ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………
ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ……… ಇದು ನಿಜವೇ, ಆರೋಪ ಮಾತ್ರವೇ,ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ….. ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರೇಷ್ಠ ಎಂಬ ಮನೋಭಾವ ಬೆಳೆಸಿ, ಜೊತೆಗೆ ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆ ಮೂಡಿಸಿ ಅದರ ನಾಶಕ್ಕೆ ಪ್ರಯತ್ನಿಸುತ್ತಾ ಇರುವ ಧಾರ್ಮಿಕ ಮುಖಂಡರುಗಳು ಹೆಚ್ಚಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟ. ಭಾರತದಲ್ಲಿ ರಾಜಕೀಯ ಕಾರಣದಿಂದಾಗಿ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿದೆ. ಲವ್ ಜಿಹಾದ್ ಎಂಬುದು ನನಗೆ ಅರ್ಥವಾಗಿರುವುದೇನೆಂದರೆ ,ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಅಥವಾ ಪ್ರೀತಿಯ ನಾಟಕವಾಡಿ ಅವರನ್ನು ಮದುವೆಯಾಗಿ, ಅವರನ್ನು ಮತ್ತು ಅವರ ಮಕ್ಕಳನ್ನು ಇಸ್ಲಾಮೀಕರಣ ಮಾಡಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ…
ಮುಂದೆ ಓದಿ..
