಸರ್ಜಾಪುರರಸ್ತೆ ಬಳಿ ಭೀಕರ ಬೈಕ್ ಅಪಘಾತ – ಯುವಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲೆ
ಸರ್ಜಾಪುರ, ಜುಲೈ 29, 2025:ಸರ್ಜಾಪುರ-ಬಾಗಲೂರು ರಸ್ತೆಯ ಸರ್ಜಾಪುರ ಬಾರ್ಡರ್ ಬಳಿ ಭೀಕರ ಮೋಟಾರ್ ಸೈಕಲ್ ಅಪಘಾತ ಸಂಭವಿಸಿದ್ದು, 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತನ ಜೊತೆಯಲ್ಲಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಸರ್ಜಾಪುರ ಟೌನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ರಾಜ್ಯದ ಗೌನ್ ನಗರ ಮೂಲದ ಹರಿಕೃಷ್ಣ ಗುರಿಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಬಪ್ಪ ಸರ್ಕಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಳೆದ 5-6 ತಿಂಗಳಿಂದ ಸರ್ಜಾಪುರ ಟೌನ್‌ನ ಹರ್ಬನ್ ಗ್ರೀನ್ ವಿಲಾಸ್ ಹಿಂಭಾಗದ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು. ಅಪಘಾತದ ವಿವರ:ದಿನಾಂಕ 28-07-2025ರಂದು ಮಧ್ಯಾಹ್ನ ಸುಮಾರು 2:00 ಗಂಟೆ ವೇಳೆಗೆ, ಹರಿಕೃಷ್ಣ ಗುರಿಯ ಹಾಗೂ ಬಪ್ಪ ಸರ್ಕಾರ್ ತಮಿಳುನಾಡು ಬಾರ್ಡರ್ ಭಾಗದಿಂದ ಮೀನನ್ನು ತಂದುಕೊಳ್ಳಲು ಹೋಗಿ ಮೋಟಾರ್ ಸೈಕಲ್ ಮೂಲಕ ವಾಪಸ್ಸು ಬರುತ್ತಿದ್ದರು. ಈ ವೇಳೆ ಹರಿಕೃಷ್ಣ ಗುರಿಯನು…
ಮುಂದೆ ಓದಿ..
